ಕವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
೬೧ ನೇ ಸಾಲು: ೬೧ ನೇ ಸಾಲು:
*(ರಚನೆ:- ಬಿ.ಎಸ್.ಚಂದ್ರಶೇಖರ ಸಾಗರ)
*(ರಚನೆ:- ಬಿ.ಎಸ್.ಚಂದ್ರಶೇಖರ ಸಾಗರ)
== ನೋಡಿ ==
== ನೋಡಿ ==
*[[ಕನ್ನಡ ಸಾಹಿತ್ಯ ಪ್ರಕಾರಗಳು]]
[[ಚರ್ಚೆಪುಟ:ಕವನ|ಚರ್ಚೆ]] ಯಲ್ಲಿ ನೋಡಿ ಇಂಗ್ಲಿಷ ಕವನದ ಮಾದರಿ
[[ಚರ್ಚೆಪುಟ:ಕವನ|ಚರ್ಚೆ]] ಯಲ್ಲಿ ನೋಡಿ ಇಂಗ್ಲಿಷ ಕವನದ ಮಾದರಿ
[[ವರ್ಗ:ಕವನ|ಕವನ]]
[[ವರ್ಗ:ಕವನ|ಕವನ]]

೧೫:೪೪, ೨೮ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ

ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ ,
ಗೆಳೆಯಾ, ಪ್ರಿಯಾ
ಗಂಡ, ಸೋದರ
ತಂದೆ, ಮಗ
ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ
                     -ರೇಣುಕಾಶಂಕರ್

ನಿರೀಕ್ಷೆ
ನೀ ಬರುವ ದಾರಿಯಲಿ
ಪಾರಿಜಾತವ ನೆಟ್ಟಿರುವೆ
ನೀ ಬರಲಿ ಬಿಡಲಿ
ಹೂಗಳ ಹಾಸುತ್ತಲೇ ಇರಲೆಂದು
          -ರೇಣುಕಾಶಂಕರ್

ಗುಬ್ಬಿ ನಮ್ಮ ಮನೆಗೆ ಬಂದಿದೆ.

ಬಾ ನನ್ನ ಹಳೆಯ ಸ್ನೇಹಿತನೇ
ತುಂಬಾ ದಿನದ ಮೇಲೆ ನಿನ್ನ ಭೇಟಿ/
ಅತೀತ ಅಲೆಗಳನು ಮೀರಿ ಬಂದೆಯಾ?
ವಿಪರೀತ ಜೀವನ ಪ್ರೀತಿ ಬಿಡು ನಿನ್ನದು/
ನನ್ನ ಭುವಿಯ ಪುಣ್ಯ ಗೆಳೆಯಾ/
ನಿನ್ನ ಗೆಳತಿಯೂ ಬಂದಿರುವ ಹಾಗಿದೆ/
ಗೂಡು ಕಟ್ಟಲು ನನ್ನ ಗೂಡಿಗೆ ಆಗಮನವೇ?
ಹೆಂಚಿನ ಮನೆಯೇ ಇಲ್ಲವಲ್ಲೋ! ಅಗೋ ಕಿಟಕಿಯ ತೂತೊಂದು ಇದೆ ನೋಡು
ಶುರು ಮಾಡು ನಿನ್ನ ಸಂಸಾರವನ್ನು
ಉಳಿಸು ನನ್ನ ಗೋಲವನ್ನು
  

ಒಂದು ನವೋದಯ ಕಾವನ

(ಒಂದು ರೊಮ್ಯಾಂಟಿಕ್ ಕವನ)

  • ಉದಾಹರಣೆ :
  • ಮನಸು - ಕನಸು
  • ಪೂರ್ಣಿಮೆಯ ಒಂದು ದಿನ
  • ನಡೆದಿರಲು ತೋಟದಲಿ
  • ಅಚ್ಚರಿಯು ಎನ್ನೊಳಗೆ
  • ಮುದದ ಅಲೆ ಮನಸಿನಲಿ ಏಳುತಿರಲು ||೧||
  • ಏಕೆಂದು ಚಿಂತಿಸಿದೆ
  • ತಿಂಗಳಿನ ಸೊಗಸಲ್ಲ
  • ಇಂತಿರುವ ಚೆಲುವನ್ನು
  • ಕಂಡೆ ನಾನಂದು ನೀನಗುತಲಿರಲು ||೨||
  • ಅಂದು ನಾ ಸಂಜೆಯಲಿ
  • ಒಬ್ಬನೇ ಕುಳಿತಿರಲು
  • ಪುಳಕಿತವು ದೇಹದಲಿ
  • ಬಾನಿನಂಚಿನಲಿರಲು ಕೆಂಪುರಾಗ ||೩||
  • ಸಂಜೆಯಲಿ ಸೊಗಸೇನು
  • ಅಂದು ನಾ ನಿನ್ನೊಡನೆ
  • ನಡೆದಿರಲು ತೋಟದಲಿ
  • ನಿನ್ನ ಕದಪಿನಲಿಂತು ರಾಗ ರಾಗ ||೪||
  • ಮೈಮರೆತು ಕೇಳಿದೆನು
  • ಕೋಗಿಲೆಯ ಇನಿದನಿಯ
  • ಮೂಡಣದಿ ಉಷೆಮೂಡಿ
  • ಬಾನಿನಿಂ ಸಗ್ಗ ಭುವಿಗಿಳಿಯುತಿರಲು ||೫||
  • ಉಷೆಯು ಮೋಹಕವಲ್ಲ
  • ಇಂಚರವು ಇನಿದಲ್ಲ
  • ಕೇಳುವೆನು ಆ ನಿನ್ನ
  • ಇನಿದನಿಯು ಮನದೊಳಗೆ ಮಿಡಿಯುತಿರಲು ||೬||
  • (ರಚನೆ:- ಬಿ.ಎಸ್.ಚಂದ್ರಶೇಖರ ಸಾಗರ)

ನೋಡಿ

ಚರ್ಚೆ ಯಲ್ಲಿ ನೋಡಿ ಇಂಗ್ಲಿಷ ಕವನದ ಮಾದರಿ

"https://kn.wikipedia.org/w/index.php?title=ಕವನ&oldid=492324" ಇಂದ ಪಡೆಯಲ್ಪಟ್ಟಿದೆ