ರತ್ನಮಾಲಾ ಪ್ರಕಾಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
ಅತ್ಯಂತ ಮದುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದ್ದು.ಮಧುರ ಸ್ವರ,ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಸ್ಥ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತೆ ಕೇಳುವಂತೆ ಪ್ರಚೋದಿಸುತ್ತವೆ.
ಅತ್ಯಂತ ಮದುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದೆ ಅತಿ ಎತ್ತರಕ್ಕೆ ಸಾಗುವ ಅನುಭವ. ಮಧುರಸ್ವರ, ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಷ್ಟ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತೆ ಕೇಳುವಂತೆ ಪ್ರಚೋದಿಸುತ್ತವೆ.
==ಜನನ ಹಾಗೂ ಪರಿವಾರ==
==ಜನನ ಹಾಗೂ ಪರಿವಾರ==
ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,ಡಾ. ಆರ್.ಕೆ.ಶ್ರಿಕಂಥನ್. ತಾಯಿ ಮೈತ್ರೇಯಿ. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು. ಸುಗಮ ಸಂಗೀತವನ್ನು.
ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,'ಡಾ.ಆರ್.ಕೆ.ಶ್ರಿಕಂಥನ್'. ತಾಯಿ 'ಮೈತ್ರೇಯಿ'. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು. ಸುಗಮ ಸಂಗೀತವನ್ನು.
* ಮೈಸೂರು ಅನಂತಸ್ವಾಮಿ
* ಮೈಸೂರು ಅನಂತಸ್ವಾಮಿ
* ಸಿ ಅಶ್ವಥ್,
* ಸಿ ಅಶ್ವಥ್,

೧೭:೦೪, ೨೨ ಮೇ ೨೦೧೩ ನಂತೆ ಪರಿಷ್ಕರಣೆ

ಅತ್ಯಂತ ಮದುರ, ಹಾಗೂ ಹೃದಯಕ್ಕೆ ತಟ್ಟುವಂತೆ ಹಾಡಿದ ಭಾವಗೀತೆಗಳು ಕನ್ನಡ ರಸಿಕರಿಗೆ ದೊರಕಿದ್ದು ರತ್ನಮಾಲಾರವರು ಬಂದಮೇಲೆ. ಅದೇನೋ ಆ ಭಾವ ವರ್ಣನೆಗೆ ಸಿಲುಕದೆ ಅತಿ ಎತ್ತರಕ್ಕೆ ಸಾಗುವ ಅನುಭವ. ಮಧುರಸ್ವರ, ಭಾವ ಗೀತೆಯ ಅರ್ಥವಂತಿಕೆ, ಹಾಗೂ ಸ್ಪಷ್ಟ ಉಚ್ಚಾರಣೆಗಳು ಭಾವಗೀತೆಯನ್ನು ಕೇಳುಗರಿಗೆ ಮತ್ತೆ-ಮತ್ತೆ ಕೇಳುವಂತೆ ಪ್ರಚೋದಿಸುತ್ತವೆ.

ಜನನ ಹಾಗೂ ಪರಿವಾರ

ಬೆಂಗಳೂರಿನಲ್ಲಿ ಸನ್.೧೯೫೨ ರ, ಆಗಸ್ಟ್, ೧೯ ರಂದು, ಜನಿಸಿದ ರತ್ನಮಾಲಾರ ತಂದೆ, ಸುಪ್ರಸಿದ್ಧ ಸಂಗೀತ ವಿದ್ವಾಂಸ,'ಡಾ.ಆರ್.ಕೆ.ಶ್ರಿಕಂಥನ್'. ತಾಯಿ 'ಮೈತ್ರೇಯಿ'. ಚಿಕ್ಕವರಾಗಿದ್ದಾಗಿನಿಂದ ತಂದೆಯವರ ಸಂಗೀತ ಪಾಠದ ಗರಡಿಯಲ್ಲಿ ಬೆಳೆದರು. ಆದರೆ ಅವರು ಆಯ್ದುಕೊಂಡಿದ್ದು. ಸುಗಮ ಸಂಗೀತವನ್ನು.

  • ಮೈಸೂರು ಅನಂತಸ್ವಾಮಿ
  • ಸಿ ಅಶ್ವಥ್,
  • ಪದ್ಮಚರಣ,
  • ಎಚ್.ಕೆ.ನಾರಾಯಣ,

ಮೊದಲಾದ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ತಮ್ಮ ಗಾಯನವನ್ನು ಪ್ರಸ್ತುತಪಡಿಸಿ,'ಸೈ'ಎನ್ನಿಸಿಕೊಂಡರು.

ಸಿಡಿ,ಕ್ಯಾಸೆಟ್ ಗಳಲ್ಲಿ ಧ್ವನಿಮುದ್ರಿಕೆ

ಐನೂರಕ್ಕೂ ಮಿಗಿಲಾದ 'ಸಿಡಿ'ಗಳಲ್ಲಿ 'ಕ್ಯಾಸೆಟ್' ಗಳಲ್ಲಿ ತಮ್ಮ ದ್ವನಿಯನ್ನು ಮುದ್ರಿಸಲಾಗಿದೆ.

  • ಕೆಂ ಗುಲಾಬಿ
  • ಮೈಸೂರು ಮಲ್ಲಿಗೆ
  • ಭಾವ ಸಂಗಮ
  • ಡಾ.ರಾಜ್ ಕುಮಾರ್ ಜೊತೆಗೆ ಹಾಡಿರುವ 'ಅನುರಾಗ'
  • ಮಂಕು ತಿಮ್ಮನ ಕಗ್ಗ
  • ಚೈತ್ರ
  • ರೂಪಸಿ,
  • ಭಾವೋತ್ಸವ,
  • ಕವಿತಾ,
  • ಸ್ಪಂದನ,
  • ನೆನಪಿನಾಳದಲ್ಲಿ
  • ನೀಲಾಂಬರಿ,
  • ಅಣಿಮುತ್ತುಗಳು,

ಖ್ಯಾತ ಸಂಗೀತ ನಿರ್ದೇಶಕರ ಜೊತೆ

  • ಟಿಜಿ ಲಿಂಗಪ್ಪ
  • ಹಂಸಲೇಖ
  • ರಾಜನ್ ನಾಗೇಂದ್ರ
  • ವಿಜಯ ಭಾಸ್ಕರ
  • ಅಶ್ವಥ್-ವೈದಿ,

ಮುಂತಾದವರ ನಿರ್ದೇಶನದಲ್ಲಿ ಹಾಡಿದ ಚಲನಚಿತ್ರ ಗೀತೆಗಳು ಅಪಾರ.

ಡಾ.ರಾಜ್ ಜೊತೆ ಹಾಡಿದ್ದು

ವಿಶೇಷವಾಗಿ ನೆನೆಸುವುದಾದರೆ,ಡಾ.ರಾಜ್ ರೊಡನೆ, 'ಗುರಿ', ಡಾ. ಎಸ್.ಪಿ.ಬಾಲಸುಬ್ರಮಣ್ಯಂ ರೊಡನೆ ಹಾಡಿದ, 'ಏಳು ಸುತ್ತಿನ ಕೋಟೆ' ಚಿತ್ರಗಳಿಗೆ ಹಾಡಿದ ಹಾಡುಗಳು. ಆಕಾಶವಾಣಿ,ದೂರದರ್ಶನದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರಸಂಗಗಳು.

ಮತ್ತೆ ಕೆಲವು ಮರೆಯಲಾರದ ಅನುಭವಗಳು

  • ಸೋವಿಯೆಟ್ ರಶ್ಯಾದಲ್ಲಿ ಜರುಗಿದ 'ಭಾರತದ ಉತ್ಸವದಲ್ಲಿ ಪಂಡಿತ್ ರವಿಶಂಕರ್ ತಂಡದಲ್ಲಿ ಭಾಗವಹಿಸಿ ಹಾಡಿದ ಹೆಗ್ಗಳಿಕೆ'.
  • ದೇಶ-ವಿದೇಶಗಳಲ್ಲಿ ಹಾಡಿದ ಖ್ಯಾತಿ. ದುಬೈ,ಸಿಂಗಪುರ್ ಕನ್ನಡ ಸಂಘ, ಶಾರ್ಜಾ, ಅಬುದಾಬಿಯಲ್ಲಿ ಮೈಸೂರು ಅನಂತ ಸ್ವಾಮಿ ತಂಡದಲ್ಲಿ ಹಾಡಿದರು.
  • ಅಮೇರಿಕಾದ ಫಿನಿಕ್ಸ್ ಹೂಸ್ಟನ್ಸ್ತಕನ್ನಡ ಸಂಘದಲ್ಲಿ ಭಾಗವಹಿಸಿ ಹಾಡಿದ ಅತ್ಯದ್ಭುತ ಅನುಭವಗಳು.
  • 'ರಮಾ ಫೌಂಡೇಶನ್' ಅಡಿಯಲ್ಲಿ ಬಾಲಪ್ರತಿಭೆಗಳಿಗೆ ಕೊಟ್ಟ ಉತ್ತೇಜನ,
  • 'ಕರ್ನಾಟಕ ವೈಜಯಂತಿ ಮೂಲಕ ಕರ್ನಾಟಕದಾದ್ಯಂತ ಹಮ್ಮಿಕೊಂಡ ಕಾರ್ಯಕ್ರಮಗಳು.

ಪ್ರಶಸ್ತಿ,ಪುರಸ್ಕಾರಗಳು

  • 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ'ಯಿಂದ 'ಕರ್ನಾಟಕ ಕಲಾ ತಿಲಕ' ಪ್ರಶಸ್ತಿ.
  • 'ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ',
  • 'ಆರ್ಯ ಭಟ್ಟ ಪ್ರಶಸ್ತಿ',
  • 'ದುಬೈ,ಸಿಂಗಪುರ ಅಬುದಾಬಿ,ಕನ್ನಡಸಂಘಗಳಿಂದ ದೊರೆತ ಪ್ರಶಸ್ತಿಗಳು' ಮುಖ್ಯವಾದವುಗಳು.