ವಾಸುದೇವಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧೭ ನೇ ಸಾಲು: ೧೭ ನೇ ಸಾಲು:
==ಇತರ ಕಾರ್ಯಚಟುವಟಿಕೆಗಳು==
==ಇತರ ಕಾರ್ಯಚಟುವಟಿಕೆಗಳು==
==ಪೂರಕ ನೆರವು==
==ಪೂರಕ ನೆರವು==
==ವರ್ಗ ಕನ್ನಡ ಸಾಹಿತಿಗಳು==
(ಈ ಲೇಖನವಿನ್ನೂ ಪೂರ್ಣಗೊಂಡಿಲ್ಲ)
(ಈ ಲೇಖನವಿನ್ನೂ ಪೂರ್ಣಗೊಂಡಿಲ್ಲ)

೧೩:೩೧, ೧೬ ಅಕ್ಟೋಬರ್ ೨೦೧೩ ನಂತೆ ಪರಿಷ್ಕರಣೆ

ಪರಿಚಯ

ಡಾ.ವಾಸುದೇವಮೂರ್ತಿ ೧೯೬೪ರಲ್ಲಿ ಮೈಸೂರಿನ ಅಶೋಕಪುರಂನಲ್ಲಿ ಜನಿಸಿದರು. ತಾಯಿ ಮರಿಮಾದಮ್ಮ(ಈರಮ್ಮ), ತಂದೆ ಕೃಷ್ಣಯ್ಯ. ಇವರು ಬಹುಮುಖ ಪ್ರತಿಭಾವಂತರು. ಅಧ್ಯಾಪನ,ಸಾಹಿತ್ಯಸೇವೆ, ಸಂಶೋಧನೆ, ಕಲೆ, ಕ್ರೀಡೆ, ಬೆರಳಚ್ಚು, ಗಣಕಯಂತ್ರ ಮುಂತಾದ ಪ್ರಕಾರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇವರ ಬೋದನಾ ಅನುಭವ ೮ವರ್ಷ,ಸಂಶೋಧನ ಅನುಭವ ೬ವರ್ಷ, ಸಂಶೋಧನ ಸಹಾಯಕ ಅನುಭವ ೧೫ವರ್ಷ. ಇವರು ಕಬ್ಬಡ್ಡಿ, ಪುಟ್ಬಾಲ್ ಕ್ರೀಡೆಗಳ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ, ಪ್ರಥಮ ಬಹುಮಾನ ಪಡೆದಿದ್ದಾರೆ. ಜಾಗತಿಕ ಸಂತರ ಸಂದೇಶ ಸಂವತ್ಸರ ಕಾರ್ಯಕ್ರಮದಲ್ಲಿ 'ಓಶೋರಜನೀಶ'ರ ಬಗ್ಗೆ ಉಪನ್ಯಾಸವನ್ನು ಕೊಟ್ಟಿದ್ದಾರೆ. ಪ್ರಸ್ತುತ ಇವರು ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾ ಅರ್ಹತೆ

ಪಿಎಚ್ ಡಿ(ಜಾನಪದ), ಎಂಎ(ಜಾನಪದ), ಭಾಷಾವಿಜ್ಞಾನ, ಭಾರತೀಯ ಸಾಹಿತ್ಯ, ಜೈನಶಾಸ್ತೃ, ಶಾಸನಶಾಸ್ತೃಗಳಲ್ಲಿ ಡಿಪ್ಲೊವೊ ಪದವಿ ಪಡೆದಿದ್ದಾರೆ.

ಪ್ರಕಟಿತ ಲೇಖನಗಳು

೧.ನವಯುಗದ ಹರಿಕಾರ -ಓಶೋ ರಜನೀಶ್-ಪ್ರೊ.ದೇಜಗೌ ಅಭಿನಂದನ ಗ್ರಂಥ, ೨.ಕನ್ನಡ ಸಂತ-ಪ್ರೊ.ರಾಗೌ ಅಭಿನಂದನ ಗ್ರಂಥ, ೩.ಚಾರ್ಲ್ಸ್ ಫ್ರಾನ್ಸಿಸ್ ಪಾಟರ್-ಕನ್ನಡ ಜಾನಪದ ವಿಷಯ ವಿಶ್ವಕೋಶ-೨೦೦೬, ೪.ಗೋದಾನ-ಕನ್ನಡ ವಿಷಯ ವಿಶ್ವಕೋಶ, ೫.ಮಳವಳ್ಳಿ ರಾಚಯ್ಯ-ಕನ್ನಡ ಜಾನಪದ ವಿಷಯ ವಿಶ್ವಕೋಶ -೨೦೦೬, ೬.ಜಾನಪದ ಜಾದೂಗಾರ-ಪ್ರೊ.ಪಿ.ಕೆ.ರಾಜಶೇಖರ-ಅಭಿನಂದನ ಗ್ರಂಥ-೨೦೦೮, ೭. ಕಾಯಕಯೋಗಿ-ಜಿ.ಎಸ್.ಭಟ್ಟರ ಅಭಿನಂದನ ಗ್ರಂಥ-೨೦೦೯, ೮.ವರ್ಣರಂಜಿತ ಅರಮನೆ-ಡಾ.ಎಂ.ಪಿ.ಮಂಜಪ್ಪ ಶೆಟ್ಟಿ ಅಭಿನಂದನ ಗ್ರಂಥ, ೯.ಅಂಚೆಯಿಂದ ಬಂದದ್ದು-ಬಿ.ಶಾಮಸುಂದರ ಅಭಿನಂದನ ಗ್ರಂಥ, ೧೦.ಪೂಜಾಕುಣಿತ, ಕರಪಾಲ ಮೇಳ, ಕೊರಗರು, ಹೆಳವರು-ದಕ್ಷಿಣ ಭಾರತೀಯ ಜಾನಪದ ವಿಶ್ವಕೋಶ-೨೦೦೧ ಮುಂತಾದುವು.

ಕೃತಿಗಳು

೧.ನಮ್ಮ ಊರಿನ ಹಬ್ಬ ಮತ್ತು ಉತ್ಸವಗಳು-೧೯೯೯, ೨.ಮೈಸೂರು ನಗರದ ಅಶೋಕಪುರಂ ಒಂದು ಜಾನಪದೀಯ ಅಧ್ಯಯನ-೨೦೦೩,೩.ಬಂಗಾಳಿ ಸಾಹಿತ್ಯ-೨೦೧೨, ೪.ಯೆದುಗಿರಿ ಮಹಾತ್ಮೆ-೨೦೧೩, ೫.ವೊಳಿಗೈಯನ ಪುರಾಣ-೨೦೧೩.

ನಿರ್ವಹಿಸಿರುವ/ನಿರ್ವಹಿಸುತ್ತಿರುವ ಕರ್ತವ್ಯಗಳು

ಭಾಗವಹಿಸಿದ ಸಮ್ಮೇಳನ/ವಿಚಾರ ಸಂಕಿರಣಗಳು

ಇತರ ಕಾರ್ಯಚಟುವಟಿಕೆಗಳು

ಪೂರಕ ನೆರವು

ವರ್ಗ ಕನ್ನಡ ಸಾಹಿತಿಗಳು

(ಈ ಲೇಖನವಿನ್ನೂ ಪೂರ್ಣಗೊಂಡಿಲ್ಲ)