"ಜಾರ್ಜ್ ರಾಬರ್ಟ್ ಗಿಸ್ಸಿಂಗ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಕೊಂಡಿ ಸೇರ್ಪಡೆ
(ಕೊಂಡಿ ಸೇರ್ಪಡೆ)
*ಮ್ಯಾಂಚೆಸ್ಟರಿನ ಒಬ್ಬ ವೇಶ್ಯಾತರುಣಿಯನ್ನು ಉದ್ಧಾರಮಾಡುವ ಆದರ್ಶಕ್ಕಾಗಿ, ಕಳ್ಳತನ ಮಾಡಿ ಸಿಕ್ಕಿಕೊಂಡು ತನ್ನ ಉನ್ನತ ವ್ಯಾಸಂಗವನ್ನೇ ಈತ ಬಲಿಕೊಟ್ಟುದನ್ನು ಕಂಡಾಗ ಇವನ ವಿಷಯದಲ್ಲಿ ಭರವಸೆಯಿಟ್ಟು ಕೊಂಡವರಿಗೆ ಬಹಳ ನಿರಾಸೆಯಾಯಿತು. ಆ ವೇಶ್ಯೆಯನ್ನೇ ಮದುವೆ ಯಾಗಿ ಸಂಸಾರವನ್ನಾರಂಭಿಸಿದ. ಮೊದಲು ಗುಮಾಸ್ತನಾದ. ಅನಂತರ ಶಾಲಾ ಅಧ್ಯಾಪಕನಾದ. ಜೀವನ ನಡೆಸುವುದು ದುರ್ಭರವಾಗಿ ಅಮೆರಿಕಕ್ಕೆ ವಲಸೆ ಹೋಗಿ ಬಾಸ್ಟನ್ ನಗರದಲ್ಲಿ ಗ್ಯಾಸ್ ಫಿಟ್ಟರ್ ಆಗಿ ಕೆಲಸ ಮಾಡಿದ.
*ಷಿಕಾಗೊ ನಗರಕ್ಕೆ ಹೋಗಿ ಅಲ್ಲಿನ ಟ್ರಿಬ್ಯೂನ್ ಪತ್ರಿಕೆಗೆ ಸಣ್ಣಕತೆಗಳನ್ನು ಬರೆದುಕೊಟ್ಟ. ಅದರಿಂದ ಸಾಕಷ್ಟು ಹಣ ಬರಲಿಲ್ಲ. ಬಡತನದ ಬೇಗೆ ಹೆಚ್ಚಾಯಿತು. ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದ ಹಾಗಾಯಿತು. ಆಗಿನ ಬಡತನದ ಬವಣೆ, ಹೊಟ್ಟೆಗಿಲ್ಲದೆ ನರಳಿದ್ದು-ಮುಂತಾದ ಅನುಭವ ಗಳನ್ನೆಲ್ಲ ಮುಂದೆ 1891ರಲ್ಲಿ ಬರೆದ ನ್ಯೂ ಗ್ರಬ್ ಸ್ಟ್ರೀಟ್ ಎಂಬ ಕಾದಂಬರಿಯಲ್ಲಿ ಈತ ವ್ಯಕ್ತಗೊಳಿಸಿದ್ದಾನೆ. ಇದರಲ್ಲಿ ನೀತಿ ನಿಯಮವಿಲ್ಲದ ಪ್ರಕಾಶಕರನ್ನೂ ಶತಮೂರ್ಖರಾದ ವಾಚಕ ಮಹಾಶಯರನ್ನೂ ತರಾಟೆಗೆ ತೆಗೆದುಕೊಂಡಿದ್ದಾನೆ.
*ಈತನ ಜೀವನದ[[ಜೀವನ]]ದ ಉದ್ದಕ್ಕೂ ಏಳರ ಶನಿ ಅಂಟಿಕೊಂಡಿದ್ದ ಹಾಗೆ ತೋರುತ್ತದೆ. ಎಲ್ಲೆಲ್ಲೂ ಸೋಲು, ನಿರಾಶೆ, ಕಷ್ಟಕಾರ್ಪಣ್ಯಗಳೇ ಒದಗಿದ್ದರ ಪರಿಣಾಮವಾಗಿ ಈತ ಬರೆದ ಕಾದಂಬರಿಗಳಲ್ಲೆಲ್ಲ ನೈರಾಶ್ಯ ಮನೋಭಾವ, ಉತ್ಸಾಹೀನತೆ, ನೊಂದುಬೆಂದ ಕಂಗೆಟ್ಟ ಮುಖ, ಕಷ್ಟದ ಕಾರ್ಮೋಡ -ಇವೇ ಕಾಣುತ್ತವೆ. 1878ರಲ್ಲಿ ಗಿಸ್ಸಿಂಗ್ ಇಂಗ್ಲೆಂಡಿಗೆ ಹಿಂತಿರುಗಿದ. ಆಗ ಬರೆದ ಇವನ ಪ್ರಥಮ ಕಾದಂಬರಿಯನ್ನು ಪ್ರಕಟಿಸಲು ಯಾವ ಪ್ರಕಾಶಕನೂ ಧೈರ್ಯ ಮಾಡಲಿಲ್ಲ. ಅದರ ಹಸ್ತಪ್ರತಿ ಅಲ್ಲಿ ಬಿದ್ದು ಇಲ್ಲಿ ಬಿದ್ದು ಕಳೆದೇ ಹೋಯಿತು.
*ತೀವ್ರ ನಿರಾಶೆಯಲ್ಲಿ ಸಿಕ್ಕು ಹೀನ ಭ್ರಷ್ಟಚಾರಕ್ಕೆ ಇಳಿಯುವ ಅಪಾಯದಿಂದ ಈತನನ್ನು ಕೆಲವು ಮಿತ್ರರು ತಪ್ಪಿಸಿ ಇವನ ಲೇಖನ ವ್ಯವಸಾಯವನ್ನು ಪ್ರೋತ್ಸಾಹಿಸಿದರು. 1880ರಲ್ಲಿ ವರ್ಕರ್ಸ್ ಇನ್ ಡಾನ್ ಎಂಬ ಕಾದಂಬರಿಯನ್ನು ಬರೆದು, ಅಲ್ಲಿ ಇಲ್ಲಿ ದುಡಿದು ಉಳಿತಾಯ ಮಾಡಿದ ಹಣ ಹಾಕಿ ತಾನೇ ಪ್ರಕಟಿಸಿದ. ಪ್ರತಿಗಳು ಖರ್ಚಾಗುವುದೇ ಕಷ್ಟವಾಯಿತು. ಮತ್ತೆ ಮಿತ್ರರು ನೆರವಿಗೆ ಬಂದುದರಿಂದ ನಿರಾಶೆಯಿಂದ ಚೇತರಿಸಿಕೊಂಡು ದಿ ಅನ್ಕ್ಲ್ಯಾಸ್ಡ್ (1884) ಮತ್ತು ಇಸಾಬೆಲ್ ಕ್ಲ್ಯಾರೆಂಡನ್ (1886) ಎಂಬೆರಡು ಕಾದಂಬರಿಗಳನ್ನು ಬರೆದು ಪ್ರಕಾಶಕರ ಸಹಾಯದಿಂದ ಪ್ರಕಟಿಸಿದ. ಮತ್ತೊಂದು ಕಾದಂಬರಿ ಡಿಮೋಸ್(1886) ಮೊಟ್ಟ ಮೊದಲಿಗೆ ಯಶಸ್ವಿಯಾಗಿ ಹೆಸರು ತಂದಿತು. ದಿ ಅನ್ಕ್ಲ್ಯಾಸ್ಡ್ ಕಾದಂಬರಿ ವೇಶ್ಯಾ ಸಮಸ್ಯೆಯನ್ನು ಕುರಿತದ್ದು. ಡಿಮೋಸ್ ಕಾರ್ಮಿಕರ ಸಾಮಾಜಿಕ ಹೋರಾಟದ ಅಪ್ರಿಯ ಸತ್ಯ ಚಿತ್ರವನ್ನು ಕುರಿತದ್ದು.
*1887 ರಲ್ಲಿ ಪ್ರಕಟವಾದ ಥೈರ್ಜಾ಼ ಕಾದಂಬರಿ ಲಂಡನ್ನಿನ ಬಡಹುಡುಗಿಯೊಬ್ಬಳ ದುಡಿತದ ದಾರುಣ ಕತೆ. ಈ ಎರಡೂ ಕಾದಂಬರಿಗಳಲ್ಲಿ[[ಕಾದಂಬರಿ]]ಗಳಲ್ಲಿ ಬಡತನದಿಂದಾಗುವ ಮಾನವನ ಅವನತಿಯನ್ನು ಕಾಣಬಹುದು. 1884 ರಿಂದ 1904ರ ವರೆಗೆ ಸರಾಸರಿ ವರ್ಷಕೊಂದು ಕಾದಂಬರಿಯಂತೆ ಹಲವು ಕಾದಂಬರಿಗಳನ್ನು ಈತ ಬರೆದ. ಒಟ್ಟು ಈತ ಬರೆದ ಕಾದಂಬರಿಗಳು 23. ದೀನದಲಿತರು ವಾಸಿಸುವ ಕೊಳಚೆ ಪ್ರದೇಶದ ವಾಸ್ತವಕತೆ ಹೇಳುವ ನೆದರ್ ವಲ್ರ್್ಡ (1889) ಸಾಹಿತಿಯಾಗಿ ತಾನು ಅನುಭವಿಸಿದ ಬವಣೆಗಳನ್ನು ಹೇಳುತ್ತದೆ. ಬಡವರ ಬಗ್ಗೆ ಈತನಿಗೆ ಅನುಕಂಪವಿಲ್ಲ. ಇಂದಲ್ಲ ನಾಳೆ ಸಮಾಜ ಸುಧಾರಣೆ ಆದಿತೆಂಬ ಆಶಾವಾದವಿಲ್ಲ. ಈತನ ಎಲ್ಲ ಕತೆಗಳಲ್ಲೂ ವಾಸ್ತವ ಜೀವನದ ವ್ಯಥೆಯೇ ಹಬ್ಬಿದೆ. ಪ್ರೀತಿ-ಮರುಕ ಮುಂತಾದ ಯಾವ ಭಾವನೆಗಳೂ ಇಲ್ಲ; ನಗು ಇಲ್ಲ; ಆಸೆ ಭರವಸೆಗಳಿಲ್ಲ.
 
==ಗಿಸ್ಸಿಂಗ್, ಜಾರ್ಜ್ ರಾಬರ್ಟ್ ರ ಕೃತಿಗಳು==
೨೪೩

edits

"https://kn.wikipedia.org/wiki/ವಿಶೇಷ:MobileDiff/634265" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ