ಹಿಂದಿ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2) (Robot: Adding kv:Хинди
ಚು r2.6.5) (Robot: Adding dsb:Hindišćina
೧೨೨ ನೇ ಸಾಲು: ೧೨೨ ನೇ ಸಾಲು:
[[da:Hindi]]
[[da:Hindi]]
[[de:Hindi]]
[[de:Hindi]]
[[dsb:Hindišćina]]
[[dv:ހިންދީ]]
[[dv:ހިންދީ]]
[[el:Χίντι]]
[[el:Χίντι]]

೨೦:೩೨, ೧೬ ಫೆಬ್ರವರಿ ೨೦೧೨ ನಂತೆ ಪರಿಷ್ಕರಣೆ

ಹಿಂದಿ (हिन्दी)
ಬಳಕೆ: ಭಾರತ
ಪ್ರದೇಶ: ದಕ್ಷಿಣ ಏಶಿಯಾ
ಬಳಸುವ ಜನಸ೦ಖ್ಯೆ: ೧೮೦-೪೮೦ ಮಿಲ್ಲಿಯನ್
Genetic classification: ಇಂಡೊ-ಯುರೋಪಿಯನ್

 ಇಂಡೋ-ಆರ್ಯನ್
    ಹಿಂದಿ

ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ
ಮೇಲ್ವಿಚಾರ ನಡೆಸುವ ಸಂಸ್ಥೆ: ಕೇಂದ್ರ ಹಿಂದಿ ಡೈರೆಕ್ಟೊರೇಟ್
ಭಾಷಾ ಕೋಡ್
ISO 639-1 hi
ISO 639-2 hin
SIL HND
ಇವನ್ನೂ ನೋಡಿ: ಭಾಷೆಗಳು

ಗುಲ್ಬರ್ಗ ಜಿಲ್ಲಾ ಸುದ್ದಿಗಳು

ಪ್ರಜಾವಾಣಿ ವಾರ್ತೆ

ಪ್ರಜಾವಾಣಿ ಮಂಗಳವಾರ , ಅಗಸ್ಟ್ 24, 2010

‘ಹಿಂದಿ ಪ್ರಚಾರ ಸಭಾ ಟ್ರಸ್ಟ್ ಕಟ್ಟಡ ಅಕ್ರಮ’ ತೆರವುಗೊಳಿಸಲು ಪಾಲಿಕೆ ಹಿಂದೇಟು! ಗುಲ್ಬರ್ಗ: ನಗರದಲ್ಲಿರುವ ಹಿಂದಿ ಪ್ರಚಾರಸಭಾ ಮೂಲಕಟ್ಟಡವನ್ನು ಕಾನೂನುಬಾಹಿರವಾಗಿ ವಿಸ್ತರಿಸಿ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದು, ಒತ್ತುವರಿಯಾದ ಕಂದಾಯ ಭೂಮಿ ತೆರವುಗೊಳಿಸಿ ವರದಿ ನೀಡಬೇಕೆಂದು ಲೋಕಾಯುಕ್ತರು ಹಲವು ಬಾರಿ ಪತ್ರ ಬರೆದಿದ್ದರೂ ಗುಲ್ಬರ್ಗ ಮಹಾನಗರ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ.

ಅನ್ನಪೂರ್ಣ ವೃತ್ತದ ಬಳಿ ಇರುವ ಹಿಂದಿ ಪ್ರಚಾರಸಭಾ ನಿವೇಶನ ಸರ್ವೇ ನಂ. 1ರಲ್ಲಿ ಒಟ್ಟು 2834.4 ಚದರ ಅಡಿ ಮತ್ತು ಸರ್ವೇ ನಂ. 2ರಲ್ಲಿ 663.9 ಚದರ ಅಡಿಗಳಷ್ಟಿದ್ದು, ಈ ಜಾಗ ಕಂದಾಯ ಭೂಮಿ. ರಾಷ್ಟ್ರೀಯ ಭಾಷೆ ಹಿಂದಿ ಪ್ರಚಾರ ಮಾಡುವ ಉದ್ದೇಶಕ್ಕಾಗಿ ನಿವೇಶನದಲ್ಲಿ ಒಂದು ಸಣ್ಣ ಕಟ್ಟಡ ಮತ್ತು ಕಾವಲುಗಾರನ ಕೋಣೆ ನಿರ್ಮಾಣಕ್ಕೆ 1854ರಲ್ಲಿ ಅಂದಿನ ಸರ್ಕಾರ ಅವಕಾಶ ನೀಡಿತ್ತು.

2002ರಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಹಿಂದಿ ಪ್ರಚಾರಸಭಾ ಟ್ರಸ್ಟ್‌ಗೆ ಮಹಾನಗರ ಪಾಲಿಕೆ ಅನುಮತಿ ನೀಡಿತು. ಹೊಸ ಕಟ್ಟಡಗಳಲ್ಲಿ ‘ಬೈಕ್ ಸರ್ವಿಸ್ ಸೆಂಟರ್’ ‘ಪ್ರಿಂಟಿಂಗ್ ಪ್ರೆಸ್’ ‘ಕ್ಲಾಸ್ ರೂಮ್’ ‘ಅನ್ನಪೂರ್ಣ ಕೇಂದ್ರ’ ಮತ್ತು ‘ಎಸ್‌ಟಿಡಿ ಬೂತ್’ ಕಾರ್ಯನಿರ್ವಹಿಸುತ್ತಿವೆ.

“ಹಿಂದಿ ಪ್ರಚಾರಸಭೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಟ್ರಸ್ಟಿಗಳು, ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ” ಎಂದು ಪಾಲಿಕೆಯ ಮಾಜಿ ಸದಸ್ಯ ಪಿ.ಎಂ. ಮಣ್ಣೂರ್ 2002ರಲ್ಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು 2007ರಲ್ಲಿ ಈ ಕುರಿತು ತನಿಖೆ ಕೈಗೊಂಡು ಒತ್ತುವರಿ ದೃಢಪಡಿಸಿದ್ದರು. ಒತ್ತವರಿ ತೆರವುಗೊಳಿಸಿ ವರದಿ ನೀಡುವಂತೆ ಗುಲ್ಬರ್ಗ ಜಿಲ್ಲಾಧಿಕಾರಿಗಳ ಮೂಲಕ ಸೆಪ್ಟೆಂಬರ್ 2008ರಲ್ಲಿ ಮೊದಲ ಪತ್ರ ಬರೆದಿದ್ದರು. ಆನಂತರ ನಾಲ್ಕು ನೆನಪೋಲೆಗಳನ್ನು ಬರೆಯಲಾಗಿದೆ.

‘ಕರ್ನಾಟಕ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ವಿ. ಬಾಲಸುಬ್ರಹ್ಮಣ್ಯನ್ ಅವರು ಗುಲ್ಬರ್ಗಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಂದಾಯ ಭೂಮಿ ಒತ್ತುವರಿಯನ್ನು ಜಿಲ್ಲಾಡಳಿತ ಈಗ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿಯೂ ಪ್ರಾದೇಶಿಕ ಆಯುಕ್ತರು ಬಾಲಸುಬ್ರಹ್ಮಣ್ಯನ್ ಅವರಿಗೆ ತಿಳಿಸಿದ್ದಾರೆ’ ಎನ್ನುವುದು ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಿಗೂ ಈ ಕುರಿತು ದೂರು ಸಲ್ಲಿಸಿರುವ ಮಣ್ಣೂರ್ ಅವರ ವಿವರಣೆ.

ಕಾನೂನುಬಾಹಿರವಾಗಿ ನಿರ್ಮಿಸಿರುವ ಹಿಂದಿ ಪ್ರಚಾರ ಸಭಾ ಟ್ರಸ್ಟ್ ಕಟ್ಟಡವನ್ನು ತೆರವುಗೊಳಿಸಿ ವರದಿ ನೀಡಿ’ ಎಂದು ಜುಲೈ 27ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಠ ಮಲ್ಲಿಕಾರ್ಜುನ, ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ, ‘ಲೋಕಾಯುಕ್ತರು ನೀಡಿದ ಸೂಚನೆಯನ್ನು ಓದಿಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ನೇರವಾಗಿ ಪಾಲಿಕೆಯ ಆಯುಕ್ತರನ್ನೇ ಪ್ರಶ್ನಿಸಿ’ ಎಂದರು. ‘ನಾನು ಬಂದ ಮೇಲೆ ಈ ರೀತಿಯ ಯಾವುದೇ ಆದೇಶಗಳು ಬಂದಿಲ್ಲ’ ಎನ್ನುವುದು ಪಾಲಿಕೆ ಆಯುಕ್ತರ ವಿವರಣೆ.

ಗುಲ್ಬರ್ಗ: ಹಿಂದಿ ಭಾಷೆಯ ಪ್ರಚಾರ ಉದ್ದೇಶಕ್ಕಾಗಿ ‘ಹಿಂದಿ ಪ್ರಚಾರ ಸಭಾ’ ಸಂಸ್ಥೆ ಸ್ಥಾಪನೆಗೆ ಒದಗಿಸಲಾಗಿದ್ದ ಸರ್ಕಾರಿ ಕಂದಾಯ ಜಮೀನಿನಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಿಸಲಾಗಿದೆ ಎನ್ನುವ ಆರೋಪದ ಈ ಹಿನ್ನೆಲೆಯಲ್ಲಿ ಗುಲ್ಬರ್ಗ ಜಿಲ್ಲಾಡಳಿತವು ಹಿಂದಿ ಪ್ರಚಾರ ಸಭಾದ ಮೂಲ ಕಟ್ಟಡ ಹೊರತಾಗಿ ಕಟ್ಟಲಾದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಗುರುವಾರ ಚಾಲನೆ ನೀಡಲಾಯಿತು.

ಲೋಕಾಯುಕ್ತ ತನಿಖೆ: ಹಿಂದಿ ಪ್ರಚಾರ ಸಭಾ ನಿರ್ಮಾಣಕ್ಕೆ ನೀಡಿರುವ ಜಾಗದಲ್ಲೇ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಿಸಲಾಗಿದೆ. ಟಿವಿಎಸ್ ಸರ್ವಿಸ್ ಸೆಂಟರ್, ಖಾಸಗಿ ಕಾಲೇಜು ಮತ್ತು ಟ್ಯೂಷನ್ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಅವರು ಬಹಳ ವರ್ಷಗಳ ಹಿಂದೆಯೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಹಿಂದಿ ಪ್ರಚಾರ ಸಭಾಗೆ ನೀಡಿರುವ ಜಾಗದಲ್ಲೇ ಅಕ್ರಮ ಕಟ್ಟಡ ನಿರ್ಮಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತನಿಖೆಯ ನಂತರ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರ ರವಾನಿಸಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು 3.5.2011ರಂದು ಆರ್ಡ್‌ರ್ ಮಾಡಿದ್ದರು. ಹಿರಿಯ ಅಧಿಕಾರಿಯ ಆಜ್ಞೆಯಂತೆ ಉಪ ಕಂದಾಯ ಅಧಿಕಾರಿ ಸಂಗಪ್ಪ ಮತ್ತು ತಹಸೀಲ್ದಾರ ಮಹಾದೇವಪ್ಪ ಸಾಸನೂರ, ಪಿಎಸ್‌ಐ ವೀರಣ್ಣ ಕುಂಬಾರ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ತೆರವಿಗೆ ಮುಂದಾರು.

ಕಾಲಾವಕಾಶ ನೀಡಿ: ಅಲ್ಲಿಗೆ ಆಗಮಿಸಿದ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಮತ್ತು ಮಾಜಿ ಸಚಿವ ವೈಜನಾಥ ಪಾಟೀಲ ಅವರು ಇನ್ನೊಂದೆರಡು ದಿನ ಕಾಲಾವಕಾಶ ಕೇಳಿದರು. ಆದರೆ ಹಿರಿಯ ಅಧಿಕಾರಿಗಳ ಆಜ್ಞೆ ಪಾಲಿಸುವುದಷ್ಟೇ ನಮ್ಮ ಕೆಲಸ ನೀವು ಏನಾದರೂ ಕೇಳಬೇಕಾದರೆ ಜಿಲ್ಲಾಧಿಕಾರಿಗಳನ್ನೇ ವಿಚಾರಿಸಿ ಎಂದು ಸಂಗಪ್ಪ ವಿವರಿಸಿದರು.

ಲೋಕಾಯುಕ್ತ ಆದೇಶದ ಹೊರತಾಗಿಯೂ ಅಕ್ರಮ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ವರದಿ ಮಾಡಿತ್ತು. ಸುಮಾರು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಂದಾಯ ಭೂಮಿಯಲ್ಲಿನ ವಾಣಿಜ್ಯ ಉದ್ದೇಶಿತ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಈಗ ಶುರುವಾದಂತಾಗಿದೆ.

ಹಿಂದಿ (हिन्दी) ಭಾರತದ ಪ್ರಮುಖ ಭಾಷೆಗಳಲ್ಲೊಂದು. ಭಾರತದ ಉತ್ತರ ಹಾಗೂ ಮಧ್ಯ ಭಾಗದ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡಲಾಗುತ್ತದೆ. ಇದು ಇಂಡೋ-ಯೂರೋಪಿಯನ್ ಭಾಷಾಬಳಗದ ಇಂಡೋ-ಇರಾನಿಯನ್ ಉಪವರ್ಗಕ್ಕೆ ಸೇರುತ್ತದೆ. ಮಧ್ಯ ಯುಗದಲ್ಲಿ ಅಸ್ತಿತ್ವದಲ್ಲಿದ್ದ ಪ್ರಾಕೃತ ಭಾಷೆಗಳಿಂದ, ಹಾಗೂ ಅವುಗಳ ಮೂಲಕ ಸಂಸ್ಕೃತದಿಂದ, ಹಿಂದಿ ವಿಕಾಸವಾಗಿದೆ. ಹಿಂದಿಯಲ್ಲಿ ಉಪಯೋಗಿಸುವ ಅನೇಕ ಪದಗಳು ಸಂಸ್ಕೃತದಿಂದ ಬಂದಿದ್ದು, ಉತ್ತರ ಭಾರತದಲ್ಲಿ ಮುಸ್ಲಿಮ್ ಪ್ರಭಾವದ ಪರಿಣಾಮವಾಗಿ ಸಾಕಷ್ಟು ಪರ್ಷಿಯನ್, ಅರಾಬಿಕ್ ಹಾಗೂ ಟರ್ಕಿಷ್ ಭಾಷೆಗಳ ಪದಗಳನ್ನು ಸಹ ಎರವಾಗಿ ಪಡೆದಿದೆ.

ಹಿಂದಿ ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದಾಗಿದ್ದು, ಭಾರತದ ಕೇಂದ್ರ ಸರ್ಕಾರ ಉಪಯೋಗಿಸುವ ಭಾಷೆಗಳಲ್ಲಿ ಒಂದು (ಇಂಗ್ಲಿಷ್ ನೊಂದಿಗೆ).

ಚೈನೀಸ್ ಭಾಷೆಯ ನಂತರ ಹಿಂದಿ ಅತಿ ಹೆಚ್ಚು ಜನರಿಂದ ಉಪಯೋಗದಲ್ಲಿದೆ. ಸುಮಾರು ೫೦ ಕೋಟಿ ಜನರು ಹಿಂದಿಯನ್ನು ಮಾತನಾಡಬಲ್ಲರು ಎಂದು ತಿಳಿಯಲಾಗಿದೆ. ಹಿಂದಿಯನ್ನು ಅರ್ಥ ಮಾಡಿಕೊಳ್ಳಬಲ್ಲವರ ಜನಸಂಖ್ಯೆ ಸುಮಾರು ೮೦ ಕೋಟಿ ಇದ್ದೀತು. ಭಾರತದಲ್ಲಿ ಸುಮಾರು ೧೮ ಕೋಟಿ ಜನರಿಗೆ ಹಿಂದಿ ಮಾತೃಭಾಷೆಯಾಗಿದೆ.