ಚಾರ್ವಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding vi:Charvaka, Puttur
ಚು Robot: Adding pnb:چارواک
೩೬ ನೇ ಸಾಲು: ೩೬ ನೇ ಸಾಲು:
[[no:Charvakaer]]
[[no:Charvakaer]]
[[pl:Ćarwaka (filozof)]]
[[pl:Ćarwaka (filozof)]]
[[pnb:چارواک]]
[[ru:Локаята]]
[[ru:Локаята]]
[[sa:चार्वाकदर्शनम्]]
[[sa:चार्वाकदर्शनम्]]

೦೬:೩೫, ೧೧ ನವೆಂಬರ್ ೨೦೧೨ ನಂತೆ ಪರಿಷ್ಕರಣೆ

ಚಾರ್ವಾಕ ಭಾರತದಲ್ಲಿ ಬೆಳೆದು ಬಂದ ಸಿದ್ದ್ದಾಂತಗಳಲ್ಲೊಂದು.ಕ್ರಿ.ಪೂ ೬೦೦ಕ್ಕಿಂತಲೂ ಹಿಂದಿನಿಂದಲೇ ಈ ಪರಂಪರೆ ಬೆಳೆದು ಬಂದಿದೆ ಎಂದು ನಂಬಲಾಗಿದೆ.ಚಾರ್ವಾಕ ಮತದ ಮೂಲಗ್ರಂಥಗಳು ಇಂದು ದೊರೆಯದ ಕಾರಣ ೧೩-೧೪ನೇ ಶತಮಾನದಲ್ಲಿದ್ದ ಮಾಧವಾಚಾರ್ಯಎಂಬ ತತ್ವಶಾಸ್ತ್ರಜ್ಞನ 'ಸರ್ವ ದರ್ಶನ ಸಂಗ್ರಹ'ಎಂಬ ಗ್ರಂಥದಲ್ಲಿರುವ ಚಾರ್ವಾಕ ದರ್ಶನ ಎಂಬ ಅಧ್ಯಾಯವೇ ಆಧಾರವಾಗಿದೆ.ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಲ್ಪಟ್ಟ 'ಪ್ರತ್ಯಕ್ಷ ಪ್ರಮಾಣ' ಒಂದನ್ನು ಮಾತ್ರಾ ಚಾರ್ವಾಕಮತ ಅಂಗೀಕರಿಸಿದೆ.ಚಾರ್ವಾಕ ದರ್ಶನವನ್ನು ಕೆಲವೊಮ್ಮೆ 'ಲೋಕಾಯತ'ದರ್ಶನ ಎಂದೂ ಕರೆಯುತ್ತಾರೆ.

ಚಾರ್ವಾಕ ದರ್ಶನ

'ಸರ್ವ ದರ್ಶನ ಸಂಗ್ರಹ'ದಲ್ಲಿ ಉದ್ದರಿಸಿದಂತೆ ಚಾರ್ವಾಕ ಮತದ ಮುಖ್ಯ ತತ್ವಗಳು ಇಂತಿವೆ.ಸಂತೋಷವೇ ಬದುಕಿನ ಮುಖ್ಯ ಗುರಿ.ಈ ಪ್ರಪಂಚದ ನಂತರ ಇನ್ನೊಂದು ಪ್ರಪಂಚ (ಸ್ವರ್ಗ ಯಾ ನರಕ)ಎಂದು ಏನೂ ಇಲ್ಲ.ಸ್ವರ್ಗ ಹಾಗೂ 'ಹುಟ್ಟು ಸಾವುಗಳಿಂದ ಬಿಡುಗಡೆ' ಎಂದು ಹೇಳಲ್ಪಟ್ಟವುಗಳೆಲ್ಲವೂ ಕೇವಲ ಭ್ರಮಾಧೀನ ಆದರ್ಶಗಳೆಷ್ಟೆ.ಸಾವು ಎಲ್ಲರಿಗೂ ನಿಶ್ಚಿತ.ಮರುಜನ್ಮ ಎಂಬುದಿಲ್ಲ.ಆದುದರಿಂದ ಎಲ್ಲರೂ ಬದುಕಿರುವಷ್ಟು ದಿನ ಸುಖವಾಗಿರಲು ಪ್ರಯತ್ನಿಸಬೇಕು. ಬದುಕಿನಲ್ಲಿ ದುಖ ಇದೆ ಎಂದು ಸುಖವನ್ನು ತ್ಯಜಿಸುವುದು ಸರಿಯಲ್ಲ. ಅಕ್ಕಿಯನ್ನು ಪಡೆಯುವಾಗ ಭತ್ತದ ಹೊಟ್ಟು ಮತ್ತು ದೂಳು ದೊರೆಯುತ್ತದೆ ಎಂದು ಅಕ್ಕಿಯನ್ನು ತ್ಯಜಿಸಲು ಸಾದ್ಯವೇ? ಅಂತೆಯೇ ದುಖಕ್ಕಾಗಿ ಸುಖ ತ್ಯಜಿಸುವುದು ಯುಕ್ತವಲ್ಲ. ಭೂಮಿ,ಆಕಾಶ,ನೀರು ಹಾಗೂ ಬೆಂಕಿ ಮೂಲಭೂತ ವಸ್ತುಗಳು.ಪ್ರಜ್ಞೆಯು ಈ ನಾಲ್ಕು ಮೂಲಭೂತ ವಸ್ತುಗಳಿಂದಲೇ ಪ್ರಾಪ್ತಿಯಾಗುತ್ತದೆ.ಹೇಗೆ ಕೆಲವು ಅಮಲೇರಿಸುವ ಗುಣಗಳಿಲ್ಲದ ವಸ್ತುಗಳನ್ನು ಬೆರೆಸಿದಾಗ ಅಮೆಲೇರಿಸುವ ಗುಣವುಳ್ಳ ವಸ್ತುವಾಗುವುದೋ ಅಂತೆಯೇ ಪ್ರಜ್ಞೆಯು ಈ ನಾಲ್ಕು ವಸ್ತುಗಳಿಂದಾಗುತ್ತದೆ. ದೇಹವಿಲ್ಲದೆ ಆತ್ಮಎಂಬುದು ಇಲ್ಲ.'ನಾನು ತೆಳ್ಳಗಿದ್ದೇನೆ' 'ನಾನು ದಪ್ಪಗಿದ್ದೇನೆ' ಎಂದು ಮುಂತಾಗಿ ನಾವು ಹೇಳುವುದೆಲ್ಲವೂ ಈ ದೇಹಕ್ಕೇನೆ ಹೊರತು ಆತ್ಮಕ್ಕಲ್ಲ. ಬೆಂಕಿಯ ಬಿಸಿ,ಗಾಳಿಯ ತಂಪು ಎಲ್ಲವೂ ಪ್ರಕೃತಿದತ್ತವಾದವುಗಳೇ.ಎಲ್ಲಾ ವೈವಿದ್ಯಮಯ ವಸ್ತುಗಳೂ ಈ ಪ್ರಕೃತಿಯಿಂದಲೇ ಉಂಟಾಗಿದೆ ಮತ್ತು ಪ್ರಕೃತಿ ನಿಯಮದಂತೆಯೇ ನಡೆಯುತ್ತದೆ. ವೇದಗಳು ಹಾಗೂ ಅವುಗಳಲ್ಲಿ ಹೇಳಲಾದ ಯಾಗ,ಯಜ್ಞಾದಿಗಳು ಕೇವಲ ಕೆಲವು ಜನರ ಹೊಟ್ಟೆಪಾಡಿಗಾಗಿವೆಯಲ್ಲದೆ ಅವುಗಳಿಂದ ಪ್ರಯೋಜನವೇನೂ ಇಲ್ಲ.ವೇದಗಳಲ್ಲಿ ವಿವೇಕವಾಗಲೀ ಪ್ರಾಮಾಣಿಕತೆಯಾಗಲೀ ಇಲ್ಲವಾದುದರಿಂದ ಅವುಗಳು ಸ್ವೀಕಾರಾರ್ಹವಲ್ಲ

ಬಾಹ್ಯ ಸಂಪರ್ಕಗಳು

ಆಧಾರ ಗ್ರಂಥಗಳು

೧.ಹಿಂದೂಧರ್ಮದ ಪರಿಚಯ: ಎದುರ್ಕಳ ಶಂಕರನಾರಾಯಣ ಭಟ್

"https://kn.wikipedia.org/w/index.php?title=ಚಾರ್ವಾಕ&oldid=298176" ಇಂದ ಪಡೆಯಲ್ಪಟ್ಟಿದೆ