"ಚಾರ್ವಾಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
→‎ತಾತ್ಪರ್ಯ :: :ಮುಂದುವರೆದಿದೆ
(→‎ತಾತ್ಪರ್ಯ :: :ಮುಂದುವರೆದಿದೆ)
*ಪ್ರಾಣಿಗಳ ಕಾಟವಿದೆಯೆಂದು ಬೀಜವನ್ನು ಬಿತ್ತದೆ ಇರುವುದಿಲ್ಲ. ದುಃಖಕ್ಕೆ ಹೆದರಿ ಸುಖವನ್ನು ತ್ಯಾಗ ಮಾಡಬಾರದು. ಪರಲೋಕದಲ್ಲಿ ಸುಖ ಸಿಗುವುದೆಂದು ಈಲೋಕದಲ್ಲಿಸುಖವನ್ನು ತ್ಯಾಗ ಮಾಡುವುದು ವ್ಯರ್ಥ .
 
== ತಾತ್ಪರ್ಯಸಮೀಕ್ಷೆ : ==
*ಚಾರ್ವಾಕರು ಅನೀತಿಯಿಂದಾದರೂ ಸುಖವನ್ನು ಪಡೆಯಬೇಕೆಂದು ಉಪದೇಶಿಸುತ್ತಾರೆಂದು ಅಪವಾದವಿದೆ. ಆದರೆ ಹಾಗೆಂದುಹೇಳಲು ಬರುವುದಿಲ್ಲ.
*ಏಕೆಂದರೆ ದೇವರನ್ನು ಒಪ್ಪದಿದ್ದರೂ ರಾಜ ಶಾಸನವನ್ನೂ, ಸಮಾಜದ ನೀತಿನಿಯಮಗಳನ್ನೂ ಒಪ್ಪುತ್ತಾರೆ. ಅವರ ಹೇಳಿಕೆ :
:(ಮುಂದುವರೆಯುವುದು)
:'''ನಿಗ್ರಹಾನುಗ್ರಹ ಕರ್ತಾ ರಾಜಾಈಶ್ವರಃ||'''
*ರಾಜನೇ ಈಶ್ವರ ;ಅವನ ಶಾಸನಕ್ಕೇ ಒಳಪಟ್ಟಿರಬೇಕೆಂಬುದು ಅಭಿಪ್ರಾಯ.
ಶರೀರವು ಭೋಗಯತನ. ಸುಖವನ್ನು ಬಯಸುವುದು. ಆದರೆ ದುಃಖ - ಕ್ಲೇಶ ಆಗುವುದು. ಈ ದುಃಖಕ್ಕೆಲ್ಲಾ ಕೊನೆ - ಸಾವು. '''ಮರಣವೇ ಮೋಕ್ಷ.''' ಮರಣಮೇವಾಪರ್ಗ. ಕಾರಣ ಮರಣದ ನಂತರ ಆತ್ಮವರುವುದೆಂಬುದನ್ನು ಅವರು ಒಪ್ಪುವುದಿಲ್ಲ.
== ವಿಫಲತೆಗೆ ಕಾರಣ ==
:೧. ಅತೀಂದ್ರಿಯ ಅನುಭವಗಳಿಗೂ , ಭಾವನೆಗಳಿಗೂ, ಪ್ರೀತಿ ಪ್ರೇಮಗಳಿಗೂ, ಪಾಮುಖ್ಯತೆ ಕೊಡದಿರುವುದರಿಂದ ಭಾರತದಲ್ಲಿ ಈ ದರ್ಶನ ತಿರಸ್ಕಾರಕ್ಕೆ ಒಳಗಾಯಿತೆಂದು ಹೇಳಬಹುದು.
:೨. ಅನುಮಾನ ಪ್ರಮಾಣಕ್ಕೆ ಮಾನ್ಯತೆ ಇಲ್ಲಿರುವುದರಿಂದ ತರ್ಕದಲ್ಲಿ ಸೋತಿತು. ಉದಾಹರಣೆಗೆ -ಸೂರ್ಯನು ದೂರದಲ್ಲಿ ಚಿಕ್ಕವನಾಗಿ ಕಂಡರೂ ಅನುಮಾನ ಪ್ರಮಾಣದಿಂದ (ಗಣಿತದ ಲೆಕ್ಕಾಚಾರದಿಂದ) ಅದು ಅತಿ ದೊಡ್ಡದು. ಹತ್ತಿರ ಹೋಗಿ ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅದು ಸತ್ಯ.
:೩. ಕಾರ್ಯ-ಕಾರಣ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೂ ಅದರ ದೊಡ್ಡ ಪ್ರಮಾದ.
:೪. ಭಕ್ತಿ, ದೈವ ವಾದ, ಅದ್ಯಾತ್ಮ , ಮೋಕ್ಷಗಳ ಅಬ್ಬರದಲ್ಲಿ ಚರ್ವಾಕವಾದ ಅಡಗಿಹೋಯಿತು.
== ಉಪಸಂಹಾರ ==
*ಆದರೆ ಎಲ್ಲರೂ ಸ್ವಲ್ಪಮಟ್ಟಿಗೆ ಲೋಕಾಯತರೆ ಆಗಿದ್ದಾರೆ. ಬಹಳಷ್ಟು ಜನರು ಸ್ವರ್ಗ ಪ್ರಾಪ್ತಿಯ ಸುಖಕ್ಕಾಗಿ ಈ ಜಗತ್ತಿನ ಸುಖ ಸಂಪತ್ತನ್ನು .ಪೂರ್ತಿ ತ್ಯಾಗ ಮಾಡಲಾರರು. ಮರಣಾನಂತರ ಪರಲೋಕದಲ್ಲಿ ಪಡೆಯಬಹುದಾದ ಸುಖಕ್ಕಾಗಿ ,ತಮ್ಮ ಅಮೂಲ್ಯವಾದ ಶರೀರವನ್ನು ವ್ಯರ್ಥವಾಗಿ ದಂಡಿಸುವ ಜನರಿಗೆ,ಅದನ್ನು ಬಿಟ್ಟು ಸುಖವಾಗಿಕಳೆಯುವಂತೆ ಉಪದೇಶಿಸಿದರು.
 
*ಮೋಕ್ಷ ವೈರಾಗ್ಯದ ಹೆಸರಿನಲ್ಲಿ ,ಪರಲೋಕದ ಸುಖಕ್ಕಾಗಿ ತಾವೂ ಸುಖ ಪಡದೆ, ಬೇರೆಯವರಿಗೂ ಈ ಜೀವನದಲ್ಲಿ ಸುಖವನ್ನು ಕೊಡದೆ, ಪ್ರಾಪಂಚಿಕ ಧರ್ಮವನ್ನು ಮರೆತು, ದೇಹವನ್ನು ದಂಡಿಸುತ್ತಾ ತಾವೂ ದುಡಿಯದೆ -ಬೇರೆಯವರ ಮೇಲೆ ಅವಲಂಬಿಸಿಕೊಂಡು, - ಈಜಗತ್ತೆಲ್ಲಾ ದುಃಖ ಮಯವೆಂದೂ, ಇದು ಪಾಪಿ ಜನ್ಮವೆಂದೂ, ಪಾಪ ಪ್ರಜ್ಞೆಯಲ್ಲಿ ಬದುಕುವವರನ್ನು ಚರ್ವಾಕರು ಧೈರ್ಯವಾಗಿ ವಿರೋಧಿಸಿದರು. ಚವಾಕ ವಾದ ಪ್ರಬಲವಾಗಿದ್ದರೆ, ವಿಜ್ಞಾನ ,ಅರ್ಥ ಶಾಸ್ತ್ರ, ಮೊದಲಾದ ಲೌಕಿಕ ಶಾಸ್ತ್ರಗಳು ಇನ್ನಷ್ಟು ಪುಷ್ಟವಾಗಿ ಬೆಳೆದು ದೇಶದ ಚರಿತ್ರೆಯೇ ಬೇರೆಯಾಗಬಹುದಿತ್ತು ಎಂಬುದು ವಿಚಾರ ವಾದಿಗಳ ಅಭಿಪ್ರಾಯ. ಆದರೆ ಇತಿಹಾಸದಲ್ಲಿ ಹಾಗಾಗುವು ಇರಲಿಲ್ಲ.
 
== ಬಾಹ್ಯ ಸಂಪರ್ಕಗಳು ==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/369162" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ