ಬೇವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding ne:नीम
ಚು r2.7.2) (Robot: Adding sa:निम्बः
೬೮ ನೇ ಸಾಲು: ೬೮ ನೇ ಸಾಲು:
[[pt:Neem]]
[[pt:Neem]]
[[ru:Ним (дерево)]]
[[ru:Ним (дерево)]]
[[sa:निम्बः]]
[[simple:Neem]]
[[simple:Neem]]
[[so:Geed Hindi]]
[[so:Geed Hindi]]

೧೫:೦೨, ೨೪ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಬೇವು
ಬೇವಿನ ಮರ
Scientific classification
ಸಾಮ್ರಾಜ್ಯ:
Division:
ಗಣ:
ಕುಟುಂಬ:
ಕುಲ:
ಪ್ರಜಾತಿ:
A. indica
Binomial name
ಅಜಡಿರಕ್ಟ ಇಂಡಿಕ (Azadirachta indica)
ಕಾಂಡಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ.

ಬೇವು(ಒಳ್ಳೆ ಬೇವು) ಭಾರತ ಉಪಖಂಡದ ಮೂಲವಾಸಿ.ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾದ ಮರಗಳಲ್ಲಿ ಒಂದು.ತೀವ್ರ ತರದ ಬರಗಾಲದಲ್ಲಿಯೂ ಬದುಕಿ,ಜನೋಪಯೋಗಿ ಎನಿಸಿದ ಮರ.

ಹೂವು ಮತ್ತು ಎಲೆ ಕಲ್ಕತ್ತಾ, ಪಶ್ಚಿಮ ಬಂಗಾಳ, ಭಾರತ.

ಸಸ್ಯಶಾಸ್ತ್ರೀಯ ವರ್ಗೀಕರಣ

ಇದು ಮೆಲಿಯೇಸಿ ಕುಟುಂಬಕ್ಕೆ ಸೇರಿದ್ದು,ಅಜಡಿರಕ್ಟ ಇಂಡಿಕ (Azadirachta Indica)ಎಂಬುದು ಸಸ್ಯಶಾಸ್ತ್ರೀಯ ಹೆಸರು.'ವೆಪ್ಪಮ್' ಎಂದು ತಮಿಳುಭಾಷೆಯಲ್ಲಿ,'ವೇಪ' ಎಂದು ತೆಲುಗುಭಾಷೆಯಲ್ಲಿ ಕರೆಯುತ್ತಾರೆ.ಆಂಗ್ಲ ಭಾಷೆಯಲ್ಲಿ 'ನೀಮ್'ಎಂದ ಹೆಸರಿದೆ.

ಚಿತ್ರ:Neemleaf.JPG
ಹೂವು ಮತ್ತು ಹಣ್ಣು (ಹಂಗರಕಿ,ಧಾರವಾಡ).


ಸಸ್ಯದ ಗುಣಲಕ್ಷಣಗಳು

ಮದ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಬರಗಾಲದ ಸಮಯದಲ್ಲಿ ಎಲೆ ಉದುರಿಸುತ್ತದೆ.ದಟ್ಟವಾದ ಹಂದರ.ತೊಗಟೆ ಸಾದಾರಣ ಮಂದ,ಕರಿಬೂದು ಬಣ್ಣವಿರುತ್ತದೆ.ದಾರುವು ಕೆಂಪು ಕಂದು ಬಣ್ಣವಿದ್ದು,ಸೀಳಿಕೆಗಳಿರುತ್ತವೆ.

ಉಪಯೋಗಗಳು

ಬರಗಾಲದಲ್ಲಿ ಬದುಕಿ ಉಳಿಯುವ ಮರವಾದುದರಿಂದ ಭಾರತದ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನೆರಳಿನಾಶ್ರಯದ ಪ್ರಮುಖ ಮರ.ಸಾಲು ಮರಗಳಾಗಿ,ತೋಪುಗಳಾಗಿ ನೆಡಲ್ಪಟ್ಟಿದೆ.ಇದರ ದಾರುವು ಬಹು ಉಪಯೋಗಿ.ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ.ಗೃಹ ನಿರ್ಮಾಣ,ಪಿಠೋಪಕರಣ ಮುಂತಾದ ಕೆಲಸಗಳಿಗೆ ಉಪಯೋಗಿಸಲ್ಪಡುತ್ತದೆ.ತೊಗಟೆಯಿಂದ ಬರುವ ಅಂಟು,ಹೂವು,ಎಲೆಗಳು ಔಷಧಿಗಳಿಗೆ ಉಪಯೋಗವಾಗುತ್ತದೆ.ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರ.ಎಳೆಯ ಕಡ್ಡಿ ದಂತಮಾರ್ಜನಕ್ಕಾಗಿ ಉಪಯೋಗವಾಗುತ್ತದೆ.

ಅಧಾರ ಗ್ರಂಥಗಳು

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ಬೇವು&oldid=267499" ಇಂದ ಪಡೆಯಲ್ಪಟ್ಟಿದೆ