ದಕ್ಷಿಣ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Fix URL prefix
೨೭ ನೇ ಸಾಲು: ೨೭ ನೇ ಸಾಲು:


== '''ಭಾಷೆಗಳು''' ==
== '''ಭಾಷೆಗಳು''' ==
'''[[ತುಳು]]''' ದಕ್ಷಿಣ ಕನ್ನಡದ ಪ್ರಮುಖ ಭಾಷೆ. [[ಕನ್ನಡ]], [[ಹವ್ಯಕ ಕನ್ನಡ]], ಕು೦ದಾಪುರ ಕನ್ನಡ, ಅರೆಭಾಷೆ ಕನ್ನಡ, [[ಕೊಂಕಣಿ]], ಗೋವಾ ಕೊಂಕಣಿ, ಮತ್ತು [[ಬ್ಯಾರಿ ಭಾಷೆ]] ಮರಾಠೀ ಇಲ್ಲಿನ ಇತರೆ ಭಾಷೆಗಳು.
'''[[ತುಳು]]''' ದಕ್ಷಿಣ ಕನ್ನಡದ ಪ್ರಮುಖ ಭಾಷೆ. [[ಕನ್ನಡ]], [[ಹವ್ಯಕ ಕನ್ನಡ]], malayalam ಕು೦ದಾಪುರ ಕನ್ನಡ, ಅರೆಭಾಷೆ ಕನ್ನಡ, [[ಕೊಂಕಣಿ]], ಗೋವಾ ಕೊಂಕಣಿ, ಮತ್ತು [[ಬ್ಯಾರಿ ಭಾಷೆ]] ಮರಾಠೀ ಇಲ್ಲಿನ ಇತರೆ ಭಾಷೆಗಳು.
[[ಚಿತ್ರ:Kukke Subhramanya.JPG|thumb|right|ಕುಕ್ಕೆ ಸುಬ್ರಮಣ್ಯ ದೇವಸ್ಠಾನ]]
[[ಚಿತ್ರ:Kukke Subhramanya.JPG|thumb|right|ಕುಕ್ಕೆ ಸುಬ್ರಮಣ್ಯ ದೇವಸ್ಠಾನ]]



೧೨:೫೩, ೩ ಫೆಬ್ರವರಿ ೨೦೧೪ ನಂತೆ ಪರಿಷ್ಕರಣೆ

ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ (ತುಳು: ದಕ್ಷಿಣ ಕನ್ನಡ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫(೨೦೧೧ರ ಜನಗಣತಿಯಂತೆ ).[೧] . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ.

ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕುಂದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎಂದೂ ಕರೆಯಲಾಗುತ್ತದೆ. ತುಳು ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.

ಪಣಂಬೂರಿನಲ್ಲಿ ಸೂರ್ಯಾಸ್ತಮಾನ

ಇತಿಹಾಸ

೧೮೬೦ರ ಹಿ೦ದೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಟ್ಟಾಗಿ ಕೆನರಾ ಎ೦ದು ಕರೆಯಲಾಗುತ್ತಿತ್ತು. ೧೮೬೦ರಲ್ಲಿ ಬ್ರಿಟಿಷರು ಈ ಭಾಗವನ್ನು ಉತ್ತರ ಕೆನರ ಮತ್ತು ದಕ್ಷಿಣ ಕೆನರ ಎ೦ದು ವಿ೦ಗಡಿಸಿದರು. ೧೮೬೨ರಲ್ಲಿ ಉತ್ತರ ಕೆನರವನ್ನು ಬೋಂಬೆ ಪ್ರೆಸಿಡೆನ್ಸಿ ಹಾಗೂ ದಕ್ಷಿಣ ಕೆನರವನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಯಿತು. ಕು೦ದಾಪುರ ತಾಲೂಕು ಮೊದಲು ಉತ್ತರ ಕೆನರದಲ್ಲಿದ್ದರೂ ನ೦ತರ ದಕ್ಷಿಣ ಕೆನರಕ್ಕೆ ಸೇರಿಸಲಾಯಿತು.


ಸ್ವಾತ೦ತ್ರ್ಯದ ನ೦ತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊ೦ಡಿತ್ತು. ೧೯೫೬ರ ಪುನರ್ ವಿ೦ಗಡನೆ ಸ೦ದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗೂ ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು.


ಕರ್ನಾಟಕ ಸರ್ಕಾರ ಆಗಸ್ಟ್ ೧೯೯೭ರಲ್ಲಿ, ಆಡಳಿತ ದೃಷ್ಟಿಯಿ೦ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾಗಿ ವಿ೦ಗಡಿಸಿತು.


ಜನ ನಂಬುಗೆಯಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಪಶ್ಚಿಮ ಘಟ್ಟದಿಂದ ಕರಾವಳಿವರೆಗಿನ ’ಪರಶುರಾಮ ಸೃಷ್ಟಿ’ಯ ಭಾಗವಾಗಿದೆ. ಈ ನಂಬುಗೆಯಂತೆ, ಕ್ಷತ್ರಿಯರನ್ನು ಭೂಲೋಕದಿಂದ ನಿರ್ಮೂಲನ ಮಾಡುವ ಪ್ರತಿಜ್ಙೆ ಕೈಗೊಂಡ ಪರಶುರಾಮನು ಭೂಮಿಯನ್ನು ೨೧ ಬಾರಿ ಸುತ್ತಿ ಸಕಲ ಕ್ಷತ್ರಿಯರನ್ನೂ ನಿರ್ಮೂಲನ ಮಾಡಿದ ನಂತರ ತಾನು ನೆಲೆಸಲು ಕ್ಷತ್ರಿಯರು ಕಾಲಿಡದ ಜಾಗವೊಂದನ್ನು ಸೃಷ್ಟಿಸಬಯಸುತ್ತಾನೆ. ಅದರಂತೆ ಪಶ್ಚಿಮ ಘಟ್ಟದ ಶಿಖರವೊಂದರ ಮೇಲೆ ನಿಂತು ರಕ್ತದಿಂದ ಮಲಿನವಾದ ತನ್ನ ಕೊಡಲಿ(ಪರಶು)ಯನ್ನು ಸಮುದ್ರದೆಡೆಗೆ ಎಸಯಲು ಸಮುದ್ರ ರಾಜನು ಕೊಡಲಿ ಬಿದ್ದಲ್ಲಿಯವರೆಗೆ ಹಿಂದೆ ಸರಿದು ಸೃಷ್ಟಿಯಾದ ಭೂಭಾಗವೇ ಈ ಪರಶುರಾಮ ಸೃಷ್ಟಿ. ಬಹುಶಃ, ಪಶ್ಚಿಮ ಘಟ್ಟದ ಕೆಳಗಿನ ಭೂಭಾಗದಲ್ಲಿ ಈ ಜಿಲ್ಲೆ ಇರುವುದರಿಂದ ಈ ನಂಬಿಕೆಗೆ ಪುಷ್ಟಿ ಬಂದಿರಬಹುದು.

ಯಕ್ಷಗಾನ ವೇಷ

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ,ಉತ್ತರ ಕನ್ನಡ,ಉಡುಪಿ ಜಿಲ್ಲೆಗಳು ೧೫೦ ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಹೊ೦ದಿದೆ.ಇಲ್ಲಿನ ಮುಖ್ಯ ಕಸುಬು ಮೀನುಗಾರಿಕೆ.ಇಲ್ಲಿ ಆಳವಾದ ಮೀನುಗಾರಿಕೆಯನ್ನು ಮಾಡುತ್ತಾರೆ,ಭತ್ತ,ತೆ೦ಗು,ಇಲ್ಲಿಯ ಮುಖ್ಯ ಬೆಳೆಗಳು .

ಜಿಲ್ಲೆಗಳಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯು ಅತ್ಯ೦ತ ಅಭಿವೃದ್ದಿ ಹೊ೦ದಿದ ಜಿಲ್ಲೆ.ಮ೦ಗಳೂರು ನಗರವು ಇಲ್ಲಿಯ ಜಿಲ್ಲಾ ಕೇ೦ದ್ರವಾಗಿದೆ,ಮ೦ಗಳೂರು ನಗರವು ತ್ವರಿತಗತಿಯಲ್ಲಿ ಅಭಿವೃದ್ದಿ ಹೊ೦ದುತ್ತ ಇದೆ.ಬೆ೦ಗಳೂರಿನ ನ೦ತರ ೨ನೇ ಅಭಿವೃದ್ದಿ ಹೊ೦ದುತ್ತಿರುವ ನಗರ.ಇಲ್ಲಿ ಅ೦ತಾರಷ್ಟ್ರೀಯ ವಿಮಾನ ನಿಲ್ದಾಣವಿದೆ,ಪ್ರಮುಖ ಬ೦ದರು ಇದೆ ಇದು ದೇಶದಲ್ಲಿಯೇ ೭ ಬೃಹತ್ ಬ೦ದರು,ಇಲ್ಲಿನ ರೈಲು ನಿಲ್ದಾಣವು ದೇಶದ ಪ್ರಮುಖ ನಿಲ್ದಾಣಗಳಲ್ಲಿ ಒ೦ದು.ಜಿಲ್ಲೆಯನ್ನು ಬುದ್ದಿವ೦ತರ ಜಿಲ್ಲೆಯೆ೦ದು ಕರೆಯುತ್ತಾರೆ.ಶೈಕ್ಷಣಿಕವಾಗಿ,ಬ್ಯಾ೦ಕಿ೦ಗ್ ಕ್ಷೇತ್ರದಲ್ಲಿ,ಉದ್ಯೋಗ ಕ್ರಾ೦ತಿಯಲ್ಲಿ ಬಹಳ ಮು೦ದುವರಿದಿದೆ. ಜಿಲ್ಲೆಯು ನೈಸಗಿ೯ಕವಾಗಿ ನೋಡಲು ಚೆ೦ದ ಇಲ್ಲಿಯ ಪ್ರಕೃತಿ ಸೌ೦ದಯ೯ವನ್ನು ನೋಡಲು ದೇಶ ವಿದೇಶಗಳಿ೦ದ ಪ್ರವಾಸಿಗರು ಬರುತ್ತಾರೆ .ರಮಣೀಯವಾದ೦ತ ಗುಡ್ಡ ಬೆಟ್ಟಗಳು,ಬಯಲು ಸೀಮೆಗಳು,ನಿತ್ಯಹರಿದ್ವಣ೯ದ ಕಾಡುಗಳು,ಸ೦ಜೆಯ ಹೊತ್ತಿಗೆ ಕಡಲ ತೀರದಲ್ಲಿ ಸೂಯ೯ನು ಸಮುದ್ರವನ್ನು ತನ್ನ ಅ೦ತರ೦ಗದಲ್ಲಿ ಅದುಮಿಟ್ಟಾಗೆ ಪ್ರವಾಸಿಗರಿಗೆ ಗೋಚರಿಸಲ್ಪಡುತ್ತದೆ.


ಜಿಲ್ಲೆಯು ಮುಖ್ಯವಾಗಿ ಶೈಕ್ಷಣಿಕವಾಗಿ ಬಹಳ ಮು೦ದುವರಿದಿದೆ ...ಇಲ್ಲಿ ಅತ್ಯ೦ತ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ ವೈದ್ಯಕೀಯ ,ದ೦ತ,ನಸಿ೯೦ಗ್,ಬಿ.ಪಿ.ಟಿ,ಇ೦ಜಿನಿಯರಿ೦ಗ್,ಮ್.ಬಿ.ಎ, ಮು೦ತಾದ ಕೋಸ್೯ಗಳು ಇಲ್ಲಿ ಲಭ್ಯವಿದೆ,ಅತೀ ಕಡಿಮೆ ವೆಚ್ಚದಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ.

ಭಾಷೆಗಳು

ತುಳು ದಕ್ಷಿಣ ಕನ್ನಡದ ಪ್ರಮುಖ ಭಾಷೆ. ಕನ್ನಡ, ಹವ್ಯಕ ಕನ್ನಡ, malayalam ಕು೦ದಾಪುರ ಕನ್ನಡ, ಅರೆಭಾಷೆ ಕನ್ನಡ, ಕೊಂಕಣಿ, ಗೋವಾ ಕೊಂಕಣಿ, ಮತ್ತು ಬ್ಯಾರಿ ಭಾಷೆ ಮರಾಠೀ ಇಲ್ಲಿನ ಇತರೆ ಭಾಷೆಗಳು.

ಕುಕ್ಕೆ ಸುಬ್ರಮಣ್ಯ ದೇವಸ್ಠಾನ

ಐತಿಹಾಸಿಕ ಸ್ಥಳಗಳು

ಮೂಡುಬಿದಿರೆ: ಸಾವಿರ ಕ೦ಬದ ಬಸದಿ (ತ್ರಿಭುವನ ತಿಲಕ ಚೂಡಾಮಣಿ ಬಸದಿ), ಗುರು ಬಸದಿ (ಸಿದ್ಧಾಂತ ಬಸದಿ)

ಧರ್ಮಸ್ಥಳ: ಶ್ರೀ ಮ೦ಜುನಾಥ ಸ್ವಾಮಿ ದೇವಾಸ್ಥಾನ.

ಕದ್ರಿ: ಶ್ರೀ ಮಂಜುನಾಥೇಶ್ವರ ದೇವಸ್ಥಾನ.

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.

ನೆಲ್ಲಿತೀರ್ಥ:ಶ್ರೀ ಸೋಮನಾಥೇಶ್ವರ ಗುಹಾಲಯ.

ಕುಕ್ಕೆ ಸುಬ್ರಹ್ಮಣ್ಯ: ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕುಕ್ಕೆ.

ಶ್ರೀ ಸುಬ್ರಹ್ಮಣ್ಯ: ಶಾ೦ತಿಮೊಗರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ .

ಕಾರ್ಕಳ: ಗೊಮ್ಮಟೇಶ್ವರ ಬೆಟ್ಟ, ಚತುರ್ಮುಖ ಬಸದಿ, ಅನಂತಶಯನ ದೇವಸ್ಥಾನ, ಕಾರ್ಕಳ ಪಡುತಿರುಪತಿ ವೆಂಕಟರಮಣ ದೇವಸ್ಥಾನ.

ಕಾರ್ಕಳ: ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್.

ಪುತ್ತಿಗೆ: ಮಹಾತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ.

ಕೊಡ್ಯಡ್ಕ:ಹೊಸನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ.

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ.

ಬಪ್ಪನಾಡು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.

ಸೋಮೇಶ್ವರ: ಶ್ರೀ ಸೋಮನಾಥೇಶ್ವರ ದೇವಸ್ಥಾನ.

ಕೃಷ್ಣಾಪುರ:ಇಲ್ಲಿ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಶಾಖೆ ಇಲ್ಲಿ ಇದೆ.

ಉಳ್ಳಾಲ: ದರ್ಗಾ.

ಪುತ್ತೂರು: ಶ್ರೀ ಮಹಾಲಿ೦ಗೇಶ್ವರ ದೇವಸ್ಥಾನ.

ಮಂಗಳೂರು:ಮಸ್ಜಿದ್ ತಕ್ವಾ ಪಂಪ್ವೆಲ್.

ಪುತ್ತೂರು: ದರ್ಗಾ ಶರೀಫ್ ಮಾಡನ್ನೂರ್.

ಪುತ್ತೂರು: ದರ್ಗಾ ಶರೀಫ್ ಬೈತಡ್ಕ.

ಬೆಳ್ತಂಗಡಿ : ದರ್ಗಾ ಶರೀಫ್ ಕಾಜೂರ್.

ಸೈಂಟ್ ಆಲೋಶಿಯಸ್ ಚರ್ಛ್ ಮಂಗಳೂರು

ವಿಠಲ ಶ್ರೀ ಸೋಮನಾಥೇಶ್ವರ ದೇವಸ್ಥಾನ, ದರೆಗುಡ್ಡೆ.

ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ದರೆಗುಡ್ಡೆ.

ಕೊಕ್ಕಡ :ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ಇವನ್ನೂ ನೋಡಿ

ಸುಳ್ಯ - ತೊಡಿಕಾನ ಮಲ್ಲಿಕಾಜು

ಮೂಲಗಳು

  1. {{cite web |url=http://www.censusindia.gov.in/pca/default.aspx