ವಿಷಯಕ್ಕೆ ಹೋಗು

ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

 
ಪ್ರತಿದಿನ ಸಂಜೆಯ ವೇಳೆಯಲ್ಲಿ ಪುಟ್ಟ ಮಕ್ಕಳನ್ನು ಕರೆದು ಗೊಂಬೆ ಬಾಗಿನ ಎಂದು ತಿಂಡಿಗಳನ್ನು ಕೊಡುವರು. ಇಲ್ಲಿ ವಿಶೇಷವೇನೆಂದರೆ, ಈ ಎಲ್ಲ ತಿಂಡಿಗಳು ಸಣ್ಣ ಸಣ್ಣ ಸ್ವರೂಪದಲ್ಲಿರುವುವು. [[ವಿಜಯದಶಮಿ]] ಯಂದು ಪಟ್ಟದ ಗೊಂಬೆಗಳನ್ನು ಮಲಗಿಸಿ ಇಟ್ಟು ಮಾರನೆಯ ದಿನ ಬೆಳಗ್ಗೆ ಕಲಶವನ್ನು ವಿಸರ್ಜಿಸುವರು. ಲಲಿತಾದೇವಿಗೆ ಸಹಸ್ರನಾಮಯುತ ಕುಂಕುಮಾರ್ಚನೆ - ವಿಜಯದಶಮಿಯಂದು ಶಮೀ ಅಥವಾ ಬನ್ನಿ ಪತ್ರವನ್ನು ಹಿರಿಯರಿಗೆ ಕೊಟ್ಟು ಕಾಲು ಮುಟ್ಟಿ ನಮಸ್ಕರಿಸುವುದು ಪದ್ಧತಿ.
 
== ಮಹಾರಾಜರ ಖಾಸಗಿ ದರ್ಬಾರ್ ==
 
[[ಮೈಸೂರು]] ದಸರ ಮಹೋತ್ಸವಕ್ಕೆ ೨೦೧ ವರ್ಷಗಳ ಇತಿಹಾಸವಿದೆ. ದಸರ ಸಮಯದಲ್ಲಿ ನಡೆಯುವ ಇನ್ನೊಂದು ಕಾಯಕ್ರಮವೆಂದರೆ [[ಅದು ಮಹಾರಾಜ|ಮಹಾರಾಜರ]] ಖಾಸಗಿ ದರ್ಬಾರ್.
 
[[ಅಂಬಾ ವಿಲಾಸ]] ಅರಮನೆಯಲ್ಲಿ ನವರಾತ್ರಿಯ ಒಂಭತ್ತು ದಿನಗಳು ನಡೆಯುವ ಒಂದು ವಿಶಿಷ್ಟ ಕಾರ್ಯಕ್ರಮ. ದಸರಾ ಪ್ರಾರಂಭವಾಗುವ ಮೊದಲು ನಾಲ್ಕು ಟನ್ ತೂಗುವ ಮೈಸೂರಿನ ಅತ್ಯಂತ ಪ್ರಾಚೀನ ರತ್ನ ಸಿಂಹಾಸನವನ್ನು ತಂದು ಅಣಿಗೊಳಿಸಲಾಗುತ್ತದೆ. [[ಮೈಸೂರು]] ಸಮೀಪದ [[ಗೆಜ್ಜೆಹಳ್ಳಿ|ಗೆಜ್ಜೆಹಳ್ಳಿಯ]] ಆಯ್ದ ಜನರು ಈ ಕೆಲಸವನ್ನು ನಿರ್ವಹಿಸುವ ವಾಡಿಕೆ ಇದೆ. [[ಒಡೆಯರ್]] ಮನೆತನದ ರಾಜ ಪೂಜಾವಿಧಾನಗಳನ್ನು ನೆರವೇರಿಸಿ,ಸುಮಾರು ನಲವತ್ತೈದು ನಿಮಿಷಗಳ ಕಾಲ '''ಖಾಸಗಿ ದರ್ಬಾರ್''' ನಿರ್ವಹಿಸುವ ಸಂಪ್ರದಾಯವಿದೆ.
 
ಹಿಂದೆ ರಾಜಾಡಳಿತವಿದ್ದ ಕಾಲದಲ್ಲಿ ಯಾವ ರೀತಿ ಮಹಾರಾಜರ ದರ್ಬಾರ್ ನಡೆಯುತ್ತಿತ್ತೂ ಅದೇ ರೀತಿ, ಕಂಕಣಧಾರಿಯಾದ ಒಡೆಯರ್ ರತ್ನ ಖಚಿತ ಸಿಂಹಾಸನಾರೂಢರಾಗಿ, ಪರಂಪರಾಗತ ವಿಧಿವಿಧಾನಗಳಂತೆ ದರ್ಬಾರ್ ನಡೆಸುತ್ತಾರೆ. ಈ ದರ್ಬಾರ್ ನಡೆಯುವ ಹಾಲ್‍ನಲ್ಲಿ ರಾಜ ಪರಿವಾರದವರು, ರಾಜ ಪುರೋಹಿತರು, ವಂದಿ ಮಾಗಧರು, ಅತಿಥಿ ಗಣ್ಯರು, ದೇವಾಲಯಗಳ ಅರ್ಚಕರು, ಅರಮನೆ ಸೇವಕರು ಮುಂತಾಗಿ ಎಲ್ಲರೂ ಹಾಜರಿರುತ್ತಾರೆ.
ಈ ಖಾಸಗಿ ದರ್ಬಾರ್ ನೋಡಿದರೆ, ಹಿಂದಿನ ಕಾಲದಲ್ಲಿ ಇದ್ದ ಅರಮನೆಗಳಲ್ಲಿ ನಡೆಯುತಿದ್ದ ಆಚರಣೆಗಳ ಕಲ್ಪನೆ ಬರುತ್ತದೆ.
 
ಪ್ರತಿವರ್ಷವೂ ತಪ್ಪದೆ ನಡೆಯುವ ಈ ಖಾಸಗಿ ದರ್ಬಾರ್ ದಸರ ಮಹೋತ್ಸವದ ಒಂದು ಪ್ರಮುಖ ಆಕರ್ಷಣೆಯಾಗಿದೆ.
 
 
 
[[ವರ್ಗ:ಹಿಂದೂ ಧರ್ಮದ ಹಬ್ಬಗಳು]]
{{ಹಿಂದೂ ಧರ್ಮದ ಹಬ್ಬಗಳು}}
[[en:Dasara]]
[[kn:ವಿಜಯ ದಶಮಿ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/368735" ಇಂದ ಪಡೆಯಲ್ಪಟ್ಟಿದೆ