"ಒರಿಯಾ ಸಾಹಿತ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: '''ಒರಿಯ ಸಾಹಿತ್ಯ''': ವಿಪುಲವಾಗಿ ಬೆಳೆದಿರುವ ಒರಿಯ ಸಾಹಿತ್ಯಚರಿತ್ರೆಯನ್ನು ಪ...)
 
ಚು
 
ಕೆಲವು ಗ್ರಂಥಗಳನ್ನು ಸಾರಳಾದಾಸನಿಗಿಂತ ಪುರ್ವದವೆಂದು ಹೇಳಲು ಸರಿಯಾದ ಐತಿಹಾಸಿಕ ಆಧಾರಗಳು ಇಲ್ಲವಾದ್ದರಿಂದ ಸದ್ಯಕ್ಕೆ ಇಷ್ಟು ಹೇಳಬಹುದು. ಆ ಕಾಲದಲ್ಲಿ ಸಂಸ್ಕೃತ ಸಾಹಿತ್ಯದ ಪ್ರಭಾವ ಒರಿಯದಲ್ಲಿ ಪ್ರಬಲವಾಗಿತ್ತಲ್ಲದೆ ಪ್ರಾಂತೀಯ ಸಾಹಿತ್ಯ ಜಾಗರೂಕತೆಯಿಂದ ತನ್ನ ಸ್ವರೂಪವನ್ನು ಪಡೆಯುತ್ತಿತ್ತು. ಮೇಲೆ ಹೇಳಿದ ಗ್ರಂಥಗಳು ಅಪಭ್ರಂಶದ ಕಾಲ ಮುಗಿಯುತ್ತಿದ್ದಂತೆ ಹುಟ್ಟಿದವೆನ್ನಬಹುದು.
 
ಸಾರಳಾ ಯುಗ: ಒರಿಯ ಸಾಹಿತ್ಯದ ಜನಕನೆಂದು ಪ್ರಖ್ಯಾತನಾದ ಸಾರಳಾದಾಸ 15ನೆಯ ಶತಮಾನದಲ್ಲಿ, ಒರಿಸ್ಸದ ಗಜಪತಿಯಾದ ಕಪಿಳೇಂದ್ರ ದೇವನ ಆಳ್ವಿಕೆಯಲ್ಲಿದ್ದವ. ಮಹಾಭಾರತ, ಬಿಲಂಕಾ ರಾಮಾಯಣ ಮತ್ತು ಚಂಡೀ ಪುರಾಣಗಳು ಇವನ ಕೃತಿಗಳು. ಮಹಾಭಾರತದಲ್ಲಿ 18 ಭಾಗಗಳಿವೆ. ಅದು ಮೂಲ ಸಂಸ್ಕೃತ ಭಾರತಕ್ಕಿಂತ ವರ್ಣನೆಯಲ್ಲೂ ಉದ್ದೇಶದಲ್ಲೂ ಭಿನ್ನವಾಗಿದೆ. ದೇಶದ ದೈನಂದಿನ ಮತ್ತು ಸಾಮಾಜಿಕ, ಸಾಂಸ್ಕೃತಿಕ ಜೀವನವನ್ನು ಆಧರಿಸಿ ಕವಿ ಅದರಲ್ಲಿ ಅನೇಕ ತನ್ನದೇ ಆದ ಹೊಸ ಕಥೆಗಳನ್ನು ಅಳವಡಿಸಿದ್ದಾನೆ. ಅವು ಹೇರಳವಾಗಿ ಜನಪ್ರೀತಿಯನ್ನು ಗಳಿಸಿವೆ. ಪಾತ್ರಚಿತ್ರಣದಲ್ಲೂ ಪ್ರಕೃತಿವರ್ಣನೆಯಲ್ಲೂ ಕವಿ ತನ್ನ ಸಾಮಥರ್ಯ್‌ವನ್ನು ಪ್ರಕಟಿಸಿದ್ದಾನೆ. ಜೊತೆಗೆ ಈತನ ವೈಷ್ಣವ ತತ್ತ್ವಗಳು ಮಹಾಭಾರತದ ವಸ್ತುವಿನೊಂದಿಗೆ ಚೆನ್ನಾಗಿ ಮಿಳಿತವಾಗಿರುವುದು ಕಂಡುಬರುತ್ತದೆ. ಈತನ ವರ್ಣನೆಗಳಲ್ಲಿ ದೇಸೀಯತೆ ಕಂಪಿಟ್ಟಿದೆ. ಬಿಲಂಕಾ ರಾಮಾಯಣ ಸಂಸ್ಕೃತದ ಅದ್ಭುತರಾಮಾಯಣದ ಪ್ರಭಾವವನ್ನು ತೋರುವ ಗ್ರಂಥವೆಂದು ಕೆಲವು ಪಂಡಿತರ ಅಭಿಪ್ರಾಯ. ಮಹಾತಾಯಿ ಚಂಡಿಯ ಶಕ್ತಿಯನ್ನು ಪ್ರದರ್ಶಿಸಲು ರಚಿತವಾದ ಪೌರಾಣಿಕ ಕೃತಿ ಚಂಡೀಪುರಾಣ. ಯಮದೇವತೆ ತನ್ನನ್ನು ಕೊಲ್ಲಲಾಗದ ಮಟ್ಟಿಗೆ ಶಕ್ತಿವಂತನಾಗಿ ಬೆಳೆದ ಮಹಿಷಾಸುರನನ್ನು ದೇವತೆಗಳೆಲ್ಲರ ಪ್ರಾರ್ಥನಾಫಲವಾಗಿ ಎದ್ದ ಕಿಚ್ಚಿನಿಂದ ಮೂಡಿಬಂದ ಮಹಿಷಾಸುರ ಮರ್ದಿನಿ ನಿರ್ನಾಮ ಮಾಡಿದ ವಿಷಯ ಇಲ್ಲಿ ವರ್ಣಿತವಾಗಿದೆ.
== ಸಾರಳಾ ಯುಗ ==

ಸಾರಳಾದಾಸನ ಎಲ್ಲ ಕೃತಿಗಳಲ್ಲೂ ಯುದ್ಧದ ವರ್ಣನೆಗಳು ವಿಪುಲವಾಗಿವೆ. ಈ ವರ್ಣನೆಗಳು ಜೀವಕಳೆಯಿಂದ ತುಂಬಿದ್ದು ಓದುಗರ ಮನಸ್ಸಿನ ಮುಂದೆ ಆಯಾ ದೃಶ್ಯಗಳನ್ನು ಪರಿಣಾಮಕಾರಿಯಾಗಿ ತಂದು ನಿಲ್ಲಿಸಿಬಿಡುತ್ತವೆ. ತನ್ನ ರಾಜ್ಯವನ್ನು ವಿಸ್ತರಿಸುವುದಕ್ಕಾಗಿ ದೀರ್ಘಕಾಲದವರೆಗೂ ಹೋರಾಟದಲ್ಲೇ ತೊಡಗಿದ್ದ ಒರಿಸ್ಸದ ಪ್ರಭು ಕಪಿಳೇಂದ್ರನ ಕಾಲದಲ್ಲಿ ಈ ಕವಿ ಚಿತ್ರಿಸಿರುವ ಯುದ್ಧಗಳು ಐತಿಹಾಸಿಕ ದೃಷ್ಟಿಯಿಂದ ಗಮನಾರ್ಹವಾಗಿವೆ.
 
ಕೃಷ್ಣಲೀಲಾ, ರಾಸಲೀಲಾ, ಗುಪ್ತಗೀತಾ ಎಂಬುವನ್ನು ರಚಿಸಿದ ಎರಡನೆಯ ಬಳರಾಮದಾಸ, ರಾಧಾಕೃಷ್ಣ ಲೀಲಾಮೃತವನ್ನು ಬರೆದ ದೀನಬಂಧುದಾಸ, ಮಧುಪಚೌತಿಹಾಸವನ್ನು ರಚಿಸಿದ ಗೋಪೇಂದ್ರದಾಸ, ಶ್ರೀಕೃಷ್ಣನ ಮೇಲೆ ಅನೇಕ ಭಾವಗೀತೆಗಳನ್ನು ಬರೆದ ಸಾಲಬೆಗ, ಬನ್ಸಿ ಚೋರಿಯನ್ನು ಬರೆದ ಚಾಂದಕವಿ ಮುಂತಾದ ಕೆಲವು ಗೌಣಕವಿಗಳು ತಮ್ಮ ಕೃತಿಗಳನ್ನು ಈ ಕಾಲದ ಸಾಹಿತ್ಯಕ್ಕೆ ಅರ್ಪಿಸಿದ್ದಾರೆ.
 
ಹೀಗೆ 15 ಮತ್ತು 16ನೆಯ ಶತಮಾನಗಳ ಸು. ಇನ್ನೂರು ವರ್ಷಗಳಿಗಿಂತಲೂ ಹೆಚ್ಚಿನ ಸಾಹಿತ್ಯಾವಧಿಯಲ್ಲಿ ರಾಧಾಕೃಷ್ಣರ ಪರವಾದ ಕಾವ್ಯವೇ ಬೆಳೆದು ಆ ಯುಗಕ್ಕೆ ವೈಷ್ಣವಯುಗವೆಂಬ ಹೆಸರನ್ನು ತಂದಿದೆ. ಈ ಪ್ರಸಂಗಗಳನ್ನೇ ಕವಿಗಳು ಏಕೆ ಆರಿಸಿಕೊಂಡರೆಂದರೆ ಅವರೆಲ್ಲರೂ ಪ್ರಧಾನವಾಗಿ ವೈಷ್ಣವರು. ಆದ್ದರಿಂದ ಅವರು ಸಹಜವಾಗಿಯೇ ದೇವರನ್ನು ಪ್ರಣಯಿಯೆಂದು ಭಾವಿಸಿ ಅವನೊಡನೆ ಒಡಗೂಡುವ ಅತೀಂದ್ರಿಯಾನುಭೂತಿಯನ್ನೇ ತಮ್ಮ ಪರಮ ಧ್ಯೇಯವಾಗಿಟ್ಟುಕೊಂಡಿದ್ದರು. ಈ ಉದ್ದೇಶಕ್ಕೆ ರಾಧಾಕೃಷ್ಣರ ಪ್ರಸಂಗಗಳು ಬಹು ಸಮೀಚೀನವಾಗಿ ಒದಗಿದ್ದವು.
 
ಬಿಸ್ವನಾಥ್ ಕುಂಟಿಯಾ ಎಂಬ ಕವಿ 18ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ರಾಮಚಂದ್ರನ ಮಾಹಾತ್ಮ್ಯವನ್ನು ವರ್ಣಿಸುವ ವಿಚಿತ್ರ ರಾಮಾಯಣ ಎಂಬ ಗ್ರಂಥವನ್ನು ಬರೆದಿದ್ದಾನೆ.
 
ಬ್ರಜನಾಥ ಬಡಜೆನಾ ಎಂಬಾತ 18ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದು ದೇಶಾಭಿಮಾನವನ್ನು ಉಕ್ಕಿಸುವಂಥ ಸಾಹಿತ್ಯ ನಿರ್ಮಿತಿಗಾಗಿ ಖ್ಯಾತನಾಗಿದ್ದಾನೆ. ಧೆಂಕನಾಳ್ ರಾಜ ಮರಾಠಿಗರೊಂದಿಗೆ ಯುದ್ಧಮಾಡಿದ ಪ್ರಸಂಗ ಈತನ ಸಮರತರಂಗದಲ್ಲಿ ವರ್ಣಿತವಾಗಿದೆ. ಈತನ ಶ್ಯಾಮರಾಸೋತ್ಸವ ಮತ್ತು ಅಂಬಿಕಾವಿಲಾಸ ಎಂಬುವು ಪೌರಾಣಿಕ ವಸ್ತುವನ್ನು ಅವಲಂಬಿಸಿ ಬರೆದ ಕೃತಿಗಳು; ಗುಂಡಿಛಾಬಿಜೆ ಎಂಬ ಹಿಂದೀ ಕೃತಿಯಲ್ಲಿ ಈತ ಪ್ರಭುಜಗನ್ನಾಥನ ರಥೋತ್ಸವವನ್ನು ವರ್ಣಿಸಿದ್ದಾನೆ.
 
ಬಿನೋದೆ ಕನೂಂಗೊ ಎಂಬಾತನ ಜ್ಞಾನಮಂಡಲ ಎಂಬ ಜನಪ್ರಿಯ ಒರಿಯ ವಿಶ್ವಕೋಶದ ಸಂಪುಟಗಳು ಪ್ರಕಟನೆಗೆ ಸಿದ್ಧವಾಗುತ್ತಲಿವೆ. ಇದರ ಮೊದಲ ಸಂಪುಟ 1960ರಲ್ಲಿ ಪ್ರಕಟಗೊಂಡಿತು. ಉತ್ಕಲ ವಿಶ್ವವಿದ್ಯಾನಿಲಯ ಇಷ್ಟರಲ್ಲಿಯೇ ತನ್ನ ಒರಿಯ ಜ್ಞಾನಕೋಶವನ್ನು ಪ್ರಕಟಿಸುವುದರಲ್ಲಿದೆ. ಒರಿಯ ಪತ್ರಿಕೆಗಳೂ ಕಾಲಿಕಗಳೂ ಒರಿಯ ಸಾಹಿತ್ಯದ ಅಭಿವೃದ್ದಿಗೆ ನೆರವಾಗುತ್ತಿರುವುದು ಒಂದು ಗಮನಾರ್ಹವಾದ ಸಂಗತಿ. ಇವುಗಳಿಂದ ಅನೇಕ ಬರೆಹಗಾರರು ಬೆಳಕಿಗೆ ಬಂದರಲ್ಲದೆ ಇವುಗಳಿಂದ ಅನೇಕ ಓದುಗರು ಜ್ಞಾನದ ವಿವಿಧ ಶಾಖೆಗಳ ತಿಳಿವಳಿಕೆಯನ್ನು ಪಡೆದುಕೊಳ್ಳುತ್ತಿದ್ದಾರೆ. (ಡಿ.ಎನ್.ಎಂ.)
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಒರಿಯ ಸಾಹಿತ್ಯ |ಒರಿಯ ಸಾಹಿತ್ಯ }}
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
೬,೪೬೭

edits

"https://kn.wikipedia.org/wiki/ವಿಶೇಷ:MobileDiff/612829" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ