ಹಿಂದೂ ಮಹಾಸಾಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೬೬ ನೇ ಸಾಲು: ೧೬೬ ನೇ ಸಾಲು:
==ಹವಾಮಾನ==
==ಹವಾಮಾನ==


ಸಮಭಾಜಕವೃತ್ತದ ಉತ್ತರದ ಹವಾಮಾನ ಮಾನ್ಸೂನ್ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅರಬ್ಬೀ ಸಮುದ್ರದಲ್ಲಿ ತೀವ್ರ ರಭಸದ ಮಾನ್ಸೂನ್ ಗಳು ಭಾರತೀಯ ಉಪಖಂಡದೆಡೆಗೆ ಮಳೆಯನ್ನು ತರುತ್ತವೆ. ದಕ್ಷಿಣ ಗೋಲಾರ್ಧದಲ್ಲಿ ಗಾಳಿ ಸಾಮಾನ್ಯವಾಗಿ ಮೃದು, ಆದರೆ ಮಾರಿಷಸ್ ಬಳಿ ಬೇಸಿಗೆಯ ಬಿರುಗಾಳಿಗಳು ತೀವ್ರ ಮಾಡಬಹುದು. ಮಾನ್ಸೂನ್ ಮಾರುತಗಳು ದಿಕ್ಕು ಬದಲಾಯಿಸಿದಾಗ, ಚಂಡಮಾರುತಗಳು ಕೆಲವೊಮ್ಮೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸುತ್ತವೆ. ಹಿಂದೂ ಮಹಾಸಾಗರ ವಿಶ್ವದ ಅತಿ ಬೆಚ್ಚಗಿನ ಸಾಗರ.
ಸಮಭಾಜಕವೃತ್ತದ ಉತ್ತರದ ಹವಾಮಾನ ಮಾನ್ಸೂನ್ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅರಬ್ಬೀ ಸಮುದ್ರದಲ್ಲಿ ತೀವ್ರ ರಭಸದ ಮಾನ್ಸೂನ್ ಗಳು ಭಾರತೀಯ ಉಪಖಂಡದೆಡೆಗೆ ಮಳೆಯನ್ನು ತರುತ್ತವೆ. ಪ್ರಬಲ ಈಶಾನ್ಯ ಮಾರುತಗಳು ಅಕ್ಟೋಬರ್ ನಿಂದ ಏಪ್ರಿಲ್ ರವರೆಗೆ ಬೀಸುತ್ತವೆ, ದಕ್ಷಿಣ ಮತ್ತು ಪಶ್ಚಿಮ ಮಾರುತಗಳು ಮೇ ನಿಂದ ಅಕ್ಟೋಬರ್ ವರೆಗೆ ಬೀಸುತ್ತವೆ .ದಕ್ಷಿಣ ಗೋಲಾರ್ಧದಲ್ಲಿ ಗಾಳಿ ಸಾಮಾನ್ಯವಾಗಿ ಮೃದು, ಆದರೆ ಮಾರಿಷಸ್ ಬಳಿ ಬೇಸಿಗೆಯ ಬಿರುಗಾಳಿಗಳು ತೀವ್ರ ಮಾಡಬಹುದು. ಮಾನ್ಸೂನ್ ಮಾರುತಗಳು ದಿಕ್ಕು ಬದಲಾಯಿಸಿದಾಗ, ಚಂಡಮಾರುತಗಳು ಕೆಲವೊಮ್ಮೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸುತ್ತವೆ. ಹಿಂದೂ ಮಹಾಸಾಗರ ವಿಶ್ವದ ಅತಿ ಬೆಚ್ಚಗಿನ ಸಾಗರ.

೧೪:೨೮, ೨೨ ಜನವರಿ ೨೦೧೨ ನಂತೆ ಪರಿಷ್ಕರಣೆ

ಭೂಮಿಯ ಐದು ಮಹಾಸಾಗರಗಳು

ಹಿಂದೂ ಮಹಾಸಾಗರ ಭೂಮಿಯ ಮೂರನೇ ದೊಡ್ಡ ಮಹಾಸಾಗರ. ಭಾರತದ ಕನ್ಯಾಕುಮಾರಿಯಿಂದ ದಕ್ಷಿಣಧ್ರುವದ ಅಂಟಾರ್ಕ್ಟಿಕ್ ಪ್ರದೇಶದವರೆಗೆ ಈ ಸಾಗರವು ಹರಡಿಕೊಂಡಿದೆ. ಒಟ್ಟು ಭೂಪ್ರದೇಶದ ೧೪.೬೫% ಭಾಗವನ್ನು ಆವರಿಸಿರುವ ಈ ಮಹಾಸಾಗರದ ಅತಿ ಹೆಚ್ಚಿನ ಆಳ ೭,೭೨೫ ಮೀ.

ಇದು ಪೂರ್ವಕ್ಕೆ, ಇಂಡೋಚೈನಾ, ಸುಂದ ದ್ವೀಪಗಳು, ಮತ್ತು ಆಸ್ಟ್ರೇಲಿಯಾ, ಪಶ್ಚಿಮಕ್ಕೆ ಆಫ್ರಿಕಾ , ಉತ್ತರಕ್ಕೆ ಅರೇಬಿಯನ್ ಪೆನಿನ್ಸುಲಾ ಮತ್ತು ಭಾರತೀಯ ಉಪಖಂಡ ಮತ್ತು ದಕ್ಷಿಣಕ್ಕೆ ದಕ್ಷಿಣ ಮಹಾಸಾಗರದಿಂದ ಸುತ್ತುವರೆದಿದೆ. ಇದು ಭಾರತೀಯ ಉಪಖಂಡದ ದೆಸೆಯಿಂದ, ಹಿಂದೂ ಮಹಾಸಾಗರ( ಅಥವ Inಇಂಡಿಯನ್ ಓಷ್ಯನ್ ) ಎಂದು ಕರೆಯಲ್ಪಟ್ಟಿದೆ.ಜಾಗತಿಕ ಅಂತರ ಸಂಪರ್ಕಿತ ಸಾಗರದ ಒಂದು ಘಟಕವಾಗಿ, ಅಟ್ಲಾಂಟಿಕ್ ಸಾಗರದಿಂದ 20 ಡಿಗ್ರಿ ° ಪೂರ್ವ ಮೆರಿಡಿಯನ್ ಹಾಗು ಪೆಸಿಫಿಕ್ ಸಾಗರದಿಂದ 146 ° 55 ' ಡಿಗ್ರಿ ಪೂರ್ವ ಮೆರಿಡಿಯನ್ ಮೂಲಕ ಪ್ರತ್ಯೇಕಿಸಲ್ಪಟ್ಟಿದೆ. ಹಿಂದೂ ಮಹಾಸಾಗರದ ಉತ್ತರ ವಿಸ್ತಾರ ಸುಮಾರು ಪರ್ಷಿಯನ್ ಗಲ್ಫ್ ನ 30 °ಡಿಗ್ರಿ ಉತ್ತರಕ್ಕಿದೆ. ಹಿಂದೂ ಮಹಾಸಾಗರ ಅಸಮಪಾರ್ಶ್ವದ ಸಾಗರ ಚಲಾವಣೆಯನ್ನು ಹೊಂದಿದೆ. ಈ ಸಾಗರವು ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ದಕ್ಷಿಣ ತುದಿಗಳ ನಡುವೆ ಸುಮಾರು 10,000 ಕಿಲೋಮೀಟರ್ ಗಳಷ್ಟು ವಿಸ್ತಾರವನ್ನು ಹೊಂದಿದೆ.STI ಇದು ಕೆಂಪು ಸಮುದ್ರ ಮತ್ತು ಪರ್ಷಿಯನ್ ಗಲ್ಫ್ ಒಳಗೊಂಡಂತೆ 73.556.000 ಚದರ ಕಿಲೋಮೀಟರ್ ಪ್ರದೇಶದಲ್ಲಿ (28.35 ದಶಲಕ್ಷ ಚದರ ಮೈಲಿ) ಹರಡಿಕೊಂಡಿದೆ. ಸಾಗರದ ಪರಿಮಾಣ 292.131.000 ಘನ ಕಿಲೋಮೀಟರ್ (70,086,000 mi3) ಎಂದು ಅಂದಾಜಿಸಲಾಗಿದೆ.

ಸಣ್ಣ ಸಣ್ಣ ದ್ವೀಪಗಳು ಕಾಂಟಿನೆಂಟಲ್ rimsರಿಮ್ ಅನ್ನು ಸುತ್ತುವರೆದಿವೆ. ಸಾಗರದ ಒಳಗಿರುವ ದ್ವೀಪ ರಾಷ್ಟ್ರಗಳು ಮಡಗಾಸ್ಕರ್ (ವಿಶ್ವದ ನಾಲ್ಕನೇ ಅತಿ ದೊಡ್ಡ ದ್ವೀಪ), ರಿಯೂನಿಯನ್ ದ್ವೀಪ, ಕೊಮೊರೋಸ್, ಸೀಶೆಲ್ಸ್, ಮಾಲ್ಡೀವ್ಸ್, ಮಾರಿಷಸ್, ಮತ್ತು ಶ್ರೀಲಂಕಾ .

ಭೂಗೋಳ

ಭಾರತೀಯ, ಆಫ್ರಿಕನ್ ಮತ್ತು ಅಂಟಾರ್ಕ್ಟಿಕ್ crustal ಪ್ಲೇಟ್ ರೋಡ್ರಿಗಾಸ್ ಟ್ರಿಪಲ್ ಪಾಯಿಂಟ್ ನಲ್ಲಿ ಹಿಂದೂ ಮಹಾಸಾಗರವನ್ನು ಸಂಧಿಸುತ್ತದೆ. ಈ ಪ್ಲೇಟ್ ಗಳ ಕೂಡುವಿಕೆಯ ಸ್ಥಳವನ್ನು ಮಧ್ಯ ಸಾಗರದ ಪರ್ವತ ಶ್ರೇಣಿಗಳ ಶಾಖೆಗಳ ಮೂಲಕ ಗುರುತಿಸಬಹುದು. ಈ ಶಾಖೆಗಳು ತಲೆಕೆಳಗಾದ ವೈ ರೂಪದಲ್ಲಿ ಭಾರತ ಭೂಖಂಡದ ಮುಂಬೈನ ದಕ್ಷಿಣ ತುದಿಯಲ್ಲಿ, ಚಾಲನೆ ಪಡೆಯುವುದು ಕಾಣಬಹುದಾಗಿದೆ.

Bathymetric ಹಿಂದೂ ಮಹಾಸಾಗರದ ಆಳಮಾಪನದ ನಕ್ಷೆ

ಸಾಗರದ ಭೂಪದರಗಳ(ಶೆಲ್ಫ್) ಅಗಲ ಕಿರಿದಾಗಿದ್ದು ಸರಾಸರಿ 200 ಕಿಲೋಮೀಟರ್ (125 ಮೈಲಿ) ಇದೆ. ಆದರೆ ಆಸ್ಟ್ರೇಲಿಯಾದ ಪಶ್ಚಿಮ ಕರಾವಳಿಯ ಶೆಲ್ಫ್ ನ ಅಗಲ ಸುಮಾರು 1,000 ಕಿಲೋಮೀಟರ್ (600 ಮೈಲಿ) ಮೀರುತ್ತದೆ.ಸಾಗರದ ಸರಾಸರಿ ಆಳ 3.890 ಮೀ (12,762 ಅಡಿ.ಇದರ ಅತ್ಯಂತ ಆಳವಾದ ಬಿಂದು 8.047 ಮೀ (26,401 ಅಡಿ)Diamant Diamantinaಡಿಯಮೆಂಟಿನ ಕಂದಕದ ಡಿಯಮೆಂಟಿನ ಕೂಪ ಎಂದು ಹಲವರು ಗುರುತಿಸಿದರೆ, ಕೆಲವರು ಸೂಂಡ ಕಂದಕ ((23,812-25,344 ಅಡಿ) ಆಳ) ವೆಂದು ಗುರುತಿಸಿದಾರೆ. 50 ದಕ್ಷಿಣ ಅಕ್ಷಾಂಶದ ಉತ್ತರಕ್ಕೆ , ಮುಖ್ಯ ಜಲಾನಯನ ಪ್ರದೇಶದ 86% ಪ್ರದೇಶವನ್ನು ಸಮುದ್ರದ ಸಂಚಯಗಳು ಆವರಿಸಿಕೊಂಡಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು globigerinaಗ್ಲೊಬಿಜೆರೀನ ಕೆಸರು ಆಗಿದೆ. ಉಳಿದ 14% ಪ್ರದೇಶವನ್ನು ಭೂಮಿಜ ಸಂಚಯಗಳು ಆವರಿಸಿಕೊಂಡಿವೆ.ತೀವ್ರ ದಕ್ಷಿಣ ಅಕ್ಷಾಂಶಗಳಲ್ಲಿ ಗ್ಲೇಶಿಯಲ್ ಕೊಚ್ಚು ಮರಳುಜಲ್ಲಿ ಪ್ರಬಲವಾಗಿದೆ. ಪ್ರಮುಖ ಚೋಕ್ ಪಾಯಿಂಟ್ ಗಳೆಂದರೆ ಬಾಬ್ ಅಲ್ ಮಂದೇಬ್, ಹೋರ್ಮೂಜ್ ಸ್ಟ್ರೇಟ್ , ಲೋಂಬೋಕ್ ಸ್ಟ್ರೇಟ್ , ಮಲಾಕ ಸ್ಟ್ರೇಟ್ ಮತ್ತು ಪಾಕ್ ಸ್ಟ್ರೇಟ್ . ಹಿಂದೂ ಮಹಾಸಾಗರದ ಸಮುದ್ರಗಳೆಂದೆರೆ ಅಡೆನ್ ಕೊಲ್ಲಿ, ಅಂಡಮಾನ್ ಸಮುದ್ರ, ಅರಬ್ಬೀ ಸಮುದ್ರ, ಬಂಗಾಳ ಕೊಲ್ಲಿ, ಗ್ರೇಟ್ ಆಸ್ಟ್ರೇಲಿಯನ್ ಬೈಟ್, ಲಕ್ಯಾಡಿವ್ ಸಮುದ್ರ, ಮನ್ನಾರ್ ಕೊಲ್ಲಿ, ಮೊಜಾಂಬಿಕ್ ಚಾನೆಲ್, ಓಮನ್ ಕೊಲ್ಲಿ ಮತ್ತು ಕೆಂಪು ಸಮುದ್ರ.

ಹವಾಮಾನ

ಸಮಭಾಜಕವೃತ್ತದ ಉತ್ತರದ ಹವಾಮಾನ ಮಾನ್ಸೂನ್ ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅರಬ್ಬೀ ಸಮುದ್ರದಲ್ಲಿ ತೀವ್ರ ರಭಸದ ಮಾನ್ಸೂನ್ ಗಳು ಭಾರತೀಯ ಉಪಖಂಡದೆಡೆಗೆ ಮಳೆಯನ್ನು ತರುತ್ತವೆ. ಪ್ರಬಲ ಈಶಾನ್ಯ ಮಾರುತಗಳು ಅಕ್ಟೋಬರ್ ನಿಂದ ಏಪ್ರಿಲ್ ರವರೆಗೆ ಬೀಸುತ್ತವೆ, ದಕ್ಷಿಣ ಮತ್ತು ಪಶ್ಚಿಮ ಮಾರುತಗಳು ಮೇ ನಿಂದ ಅಕ್ಟೋಬರ್ ವರೆಗೆ ಬೀಸುತ್ತವೆ .ದಕ್ಷಿಣ ಗೋಲಾರ್ಧದಲ್ಲಿ ಗಾಳಿ ಸಾಮಾನ್ಯವಾಗಿ ಮೃದು, ಆದರೆ ಮಾರಿಷಸ್ ಬಳಿ ಬೇಸಿಗೆಯ ಬಿರುಗಾಳಿಗಳು ತೀವ್ರ ಮಾಡಬಹುದು. ಮಾನ್ಸೂನ್ ಮಾರುತಗಳು ದಿಕ್ಕು ಬದಲಾಯಿಸಿದಾಗ, ಚಂಡಮಾರುತಗಳು ಕೆಲವೊಮ್ಮೆ ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿಯ ತೀರಕ್ಕೆ ಅಪ್ಪಳಿಸುತ್ತವೆ. ಹಿಂದೂ ಮಹಾಸಾಗರ ವಿಶ್ವದ ಅತಿ ಬೆಚ್ಚಗಿನ ಸಾಗರ.