"ಅಂಥಿಂಥ ಹೆಣ್ಣು ನೀನಲ್ಲ!!" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
Wikipedia python library
(ವರ್ಗ)
ಚು (Wikipedia python library)
'''ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.'''
 
 
ಅಂಥಿಂಥ ಹೆಣ್ಣು ನೀನಲ್ಲ;
 
ನಿನ್ನಂಥ ಹೆಣ್ಣು ಇನ್ನಿಲ್ಲ.
 
 
 
ಹೆಡೆಹೆಡೆಯ ಸಾಲು ತುರುಬೆಲ್ಲ,
 
ಗುಡಿನಿಂದ ಹೂವು ಮೇಲೆಲ್ಲ,
 
ತೆರೆತೆರೆಯ ಹೊರಳು ಕುರುಳೆಲ್ಲ,
 
ಸುಳಿಮಿಂಚು ಕಣ್ಣ ಹೊರಳೆಲ್ಲ!
 
 
ಮಣಿಮಲೆ ಕೊರಳ ದನಿಯೆಲ್ಲ,
 
ಹೊಂಬಾಳೆ ಆಸೆ ಒಳಗೆಲ್ಲ.
 
ಒತ್ತಾಯವಿಲ್ಲ: ಒಲವೆಲ್ಲ!
 
ನಿನ್ನಂಥ ಹೆಣ್ಣು ಹಲವಿಲ್ಲ.
 
 
 
ಎದೆಮಟ್ಟ ನಿಂತ ಹೂ ಬಳ್ಳಿ;
 
ಎಷ್ಟೊಂದು ಹೂವು ಅದರಲ್ಲಿ!
 
ಉಸಿರುಸಿರು ಮೊಗ್ಗು ಹೂವೆಲ್ಲ;
 
ನೀ ಬಳ್ಳಿ ಬೆಳಕು ಬದುಕೆಲ್ಲ!
 
 
 
ನಡುಬೆಟ್ಟದಲ್ಲಿ ನಿನ್ನೂರು;
 
ಅಲ್ಲಿಹವು ನವಿಲು ಮುನ್ನೂರು.
 
ಮುನ್ನೂರು ನವಿಲು ಬಂದಂತೆ
 
ನೀ ಬಂದರೆನಗೆ; ಸಿರಿವಂತೆ.
 
 
 
ನಡುದಾರಿಯಲ್ಲಿ ನನ್ನೂರು;
 
ಕುಡಿಮಿಂಚಿನೂರು ಹೊನ್ನೂರು
 
ಮುನ್ನೂರು ಮೆಂಚು ಹೊಳೆದಂತೆ
 
ನೀ ಬಂದರೆನಗೆ, ಸಿರಿವಂತೆ.
 
 
 
ಬಲುದೂರ ದೂರ ನೀನಾಗಿ,
 
ಹೊಂಗನಸು ನಡುವೆ ದನಿತೂಗಿ,
 
ಕಾದಿರಲು ನಾನು ನಿನಗಾಗಿ
 
ನೀ ಬರುವೆ ಚೆಲುವೆ ಹೊಳೆಯಾಗಿ.
 
 
 
ಏನಂಥ ಚೆಲುವೆ ನೀನಲ್ಲ.
 
ನೀನಲ್ಲ? ಚೆಲುವೆ ಇನ್ನಿಲ್ಲ!
 
ಹಾಡಲ್ಲ, ನೀನು ಕನಸಲ್ಲ;
 
ನಿನ್ನಿಂದ ಹಾಡು ಕನಸೆಲ್ಲ.
 
 
 
-ಕೆ ಎಸ್ ನರಸಿಂಹಸ್ವಾಮಿಯವರು .........
 
 
[[ವರ್ಗ: ಕೆ.ಎಸ್. ನರಸಿಂಹಸ್ವಾಮಿಯವರ ಕೃತಿಗಳು]]
೫,೧೫೦

edits

"https://kn.wikipedia.org/wiki/ವಿಶೇಷ:MobileDiff/607383" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ