ಶಶಿ ಕಪೂರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Translated from http://en.wikipedia.org/wiki/Shashi_Kapoor_ (revision: 407239490) using http://translate.google.com/toolkit with about 99% human translations.
( ಯಾವುದೇ ವ್ಯತ್ಯಾಸವಿಲ್ಲ )

೧೭:೨೩, ೧೯ ಜನವರಿ ೨೦೧೧ ನಂತೆ ಪರಿಷ್ಕರಣೆ

Shashi Kapoor
ಜನನ (1938-03-18) ೧೮ ಮಾರ್ಚ್ ೧೯೩೮ (ವಯಸ್ಸು ೮೬)
ಇತರೆ ಹೆಸರುಗಳುBalbir
Shashi
Balbir Raj
Shasha (Called him by this name by his brother, Shammi Kapoor
ಉದ್ಯೋಗActor, Director, Producer
ಸಕ್ರಿಯ ವರ್ಷಗಳು1942–1999 (retired)
ಜೀವನ ಸಂಗಾತಿJennifer Kendal (1958–1984) [Her Death (Cancer)]

ಶಶಿ ಕಪೂರ್‌ಹಿಂದಿ:शशि कपूर ಮೂಲ ಹೆಸರು ಬಲ್ಬೀರ್ ಪ್ರಥ್ವಿರಾಜ್ ಕಪೂರ್ ಮಾರ್ಚ್ 18, 1938ರಲ್ಲಿ ಕಲ್ಕತ್ತಾ(ನಂತರ ಕೋಲ್ಕತ್ತಾ ಆಯಿತು)ದಲ್ಲಿ ಜನಿಸಿದರು. ಇವರು ಭಾರತದಪ್ರಶಸ್ತಿ ವಿಜೇತ ನಟ ಹಾಗೂ ನಿರ್ಮಾಪಕರಾಗಿದ್ದಾರೆ. ಇವರು ಕಪೂರ್ ಕುಟುಂಬದ ಸದಸ್ಯರಾಗಿದ್ದು, ಭಾರತದ ಬಾಲಿವುಡ್ ಸಿನಿಮಾ ರಂಗದಲ್ಲಿ ಇವರ ವಂಶದ ಕೊಡುಗೆಯೂ ಸಾಕಷ್ಟಿದೆ. ಇವರ ತಂದೆ ಪೃಥ್ವಿರಾಜ್ ಕಪೂರ್ ಆಗಿದ್ದು, ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಇವರ ಕಿರಿಯ ಸಹೋದರರಾಗಿದ್ದರಾರೆ. ಇವರ ಪತ್ನಿ ಜೆನ್ನಿಫರ್ ಕೆಂಡಲ್ ತೀರಿಹೋಗಿದ್ದು, ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ. ಇವರನ್ನು ಹಿಂದಿಯ ಸಾಕಷ್ಟು ಜನಪ್ರಿಯ ಸಿನಿಮಾಗಳಲ್ಲಿ ನೆನೆಸಿಕೊಳ್ಳಬಹುದು. ಖ್ಯಾತ ನಟ ಅಮಿತಾಭ್ ಬಚ್ಚನ್ ಅವರೊಂದಿಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅವುಗಳೆಂದರೆ ದೀವಾರ್, ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾ ಲ್ ಗಳಲ್ಲಿ ನಟಿಸಿದ್ದಾರೆ. ಇದರ ಜತೆ ಇವರು ಬ್ರಿಟಿಷ್ ಸಿನಿಮಾಗಳಲ್ಲೂ ಬಹಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ ಹಲವಾರು ಬ್ರಿಟೀಷ್ ಚಿತ್ರಗಳಲ್ಲೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಇದರಲ್ಲಿ ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನ ಶೇಕ್ಸ್‌ಪಿಯರ್- ವಲ್ಲಾಹ್ ಸಹ ಒಂದು.

ವೃತ್ತಿಜೀವನ

ಶಶಿಕಪೂರ್ ತಮ್ಮ ಬಾಲ್ಯದ ದಿನಗಳಲ್ಲೇ ನಟನೆಯಲ್ಲಿ ತೊಡಗಿಸಿಕೊಂಡಿದ್ದು, 1940ರಲ್ಲಿ ಹಲವಾರು ಪೌರಾಣಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 1948ರಲ್ಲಿ ಬಂದ ಆಗ್ ಮತ್ತು 1951ರಲ್ಲಿ ಬಂದ ಆವಾರಾ ಸಿನಿಮಾಗಳು ಇವರ ಅತ್ಯಂತ ಉತ್ತಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿತು. ಇವರು ತಮ್ಮ ಹಿರಿಯ ಸಹೋದರ ರಾಜ್ ಕಪೂರ್ ಜತೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಕ್ಷೇತ್ರದಲ್ಲಿ ಇವರು ಪ್ರಥಮವಾಗಿ ಪ್ರವೇಶ ಪಡೆದ ಸಂದರ್ಭದಲ್ಲಿ ಉನ್ನತವಾಗಿ ಬೆಳೆಯಲು 1961ರಲ್ಲಿ ಯಶ್ ಚೋಪ್ರಾ ನಿರ್ಮಾಣದ ಧರ್ಮಪುತ್ರ ಸಿನಿಮಾ ಸಹಾಯಕವಾಯಿತು. ಮತ್ತು ಇವರನ್ನು ಇದು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು. 1960, 1970 ವರೆಗೆ ಹಾಗೂ 1980ರ ಒಳಗೆ ಇವರು ಬಾಲಿವುಡ್ ಕ್ಷೇತ್ರದಲ್ಲಿ ಬಹು ಪ್ರಖ್ಯಾತ ನಗುಮುಖದ ನಟರಾಗಿ ಹೆಸರುವಾಸಿಯಾಗಿದ್ದರು. ವಕ್ತ್ (1965), ಜಬ್ ಜಬ್ ಫೂಲ್ ಕಿಲೆ (1965), ಕನ್ಯಾದಾನ್ (1969), ಹಸೀನಾ ಮಾನ್ ಜಾಯೇಗಿ (1968), ಆ ಗಲೆ ಲಾಗ್ ಜಾ (1973), ರೋಟಿ ಕಪಡಾ ಔರ್ ಮಕಾನ್ (1974), ಚೋರ್ ಮಾಚೆಯೇ ಶೋರ್ (1974), ದೀವಾರ್ (1975), ಕಭಿ ಕಭೀ (1976), ಫಕೀರಾ (1976), ತ್ರಿಶೂಲ್ (1978), ಸತ್ಯಮ್ ಶಿವಂ ಸುಂದರಂ (1978), ಕಾಲಾ ಪತ್ತಾರ್ (1979), ಸುಹಾಗ್ (1979), ಶಾನ್ (1980), ಕಂತ್ರಿ (1981) ಮತ್ತು ನಮಕ್ ಹಲಾಲ್ (1982) ಇವರ ಅತೀ ಜನಪ್ರಿಯ ಸಿನಿಮಾಗಳಾಗಿವೆ. ಇವರ ಹೆಚ್ಚಿನ ಜನಪ್ರಿಯ ಸಿನಿಮಾಗಳು 1970ರ ನಂತರ ಹಾಗೂ 1980ರ ಒಳಗಿನ ಅವಧಿಯಲ್ಲಿ ಬಿಡುಗಡೆಯಾಗಿದ್ದವು. ಈ ಸಂದರ್ಭದಲ್ಲಿ ಹೆಚ್ಚಾಗಿ ಅಮಿತಾಭ್ ಬಚ್ಚನ್ ಜತೆ ಇವರು ನಟಿಸಿದ್ದರು.

ಇವರು ಹಲವಾರು ಬ್ರಿಟಿಷ್ ಹಾಗೂ ಅಮೆರಿಕಾ ಸಿನಿಮಾಗಳಲ್ಲೂ ನಟಿಸಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ. ಅವುಗಳೆಂದರೆ, ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್ ನಿರ್ಮಾಣದ ಶೇಕ್ಸ್‌ಪಿಯರ್ ವಲ್ಲಾಹ್ (1965) ಚಿತ್ರದಲ್ಲಿ ಇವರ ಅತ್ತಿಗೆ ಫೆಲ್ಸಿಟಿ ಕೆಂಡಾಲ್ ಎದುರಿಗೆ ನಟಿಸಿದ್ದರು. ಬಾಂಬೆ ಟಾಕಿ (1970), ಮತ್ತು ಹೀಟ್ ಆಂಡ್ ಡಸ್ಟ್ (1982) ಇದರಲ್ಲಿ ಇವರು ಪತ್ನಿಯಾದ ಜೆನ್ನಿಫರ್ ಕೆಂಡಾಲ್ ಜತೆ ನಟಿಸಿದ್ದರು. ಇವರು ಬ್ರಿಟಿಷ್ ಮತ್ತು ಅಮೆರಿಕಾ ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಾದ ಪ್ರೆಟ್ಟಿ ಪೊಲ್ಲಿ (1967) ಚಿತ್ರದಲ್ಲಿ ಹಾಯ್ಲೇ ಮಿಲ್ಸ್ ಜೊತೆಗೆ ನಟಿಸಿದ್ದರು. ಸಿದ್ಧಾರ್ಥ (1972) ಮತ್ತು ಸ್ಯಾಮ್ಮಿ ಆಂಡ್ ರೋಸಿ ಗೆಟ್ ಲೈಯ್ಡ್ (1987) ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

1980ರಲ್ಲಿ ಇವರು ತಮ್ಮ ಸ್ವಂತ ಸಿನಿಮಾ ನಿರ್ಮಾಣವನ್ನು ವಾಲಾಸ್ ಸಿನಿಮಾ ಮೂಲಕ ಆರಂಭಿಸಿದರು. ಇವರು ತಯಾರಿಸಿದ ಜುನೂನ್ (1978), ಕಲಿಯುಗ್ (1981), 36 ಚೌರಿಂಗೀ ಲೇನ್ (1981), ವಿಜೇತಾ (1982) ಮತ್ತು ಉತ್ಸವ್ (1984) ಸಿನಿಮಾಗಳು ವಿಮರ್ಷಕರಿಂದಲೂ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. 1991ರಲ್ಲಿ ಇವರೇ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕಲ್ಪಿತ ಕಥಾಹಂದರದ ಸಿನಿಮಾ ಅಜೂಬಾ ವನ್ನು ತಯಾರಿಸಿದರು. ಇದರಲ್ಲಿ ಅಮಿತಾಭ್ ಬಚ್ಚನ್ ಹಾಗೂ ಸೋದರಳಿಯ ರಿಷಿ ಕಪೂರ್ ಸಹ ನಟಿಸಿದ್ದರು.

ಇವರ ಕೊನೆಯ ಹಾಗೂ ಇತ್ತೀಚಿನ ಜೀವನಚಿತ್ರವಾದ ಜಿನ್ಹಾ (1998)ದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮಹಮ್ಮದ್ ಅಲಿ ಜಿನ್ಹಾ ಪಾತ್ರದಲ್ಲಿ ನಟಿಸಿದ್ದು, ನಿರೂಪಕರಾಗಿದ್ದರು. ಮತ್ತು ಮರ್ಚೆಂಟ್ ಐವರಿ ಪ್ರೊಡಕ್ಷನ್ ನವರ ಸೈಡ್ ಸ್ಟ್ರೀಟ್ಸ್ (1998)ದಲ್ಲೂ ನಟಿಸಿದ್ದಾರೆ. ಈಗ ಇವರು ಸಿನಿಮಾ ಕ್ಷೇತ್ರದಿಂದ ನಿವೃತ್ತರಾಗಿದ್ದು, ಪ್ರಸ್ತುತ ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಓಮನ್‌ನ ಮಸ್ಕಟ್‌ನಲ್ಲಿ ಸೆಪ್ಟೆಂಬರ್ 2007ರಲ್ಲಿ ನಡೆದ ಶಶಿ ಕಪೂರ್ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದ್ದರು. ತಮ್ಮ ತೂಕವನ್ನು ಕಡಿಮೆ ಮಾಡಿಕೊಂಡು ಆರೋಗ್ಯವಾಗಿ ಕಾಣಿಸುತ್ತಾರೆ. ಇತ್ತೀಚೆಗೆ ನಡೆದ 55ನೇ ಫಿಲ್ಮ್‌ಫೇರ್ ಅವಾರ್ಡ್‌ನಲ್ಲಿ ಶಶಿ ಕಪೂರ್ ಅವರು ಫಿಲ್ಮ್ ಫೇರ್ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ (ಜೀವಮಾನ ಸಾಧನೆ ಪ್ರಶಸ್ತಿ) ಪಡೆದುಕೊಂಡರು.[೧]

ವೈಯಕ್ತಿಕ ಜೀವನ

ಬಾಂಬೆಯ ಮತುಂಗಾದಲ್ಲಿರುವ ಡಾನ್ ಬಾಸ್ಕೋ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ.

1958 ಜುಲೈ ತಿಂಗಳಿನಲ್ಲಿ ಇವರು ಇಂಗ್ಲಿಷ್ ನಟಿ ಜೆನ್ನಿಫರ್ ಕೆಂಡಾಲ್ ಅವರನ್ನು ವಿವಾಹವಾದರು. ಇವರು ಹಲವಾರು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಅವುಗಳಲ್ಲಿ ಹೆಚ್ಚು ಮರ್ಚೆಂಟ್ ಐವರಿ ಪ್ರೊಡಕ್ಷನ್ಸ್‌ನವರ ನಿರ್ಮಾಣದ ಸಿನಿಮಾಗಳಾಗಿವೆ. ಶಶಿ ಕಪೂರ್ ಮತ್ತು ಕೆಂಡಾಲ್‌ರಿಗೆ ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮೂರು ಮಕ್ಕಳಿದ್ದಾರೆ. ಇವರೆಲ್ಲ ನಟರಾಗಿದ್ದಾರೆ. ಕೆಂಡಾಲ್ 1984ರಲ್ಲಿ ಕ್ಯಾನ್ಸರ್ ನಿಂದ ಮೃತಪಟ್ಟರು. ಇಂಗ್ಲಿಷ್ ನಟಿ ಫೆಲಿಸಿಟಿ ಕೆಂಡಾಲ್ ಶಕ್ತಿ ಅವರ ಅತ್ತಿಗೆಯಾಗಬೇಕು.


ಇವರ ಪುತ್ರ ಕುನಾಲ್ ನಿರ್ದೇಶಕ ರಮೇಶ್ ಸಿಪ್ಪಿ ಅವರ ಮಗಳನ್ನು ಹಾಗೂ ಮಗಳು ಸಂಜನಾ ವನ್ಯಜೀವಿ ಸಂರಕ್ಷಕ ವಾಲ್ಮಿಕ್ ಥಾಪರ್ ಎಂಬುವರನ್ನು ವಿವಾಹವಾಗಿದ್ದಾರೆ.

ಚಿತ್ರ:Ssajikapoormgr.jpg
ಚೆನ್ನೈನ ರಾಮಾವರಂ ಗಾರ್ಡನ್‌ನಲ್ಲಿ ಹಿತಚಿಂಕರಾದ ಎಂಜಿಆರ್ ಮತ್ತು ಜಾನಕಿ ರಾಮಚಂದ್ರನ್ ಜೊತೆಗೆ

ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

ವಿಜೇತ

  • 1986 –ನ್ಯೂ ದಿಲ್ಲಿ ಟೈಮ್ಸ್‌ ನ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ
  • 1994- 1993ರಲ್ಲಿ ತೆರೆಕಂಡ ಮುಹಾಫಿಜ್ ಎಂಬ ಫೀಚರ್ ಪಿಲ್ಮ್‌ಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ವಿಶೇಷ ತೀರ್ಪುಗಾರರ ಪ್ರಶಸ್ತಿ/ಸ್ಪೇಷಲ್ ಮೆನ್ಶನ್‌.

ಫಿಲ್ಮ್‌ಫೇರ್ ಪ್ರಶಸ್ತಿಗಳು

ವಿಜೇತ

  • 1975- ದೀವಾರ್ ಚಿತ್ರದ ನಟನೆಗೆ ಫಿಲ್ಮ್ ಫೇರ್‌ನ ಉತ್ತಮ ಪೋಷಕ ನಟ ಪ್ರಶಸ್ತಿ
  • 1980- ಜನೂನ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನ ಉತ್ತಮ ಸಿನಿಮಾ ಪ್ರಶಸ್ತಿ
  • 1982 – ಕಲಿಯುಗ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನ ಉತ್ತಮ ಸಿನಿಮಾ ಪ್ರಶಸ್ತಿ
  • 2010 - ಫಿಲ್ಮ್ ಫೇರ್‍‌ನಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ

ನಾಮನಿರ್ದೇಶನಗೊಂಡಿದ್ದು

  • 1977 – ಕಭೀ ಕಭೀ ಸಿನಿಮಾಕ್ಕೆ ಫಿಲ್ಮ್ ಫೇರ್‌ನಿಂದ ಉತ್ತಮ ಪೋಷಕ ನಟ ಪ್ರಶಸ್ತಿ
  • 1983 – ನಮಕ್ ಹಲಾಲ್ ಸಿನಿಮಾಕ್ಕೆ ಫಿಲ್ಮ್ ಫೇರ್‌ನಿಂದ ಉತ್ತಮ ಪೋಷಕ ನಟ ಪ್ರಶಸ್ತಿ

ಬಂಗಾಳ ಚಲನಚಿತ್ರ ಪತ್ರಕರ್ತರ ಸಂಘದ ಪ್ರಶಸ್ತಿಗಳು

  • 1965 – ಜಬ್ ಜಬ್ ಫೂಲ್ ಕೇಲೆ ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ[೧]
  • 1988 – ನ್ಯೂ ದಿಲ್ಲಿ ಟೈಮ್ಸ್ ಸಿನಿಮಾಕ್ಕೆ ಬಿಎಫ್ ಜೆಎನಿಂದ ಉತ್ತಮ ನಟ ಪ್ರಶಸ್ತಿ[೨]

ಇತರ ಪ್ರಶಸ್ತಿಗಳು

  • 2009 - 7ನೇ ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಪಿಐಎಫ್ಎಫ್) ಜೀವಮಾನ ಸಾಧನೆಗಾಗಿ ಪ್ರಶಸ್ತಿ[೩]

ಆಯ್ದ ಚಲನಚಿತ್ರಗಳ ಪಟ್ಟಿ

ನಟಿ

  • ಆಗ್ (1948) ಯಂಗ್ ಕೇವಲ್
  • ಆವಾರಾ (1951) ಯಂಗ್ ರಾಜ್(ಬಾಲ ಕಲಾವಿದ)
  • ಧರಮ್‌ಪುತ್ರಾ (1961) …. ದಿಲೀಪ್ ರೈ
  • ದ ಹೌಸ್‌ಹೋಲ್ಡರ್ (1963) …. ಪ್ರೇಮ್‌
  • ವಕ್ತ್ (1965) …. ವಿಜಯ್ ಕುಮಾರ್
  • ಶೇಕ್ಸ್‌ಪಿಯರ್-ವಲ್ಲಾಹ್ (1965) ಸಂಜು
  • ಜಬ್ ಜಬ್ ಪೂಲ್ ಕಿಲೆ (1965) … ರಾಜ್‌ಕುಮಾರ್
  • ಆಮ್ನೆ ಸಾಮ್ನೆ … (1967)
  • ಪ್ರೆಟ್ಟಿ ಪೊಲ್ಲಿ (1967) …. ಅಮಾಜ್
  • ಹಸೀನಾ ಮಾನ್ ಜಾಯೇಗಿ (1968) … ರಾಕೇಶ್/ಕಮಲ್ (ದ್ವಿಪಾತ್ರ)
  • ಕನ್ಯಾದಾನ್ (1969)… ಅಮರ್/ಕುಮಾರ್ (ದ್ವಿಪಾತ್ರ)
  • ಪ್ಯಾರ್ ಕಾ ಮೊಸಮ್ (1969) …. ಸುಂದರ್
  • ಏಕ್ ಶ್ರೀಮಾನ್ ಏಕ್ ಶ್ರೀಮತಿ (1969) …. ಪ್ರೀತಮ್
  • ಬಾಂಬೆ ಟಾಕೀ (1970) ವಿಕ್ರಮ್
  • ಶರ್ಮಿಲೀ (1971) ಅಜಿತ್ ಕಪೂr
  • ಸಿದ್ಧರ್ಥ (1972) …. ಸಿದ್ಧಾರ್ಥ
  • ಆ ಗಲೇಅಗ್ ಜಾ (1973) …. ಪ್ರೇಮ್‌
  • ರೋಟಿ ಕಪ್ಡಾ ಔರ್ ಮಕಾನ್ (1974) …. ಮೋಹನ್ ಬಾಬು
  • ಚೋರ್ ಮಚಾಯೇ ಶೋರ್ (1974) …. ವಿಜಯ್ ಶರ್ಮಾ
  • ದೀವಾರ್ (1975) …. ರವಿ ವರ್ಮಾ
  • ಕಭೀ ಕಭೀ (1976) …. ವಿಜಯ್ ಖನ್ನಾ
  • ಫಕೀರಾ (1976) ….ಫಕೀರಾ
  • ಫರಿಶ್ತಾ ಯಾ ಕಟೀಲ್ (1977)
  • ಇಮಾನ್ ಧರಮ್ (1977) ಮೋಹನ್ ಕುಮಾರ್ ಸಕ್ಸೇನಾ
  • ತ್ರಿಶೂಲ್ (1978) …. ಶೇಖರ್ ಗುಪ್ತಾ
  • ಸತ್ಯಂ ಶಿವಂ ಸುಂದರಂ (1978) …. ರಾಜೀವ್
  • ಜೂನುನ್ (1978) …. ಜಾವೇದ್ ಖಾನ್
  • ಸುಹಾಗ್ (1979) …. ಕಿಶನ್ ಕಪೂರ್
  • ಕಾಲಾ ಪತ್ಥರ್ (1979) …. ರವಿ ಮಲ್ಹೋತ್ರಾ
  • ಕ್ರೋಧಿ (1981)ಸನ್ನಿ ಗಿಲ್ ಫ್ರಾಮ್ ವ್ಯಾಂಕೋವರ್
  • ಕಲಿಯುಗ್ (1980) …. ಕರನ್ ಸಿಂಘ್
  • ದೋ ಔರ್ ದೋ ಪಾಂಚ್ (1980) …. ಸುನೀಲ್/ಲಕ್ಷಣ
  • ಶಾನ್ (1980) …. ರವಿ ಕುಮಾರ್
  • ಕ್ರಾಂತಿ (1981) …. ಶಕ್ತಿ
  • ಸಿಲ್ಸಿಲಾ (1981) …. ಶೇಖರ್ ಮಲ್ಹೋತ್ರಾ
  • ಬಸಿರಾ (1981) …. ಬಲ್ರಾಜ್ ಕೋಹ್ಲಿ
  • ವಿಜೇತಾ (1982) …. ಜಿಹಾಲ್
  • ನಮಕ್ ಹಲಾಲ್ (1982) …. ರಾಜಾ
  • ಸವಾಲ್ (1982) …. ರವಿ
  • ಹೀಟ್ ಆ‍ಯ್‌೦ಡ್ ಡಸ್ಟ್ (1982) …. ದಿ ನವಾಬ್(ಕತ್ಮ್ ಅರಮನೆಯಲ್ಲಿ)
  • ನ್ಯೂ ಡೆಲ್ಲಿ ಟೈಮ್ಸ್ (1986) …. ವಿಕಾಸ್ ಪಾಂಡೆ
  • ಏಕ್ ಮೇ ಔರ್ ಏಕ್ ತೂ" (1986)….
  • ಇಜಾಮ್ (1986) …. ರಂಜಿತ್ ಸಿಂಗ್
  • ಸಮ್ಮಿ ಆ‍ಯ್‌೦ಡ್ ರೋಸಿ ಗೆಟ್ ಲೇಡ್ (1987) …. ರಫಿ ರೆಹ್ಮಾನ್
  • ಪ್ಯಾರ್ ಕಾ ಜೀತ್ (1987) …. ಡಾ ರೆಹಮಾನ್
  • ಇಜರತ್ (1987) …. ವಿಶೇಷ ಪಾತ್ರ
  • ದ ಡಿಸಿವರ್ಸ್ (1988) …. ಚಂದ್ರಾ ಸಿಂಗ್‌‌
  • ಅಕಯ್ಲಾ (1991) .... ಪೋಲಿಸ್ ಆಯುಕ್ತ
  • ಇನ್ ಕಸ್ಟಡಿ (1993) …. ನೂರ್
  • ಗಲಿವರ್ಸ್ ಟ್ರಾವೆಲ್ಸ್ (1996) …. ರಾಜಾ
  • ಜಿನ್ಹಾ (1998) …. ನಿರೂಪಕ
  • ಸೈಡ್ ಸ್ಟ್ರೀಟ್ಸ್ (1998) …. ವಿಕ್ರಮ್ ರಾಜ್

ನಿರ್ಮಾಪಕ

  • ಜೂನುನ್ (1978)
  • ಕಲಿಯುಗ್ (1980)
  • 36 ಚೌರಿಂಗಿ ಲೇನ್ (1981)
  • ವಿಜೇತಾ (1982)
  • ಉತ್ಸವ್ (1984)
  • ಅಜೂಬಾ (1991)
  • ರಮನ್ (1993)

ನಿರ್ದೇಶಕ

  • ಮನೋರಂಜನ್ (1974) (ಸಹಾಯಕ ನಿರ್ದೇಶಕ)
  • ಅಜೂಬಾ (1991)

ಕೃತಿಗಳು

  • ಶಶಿ ಕಪೂರ್‌ ಪ್ರೆಸೆಂಟ್ಸ್‌ ದಿ ಪೃಥ್ವಿವಾಲಾಸ್ ‌, ಲೇಖಕರು: ಶಶಿ ಕಪೂರ್‌, ದೀಪಾ ಗಹ್ಲೋತ್‌, ಪೃಥ್ವಿ ಥಿಯೆಟರ್‌ (ಮುಂಬೈ, ಭಾರತ). ರೊಲಿ ಬುಕ್ಸ್‌, 2004. ISBN 8174363483.

ಹೆಚ್ಚಿನ ಓದಿಗಾಗಿ

  • ದಿ ಕಪೂರ್ಸ್‌: ದಿ ಫರ್ಸ್ಟ್‌ ಫ್ಯಾಮಿಲಿ ಆಫ್‌ ಇಂಡಿಯನ್ ಸಿನೆಮಾ , ಲೇಖಕರು: ಮಧು ಜೈನ್‌. ಪೆಂಗ್ವಿನ್‌, ವೈಕಿಂಗ್‌, 2005. ISBN 0670058378.

ಉಲ್ಲೇಖಗಳು

  1. "69th & 70th Annual Hero Honda BFJA Awards 2007". Bfjaawards.com. Retrieved 2010-07-12.[ಮಡಿದ ಕೊಂಡಿ]
  2. "69th & 70th Annual Hero Honda BFJA Awards 2007". Bfjaawards.com. Retrieved 2010-07-12.[ಮಡಿದ ಕೊಂಡಿ]
  3. "Hema Malini, Shashi Kapoor honored". Ibosnetwork.com. 2009-01-09. Retrieved 2010-07-12.

ಬಾಹ್ಯ ಕೊಂಡಿಗಳು