"ಹೃಷಿಕೇಶ್ ಮುಖರ್ಜಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(wikify)
''ಹೃಷಿದಾ'' ಎಂದೇ ಚಿತ್ರರಂಗದಲ್ಲಿ ಖ್ಯಾತರಾಗಿದ್ದ ಹೃಷಿಕೇಶ್ ಮುಖರ್ಜಿ ಹುಟ್ಟಿದ್ದು [[೧೯೨೨]]ರ [[ಸೆಪ್ಟೆಂಬರ್ ೩೦]]ರಂದು, [[ಕಲ್ಕತ್ತಾ|ಕೊಲ್ಕತ್ತಾದಲ್ಲಿ]]. ತಮ್ಮ ಗುರು ಬಿಮಲ್ ರಾಯ್ ಅವರ ಸಹಾಯಕರಾಗುವ ಮೂಲಕ [[೧೯೫೧]]ರಲ್ಲಿ ಚಿತ್ರಲೋಕಕ್ಕೆ ಅಡಿಯಿರಿಸಿದರು. [[೧೯೫೭]]ರಲ್ಲಿ ನಿರ್ದೇಶಿಸಿದ 'ಮುಸಾಫಿರ್' ಹೃಷಿಕೇಶ್ ಅವರ ಮೊದಲ ಚಿತ್ರ.
 
[[೧೯೬೦]]ರಲ್ಲಿ ನಿರ್ಮಾಣಗೊಂಡ 'ಅನುರಾಧ' ಚಿತ್ರದೊಂದಿಗೆ ಮುಖರ್ಜಿ ಯಶಸ್ಸಿನ ದಾರಿಯಿಡಿದರುದಾರಿ ಹಿಡಿದರು. ಕರ್ತವ್ಯವನ್ನೇ ದೇವರು ಎಂದು ಭಾವಿಸುವ ವೈದ್ಯನೊನ್ನ ತನ್ನ ಕುಟುಂಬವನ್ನೇ ಕಡೆಗಣಿಸುವ ಕತೆ 'ಅನುರಾಧ'ದಲ್ಲಿತ್ತು. ಈ ಚಿತ್ರಕ್ಕೆ ರಾಷ್ಟ್ರಪತಿಗಳ ಚಿನ್ನದ ಪದಕವೂ ಲಭಿಸಿತು.
 
ಆನಂತರ ಮುಖರ್ಜಿ 'ಅನುಪಮ' 'ಆಶೀರ್ವಾದ್' ಹಾಗೂ 'ಸತ್ಯಕಾಮ್' ಮುಂತಾದ ಹಲವಾರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿದರು. ಆಕ್ಷನ್ ಹೀರೋ ಆಗಿದ್ದ ಧರ್ಮೇಂದ್ರರಿಗೆ ಸಂಪೂರ್ಣ ವಿಭಿನ್ನ ಪಾತ್ರಗಳು ಸಿಕ್ಕಿದ್ದು ಮುಖರ್ಜಿ ಅವರ ಚಿತ್ರಗಳಿಂದಲೇ. ಇವತ್ತು ಮಿಂಚುತ್ತಿರುವ [[ಅಮಿತಾಭ್ ಬಚ್ಚನ್]] ಪ್ರಸಿದ್ಧಿ ಪಡೆದಿದ್ದು ಹೃಷಿಕೇಶ್ ಅವರ 'ಆನಂದ್' ಚಿತ್ರದ ಮೂಲಕ. ಜಯಾ ಬಚ್ಚನ್ ಬೆಳಕಿಗೆ ಬಂದದ್ದು 'ಗುಡ್ಡಿ' ಚಿತ್ರದ ಮೂಲಕ.
೨,೫೯೯

edits

"https://kn.wikipedia.org/wiki/ವಿಶೇಷ:MobileDiff/28318" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ