ಹಂಪೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding new:हम्पी
ಚು r2.7.3) (Robot: Adding as:হাম্পি
೮೮ ನೇ ಸಾಲು: ೮೮ ನೇ ಸಾಲು:
[[ವರ್ಗ:ಬಳ್ಳಾರಿ ಜಿಲ್ಲೆ]]
[[ವರ್ಗ:ಬಳ್ಳಾರಿ ಜಿಲ್ಲೆ]]


[[as:হাম্পি]]
[[ca:Hampi]]
[[ca:Hampi]]
[[cs:Hampi]]
[[cs:Hampi]]

೨೩:೫೨, ೩ ಜನವರಿ ೨೦೧೩ ನಂತೆ ಪರಿಷ್ಕರಣೆ

ಹಂಪೆಯ ಸ್ಮಾರಕಗಳ ಸಮೂಹ*
UNESCO ವಿಶ್ವ ಪರಂಪರೆಯ ತಾಣ

ಹಂಪೆ
ರಾಷ್ಟ್ರ ಭಾರತಭಾರತ
ತಾಣದ ವರ್ಗ ಸಾಂಸ್ಕೃತಿಕ
ಆಯ್ಕೆಯ ಮಾನದಂಡಗಳು (i)(iii)(iv)
ಆಕರ 241
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1986  (10 ಮತ್ತು 15ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.
ವಿರೂಪಾಕ್ಷ ದೇವಾಲಯ

ಹಂಪೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು, ೧೩೩೬ರಿಂದ ೧೫೬೫ರವರೆಗೆ ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪೆಯ ಮೊದಲನೆ ಹೆಸರು 'ಪಂಪ' ಎಂದಿತ್ತು, ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಿದೆ.

ವಿಜಯನಗರ ಸಾಮ್ರಾಜ್ಯದ ಅತೀ ಯಶಸ್ವಿ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪೆ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದು ಕೊಳ್ಳುತ್ತಾ ಬಂತು. ಕೊನೆಗೆ ತಾಳೀಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪೆಯಲ್ಲಿದ್ದ ಅನೇಕ ಸ್ಮಾರಕಗಳು ನಾಶವಾದವು.

ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಭಗಳು, ವಿಶ್ವವಿಖ್ಯಾತ ಕಲ್ಲಿನ ರಥ,ಮಹಾನವಮಿ ದಿಬ್ಬ, ಸಾಸಿವೆ ಕಾಳು ಗಣಪತಿ, ಉಗ್ರ ನರಸಿಂಹ, ಕಮಲ ಮಹಲ್ , ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

ಕನ್ನಡ ವಿಶ್ವವಿದ್ಯಾಲಯ ಇರುವುದು ಹಂಪಿಯಲ್ಲಿ.

ಭೂವಿವರಣೆ

ಹಂಪೆಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಕೈಗಾರಿಕೆಗಳು. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು(ಹಂಪಿ ಉತ್ಸವ) ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಹಂಪೆ ಹಾಗು ಸುತ್ತಮುತ್ತಲಿರುವ ಕೆಲವು ಮುಖ್ಯ ಸ್ಮಾರಕಗಳು

ಮೊದಲಿಗೆ ಹಂಪಿಗೆ ಬಂದಾಗ ಇಲ್ಲಿನ ಅನೇಕ ಸ್ಮಾರಕಗಳನ್ನು ನೋಡಿ ಗಲಿಬಿಲಿಯುಂಟಾಗುವದು ಸಹಜ. ಆದ್ದರಿಂದ ಇಲ್ಲಿನ ಸ್ಮಾರಕಗಳನ್ನು ಮತ್ತು ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ, ೧) ಕೇಂದ್ರವಾದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ. ೨) ನಡೆದು ನೋಡಬಹುದಾದ ದಾರಿ. ೩) ವಾಹನಗಳಲ್ಲಿ ಸಂಚರಿಸಿ ನೋಡಬಹುದಾದ ದಾರಿ. ೪) ಸೂರ್ಯಾಸ್ತದ ಸ್ಥಳಗಳು. ಸದ್ರಿ ಪಟ್ಟಿಯಲ್ಲಿ ಬರಬಹುದಾದ ಸ್ಥಳಗಳನ್ನು ಅಪ್ ಡೇಟ್ ಮಾಡಲಾಗುತ್ತಿದೆ.

ವಿರೂಪಾಕ್ಷ ದೇವಾಲಯ
  • ೧. ಅಚ್ಯುತರಾಯ ದೇಗುಲ
  • ೨. ಅಕ್ಕ-ತಂಗಿ ಗುಡ್ಡ
  • ೩. ಆನೆಗೊಂದಿ
  • ೪. ಅಂಜನಾದ್ರಿ ಪರ್ವತ
  • ೫. ವಿರೂಪಾಕ್ಷೇಶ್ವರ ದೇವಾಲಯ
  • ೬. ತುಂಗಭದ್ರ ನದಿ
  • ೭. ಪುರಂದರ ಮಂಟಪ
  • ೮. ವಿಜಯವಿಠ್ಠಲ ದೇಗುಲ
  • ೯. ಕಲ್ಲಿನ ತೇರು
  • ೧೦. ಉಗ್ರ ನರಸಿಂಹ
  • ೧೧. ಕಡಲೆ ಕಾಳು ಗಣಪತಿ
  • ೧೨. ಸಾಸಿವೆ ಕಾಳು ಗಣಪತಿ
  • ೧೩. ರಾಣಿ ಸ್ನಾನ ಗೃಹ
  • ೧೪. ಹಂಪೆ ಬಜಾರ್
  • ೧೫. ಹೇಮಕೂಟ

ಅಕ್ಕ ತ್ಂಗಿ ಗುವ್ಫ಼್ವ್


ಇವನ್ನೂ ನೋಡಿ

ವಿಜಯನಗರ ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರತೋತ್ಸವ ಇರುತ್ತದೆ.

ಹೊರಗಿನ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ
"https://kn.wikipedia.org/w/index.php?title=ಹಂಪೆ&oldid=305757" ಇಂದ ಪಡೆಯಲ್ಪಟ್ಟಿದೆ