ಆಂಗೀರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಿಲೀನ
೭ ನೇ ಸಾಲು: ೭ ನೇ ಸಾಲು:
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಹಿಂದೂ ಋಷಿಗಳು]]
[[ವರ್ಗ:ಹಿಂದೂ ಋಷಿಗಳು]]
[[ವರ್ಗ:ಮಹಾಭಾರತದ ಪಾತ್ರಗಳು]]

೧೪:೩೮, ೩೦ ಮೇ ೨೦೧೫ ನಂತೆ ಪರಿಷ್ಕರಣೆ

ಆಂಗೀರಸನೊಂದಿಗೆ ರಾಣಿ ಚೊಳದೇವಿ

ಆಂಗೀರಸ ಒಬ್ಬ ವೈದಿಕ ಋಷಿ. ಅಥರ್ವನ ಮುನಿಯೊಡನೆ ನಾಲ್ಕನೇ ವೇದವಾದ ಅಥರ್ವಣವೇದವನ್ನು ರಚಿಸಿದಾತ. ಈತ ಸಪ್ತರ್ಷಿಗಳಲ್ಲಿ ಒಬ್ಬ. ಅಂಗಿರಸಮಹರ್ಷಿ. ದೇವತೆಗಳಿಗೆ ಪುರೋಹಿತ. ಯಾಗಗಳಲ್ಲಿ ಇವನ ಪಾತ್ರ ಹಿರಿದು. ಬ್ರಹ್ಮಮಾನಸಪುತ್ರನೆಂದೂ ಅಗ್ನಿಯ ತಂದೆಯೆಂದೂ ಅಗ್ನಿಯ ಮಗಳಾದ ಆಗ್ನೇಯಿಯ ಪುತ್ರನೆಂದೂ ಈತನ ಕುಲ ಗೋತ್ರದ ವಿಚಾರವಾಗಿ ನಾನಾ ಅಭಿಪ್ರಾಯಗಳಿವೆ. ಸತಿ ಎಂಬ ಪತ್ನಿಯಲ್ಲಿ ಅಥರ್ವಾಂಗಿರಸರನ್ನು ಪಡೆದ. ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ ಬ್ರಹ್ಮ ಅವನ ಸ್ಥಾನಕ್ಕೆ ಅಂಗಿರಸನನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ ಮಹಾಭಾರತದ ವನಪರ್ವದಲ್ಲಿ ಹೇಳಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆಂಗೀರಸ&oldid=589319" ಇಂದ ಪಡೆಯಲ್ಪಟ್ಟಿದೆ