ಉಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Translated from http://en.wikipedia.org/wiki/Wool (revision: 390038107) using http://translate.google.com/toolkit with about 94% human translations.
( ಯಾವುದೇ ವ್ಯತ್ಯಾಸವಿಲ್ಲ )

೧೭:೦೪, ೧೯ ಅಕ್ಟೋಬರ್ ೨೦೧೦ ನಂತೆ ಪರಿಷ್ಕರಣೆ

ಅರ್ಕಾನ್ಸಾನಲ್ಲಿರುವ ಬೂನೆಸ್ವಿಲ್ಲೆನದ ಗಿಡ್ಡ ಮತ್ತು ಉದ್ದ ಕೂದಲಿನ ಉಣ್ಣೆ ಬಗ್ಗೆ ಕೇಂದ್ರ ಭಾಗದಲ್ಲಿರುವ ಸಂಶೋಧನಕೇಂದ್ರ.
ವುಲ್ ಸೆರ್ಕ್ಷ,ವಾಲ್ಶಾ ಷೋ. ದಿ ಕ್ರೆಮಿ ಫ್ಲೀಸ್ಸ್ ಆನ್ ದಿ ಲೆಫ್ಟ್ ಆರ್ ಕ್ರಾಸ್ಬ್ರೆಡ್ ವುಲ್.

ಉಣ್ಣೆ ಒಂದು ಜವಳಿ ವರ್ಗದ ಫೈಬರ್ ಎಳೆಗಳನ್ನುಕುರಿ ಮತ್ತು ಕೆಲವು ನಿಶ್ಚಿತ ಪ್ರಾಣಿಗಳ,[೧] ಕೂದಲಿಂದ ಪಡೆಯುವ ದಿರಸಿನ ಉತ್ಪನ್ನವಾಗಿದೆ.ಇದರಲ್ಲಿ ಕಾಶ್ಮೀರಿ ಮೇಕೆಗಳು,ಮೊಹೆರ್ ಜಾತಿಯ ಮೇಕೆಗಳು ವಿಕುನಾಗಳು,ಅಲ್ಪಕಾ,ಎಂಬ ಜಾತಿಯ ತುಪ್ಪಳಿನ ಪ್ರಾಣಿ,ಅಲ್ಲದೇ ಒಂಟೆ ಅದರ ಕುಟುಂಬ ವರ್ಗಕ್ಕೆ ಸೇರಿದ ಪ್ರಾಣಿಗಳ ಒಳಗೊಂಡಿದೆ.ಅಂಗೊರಾ ಎಂಬ ಪ್ರಾಣಿಯು ಮೊಲಗಳ ಮೂಲ ಜಾತಿ ತಳಿಯ ಪ್ರಾಣಿಗಳನ್ನು ಉಣ್ಣೆಗಾಗಿ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಉಣ್ಣೆಯ ಗುಣಮಟ್ಟವನ್ನು ಅದು ದೊರೆಯುವ ವಿಭಿನ್ನ ಜಾತಿಗಳ ಪ್ರಾಣಿಗಳ ಕೂದಲು,ತುಪ್ಪಳವನ್ನು ಅವಲಂಬಿಸಿದೆ,ಅದು ಗುಂಗುರುಗುಂಗುರಾದ,ಸಮರೂಪದ ಸ್ಥಿತಿಸ್ಥಾಪಕತ್ವ ಹೊಂದುವ ಅಥವಾ ಮಡಿಕೆಯಾದ ಮತ್ತು ಕೊಂಡಿಯಾಕಾರದ ಗಡಸು (ಕುಚ್ಚು)ಕೂದಲಿನ ಉಣ್ಣೆ ಇದರಲ್ಲಿ ತೆಗೆಯಬಹುದಾಗಿದೆ.[೨]

ಗುಣಲಕ್ಷಣಗಳು

ಚಾಂಪಿಯನ್ ಹಾಗೆಟ್ ಫ್ಲೀಸ್, ವಾಲ್ಶಾ ಷೋ
ನ್ಯುಜಿಲ್ಯಾಂಡ್ ನ ಮೆರಿನೊ ಗುಣಮಟ್ಟದ ಉಣ್ಣೆ ಟೇಬಲ್ ಮೇಲಿರುವ ಒಟ್ಟಾಗಿಸಿದ ಉಣ್ಣೆ ಚಿತ್ರ

ಉಣ್ಣೆಯ ಕೂದಲನ್ನು ಒಂದು ಸಮರೂಪಕ್ಕೆ ತಂದಾಗ ಮತ್ತು ಗುಂಗುರುಗೂದಲು ಹೆಣೆಯಲು ಸುಲಭವಾಗಿರುತ್ತದೆ.ಉಣ್ಣೆಯ ಉಂಡೆ ಮಾಡಿದ ಎಳೆಗಳಿಂದ ಅದನ್ನು ಒಂದಕ್ಕೊಂದು ಜೋಡಿಸಲು ನೆರವಾಗುತ್ತದೆ. ಗುಂಗುರು ಕೂದಲಿನಿಂದಾದ ಉಣ್ಣೆಯು ದೊಡ್ಡ ಪ್ರಮಾಣದಲ್ಲಿ ಎಳೆಗಳ ಸಂಗ್ರಹಕ್ಕೆ ನೆರವಾಗುತ್ತದೆ,ಇದು ಜವಳಿ ಕೈಗಾರಿಕೆಗೆ ವ್ಯಾಪಕ ಬಳಕೆಯಲ್ಲಿದೆ.ಅದು ಗಾಳಿಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವುದರಿಂದ ಶಾಖವನ್ನೂ ತಡೆಯುತ್ತದೆ. ಇದು ಶಾಖ ತಡೆಗಟ್ಟುವ ಮತ್ತು ಶೀಘ್ರ ಬೇರ್ಪಡಿಸುವ ಗುಣ ಹೊಂದಿದ್ದರಿಂದ ಹಲವು ಉಪಯೋಗಗಳಿವೆ.ಅರಬ್ ದೇಶದ ಅಲೆಮಾರಿ ಗಳೆನ್ನಲಾದ ಬೆಡೌನ್ ಗಳು ಮತ್ತು ಸಮುದ್ರದಂಚಿನಲ್ಲಿ ವಾಸಿಸುವ ತೌರೆಗ್ ಗಳು ಶಾಖವನ್ನು ಸೂಕ್ತವಾಗಿ ಬೇರ್ಪಡಿಸಲು ಉಣ್ಣೆಯನ್ನು ಉಪಯೋಗಿಸಿದ್ದರು.

ಗುಂಗುರು ಉಣ್ಣೆಯು ಅತ್ಯುತ್ತಮ ಗುಣಮಟ್ಟದ್ದಾಗಿದ್ದು ಎಳೆಗಳು ಮೃದುವಾಗಿರುತ್ತವೆ. ಉತ್ತಮ ಮಟ್ಟದ ಮೆರಿನೊ ಎಂಬ ಉಣ್ಣೆಯು ಇಂಚೊಂದಕ್ಕೆ 100 ಗುಂಗುರು ಕೂದಲನ್ನು ಹೊಂದಿದ್ದರೆ ಕರಕುಲ್ ಎಂಬ ಗಡಸು ಉಣ್ಣೆಗೆ 1 ರಿಂದ 2 ಎಳೆಗಳು ಮಾತ್ರ ಇರುತ್ತವೆ. ಕೂದಲು ಹೆಣೆಯಲು ಅನುಕೂಲವಾಗುವ ಉದ್ದ ಮತ್ತು ಕೊಂಚ ಗುಂಗುರು ಇರದಿದ್ದರೆ ಅವುಗಳ ದಾರ ತಯಾರಿಕೆ ಕಷ್ಟ. ಕುರಿಗಳ ಮೇಲಿನ ಗುಂಪು ಅಥವಾ ಕುಚ್ಚ ಕೂದಲಿನ ಭಾಗಕ್ಕೆ ಬಿರುಸಾದ ತುಪ್ಪಟ ಎನ್ನಲಾಗುವುದು. ಈ ತುಪ್ಪಟದ ಪ್ರಮಾಣವು ಪ್ರಾಣಿಗಳ ವಿಭಿನ್ನ ತಳಿಗಳ ಮೇಲೆ ಅವಲಂಬಿಸಿದೆ.ಅದನ್ನು ನೋಡಿ ಎಳೆಯನ್ನು ಕುಚ್ಚವಾಗಿಸಲು ನೂಲು ಹೆಣೆಯಲು,ಅಂಟು ಸೇರಿಸಲು, ಅಥವಾ ಹಿಂಜಲು ಮತ್ತು ಅದನ್ನು ನೂಲಿನ ಲಡಿಗಳ ಮಾಡಲು ಅನುಕೂಲ ಮಾಡುವ ಗುಣ ಮಟ್ಟ ಅವಶ್ಯವಾಗಿದೆ.

ಉಣ್ಣೆ ಎಳೆಗಳು ಆರ್ದ್ರತೆಯನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಅವು ತಕ್ಷಣದಲ್ಲೇ ತೇವಾಂಶವನ್ನು ಹೀರಿಕೊಳ್ಳುತ್ತವೆ. ಉಣ್ಣೆ ತನಗಿರುವ ತೂಕದ ಒಂದ್ಮೂರಾಂಶದಷ್ಟು ತೇವಾಂಶ ಹೀರಿಕೊಳ್ಳುವ ಶಕ್ತಿ ಪಡೆದಿದೆ.[೩] ಇನ್ನುಳಿದ ಕೆಲವು ಜವಳಿ ಉತ್ಪನ್ನಗಳಂತೆ ಉಣ್ಣೆಯು ಶಬ್ದವನ್ನೂ ತನ್ನೊಳಗೆ ಅಡಗಿಸಿಕೊಳ್ಳುತ್ತದೆ. ಉಣ್ಣೆಯು ಸಾಮಾನ್ಯವಾಗಿ ಹಾಲು ಕೆನೆಯ ಬಿಳಿ ಬಣ್ಣದ್ದಾಗಿರುತ್ತದೆ,ಆದರೂ ಕೆಲವು ಜಾತಿಯ ಪ್ರಾಣಿಗಳ ಕೂದಲಿನ ಪ್ರಕಾರ ಅದು ಕಪ್ಪು,ಕಂದು,ಬೆಳ್ಳಿ ಮತ್ತು ಒಟ್ಟಾರೆ ಇವೆಲ್ಲಗಳ ಮಿಶ್ರಣದಂತೆ ನೈಸರ್ಗಿಕವಾಗಿ ಕಾಣುತ್ತದೆ.

ಉಣ್ಣೆಯು ಇನ್ನುಳಿದ ಮತ್ತು ಹತ್ತಿ ಎಳೆಗಳಿಗಿಂತ ಹೆಚ್ಚು ತಾಪವನ್ನು ಒಳಗೊಂಡಿರುತ್ತದೆ. ಅದು ಕಡಿಮೆ ಪ್ರಮಾಣದ ಬೆಂಕಿ ಜ್ವಾಲೆ ಹರಡುತ್ತದೆ;ಕಡಿಮೆ ಶಾಖ ಬಿಡುಗಡೆ,ಸುಡುವ ಪ್ರಮಾಣ ಕಡಿಮೆ,ಅದು ಕರಗುವುದಿಲ್ಲ ಅಥವಾ ತೊಟ್ಟಕ್ಕಿವುದಿಲ್ಲ,ಇದು ತನ್ನದೇ ಆದ [೪]ಕಪ್ಪನ್ನು ಹೊಂದಿದ್ದು ಅದು ಸುಲಭ ಪ್ರತ್ಯೇಕಗೊಳ್ಳುವುದಲ್ಲದೇ ಬೇಗ ನಂದುತ್ತದೆ,ಜಮಖಾನಾ ಅಥವಾ ಕಾರ್ಪೆಟ್ ಗಳಲ್ಲಿ ಇದನ್ನು ಬಳಸಿದರೆ ವಿಷ ಅನಿಲ,ಹೊಗೆಗಳಿಗೆ ಅಷ್ಟಾಗಿ ಪ್ರತಿಕ್ರಿಯಿಸುವುದಿಲ್ಲ.[೫] ಉಣ್ಣೆ ಕಾರ್ಪೆಟ್ ಗಳು ಹೆಚ್ಚು ಸುರಕ್ಷಿತವಾಗಿವೆ,ಇವುಗಳನ್ನು ರೈಲ್ವೆಗಳಲ್ಲಿ,ವಿಮಾನಗಳಲ್ಲಿ ಬಳಸುತ್ತಾರೆ.ಅಗ್ನಿಶಾಮಕದವರ ಉಡುಪುಗಳ ಮಾಡುವ ಕಾರ್ಖಾನೆಗಳಲ್ಲಿ ಮತ್ತು ಹೆಚ್ಚು ಬೆಂಕಿಗೆ ಒಡ್ಡುವವರಿಗೆ ಇದು ಅನುಕೂಲ.[೫]

ಉಣ್ಣೆಯು ಜಡ ನಿಷ್ಕ್ರಿಯ ವಿದ್ಯುತ್ ಗೆ ಹೆಚ್ಚು ನಿರೋಧಕವಾಗಿದ್ದು ಇದರಲ್ಲಿನ ಆರ್ದ್ರತೆಯು ವಿದ್ಯುತ್ ನ ಶಾಖಕ್ಕೆ ಪ್ರತಿರೋಧಕವಾಗಿರುತ್ತದೆ. ಆದ್ದರಿಂದ ಉಣ್ಣೆ ಉಡುಪುಗಳು ದೇಹದಲ್ಲಿ ಹೆಚ್ಚು ಅಂಟಿಕೊಳ್ಳದೇ ಅಥವಾ ಕಿಡಿಗಳ ಹಾರಿಸುವುದಿಲ್ಲ. ಕಾರ್ ನಲ್ಲಿ ಉಣ್ಣೆ ಕಾರ್ಪೆಟ್ ಗಳು ಆಸನ ಮತ್ತು ಕೆಳಭಾಗದಲ್ಲಿದ್ದರೆ ನೆಲ ವಿದ್ಯುತ್ ಹರಿವಿಗೆ ಅವಕಾಶ ನೀಡುವುದಿಲ್ಲ. ವೈದ್ಯಕೀಯ ವಲಯದಲ್ಲಿಯೂ ಸಹ ಇದು ಅಲರ್ಜಿಗಳಿಗೆ ನಿರೋಧಕವಾಗಿ ಕೆಲಸ ಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಸಂಸ್ಕರಣೆ

ಕತ್ತರಿಸುವುದು

ಉತ್ತಮ ಮೆರಿನೊ ಕತ್ತರಿಸುವ ಕ್ರಿಯೆ,ಲಿಸ್ಮೊರ್ ,ವಿಕ್ಟೋರಿಯಾ

ಕುರಿಗಳ ಕೂದಲು ಕತ್ತರಿಸುವುದರ ಮೂಲಕ ಉಣ್ಣೆ ಕುಚ್ಚವನ್ನು ಪಡೆಯಲಾಗುತ್ತದೆ.

ಉಣ್ಣೆಯನ್ನು ಕತ್ತರಿಸಿದ ನಂತರ ಅದನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗುತ್ತದೆ;ಉಣ್ಣೆ ಲಡಿ (ಇದನ್ನು ದೊಡ್ಡ ಪ್ರಮಾಣದಲ್ಲೂ ಮಾಡಲಾಗುತ್ತದೆ),ಸೀಳಿದ ಎಳೆ,ಹೊಟ್ಟೆ ಭಾಗದ ಗುಂಪು ಕೂದಲು ಮತ್ತು ಅಲ್ಲಲ್ಲಿ ಗಂಟುಗಂಟಾದ ಎಳೆಗಳ ಕುಚ್ಚು ಇತ್ಯಾದಿ.[೬] ಈ ಕುಚ್ಚ ಕೂದಲಿನ ಗುಣಮಟ್ಟವನ್ನು ಉಣ್ಣೆ ವರ್ಗೀಕರಣ ಎನ್ನಲಾದ ತಂತ್ರಜ್ಞಾನದಿಂದ ಕಂಡುಹಿಡಿಯಲಾಗುತ್ತದೆ.ಇದನ್ನು ಮಾಡುವ ವ್ಯಕ್ತಿಗೆ ಉಣ್ಣೆ ವರ್ಗೀಕರಣದ ಪರಿಣತ ಎಂದು ಹೇಳಲಾಗುತ್ತದೆ.ಇದರಿಂದ ಉತ್ತಮ ಬೆಲೆಯನ್ನು ತಂದು ಕೊಟ್ಟು ರೈತರನ್ನು ಉತ್ತೇಜಿಸಲಾಗುತ್ತದೆ. ಆಸ್ಟ್ರೇಲಿಯಾದ ಮೆರಿನೊ ಮೃದು ಉಣ್ಣೆಯ ಹರಾಜಿನಲ್ಲಿ ಅದರ ಎಳೆ ಎಳೆಗೂ ಒಂದು ಸೂಕ್ಷ್ಮ ಕಣ ಮೈಕ್ರಾನ್ ಗೂ ಅಳತೆ-ತೂಕದ ಅಂದಾಜಿದೆ.(ಇದರಲ್ಲಿ ಇನ್ನುಳಿದ ಎಳೆಭಾಗವೂ ಇರುತ್ತದೆ)ಕಟ್ಟಿದ ಎಳೆಗಳ ಉದ್ದ,ಎಳೆಗಳ ಬಲ,ಕೆಲವು ವೇಳೆ ಅದರ ಬಣ್ಣ ಮತ್ತು ಅದರ ಕೋಮಲತೆ ಎಣಿಕೆಯಾಗುತ್ತದೆ.

ಉಜ್ಜಿ ಚೊಕ್ಕಟಗೊಳಿಸುವಿಕೆ

ನೇರವಾಗಿ ಕುರಿಯಿಂದ ತೆಗೆದ ಉಣ್ಣೆಯನ್ನು "ಅಂಟಾದ [೭]ಉಣ್ಣೆ" ಅಥವಾ "ಅಂಟಿನಲ್ಲಿರುವ ಉಣ್ಣೆ" ಎನ್ನಲಾಗುತ್ತದೆ.ಇದರಲ್ಲಿ ಬೆಲೆಯುಳ್ಳ ತುಪ್ಪಳ ಕೊಬ್ಬು ಅಲ್ಲದೇ ಕಲ್ಮಶ,ನಿರ್ಜೀವಗೊಂಡ ಚರ್ಮ,ಬೆವರಿನ ಶೇಷ,ಗಡಸು ಅಂಶ ಇವೆಲ್ಲವೂ ಇರುತ್ತವೆ. ಉಣ್ಣೆಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಪೂರ್ವ ಅದನ್ನು ತಿಕ್ಕಿ ಉಜ್ಜಿ ಚೊಕ್ಕಟ ಮಾಡಿ ಅದರಲ್ಲಿನ ಅಂಟು ಪದಾರ್ಥವನ್ನು ಬೇರ್ಪಡಿಸಬೇಕಾಗುತ್ತದೆ. ಈ ತಿಕ್ಕಿ ಉಜ್ಜಿ ಚೊಕ್ಕಟಗೊಳಿಸುವುದು ಒಂದು ಬಿಸಿನೀರಿನ ಸ್ನಾನದಂತೆಯೇ ಆದರೆ ಇದು ಕೈಗಾರಿಕಾ ಸಂಸ್ಕರಣದ ದೃಷ್ಟಿಯಲ್ಲಿ ಮಾರ್ಜಕ ಡಿಟರ್ಜೆಂಟ್ ಮತ್ತು ಕ್ಷಾರ ಬಳಸಿ ವಿಶಿಷ್ಟ ಉಪಕರಣದ ಮೂಲಕ ಸ್ವಚ್ಛಗೊಳಿಸಲಾಗುತ್ತದೆ.[೮] ವಾಣಿಜ್ಯಕವಾಗಿ ಬಳಸುವ ಉಣ್ಣೆಯಲ್ಲಿ ಗಡಸು ವಸ್ತುಗಳನ್ನು ರಾಸಾಯನಿಕ ಕಾರ್ಬೋನೈಜೇಶನ್ (ಇಂಗಾಲಿಕರಣ)ಮೂಲಕ ತೆಗೆದು ಹಾಕಲಾಗುತ್ತದೆ.[೯] ಸಣ್ಣ ಪ್ರಮಾಣದಲ್ಲಿ ಸಾಂಸ್ಕರಿಸಿದ ಉಣ್ಣೆಯಲ್ಲಿ ಕೆಲಪ್ರಮಾಣದ ಗಡಸು ಅಂಶವನ್ನು ಕೈಯಿಂದ ತೆಗೆಯಬಹುದು,ಸ್ವಲ್ಪ ಪ್ರಮಾಣದ ಕೊಬ್ಬನ್ನು ಸಣ್ಣ ಪ್ರಮಾಣದ ಡಿಟರ್ಜೆಂಟ್ ಗಳ ಬಳಸಿ ತೆಗೆಯಬಹುದು. ಹೀಗೆ ಅರ್ಧ ಸಂಸ್ಕರಣಗೊಂಡ ಉಣ್ಣೆಯನ್ನು ನೀರು ನಿರೋಧಕ ಕೈಗವಸು ಅಥವಾ ಶ್ವೇಟರ್ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.ಉದಾಹರಣೆಗೆ ಅರನ್ ದ್ವೀಪದ ಮೀನುಗಾರರು ಚಳಿ ತಡೆಗೆ ವ್ಯಾಪಕವಾಗಿ ಬಳಸುತ್ತಾರೆ. ಇವುಗಳಿಂದ ತೆಗೆದ ಕೊಬ್ಬನ್ನು ಪ್ರಸಾಧನದಲ್ಲಿ ಕೈಗೆ ಬಳಸುವ ಕ್ರೀಮ್ ತಯಾರಿಸಲು ಬಳಸಲಾಗುತ್ತದೆ.

ಗುಣಮಟ್ಟ

ಉಣ್ಣೆಯ ವಿಧಗಳು ಮತ್ತು ನೈಸರ್ಗಿಕ ಬಣ್ಣಗಳ ಚಿತ್ರ ಉಣೆಯಿಂದ ನಿರ್ಮಿಸಿದ್ದು

ಉಣ್ಣೆಯನ್ನು ಅದರ ಎಳೆಗಳು ಉದ್ದಗಲ,ಅದರ ಸುರುಳಿಯಾಕಾರ,ಮಡಿಚಿದ ಆಕಾರ,ಬಣ್ಣ ಮತ್ತು ಅದರ ಎಳೆಗಳ ಗಟ್ಟಿತನ ಪ್ರಬಲತೆ ಮೇಲೆ ವಿಂಗಡಿಸಿ ಗುಣಮಟ್ಟ ಅಳೆಯಲಾಗುತ್ತದೆ. ಎಳೆಗಳ ವ್ಯಾಸದ ಅಳತೆಯು ಅದರ ಉದ್ದಳತೆಯನ್ನು ನಿರ್ಧರಿಸುತ್ತದೆ.ಇದರ ಮೇಲೆ ಉಣ್ಣೆಯ ಗುಣಮಟ್ಟ ಮತ್ತು ಬೆಲೆ ನಿರ್ಧರಿಸಲಾಗಿರುತ್ತದೆ.

ಮೆರಿನೊ ಉಣ್ಣೆಯು ಸಾಮಾನ್ಯವಾಗಿ 3-4 ಇಂಚುಗಳ ಉದ್ದ ಹೊಂದಿರುತ್ತದೆ,ಇದು ಅತ್ಯಂತ ಮೃದು ಮತ್ತು ಸುಮಾರು 12-34 ಮೈಕ್ರಾನ್ಸ್ ಅಳತೆ ಪಡೆದಿರುತ್ತದೆ).[೧೦] ಅತ್ಯಂತ ಮೃದು ಮತ್ತು ಉತ್ತಮ ಮಟ್ಟದ ಮೆರಿನೊ ಉಣ್ಣೆಯನ್ನು ಎಳೆಯ ಕುರಿಗಳಿಂದ ತೆಗೆಯಲಾಗುತ್ತದೆ. ಮಾಂಸಕ್ಕಾಗಿ ಬೆಳೆಸಿದ ಕುರಿಯಿಂದ ತೆಗೆದ ಉಣ್ಣೆ ಗಡಸಾಗಿರುತ್ತದೆ.ಇದರ ಎಳೆಗಳು 1.5 ದಿಂದ 6 ಇಂಚುಗಳ ಉದ್ದ ಹೊಂದಿರುತ್ತವೆ. ಕುರಿಯು ತನ್ನ ದೇಹದಲ್ಲಿ ಕುಚ್ಚು ಕೂದಲನ್ನು ಅಥವಾ ಒತ್ತೊತ್ತು ಕೂದಲು ಬೆಳೆಯುವಾಗ ಒತ್ತಾಯದಿಂದ ತೆಗೆದರೆ ಅದರ ಎಳೆಗಳು ಸೀಳಿ ನಷ್ಟವಾಗುವ ಸಾಧ್ಯತೆ ಇದೆ.[೧೧]

ಉಣ್ಣೆಯನ್ನು ಅದರ ಉದ್ದ ಹಾಗು ವ್ಯಾಸದ ಬೆಳವಣಿಗೆ ಮೇಲೆ ಪ್ರತ್ಯೇಕಿಸಿ ಮೈಕ್ರಾನ್ ಗಳಲ್ಲಿ ಅದರ ಶೈಲಿಯನ್ನು ಗುರ್ತಿಸಬಹುದು. ಈ ವರ್ಗೀರಕರಣವು ಅದರ ತಳಿ ಅಥವಾ ಉಣ್ಣೆ ತೆಗೆಯುವ ಉದ್ದೇಶ ಅವಲಂಬಿಸಿದೆ. ಉದಾಹರಣೆಗೆ:

  • <15.5 - ಅಲ್ಟ್ರಾಫೈನ್ ಮೆರಿನೊ[೭]
  • 15.6-18.5 - ಸೂಪರ್ ಫೈನ್ ಮೆರಿನೊ
  • 18.6-20 - ಫೈನ್ ಮೆರಿನೊ[೭]
  • 20.1-23 - ಮಧ್ಯಮ ಮೆರಿನೊ
  • 23< - ಬಲಯುತ ಮೆರಿನೊ[೭]
  • ಹಿಂದಿರುಗುವಿಕೆ: 21-26 ಮೈಕ್ರಾನ್ಸ್, ಬಿಳಿ, 90–180 mm ಉದ್ದ
  • ಉತ್ತಮ ಮಿಶ್ರತಳಿ: 27-31 ಮೈಕ್ರಾನ್ಸ್, ಕಾರಿಡೇಲ್ಗಳು ಇತ್ಯಾದಿ.
  • ಮಧ್ಯಮ ಮಿಶ್ರತಳಿ: 32–35 ಮೈಕ್ರಾನ್ಸ್
  • ಕೆಳಮಟ್ಟದ: 23-34 ಮೈಕ್ರಾನ್ಸ್, ಸಾಮಾನ್ಯವಾಗಿ ಇದು ಮಡಿಕೆ ಮತ್ತು ಮಿಂಚನ್ನು ಪಡೆದಿರಲಾರದು. ಉದಾಹರಣೆಗೆ,ಆಸ್ಸಿಡೌನ್,ಡೊರ್ಸೆಟ್ ಹಾರ್ನ್,ಕಪ್ಪು ಮುಖದಜಾತಿ ಇತ್ಯಾದಿ.[೧೨]
  • ಗಡಸು ಮಿಶ್ರಜಾತಿ: 36> ಮೈಕ್ರಾನ್ಸ್
  • ಕಾರ್ಪೆಟ್ ವುಲ್ಸ್: 35-45 ಮೈಕ್ರಾನ್ಸ್[೭]

ಯಾವುದೇ ಉತ್ತಮ ಗುಣಮಟ್ಟದ 25 ಮೈಕ್ರಾನ್ ಎಳೆಗಳುಳ್ಳದ್ದನ್ನು ಸಿದ್ದ ಉಡುಪುಗಳಿಗಾಗಿ ಬಳಸಿದರೆ ಗಡುಸಾದುದನ್ನು ಹೊರಭಾಗದ ಇಲ್ಲವೆ ರಗ್ಗುಗಳ ತಯಾರಿಕೆಗಾಗಿ ಬಳಸುತ್ತಾರೆ. ಉಣ್ಣೆ ಹೆಚ್ಚು ಮೃದುವಾಗಿದ್ದಷ್ಟು ಹೆಚ್ಚು ಬಾಳಿಕೆಗ ಬರುತ್ತದೆ. ಅಲ್ಲದೇ ಕಡಿಮೆ ಅಂಟುವ ಗುಣ ಪಡೆದಿದೆ.

ಆಸ್ಟ್ರೇಲಿಯಾ ದ ಮತ್ತು ನ್ಯುಜಿಲ್ಯಾಂಡ್ ಗಳಲ್ಲಿನ ಉಣ್ಣೆಯು ಅತ್ಯುತ್ತಮ ಗುಮಮಟ್ಟ ಹೊಂದಿದ್ದು ಮೆರಿನೊಕ್ಕೆ ಪ್ರಖ್ಯಾತಗೊಂಡಿದೆ.ಇದು 16.9 ಮೈಕ್ರಾನ್ ಮತ್ತು ಮೃದುವಾಗಿದೆ. ಇದರ ಶೈಲಿಯ ಉಡುಪುಗಳ ನೋಡಿದರೆ ಇದು ಬ್ರಿಟಿಶ್ ಆಸ್ಟ್ರೇಲಿಯನ್ ಉಣ್ಣೆ ಎಂದು ಗುರುತಿಸಬಹುದು.ಅದರ ಬಣ್ಣ,ಅದರ ವರ್ಗೀಕರಣ ಇತ್ಯಾದಿಗಳನ್ನು ಆಸ್ಟ್ರೇಲಿಯನ್ ವುಲ್ ಎಕ್ಸೇಂಜ್ (AWEX)ಕೌನ್ಸಿಲ್ ಇದರ ಗುಣಮಟ್ಟ ನಿರ್ಧರಿಸುತ್ತದೆ. ಪ್ರತಿವರ್ಷ ಕೇವಲ ಕೆಲವು ಬೇಲ್ ಗಳಷ್ಟು ಹರಾಜುಗೊಳ್ಳುವ ಉಣ್ಣೆಯನ್ನು ಮಾತ್ರ ವರ್ಗೀಕರಿಸಲಾಗುತ್ತದೆ.[೧೩]

ಇತಿಹಾಸ

ರಾಮಲ್ಲಾ ಉಣ್ಣೆ ಗಿರಣಿ ಕೆಲಸಗಾರಕೈಯಿಂದ ರಚಿಸಿದ ಛಾಯಾಚಿತ್ರ 1919)
ವುಲ್ ಸ್ಕರ್ಟಿಗ್ ಅಂಡ್ ರೋಲಿಂಗ್ಇನ್ ಆಸ್ಟ್ರೇಲಿಯಾ, ಸಿರ್ಕ1 900 (ಆಸ್ಟ್ರೇಲಿಯಾದಲ್ಲಿ ಉಣ್ಣೆ ಹೆಣಿಗೆ ಮತ್ತು ನೇಯ್ಗೆ)

ಕಚ್ಚಾ ಉಣ್ಣೆಯನ್ನು ಆಯಾ ಸ್ಥಳೀಯ ಕುರಿಗಳು ಮತ್ತು ಮೇಕೆಗಳ ಅವಲಂಬಿಸಿ ಕೈಗಾರಿಕೆಗೆ ಬಳಸಲಾಗುತ್ತದೆ.ಇನ್ನು ಕೆಲವು ಗೋಂದು ಸೇರಿಸಿದ ಉಣ್ಣೆ ಅಥವಾ ನೇಯ್ಗೆ ಮಾಡಿದ ಉಣ್ಣೆಯನ್ನು ಆರಂಭಿಕ ನಾಗರಿಕತೆಯಲ್ಲಿ ಕಾಣಬಹುದಾಗಿದೆ. ಉಣ್ಣೆ ಕೂದಲು ಕತ್ತರಿಸುವ ಆಧುನಿಕ ಕಾಲಗಿಂತ ಆಗ ಕೈಯಿಂದ ಲೋಹದ ಕಬ್ಬಿಣ ಯುಗದಲ್ಲಿ ಬಾಚುವ ಮೂಲಕ ಉಣ್ಣೆ ತೆಗೆಯಲಾಗುತಿತ್ತು. ಅತ್ಯಂತ ಹಳೆಯದಾದ ಯುರೊಪಿಯನ್ ಉಣ್ಣೆ ಜವಳಿ ಕೈಗಾರಿಕೆಯನ್ನು ಕಾ ಎಂದು ಕರೆಯುತ್ತಾರೆ. ಆರಂಭಿಕ 1500 BCE,ಕಾಲವನ್ನು ಆಗಿನ ಆಡಳಿತದ ಡ್ಯಾನಿಶ್ ಬೊಗ್ನಲ್ಲಿ ಸಂರಕ್ಷಿಸಿಡಲಾಗಿದೆ.[೧೪] ಆಗಿನ ಕಾಡು ಮೇಕೆಗಳಿಂದ ತೆಗೆದ ಉಣ್ಣೆಯನ್ನು ಅರ್ವಾಚೀನ ಇತಿಹಾಸದ ಗವಿಗಳಲ್ಲಿ ಅಂದರೆ ರಿಪಬ್ಲಿಕ್ ಆಫ್ ಜಾರ್ಜಿಯಾದಲ್ಲಿ ಕಾಣಬಹುದಾಗಿತ್ತು.ಅಂದರೆ ಸುಮಾರು 34,000 BCE ನಲ್ಲಿ ಉಣ್ಣೆ ಎಳೆಗಳ ಮಾಡಲಾಗಿತ್ತು.[೧೫][೧೬]

ಆಗಿನ ರೊಮನ್ ಕಾಲದಲ್ಲಿ ಉಣ್ಣೆ ಲೈನನ್ ಮತ್ತು ಚರ್ಮದ ಉಡುಪುಗಳ ಯುರೊಪಿಯನ್ ರನ್ನು ಕಾಣಬಹುದಿತ್ತು.ಭಾರತದ ಹತ್ತಿ ಆಗ ಕುತೂಹಲದ ವಿಷಯವಾಗಿತ್ತು,ಆಗ ರೇಷ್ಮೆಯನ್ನು ಚೀನಾದ ಸಿಲ್ಕ್ ರೋಡ್ ನಿಂದ ಆಮದು ಮಾಡಿಕೊಳ್ಳಲಾಗುತಿತ್ತು,ಅದು ಆಗ ಐಷಾರಾಮಿ ವಿಷಯವಾಗಿತ್ತು. ಪ್ಲಿನಿ ದಿ ಎಲ್ಡರ್ ಎಂಬಾತ ತನ್ನ ನ್ಯಾಚರಲ್ ಹಿಸ್ಟರಿಯಲ್ಲಿ ದಾಖಲಿಸಿದ ಪ್ರಕಾರ ಟಾರೆಂಟಮ್ (ರೊಮನ್ )ಕಾಲದಲ್ಲಿ ಉತ್ತಮ ಗುಣಮಟ್ಟದ ಉಣ್ಣೆಯನ್ನು ಸಿದ್ದಪಡಿಸಿದ ಉದಾಹರಣೆ ಇದೆ.ಅಯ್ಕೆ ಮಾಡಿದ ನಿಗದಿತ ಕುರಿ-ಮೇಕೆಗಳ ಸಾಕಿ,ಪೋಷಿಸಿ ಅವುಗಳಿಂದ ಇದನ್ನು ಉತ್ಪಾದಿಸಲಾಗಿದೆ.

ಮಧ್ಯಯುಗದ ಕಾಲದಲ್ಲಿ ವ್ಯಾಪಾರಿ ಸಂಪರ್ಕಗಳು ವಿಸ್ತರಿಸಲ್ಪಟ್ಟವು.ಆಗಿನ ಶ್ಯಾಂಪೇನ್ ಫೇರ್ಸ್ ಅಂದರೆ ಫ್ರೆಂಚ್ ಕಾಲದ ವ್ಯಾಪಾರ ಮೇಳಗಳು ನಡೆದು ಸಣ್ಣ ಸಣ್ಣ ಪ್ರಾಂತಗಳಲ್ಲಿ ಉತ್ಪಾದಿಸಿದ ಉಣ್ಣೆಯನ್ನು ವ್ಯಾಪಾರಕ್ಕಾಗಿ ತರುತ್ತಿದ್ದರು.ಈ ಮೇಳಗಳು ನೇಪಲ್ಸ್ ,ಸಿಸಿಲಿ,ಸೈಪ್ರಿಸ್ ,ಮಜೊರಿಕಾ,ಸ್ಪೇನ್ ,ಅಲ್ಲದೇ ಕನ್ ಸ್ಟಂಟಿನೋಪಲ್ ವರೆಗೂ ವಿಸ್ತರಿಸಿದ್ದವು.[೧೭] ನಂತರ ಈ ಉಣ್ಣೆ ವ್ಯಾಪಾರವು ಗಂಭೀರ ರೂಪದ ಆರ್ಥಿಕ ವಹಿವಾಟಾಗಿ ಬಂಡವಾಳಕ್ಕೆ ಮೂಲವಾಯಿತು. ಹದಿಮೂರನೆಯ ಶತಮಾನದಲ್ಲಿ ಉಣ್ಣೆ ವ್ಯಾಪಾರವು ಕೆಳಮಟ್ಟದ ದೇಶಗಳಲ್ಲಿ ಜನಪ್ರಿಯವಾಯಿತು;ಇದು ಕೇಂದ್ರ ಇಟಲಿಯಲ್ಲಿಯೂ ತನ್ನ ಪ್ರಭಾವ ಬೀರಿತು.16 ನೆಯ ಸಹತಮಾನದ ವರೆಗೂ ಇಟಲಿ ಪ್ರಧಾನ ಸ್ಥಾನ ವಹಿಸಿ ನಂತರ ಅದು ರೇಷ್ಮೆ ಕೃಷಿಯೆಡೆಗೆ ವಾಲಿತು.[೧೭] ಆಗಿನ ಕೈಗಾರಿಕಾ ಅಭಿವೃದ್ಧಿ-ಪೂರ್ವದ ಕಾಲದಲ್ಲಿ ವ್ಯಾಪಾರ-ಆರ್ಥಿಕತೆಯು ಇಂಗ್ಲಿಷ್ ಕಚ್ಚಾ ಉಣ್ಣೆ ರಫ್ತಿಗೆ ಸಂಬಂಧಿಸಿದ್ದಾಗಿತ್ತು.ಶೀಪ್ ವಾಕ್ಸ್ ಆಫ್ ಕ್ಯಾಸ್ಟೈಲ್ ಅಂದರೆ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಉಣ್ಣೆಗಾಗಿ ಕುರಿ ಸಾಕಾಣಿಕೆ ವಿಫುಲವಾಗಿತ್ತು.ಹದಿನೈದನೇ ಶತಮಾನದಲ್ಲಿ ಬ್ರಿಟಿಶ್ ಕ್ರೌನ್ ಯುವರಾಣಿ ರಾಜ್ಯಕ್ಕೆ ಇದರ ರಫ್ತು ಪ್ರಮುಖ ಆದಾಯ ತರುತಿತ್ತು.ಅದರಂತೆ 1275 ರ ಸುಮಾರಿಗೆ ಉಣ್ಣೆ ರಫ್ತಿನ ಮೇಲೆ "ಗ್ರೇಟ್ ಕಸ್ಟಮ್ "ಎಂಬ ಹೆಸರಲ್ಲಿ ತೆರಿಗೆ ವಿಧಿಸಲಾಯಿತು. ಇಂಗ್ಲಿಷ್ ಆರ್ಥಿಕತೆಯ 14 ನೆಯ ಶತಮಾನದ ಅವಧಿಯಲ್ಲಿ ಇದು ಎಷ್ಟು ಪ್ರಭಾವಿತವಾಗಿತ್ತೆಂದರೆ ಹೌಸ್ ಆಫ್ ಲಾರ್ಡ್ಸ್ ನ ಹಿರಿಯ ಅಧಿಕಾರಿಯ ಆಸನ ಕೂಡಾ ಉಣ್ಣೆಯ ಕವಚದಿಂದ ನಿರ್ಮಿಸಲಾಗಿತ್ತು.ಆತ ಕುಳಿತುಕೊಳ್ಳುವ ಆಸನವನ್ನು "ವುಲ್ ಸ್ಯಾಕ್ "ಎನ್ನಲಾಗುತಿತ್ತು.

ಈ ಮೂಲಕ ಆರ್ಥಿಕತೆ ಪರಿಗಣನೆಯು ಅಧಿಕಾರಿಶಾಹಿ ಸದನಗಳಲ್ಲಿ ಚರ್ಚೆಗೆ ಬರಲಾರಂಭಿಸಿದಾಗ ಉಣ್ಣೆ ಬಗ್ಗೆ ಪ್ರಸ್ತಾಪಿಸಲಾಗುತಿತ್ತು.ಹನ್ನೆರಡನೆ ಶತಮಾನ ಮತ್ತು ಹದಿಮೂರನೆಯ ಶತಮಾನದ ಆರಂಭದಲ್ಲಿ ದೊಡ್ಡ ಪ್ರಮಾಣದ ಭೂಪ್ರದೇಶ ಖರೀದಿಸಿ ಅಲ್ಲಿ ಕುರಿ ಸಾಕಣೆ ಉಣ್ಣೆ ತೆಗೆಯುವುದು ಸಾಮಾನ್ಯವಾಗಿತ್ತು.ಆಗ ಕಾರ್ಮಿಕರ ಕೊರತೆ ಇದ್ದರೂ ಲೆಕ್ಕಿಸದೇ ಇದರ ಕೃಷಿ ಮಾಡಲಾಗುತಿತ್ತು. ಕಚ್ಚಾ ಉಣ್ಣೆಯನ್ನು ಶೇಖರಿಸಿ ಅಂಡಿಗೆಗಳಲ್ಲಿ ಹಾಕಿ ಉತ್ತರ ಸಮುದ್ರ ಬಂದರುಗಳಿಂದ ಹಡಗಿನ ಮೂಲಕ ಫ್ಲ್ಯಾಂಡರ್ಸ್ ನ ಜವಳಿ ಪಟ್ಟಣಗಳಿಗೆ ಕಳಿಸಲಾಗುತಿತ್ತು.ಸುಮಾರಾಗಿ ಯಪ್ರೆಸ್ ಮತ್ತು ಘೆಂಟ್ ಪ್ರದೇಶಗಳಿಗೆ ಕಳಿಸಿ ಅವುಗಳಿಗೆ ಬಣ್ಣ ಹಾಕಿ ಬಟ್ಟೆಗೆ ಸಿದ್ದಗೊಳಿಸುತ್ತಿದ್ದರು. ಆ ವೇಳೆಗೆ ಬ್ಲ್ಯಾಕ್ ಡೆತ್ ಎಂಬ ಇಂಗ್ಲಿಷ್ ಜವಳಿ ಉದ್ಯಮದ ಸಂಕಷ್ಟವಿದ್ದರೂ ಅದು ಕೈಗಾರಿಕೆಗೆ ಉಣ್ಣೆ [೧೮]ಉತ್ಪನ್ನದಲ್ಲಿ 10% ರಷ್ಟು ತನ್ನ ಕೊಡುಗೆ ನೀಡಿತ್ತು.ಹದಿನೈದನೆಯ ಶತಮಾನದಲ್ಲಿ ಇಂಗ್ಲಿಷ್ ಜವಳಿ ವ್ಯಾಪಾರ ಬೆಳವಣಿಗೆ ಕಂಡಿತ್ತು.ಆದರೆ ಉಣ್ಣೆ ರಫ್ತನ್ನು ಉತ್ತೇಜಿಸಲಾಗಿರಲಿಲ್ಲ. ಕಳೆದ ಶತಮಾನದಿಂದಲೂ ಉಣ್ಣೆಯ ವ್ಯಾಪಾರ ಅಥವಾ ಅದನ್ನು ಹೂಳುವ ಸಮಯದಲ್ಲಿ ಬಳಸುವುದನ್ನು ನಿಯಂತ್ರಿಸಲಾಗುತಿತ್ತು. ಒಂದು ದೇಶದಿಂದ ಉಣ್ಣೆಯನ್ನು ಕಳ್ಳಸಂತೆಯಲ್ಲಿ ಮಾರುವುದನ್ನು ಗೂಬೆತನ ಎನ್ನಲಾಗುತಿತ್ತಲ್ಲದೇ,ಒಂದು ಕಾಲದಲ್ಲಿ ಈ ಅಪರಾಧಕ್ಕೆ ಕೈಯೊಂದನ್ನು ಕಡಿಯಲಾಗುತಿತ್ತು. ನಂತರ ಉತ್ತಮ ಇಂಗ್ಲಿಷ್ ಉಣ್ಣೆಯು ರೇಷ್ಮೆಯೊಂದಿಗೆ ಪೈಪೋಟಿಗಿಳಿಯಬೇಕಾಯಿತು.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಸ್ಪರ್ಧೆ ಪ್ರಾರಂಭವಾಯಿತು.ನೇವಿಗೇಶನ್ ಕಾನೂನುಗಳ ಮೂಲಕ ಇದನ್ನು ನಿಯಂತ್ರಿಸಲಾಯಿತು.ನಂತರ 1699 ರಲ್ಲಿ ಇಂಗ್ಲಿಷ್ ಉಣ್ಣೆಯನ್ನು ಕೇವಲ ಇಂಗ್ಲಿಷ್ ರಿಗೆ ಮಾತ್ರ ಮಾರಾಟ ಮಾಡುವಂತೆ ಕಟ್ಟಳೆ ವಿಧಿಸಲಾಯಿತು.

ಉಣ್ಣೆಯ ಉತ್ಪನ್ನಗಳಿಗೆ ಪ್ರೊತ್ಸಾಹಿಸಲು ಬಣ್ಣ ಹಾಕುವುದು ಮತ್ತು ಅದಕ್ಕೆ ಹೊಳಪು ನೀಡುವ ಭರಾಟೆ ಸುರುವಾಯಿತು. ಪ್ರತಿಯೊಂದು ಜವಳಿ ವ್ಯಾಪಾರ ಕೇಂದ್ರದಲ್ಲಿ ಉಣ್ಣೆ ಸಿದ್ದಪಡಿಸುವುದು ಉಪವೃತ್ತಿಗಳಲ್ಲಿ ವಿಂಗಡಣೆಯಾಯಿತು.ಇದನ್ನು ಇಂಗ್ಲಿಷ್ ರು "ಪುಟಿಂಗ್ ಔಟ್ ಸಿಸ್ಟೆಮ್ " ಅಂದರೆ ಇದರ ವ್ಯಾಪಾರಿ ವಿವಿಧ ಹಂತಗಳ ವಿಭಜನೆ ಜಾರಿಯಾಯಿತು.ಅದನ್ನೇ "ಗುಡಿ ಕೈಗಾರಿಕೆ" ಎಂದೂ ಇದನ್ನು ಜರ್ಮನ್ ರು ವರ್ಗಾಸ್ ಪದ್ದತಿ ಎಂದು ಕರೆದರು. ಈ ಪದ್ದತಿಯಲ್ಲಿ ಕಚ್ಚಾ ಉಣ್ಣೆಯನ್ನು ವ್ಯಾಪಾರಿ ನೀಡಿ ಅದು ಪೂರ್ಣಗೊಂಡು ಹ್ಯಾರೀಸ್ ನೇಯ್ಗೆಗಳು ಆಗಿ ಅಂದರೆ ಸಂಪೂರ್ಣ ಸಿದ್ದಗೊಂಡ ನಂತರ ಖರೀದಿಸುತ್ತಿದ್ದ. ಕುಶಲಕಲೆಗಾರರಿಗೆ ಲಿಖಿತ ಒಪ್ಪಂದಗಳನ್ನು ಮಾಡಿಸಲಾಗುತಿತ್ತು. ಫೆರ್ನಾಂಡ್ ಬ್ವ್ರುಡೆಲ್ ಎಂಬುವವರು ಈ ಪದ್ದತಿಯು ಹದಿಮೂರನೆಯ ಶತಮಾನದಲ್ಲಿತ್ತೆಂದು ಉಲ್ಲೇಖಿಸುತ್ತಾರೆ.ಆಗಿನ ಆರ್ಥಿಕ ಅಭಿವೃದ್ಧಿಯನ್ನು 1275 ರ ಲೇಖನಗಳಲ್ಲಿ ಬರೆದಿದ್ದಾರೆ.ಆ ಪದ್ದತಿ ಸಾಕಷ್ಟು ಜನಪ್ರಿಯವಾಗಿತ್ತು.ಇದು ಕೆಲವು ಷರತ್ತು ಮತ್ತು ಕಟ್ಟಳೆಗಳಿಗೂ ಒಳಗಾಗಿತ್ತು.

ಆಗಿನ 14 ಮತ್ತು 16 ನೆಯ ಶತಮಾನದ ನವಕ್ರಾಂತಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಿಸಿ,ಮೆಡಿಕಿ ಎಂಬ ಬ್ಯಾಂಕ್ ವಹಿವಾಟುಗಳು ಫ್ಲೊರೆನ್ಸ್ ನಲ್ಲಿ ಬೆಳಕಿಗೆ ಬಂದವು.ಉಣ್ಣೆ ವ್ಯಾಪಾರವನ್ನು ಗುರಿಯಾಗಿಟ್ಟುಕೊಂಡು ಬ್ಯಾಂಕುಗಳು ಪ್ರವರ್ಧಮಾನಕ್ಕೆ ಬಂದವು,ಅಂದರೆಸಣ್ಣ ವ್ಯಾಪಾರಿಗಳ ಉಣ್ಣೆ ಒಕ್ಕೂಟ ಆರ್ಟೆ ಡೆಲ್ಲಾ ಲಾನಾದ ಉಸ್ತುವಾರಿಯಲ್ಲಿ ಮತ್ತು ಫ್ಲೊರೆನ್ಸಾದ ಜವಳಿ ನೀತಿ-ಸೂತ್ರಗಳ ಮೇಲೆ ಇವು ಕಾರ್ಯನಿರ್ವಹಿಸಿದವು. ಫ್ರ್ಯಾನ್ಸಿಸ್ಕೊ ಡಾತಿನಿ "ವ್ಯಾಪಾರಿ ಪ್ರಾಟೊ ಒಕ್ಕೂಟ" 1883ರಲ್ಲಿ ಪ್ರಾರಂಭಗೊಂಡು ಒಂದು ಆರ್ಟೆ ಡೆಲ್ಲಾ ಲಾನಾ ವನ್ನು ಸಣ್ಣ ಪಟ್ಟಣ ತುಸ್ಕಾನ್ ಗಾಗಿ ಪ್ರಾರಂಭಿಸಿದವು. ಕ್ಯಾಸ್ಟಿಲಾದಲ್ಲಿನ ಕುರಿ ಮೇಯಿಸುವ ಹುಲ್ಲುಗಾವಲುಗಳು ಮೆಸೆಟಾ ದ ಅದೃಷ್ಟ ತೆರೆದವು.ಇಬೆರಿಯನ್ ದ್ವೀಪದ ಈ ಪ್ರದೇಶದಲ್ಲಿ ಹದಿನಾರನೆಯ ಶತಮಾನದಲ್ಲಿ ಆಗ ಒಂದುಗೂಡಿದ್ದ ಸ್ಪೇನ್ ಗೆ ರಾಜಪ್ರಭುತ್ವದ ಅನುಮತಿಯೊಂದಿಗೆ ಮೆರಿನೊ ಎಳೆ ಕುರಿಮರಿಗಳ ಉಣ್ಣೆ ರಫ್ತಿಗೆ ಪರವಾನಿಗೆ ನೀಡಲಾಯಿತು. ಸ್ಪೇನ್ ಮೂಲಾಧಾರಿತ ಜರ್ಮನ್ ಉಣ್ಣೆ ಮಾರುಕಟ್ಟೆಯು ಬ್ರಿಟಿಶ್ ಉಣ್ಣೆಯನ್ನು ಹಿಂದೆಹಾಕಲು ಕೆಲಕಾಲ ಕಾಯಬೇಕಾಯಿತು. ಆಸ್ಟ್ರೇಲಿಯಾದ ಆರ್ಥಿಕತೆಯು ಕುರಿ ಸಾಕಣೆ ಮತ್ತು ಬರಬರುತ್ತಾ ಆಸ್ಟ್ರೇಲಿಯನ್ ಉಣ್ಣೆ ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ 1845 ರ ಸುಮಾರಿಗೆ ಜರ್ಮನಿಯನ್ನು ಹಿಂದೆ ಹಾಕಿತು.ಬ್ರ್ಯಾಡ್ ಫೊರ್ಡ್ ಗೆ ತನ್ನ ಉಣ್ಣೆ ರಫ್ತಿನ ಮೂಲಕ ಉಣ್ಣೆಯ ಉತ್ಪಾದಕತೆಯಲ್ಲಿ ಹೃದಯ ಮಟ್ಟದ ಸ್ಥಾನ ಗಳಿಸಿತು.

ಒಂದು ವಿಶ್ವ ಮಹಾಯುದ್ದ I ಕಾಲದ ಯುನೈಟೆಡ್ ಸ್ಟೇಟ್ಸ್ ನ ಡಿಪಾರ್ಟ್ ಮೆಂಟ್ ಆಫ್ ಅಗ್ರಿಕಲ್ಚರ್ ಮಕ್ಕಳಿಗೆ ಕುರಿ ಸಾಕಣೆ ಉತ್ತೇಜಿಸುವ ಭಿತ್ತಿ ಚಿತ್ರ

ಸಿಥೆಂಟಿಕ್ ಎಳೆಗಳ ಉಪಯೋಗ ಹೆಚ್ಚಾದಂತೆ ಉಣ್ಣೆ ತನ್ನ ಬೇಡಿಕೆ ಕಳೆದುಕೊಂಡು,ಅದೀಗ ಮೊದಲಿನ ಉತ್ಪಾದನಾ ಸ್ಥಾನ ಪಡೆಯಲಿಲ್ಲ. ಉಣ್ಣೆಯ ಬೆಲೆಗಳು 1966 ರಿಂದ ಕುಸಿಯಲಾರಂಭಿಸಿದವು.ಸುಮಾರು 40% ರಷ್ಟು ಕಂಡ ಬೆಲೆ ಇಳಿಕೆ ಮತ್ತಷ್ಟು ಇಳಿಕೆ ಕಾಣಲಾರಂಭಿಸಿತು. ಹೀಗೆ ಕುರಿಸಾಕಣೆದಾರರು ಕೇವಲ ಉಣ್ಣೆ ಉತ್ಪನ್ನಗಳಿಗೆ ವಾಲದೇ ಅದರ ಮೌಂಸದ ವ್ಯಾಪಾರಕ್ಕೆ ಆರಂಭಕ್ಕೆ ನಾಂದಿ ಹಾಡಿದರು.[೧೯][೨೦][೨೧]

ಸೂಪರ್ ವಾಶ್ ವುಲ್ ಅಂದರೆ (ತೊಳೆಯಬಹುದಾದ ಉಣ್ಣೆ) ತಂತ್ರಜ್ಞಾನ 1970 ರಲ್ಲಿ ಪರಿಚಯವಾಗಿ,ಅದನ್ನು ಯಂತ್ರಗಳ ಒರೆಸಲು ಸ್ಥಳಗಳನ್ನು ಒಣದಾಗಿಸಲು ಬಳಸಲಾಯಿತು. ಇದರ ಎಳೆಗಳನ್ನು ಆಮ್ಲದ ಮಿಶ್ರಣ ಮಾಡಿ "ಉದ್ದ ಎಳೆಗಳು"ಕೈಗೆ ನಿಲುಕುವ ಹಾಗೆ ಇದನ್ನು ತಯಾರಿಸಲಾಯಿತು,ಅಲ್ಲದೇ ಪಾಲಿಮರ್ ನ್ನು ಕವಚವನ್ನಾಗಿಸಿ ಇದು ಮುದುಡಿಯಾಗದಂತೆ ಸಿದ್ದಪಡಿಸಲಾಯಿತು. ಈ ಸಂಸ್ಕರಣವು ಸಿಂಥೆಟಿಕ್ ಸಾಮಗ್ರಿಗಿಂತ ಹೆಚ್ಚು ಬಾಳಿಕೆ ಬರುವಂತಾಯಿತು.ನಂತರ ಅದು ತನ್ನ ಮೊದಲಿನ ಸ್ವರೂಪ ಉಳಿಸಿಕೊಂಡಿತು.[೨೨]

ಕಳೆದ 2004 ರ ಡಿಸೆಂಬರ್ ನಲ್ಲಿ ಒಂದು ಅಂಡಿಗೆಯಷ್ಟು ವಿಶ್ವದ ಅತ್ಯಂತ ಉತ್ತಮ ದರ್ಜೆಯ ಉಣ್ಣೆಯು ಸರಾಸರಿ 11.8 ಮೈಕ್ರಾನ್ ಹೊಂದಿದ್ದ; ಇದು ಹರಾಜೊಂದರಲ್ಲಿ ಪ್ರತಿಕಿಲೊಗ್ರಾಮ್ ಗೆ $3,000 ಗೆ ಮಾರಾಟವಾಯಿತು.ಮೆಲ್ಬೊರ್ನ್ ನ ವಿಕ್ಟೋರಿಯಾದಲ್ಲಿ ನಡೆದ ಈ ಮಾರಾಟ ಇತ್ತೀಚಿನದು ಎಂದು ಹೇಳಲಾಗುತ್ತದೆ. ಈ ಉಣ್ಣೆ ರಾಶಿಯನ್ನು ಪರಿಶೀಲಿಸಿದಾಗ ಅದರ ಇಳುವರಿ 74.5% ಅಲ್ಲದೇ 68 mm ಉದ್ದದ ಎಳೆಗಳನ್ನು ಪಡೆದಿತ್ತು.ಪ್ರತಿ ಕಿಲೊಟೆಕ್ಸ್ ಬಲಕ್ಕೆ 40 ನಿವ್ಟನ್ಸ್ ಗಳ ಗಾತ್ರ ಮಿತಿ ಹೊಂದಿತ್ತು. ಹೀಗಾಗಿ ಈ ಬೇಲ್ ನ ಫಲಿತಾಂಶ $AUD279,000 ಆಗಿತ್ತು.[೨೩] ಈ ಹರಾಜು ಗೊಂಡ ಅತ್ಯುತ್ತಮ ಮೆದು ಉಣ್ಣೆಯನ್ನು ಆ ಋತುವಿನಲ್ಲಿ ದಾಖಲೆ ಎನ್ನುವಂತೆ 2008 ರಲ್ಲಿ ಪ್ರತಿ ಕಿಲೊಕ್ಕೆ 269,000 ಸೆಂಟ್ಸ್ ನಂತೆ ಮಾರಲಾಯಿತು. ಈ ಉಣ್ಣೆ ಅಂಡಿಗೆಯನ್ನು ಹಿಲ್ಲ್ ಕ್ರೆಸ್ಟನ್ ಪೈನ್ ಹಿಲ್ ಪಾರ್ಟ್ನರಶಿಪ್ ಉತ್ಪಾದಿಸಿದ್ದು ಇದು 11.6 ಮೈಕ್ರಾನ್ಸ್ ತೂಗುತಿತ್ತು.ಇಳುವರಿಯು 71.1% ಆಗಿ 43 ನಿವ್ಟಾನ್ಸ್ ಪ್ರತಿಕಿಲೊಗೆ ಆಗಿತ್ತು. ಈ ಅಂಡಿಗೆಯು ಒಟ್ಟು $247,480 ಮೌಲ್ಯ ಪಡೆದು ಭಾರತಕ್ಕೆರಫ್ತು ಮಾಡಲಾಯಿತು.[೨೪]

ನಂತರ 2007 ರ ಹೊತ್ತಿಗೆ ಜಪಾನ್ ನಲ್ಲಿ ಹೊಸ ರೂಪದ ಉಣ್ಣೆಯು ಹುಟ್ಟಿಕೊಂಡು ಅದನ್ನು ನೀರಿನಲ್ಲಿ ತೊಳೆದರೂ ಅದು ಬೇಗನೆ ಒಣಗುವ ಮತ್ತು ಯಾವುದೇ ಇಸ್ತ್ರಿ ಮಾಡುವ ಅವಶ್ಯವಿಲ್ಲ. ಈ ಸಿದ್ದ ಉಡುಪನ್ನು ಮೆರಿನೊ ಉಣ್ಣೆಯಿಂದ ತಯಾರಿಸಲಾಗಿದೆ.ಸೂಟ್ ಗಳು,ಶರಾಯಿಗಳು ಮತ್ತು ಸ್ಕರ್ಟ್ಸ್ ಇತ್ಯಾದಿಗಳನ್ನು ಸರಳ ಮನೆ ಬಳಕೆಯ ಸ್ವಚ್ಛಗೊಳಿಸುವ ವಸ್ತುಗಳಿಂದ ಚೊಕ್ಕಟಗೊಳಿಸಬಹುದಾಗಿದೆ.[೨೫]

ಕಳೆದ 2006 ರ ಡಿಸೆಂಬರ್ ನಲ್ಲಿ ಯುನೈಟೆಡ್ ನೇಶನ್ಸ್ ನ ಸಾಮಾನ್ಯ ಸಭೆಯಲ್ಲಿ ಇಂಟರ್ ನ್ಯಾಶನಲ್ ಇಯರ್ ಆಫ್ ನ್ಯಾಚುರಲ್ ಫೈಬರ್ಸ್ ಎಂದು ಘೋಷಣೆ ಮಾಡಿ ಇದೇ ರೀತಿಯ ನೈಸರ್ಗಿಕ ನೂಲಿನ ದಾರಗಳ ಇಳುವರಿ ಹೆಚ್ಚಳಕ್ಕೆ ಪ್ರೊತ್ಸಾಹಿಸುವಂತೆ ಕರೆ ನೀಡಿತು.

ಉತ್ಪಾದನೆ (ಇಳುವರಿ)

ಜಾಗತಿಕ ಮಟ್ಟದ ವಾರ್ಷಿಕ ಉಣ್ಣೆ ಉತ್ಪಾದನೆಯು ಸುಮಾರು 1.3 ದಶಲಕ್ಷ ಟನ್ನಗಳು,ಇದರಲ್ಲಿ 60% ರಷ್ಟು ಸಿದ್ದ ಉಡುಪಿಗೆ ಹೋಗುತ್ತದೆ. ಆಸ್ಟ್ರೇಲಿಯಾ ಉಣ್ಣೆ ಇಳುವರಿಗೆ ಮೊದಲ ಮುಂಚೂಣಿಯಲ್ಲಿದೆ.ಹೆಚ್ಚಾಗಿ ಮೆರಿನೊ ಸಣ್ಣ ಕುರಿಗಳ ಕೂದಲಿಂದ ಉಣ್ಣೆ ತೆಗೆಯುವಲ್ಲಿ ಪ್ರಸಿದ್ದವಾಗಿದೆ. ನ್ಯುಜಿಲ್ಯಾಂಡ್ ಎರಡನೆಯ ಸ್ಥಾನದಲ್ಲಿದ್ದು ಇದು ಮಿಶ್ರ ತಳಿಯ ಕುರಿಗಳ ಉಣ್ಣೆಗೆ ಪ್ರಖ್ಯಾತಿ ಪಡೆದಿದೆ. ಉಣ್ಣೆ ಉತ್ಪಾದನೆಯಲ್ಲಿಚೀನಾ ಮೂರನೆಯ ಸ್ಥಾನದಲ್ಲಿದೆ. ಇದರ ತಳಿಗಳೆಂದರೆ ಲಿಂಕ್ಲೊನ್,ರೊಮ್ನಿ,ಟುಕಿಡೇಲ್, ಡ್ರೈಸ್ ಡೇಲ್ ಮತ್ತು ಎಲ್ಲಿಯೊಟ್ ಡೇಲ್ಇವುಗಳೆಲ್ಲ ಬಹುತೇಕ ಕಚ್ಚಾ ಉಣ್ಣೆ ಉತ್ಪಾದಿಸಿ ಕಾರ್ಪೆಟ್ ಗಳ ತಯಾರಿಕೆಯಲ್ಲಿ ಹೆಚ್ಚು ಉಪಯೋಗಿಸಲಾಗುತ್ತಿದೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿ,ಟೆಕ್ಸಾಸ್,ನಿವ್ ಮೆಕ್ಸಿಲೊ ಮತ್ತುಕೊಲೊರಾಡೊ ಗಳಲ್ಲಿ ದೊಡ್ಡ ಪ್ರಮಾಣದ ಕುರಿ ಸಾಕಾಣಿಕೆ ಇದೆ.ಅವುಗಳ ಮುಖ್ಯ ಗುಣಮಟ್ಟವು ರಾಂಬೌಲೆಟ್ (ಅಥವಾ ಫ್ರೆಂಚ್ ಮೆರಿನೊ ಆಗಿದೆ.) ಸಣ್ಣ ಪ್ರಮಾಣದಲ್ಲಿ ಕುರಿ ಕೂದಲು ಬಳಸಿ ಅದರ ಪ್ರಮಾಣದಲ್ಲೇ ವ್ಯಾಪಾರ ಮಾಡುವ ಪ್ರವೃತ್ತಿ ಬೆಳೆಯುತ್ತಿದೆ.ಇದು ಕೈನೇಯ್ಗೆಯ ಮಾರುಕಟ್ಟೆಯ ಬೇಡಿಕೆ ಪೂರೈಸುತ್ತದೆ. ಇಂತಹ ಸಣ್ಣ ರೈತಾಪಿ ವರ್ಗವು ವಿವಿಧ ಪ್ರಕಾರಗಳನ್ನು ಗ್ರಾಹಕರಿಗೆ ಆಯ್ಕೆ ಮಾಡಲು ಅನುಕೂಲ ಒದಗಿಸುತ್ತದೆ.

1905 ಇಲ್ಸ್ಟ್ರೇಶನ್ ಆಫ್ ಎ ಟಿಬೆಟಿನ್ ಸ್ಪಿನಿಂಗ್ ವುಲ್.(ಟಿಬೆಟಿನ ನೇಯ್ಗೆ ಉಣ್ಣೆ ಪ್ರದರ್ಶನ)

ಜಾಗತಿಕ ಉಣ್ಣೆ ನೇಯ್ಗೆ (ಒಟ್ಟಾರೆ ನೂಲು ನೇಯುವುವಿಕೆ) 2004/2005[೨೬]

  1.  ಆಸ್ಟ್ರೇಲಿಯಾ: 25% ಜಾಗತಿಕ ನೂಲು ಉಣ್ಣೆwoolclip (475 ದಶಲಕ್ಷ ಕಿಗ್ರಾ ಕಚ್ಚಾ, 2004/2005)
  2.  ಚೀನಾ: 18%
  3.  ನ್ಯೂ ಜೀಲ್ಯಾಂಡ್: 11%
  4.  ಅರ್ಜೆಂಟೀನ: 3%
  5.  ಟರ್ಕಿ: 2%
  6.  ಇರಾನ್: 2%
  7.  ಯುನೈಟೆಡ್ ಕಿಂಗ್ಡಂ: 2%
  8.  ಭಾರತ: 2%
  9.  ಸುಡಾನ್: 2%
  10.  ದಕ್ಷಿಣ ಆಫ್ರಿಕಾ: 1%
  11.  ಅಮೇರಿಕ ಸಂಯುಕ್ತ ಸಂಸ್ಥಾನ: 0.77%

ಒಟ್ಟು ಮಿಶ್ರಿತ ಸುವ್ಯವಸ್ಥೆಯ ಉಣ್ಣೆ ಸದ್ಯ ಜನಪ್ರಿಯತೆ ಗಳಿಸುತ್ತಿದೆ. ಇದರ ಪೂರೈಕೆ ಸೀಮಿತವಾಗಿದ್ದು ಇದು ಕೇವಲ ಆಸ್ಟ್ರೇಲಿಯಾ ನ್ಯುಜಿಲ್ಯಾಂಡ್ ಗಳಿಂದ ಬರುತ್ತದೆ.[೨೭] ಇದರ ಸಿದ್ದ ಉಡುಪು ಸರಳವಾಗಿದ್ದು,ಜೊತೆಗೆ ಇನ್ನಿತರ ಉತ್ಪನ್ನಗಳೂ ದುಬಾರಿಯಾಗಿವೆ. ಉಣ್ಣೆಯು ಪರಿಸರೀಯವಾಗಿ ಆದ್ಯತೆ ಪಡೆದ ವಸ್ತು ಆಗಿದೆ.ಇನ್ನುಳಿದ ಪೆಟ್ರೊಲಿಯಮ್ ಮೂಲದ ನೈಲಾನ್ ಅಥವಾ ಪಾಲಿಪೊಪ್ಲಿನ್ ನನ್ನು ಕೂಡಾ ಕಾರ್ಪೆಟ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ನೈಸರ್ಗಿಕದೊಂದಿಗೆ ಫಾರ್ಮಲಡಿಹೈಡ್ ನ್ನು ಉಪಯೋಗಿಸಿ ದಿನಬಳಕೆ ವಸ್ತುಗಳ ತಯಾರಿಸಲಾಗುತ್ತದೆ.ಇವುಗಳು ಯಾವುದೇ ಅಂಟು ಪದಾರ್ಥಗಳ ಹೊಂದಿರುವುದಿಲ್ಲ.

ಪ್ರಾಣಿ ಹಕ್ಕುಗಳ ಸಮೂಹಗಳು ಉಣ್ಣೆ ಉತ್ಪನ್ನಗಳ ಬಗ್ಗೆ ನಿಗಾವಹಿಸಿದ್ದು ಅದರಲ್ಲೂ ಮೆಲೆಸಿಂಗ್ ಎಳೆಗಳ ನೂಲಿಗೆ ಹೆಚ್ಚು ಗಮನ ಹರಿಸಿದೆ.

ಮಾರಾಟ

ಆಸ್ಟ್ರೇಲಿಯಾ

ಮೆರಿನೊ ಹರಾಜಿನಲ್ಲಿ ಉಣ್ಣೆ ಮಾದರಿಗಳು ಮಾರಾಟಕ್ಕೆ ನಿವ್ ಕ್ಯಾಸ್ಟಲ್ ನ ನಿವ್ ಸೌತ್ ವೇಲ್ಸ್ ನಲ್ಲಿ
ಉಣ್ಣೆ ಹರಾಜಿನಲ್ಲಿನ ಖರೀದಿದಾರರ ಕೊಠಡಿ ನಿವ್ ಕ್ಯಾಸ್ಟಲ್ ನಿವ್ ಸೌತ್ ವೇಲ್ಸ್

ಆಸ್ಟ್ರೇಲಿಯಾದಲ್ಲಿ ಮಾರಾಟವಾಗುವ 85% ರಷ್ಟು ಉಣ್ಣೆಯು ಹರಾಜುವಿನಲ್ಲಿ ಮಾರಾಟವಾಗುತ್ತದೆ. ಉಣ್ಣೆ ಮಾದರಿಗಳನ್ನು ಪ್ರತಿ ಅಂಡಿಗೆಯಿಂದ ಪರೀಕ್ಷಿಸಿ ಇದನ್ನು ಮಾರಾಟಕ್ಕೆ ಸಿದ್ದಪಡಿಸಲಾಗುತ್ತದೆ. ಖರೀದಿಗಾರರು ಪರೀಕ್ಷಿಸಲು,ನೋಡಲು ಅನುಕೂಲವಾಗುವಂತೆ ಸುಮಾರು 4 ಕಿಗ್ರಾ ನಷ್ಟು ಸ್ಯಾಂಪಲ್ ಪ್ರದರ್ಶಿಸಲಾಗುತ್ತದೆ. ದಿಆಸ್ಟ್ರೇಲಿಯನ್ ವುಲ್ ಎಕ್ಸ್ಚೇಂಜ್ (AWEX) ಮೊದಲು ಸಿಡ್ನಿ,ಮೆಲ್ಬೊರ್ನ್,ನಿವ್ ಕ್ಯಾಸ್ಟಲ್,ಮತ್ತು ಫ್ರೆಮೆಂಟಲ್ ಗಳಲ್ಲಿ ಪ್ರಧಾನ ಮಾರಾಟವನ್ನು ಏರ್ಪಡಿಸುತ್ತದೆ. ಆಸ್ಟ್ರೇಲಿಯಾದಾದ್ಯಂತ 80 ದಲ್ಲಾಳಿಗಳು ಮತ್ತು ಮಧ್ಯವರ್ತಿಗಳಿದ್ದಾರೆ.

ಆಸ್ಟ್ರೇಲಿಯಾದ ಸುಮಾರು 7% ರಷ್ಟು ಉಣ್ಣೆಯು ಉತ್ಪಾದನಾ ಸ್ಥಳದಲ್ಲಿ ಒಪ್ಪಂದದ ಮೇಲೆ ಮತ್ತು ಸ್ಥಳೀಯವಾಗಿ ಮಾರಾಟವಾಗುತ್ತದೆ. ಇದು ಇಳುವರಿದಾರರಿಗೆ ಸಾರಿಗೆ,ದಾಸ್ತಾನು ಮತ್ತು ಮಾರಾಟ ವೆಚ್ಚವನ್ನು ತಗ್ಗಿಸುತ್ತದೆ. ಈ ಪದ್ದತಿಯು ಸಣ್ಣ ಪ್ರಮಾಣದ ಮಾರಾಟಗಾರರಿಗೆ ಅನುಕೂಲ ಒದಗಿಸುವುದರಿಂದ ಹಲವರು ಇದಕ್ಕೆ ಆದ್ಯತೆ ನೀಡುತ್ತಾರೆ.ಉಳಿತಾಯ,ಮಾದರಿ ಪರೀಕ್ಷೆ ಹಾಗು ಇನ್ನಿತರ ವೆಚ್ಚಗಳಿಗೆ ಕಡಿವಾಣ ಹಾಕಬಹುದು.

ಸುಮಾರು 5% ರಷ್ಟು ಆಸ್ಟ್ರೇಲಿಯನ್ ಉಣ್ಣೆಯು ಇಂಟರ್ ನೆಟ್ ವಹಿವಾಟಿನಲ್ಲಿ ಎಲೆಕ್ಟ್ರಾನಿಕ್ ಆಫರ್ ಬೋರ್ಡ್ ಮೂಲಕ ಮಾರಾಟವಾಗುತ್ತದೆ. ಇದು ಇಳುವರಿದಾರರಿಗೆ ಬೆಲೆ ನಿಗದಿ,ಉಣ್ಣೆಯ ಮರು ಪಡೆಯುವಿಕೆ ಅಲ್ಲದೇ ಮಾರುಕಟ್ಟೆಯ ವಿಶಾಲ ವ್ಯಾಪ್ತಿಯನ್ನು ಪರಿಗಣಿಸಬಹುದಾಗಿದೆ. ಖರೀದಿದಾರರು ಸ್ಥಳದಲ್ಲಿ ಸ್ಯಾಂಪಲ್ ಪರೀಕ್ಷಿಸಿ ತಮಗೆ ತೃಪ್ತಿಯಾದ ನಂತರ ಕೊಳ್ಳಬಹುದು.ಇಲ್ಲಿ ಸುಮಾರು 97% ರಷ್ಟು ಉಣ್ಣೆ ಪರೀಕ್ಷೆಗೊಳಪಡದೇ ಮಾರಾಟ ಕಾಣುತ್ತದೆ.ಕಳೆದ 2009 ರ ಡಿಸೆಂಬರ್ ನಲ್ಲಿ 59% ರಷ್ಟು ಹರಾಜಿನಿಂದ ಬಂದು ಮಾರಾಟ ಕಂಡಿತು. ಇದರ ಉತ್ಪನ್ನದಾರರು ದಲ್ಲಾಳಿಗಳ ಮೂಲಕ ಮಾರಾಟ ಪ್ರಮಾಣ ಹಾಗು ಬೆಲೆಗಳ ನಿಷ್ಕರ್ಷೆ ಮಾಡುವ ಅವಕಾಶವಿದೆ.

ಟೆಂಡರ್ ಮೂಲಕ ಮಾರಾಟವು ಸಾಕಷ್ಟು ವೆಚ್ಚ ಕಡಿಮೆ ಮಾಡುವುದಲ್ಲದೇ ಉಣ್ಣೆಯ ಮಾದರಿ ಪ್ರಮಾಣವು ಕಡಿಮೆಯಾಗಿ ನಿಶ್ಚಿತ ಖರೀದಿದಾರರಿಗೆ ಅನುಕೂಲವಾಗುತ್ತದೆ ಕೆಲವು ಮಾರಾಟ ಸಂಸ್ಥೆಗಳು ಕನ್ ಸೈನ್ ಮೆಂಟ್ ದಲ್ಲಾಳಿ, ಗುತ್ತಿಗೆ ಆಧಾರದ ಮೇಲೆ ಉಣ್ಣೆ ಮಾರಾಟ ಮಾಡುತ್ತವೆ.

ಮುಂದುವರಿದ ಮಾರಾಟ: ಕೆಲವು ಖರೀದಿದಾರರು ಮೊದಲೇ ಉತ್ಪನ್ನಗಳಿಗಾಗಿ ಮುಂಗಡ ನೀಡಿ ಉಣ್ಣೆಯನ್ನು ತಮ್ಮ ಸ್ಥಳಗಳಿಗೆ ತರಿಸಿಕೊಳ್ಳುತ್ತಾರೆ. ಇದಕ್ಕಾಗಿ ಪ್ರಸ್ತುತ ಮಾರುಕಟ್ಟೆ ದರಗಳು ನಿಗದಿಯಾಗಿರುತ್ತವೆ ಬೇಡಿಕೆ ಕಾಲದಲ್ಲಿ ಮಾರಲಾಗುತ್ತದೆ. ಉತ್ತಮ ತಳಿಗಳ ಕೊಡುಗೆ ಮತ್ತು ರಿಯಾಯ್ತಿಗಳು ಮೈಕ್ರಾನ್ ನಲ್ಲಿನ ವ್ಯತ್ಯಾಸ,ಇಳುವರಿ,ಅದರ ನೀಡಿಕೆಯ ಅವಧಿಯ ಪ್ರಬಲತೆಯನ್ನು ಮಾಡುತ್ತವೆ.ಲಭ್ಯವಿರುವ ಮಾದರಿಗಳನ್ನೇ ಪರಿಶೀಲಿಸಿ ಖರೀದಿಸಲಾಗುತ್ತದೆ.[೨೮]

ಇನ್ನೊಂದು ಮಾರಾಟ ವಿಧಾನವೆಂದರೆ ನೇರವಾಗಿ ಉಣ್ಣೆ ಗಿರಣಿಗಳಿಗೆ ಮಾರಾಟ ಮಾಡುವುದು.

ಇತರ ದೇಶಗಳು

ದಿ ಬ್ರಿಟಿಶ್ ವುಲ್ ಮಾರ್ಕೆಟಿಂಗ್ ಬೋರ್ಡ್ UK ಕುಚ್ಚದ ಉಣ್ಣೆಗೆ ಒಂದು ಕೇಂದ್ರೀಯ ಪದ್ದತಿ ಅನುಸರಿಸುತ್ತದೆ.ಇದು ರೈತರಿಗೆ ಅಧಿಕ ಲಾಭದ ಸವಲತ್ತುಗಳನ್ನು ಜಾರಿ ಮಾಡುತ್ತದೆ.

ನ್ಯುಜಿಲ್ಯಾಂಡ್ ನಲ್ಲಿ ಅರ್ಧಕ್ಕಿಂತ ಕಡಿಮೆ ಉಣ್ಣೆಯು ಹರಾಜಿನಲ್ಲಿ ಮಾರಾಟವಾದರೆ ಉಳಿದ 45% ರಷ್ಟು ಇಳುವರಿದಾರರು ನೇರವಾಗಿ ಖಾಸಗಿ ಖರೀದಿದಾರರಿಗೆ ಮತ್ತು ಕೊನೆಯಂಚಿನ ಕೊಳ್ಳುಗನಿಗೆ ಮಾರುತ್ತಾರೆ.[೨೯] ನ್ಯುಜಿಲ್ಯಾಂಡ್ ನ ಕೆಲವು ವ್ಯಾಪಾರಿ ಸಂಸ್ಥೆಗಳು ಅಂದರೆ ಬ್ಲು ಹೌಸ್ ಯಾರ್ನ್ಸ್ ಇವುಗಳು ಆರ್ಗ್ಯಾನಿಕ್ ವುಲ್ ಮಾರಾಟದಲ್ಲಿ ತೊಡಗಿವೆ.

ಯುನೈಟೆಡ್ ಸ್ಟೇಟ್ಸ್ ನಲ್ಲಿ ಕುರಿ ಉತ್ಪನ್ನಗಳನ್ನು ಖಾಸಗಿ ಅಥವಾ ಸಹಕಾರಿ ಸಂಸ್ಥೆಗಳು,ದಾಸ್ತಾನು ಮಳಿಗೆಗಳು ಮಾರಾಟ ಮಾಡಿ ಒಟ್ಟು ಸೇರಿಸುತ್ತದೆ. ಆದರೆ ಎಲ್ಲ ಉಣ್ಣೆಯನ್ನು ಒಂದೆಡೆ ಸ್ಥಳೀಯ ಮಾರುಕಟ್ಟೆಗೆ ಸಾಗಿಸಿ ಅಲ್ಲಿಂದ ಮಾರಾಟ ಮಾಡಲಾಗುತ್ತದೆ. ಇಲ್ಲಿನ ಪರೀಕ್ಷೆಗಳು ಅದರ ಮಾದರಿಯನ್ನು ಅವಲಂಬಿಸಿ ಫಲಿತಾಂಶವು ಬರುತ್ತದೆ. ಆಮದು ಮಾಡಿಕೊಂಡ ಉಡುಪು ತಯಾರಿಕೆಗೆ ಬಳಸುವ ಉಣ್ಣೆ ಮತ್ತು ಕಾರ್ಪೆಯ್ ಉಣ್ಣೆ ಎರಡೂ ಕೇಂದ್ರ ಮಾರುಕಟ್ಟೆಗೆ ಹೋಗುತ್ತವೆ.ಇದನ್ನು ದೊಡ್ಡ ವ್ಯಾಪಾರಿಗಳು ಮತ್ತು ತಯಾರಕರು ನಿಭಾಯಿಸುತ್ತಾರೆ.[೩೦]

ಉಪಯೋಗಗಳು

ನಿವ್ ಸೌತ್ ವೇಲ್ಸ್ ನ ನಿವ್ ಕ್ಯಾಸ್ಟಲ್ ನ ಉಣ್ಣೆ ಸಿದ್ದ ಉಡುಪು ಮಳಿಗೆಯಲ್ಲಿನ ಮಾದರಿಗಳು

ತೊಡುವ ಉಡುಪಲ್ಲದೇ ಉಣ್ಣೆಯನ್ನು ಬ್ಲ್ಯಾಂಕೆಟ್ ಗಳಿಗಾಗಿ.ಕುದರೆ ಮೇಲಿನ ರಗ್ ಗಳಿಗಾಗಿ,ಆಸನದ ಬಟ್ಟೆಗಳಿಗಾಗಿ,ಕಾರ್ಪೆಟ್ ತಯಾರಿಕೆಗೆ,ಗೋಂದು ಹಾಕಿದ ಉಣ್ಣೆ,ಉಣ್ಣೆ ಪ್ರತ್ಯೇಕತೆಗೆ (ಬಾಹ್ಯ ಕೊಂಡಿ ನೋಡಿ) ಪೀಠೋಪಕರಣ ದಿಂಬುಗಳಿಗಾಗಿ ಇದನ್ನು ಬಳಸುತ್ತಾರೆ. ಗೋಂದು ಮಿಶ್ರಿತ ಉಣ್ಣೆಯನ್ನು ಪಿಯಾನೊ ಅಡ್ಡ ಹಲಗೆಗಳಿಗೆ ಮತ್ತು ಅಡ್ಡ ವಾಸನೆಗಳ ತಡೆಗೆ ಇದನ್ನು ಹಾಗು ಯಂತ್ರೋಪಕರಣ ಒರೆಸುವ ಸ್ಟಿರಿಯೊ ಸ್ಪೀಕರ್ ಗಳ ಒರೆಸಲು ಬಳಸಲಾಯಿತು. ಪ್ರಾಚೀನ ಗ್ರೀಕ್ ರು ತಮ್ಮ ಗುಡಿಸಲುಗಳ ನ್ನು ಗೋಂದು ಮಿಶ್ರಿತ ಗೋಂದುಗಳಿಂದ ನಿರ್ಮಿಸುತ್ತಿದ್ದರು.ಸ್ತನಕ್ಕೆ ಹಾಕುವ ಕವಚಗಳನ್ನು ಉಣ್ಣೆಯಿಂದ ತಯಾರಿಸುತ್ತಾರೆ.

ಸಾಂಪ್ರದಾಯಕವಾಗಿ ಪಾರದರ್ಶಕ ಒಳ ವಸ್ತ್ರ ಉಡುಪುಗಳಿಗೆ ಹೊದಿಕೆಯಾಗಿ ಉಣ್ಣೆಯನ್ನು ಬಳಸುತ್ತಾರೆ. ಉಣ್ಣೆ ಎಳೆಗಳು ತೇವ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಇದು ಹೈಗ್ರೊಸ್ಕೊಪಿಕ್ (ನೀರನ್ನು ಆಕರ್ಷಿಸುವ),ಒದ್ದೆ ವಸ್ತ್ರಗಳ ಮುಚ್ಚಲು,ಒಳ ಉಡುಪು ಸರಿಯಾಗಿರಲು ಉಣ್ಣೆ ಉಪಯೋಗಿಸುತ್ತಾರೆ. ಉಣ್ಣೆಯನ್ನು ತುಪ್ಪಳದ ಕೊಬ್ಬಿನ ಮೂಲಕ ಸಂಸ್ಕರಸಲಾಗುತ್ತದೆ,ಇದು ನೀರು ಹಿಡಿಯುವುದಿಲ್ಲ.ಗಾಳಿಯಿಂದ ರಕ್ಷಣೆ,ಕೆಲಮಟ್ಟಿಗೆ ಬ್ಯಾಕ್ಟೀರಿಯಾಗಳನ್ನೂ ತಡೆಯುತ್ತದೆ.ದೇಹದ ದುರ್ವಾಸನೆ ಹೋಗಲಾಡಿಸುತ್ತದೆ. ಕೆಲವು ಆಧುನಿಕ ವಸ್ತ್ರಡೈಪರ್ ಗಳು ಉಣ್ಣೆ ಎಳೆಗಳ ಬಳಸಿ ರಕ್ಷಿಸಲು ಬಳಸಲಾಗುತ್ತದೆ.ಹಲವಾರು ವಾಣಿಜ್ಯಕ ಹೆಣಿಗೆ ವಿಧಗಳು ಮಾರುಕಟ್ಟೆಯಲ್ಲಿವೆ.

ಮೊದಲ ಹಂತದ ಅಧ್ಯಯನಗಳ ಪ್ರಕಾರ ಉಣ್ಣೆಯ ಒಳ ಉಡುಪುಗಳು ಉಷ್ಣತೆ ಮತ್ತು ಬೆವರಿನ ದುಷ್ಪರಿಣಾಮಗಳ ತಡೆಯಲು ಸಮರ್ಥವಾಗಿದೆ.[೩೧]

ಮೆರಿನೊ ಉಣ್ಣೆಯನ್ನು ಮಕ್ಕಳ ಹಾಸಿಗೆ ಕೂಸುಗಳ ಕವಚ ಬ್ಲ್ಯಾಂಕೆಟ್ ಗಳು ಮತ್ತು ಕೂಸು ಮಲಗುವ ಚೀಲಗಳ ತಯಾರಿಕೆಗೆ ಬಳಸಲಾಗುತ್ತದೆ.

ಉಣ್ಣೆಯು ಪ್ರಾಣಿಗಳ ಪ್ರೊಟೀನ್ ಆಗಿದ್ದರಿಂದ ಉತ್ತಮ ಗೊಬ್ಬರಕ್ಕಾಗಿಯೂ,ಭೂಮಿ ಫಲವತ್ತತೆಗೆಯೂ ಬಳಸಿದಾಗ ಅದು ನೈಟ್ರೊಜನ್ ಮತ್ತು ಅಮಿನೊ ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ.

ನೇಯ್ಗೆಯ ದಾರಗಳು(ನೂಲಿನ ಎಳೆಗಳು)

ವರ್ಜಿನ್ ವುಲ್ ಎಂಬುದನ್ನು ಮೊದಲ ಬಾರಿಗೆ ನೇಯ್ಗೆ ಮಾಡಿದ ಉಣ್ಣೆಯಾಗಿದೆ.[೩೨]

ಕಳಪೆ,ಅಗ್ಗದ ಅಥವಾ ಮರು ಬಳಸಿದ ಉಣ್ಣೆwool ಇದನ್ನು ಹೆಣೆದ ಎಳೆಗಳಿಂದ ಹೊಸ ಬಟ್ಟೆ ತಯಾರಿಸಲಾಗುತ್ತದೆ,ಹಳೆ ಎಳೆಗಳಿಂದ ಸದ್ಯ ನೇಯ್ಗೆ ಮಾಡುವ ವಿಧಾನವೂ ಇದೆ.[೩೨] ಆದರೆ ಇದು ಎಳೆಗಳನ್ನು ಕಿರಿದು ಮಾಡುತ್ತದೆ.ಮತ್ತೆ ಉತ್ಪಾದಿಸಿದ್ದು ಮೂಲಕ್ಕಿಂತ ಕಡಿಮೆ ಮಟ್ಟದಲ್ಲಿರುತ್ತದೆ. ಮರುಬಳಸಿದ ಉಣ್ಣೆಯನ್ನು ಕಚ್ಚಾ ಉಣ್ಣೆಯೊಂದಿಗೆ ಉಣ್ಣೆ ಗಿಡ್ಡ ಎಳೆಗಳು ಅಥವಾ ಇನ್ನಿತರ ಹತ್ತಿ ಎಳೆಗಳ ಬಳಸಿ ಸರಾಸರಿ ಎಳೆಗಳ ಬಲಪಡಿಸಲಾಗುತ್ತದೆ. ಇಂತಹ ಎಳೆ ಗಳನ್ನು ಸಾಮಾನ್ಯವಾಗಿ ರೂಪಾಂತರ ಎಳೆಗಳೆನ್ನುತ್ತಾರೆ ಇದನ್ನು ಹತ್ತಿ ಎಳೆಗಳೊಂದಿಗೆ ಸುತ್ತಿನೇಯ್ಗೆ ಮಾಡಲಾಗುತ್ತದೆ. ಈ ಸಂಸ್ಕರಣೆಯನ್ನು ವೆಸ್ಟ್ ಯಾರ್ಕ್ ಶೈಯರ್ ನ ಹೇವಿ ವುಲನ್ ಡಿಸ್ಟ್ರಿಕ್ ನಲ್ಲಿ ಸಂಶೋಧಿಸಿ ಒಂದು ಸಣ್ಣ ಪ್ರಮಾಣದ ಆರ್ಥಿಕತೆಯನ್ನೇ ಇದರೊಂದಿಗೆ ತರಲಾಯಿತು.

ರಗ್ಗ್ ಎಂಬುದು ಕಳಪೆ ದರ್ಜೆ ಉಣ್ಣೆ ಇದರ ಎಳೆಗಳನ್ನು ನೇಯ್ಗೆ ಮಾಡಿ ಕೈಗವಸುಗಳ ತಯಾರಿಸುತ್ತಾರೆ.

ವರ್ಸ್ಟೆಡ್ ನೇಯ್ಗೆಯು ಬಲವಾದ ಉದ್ದ ಎಳೆಗಳುಳ್ಳ ಹೆಣಿಗೆ ಬಾಚಿದ ಉಣ್ಣೆ ಎಳೆಯಾಗಿದೆ.ಇದರ ಮೇಲ್ಮೈ ಗಡಸಾಗಿರುತ್ತದೆ.[೩೨]

ವುಲನ್ ಮೃದು, ಗಿಡ್ಡ-ಎಳೆಗಳ, ಹುರಿಮಾಡಿದ ಉಣ್ಣೆಯ ಎಳೆಯಾಗಿದೆ,ಇದನ್ನು ಹೆಣಿಗೆ,ನೇಯ್ಗೆಗೆ ಬಳಸುತ್ತಾರೆ.[೩೨] ಸಾಂಪ್ರದಾಯಿಕವಾಗಿ ನೇಯ್ಗೆಯು ಉಣ್ಣೆಯನ್ನು ಮೆದು ಎಳೆಗಳನ್ನಾಗಿಸಲು (ಮೃದು ಮತ್ತು ಬೆಚ್ಚಗೆ) ಇದನ್ನು ಸಾಮಾನ್ಯವಾಗಿ ಇತರ ಎಳೆಗಳೊಂದಿಗೆ ಸೇರಿಸಿ ಅದರ ಬಲಹೆಚ್ಚಿಸಿ ಮಗ್ಗಗಳಲ್ಲಿ ನೇಯಲಾಗುತ್ತದೆ.[೩೩]

ಘಟನೆಗಳು

ಆಂಡೆಯನ್ ಮಹಿಳೆ ಉಣ್ಣೆ ಆರಿಸುತ್ತಿರುವುದು ಮೆರಿಡಾದ ಅಲೆರೊಸ್ ವೆಂಜುಲಾ ಪಾರ್ಕ್ ಉದ್ಯಾನದಲ್ಲಿನ ದೃಶ್ಯ

ಮೆರಿನೊ ಉಣ್ಣೆಯ ಖರೀದಿದಾರನಿಗೆ, ಎರ್ಮೆಂಗಿಲ್ಡೊ ಜೆಗಾನ್,ಅವರು ಆಸ್ಟ್ರೇಲಿಯಾ ಉಣ್ಣೆ ಉತ್ಪನ್ನದಾರರಿಗೆ ಪ್ರಶಸ್ತಿ ನೀಡುತ್ತಾರೆ. ಮೊದಲ ಎರ್ಮೆಂಗಿಲ್ಡೊ ಜೆಗೆನ್ ಪರ್ ಪೆಚ್ಯುವಲ್ ಟ್ರೊಫಿಯನ್ನು ತಾಸ್ಮೇನಿಯಾದ "ಅತ್ಯುತ್ತಮ ಗುಣಮಟ್ಟದ ಮೆರಿನೊ ಕುಚ್ಚ ಉಣ್ಣೆ ಉತ್ಪಾದಕರಿಗೆ " ನೀಡಲಾಗಿದೆ. ನಂತರ 1980 ರಲ್ಲಿ ರಾಷ್ಟ್ರ ಮಟ್ಟದ ಎರ್ಮೆನೆಗಿಲ್ಡೊ ಜೆಗ್ನಾ ಟ್ರೊಫಿಯನ್ನು ಎಕ್ಸ್ಟ್ರಾ ಫೈನ್ ವುಲ್ ಉತ್ಪನ್ನಕ್ಕೆ ನೀಡುವ ಪರಿಪಾಠ ಆರಂಭಿಸಲಾಗಿದೆ. ತರುವಾಯ ಈ ಪ್ರಶಸ್ತಿ 2004 ರಲ್ಲಿ ಎರ್ಮೆನೆಗಿಲ್ಡೊ ಜೆಗ್ನಾ ಅನ್ ಪ್ರೊಟೆಕ್ಟೆಡ್ ವುಲ್ ಟ್ರೊಫಿ ಎಂದು ಹೆಸರಾಯಿತು. ಸುಮಾರು 1998 ರಲ್ಲಿ ಎರ್ಮೆನೇಲ್ಡೊ ಜೆಗ್ನಾ ಪ್ರೊಟೆಕ್ಟೆಡ್ ವುಲ್ ಟ್ರೊಫಿಯನ್ನು ತುಪ್ಪಳ ಪೊದೆಗೂದಲ ಉಣ್ಣೆಗೆ ನೀಡಲಾಯಿತು.ವರ್ಷದ ಒಂಬತ್ತು ತಿಂಗಳ ಈ ಉತ್ಪನ್ನವನ್ನು ಗುರುತಿಸಲು ಪ್ರಶಸ್ತಿ ಆರಂಭಿಸಲಾಯಿತು

ನಂತರ 2002 ರಲ್ಲಿ ಎರ್ಮೆನೆಗಿಲ್ಡೊ ಜೆಗ್ನಾ ವೆಲುಸ್ ಔರೆಯುಮ್ ಟ್ರೊಫಿ ಪ್ರಶಸ್ತಿಯನ್ನು 13.9 ಮೈಕ್ರಾನ್ ಮತ್ತು ಉತ್ತಮ ಗುಣಮಟ್ಟದ ಉಣ್ಣೆಗಾಗಿ ಸ್ಥಾಪಿಸಲಾಯಿತು. ಆಸ್ತ್ರೇಲಿಯಾದ ಉಣ್ಣೆಜೊತೆಗೆ ನ್ಯುಜಿಲ್ಯಾಂಡ್ ,ಅರ್ಜೈಂಟೈನಾ,ಮತ್ತು ದಕ್ಷಿಣ ಆಫ್ರಿಕಾ ಗಳು ಈ ಪ್ರಶಸ್ತಿಗೆ ಪ್ರವೇಶಿಸಿ ತಮ್ಮ ತಮ್ಮ ದೇಶಗಳ ಹೆಸರಿನಲ್ಲಿ ಪ್ರಶಸ್ತಿ ಗಿಟ್ಟಿಸಬಹುದಾಗಿದೆ.[೩೪] ನ್ಯುಜಿಲ್ಯಾಂದ್ 2008 ರ ಏಪ್ರಿಲ್ ನಲ್ಲಿ ಎರ್ಮೆನೆಗಿಲ್ಡೊ ಜೆಗ್ನಾ ವೆಲ್ಲುಸ್ ಅಔರಿಯಮ್ ಟ್ರೊಫಿಯನ್ನು ಮೊದಲ ಬಾರಿಗೆ ಪೊದೆ ಉಣ್ಣೆ 10.8 ಮೈಕ್ರಾನ್ ಉತ್ಪನ್ನಕ್ಕೆ ಪಡೆಯಿತು. ಈ ಸ್ಪರ್ಧೆಯಲ್ಲಿ ಗೆಲ್ಲುವ ಪೊದೆ ಉಣ್ಣೆ ಉತ್ಪಾದಕನಿಗೆ ಚಿನ್ನದ ಬಹುಮಾನವೂ ಇದೆ,ಅದರ ಜೊತೆಗೆ ಹೆಸರೂ ಇದೆ.

ಇತ್ತೀಚಿಗೆ 2010 ರಲ್ಲಿ ಅತ್ಯುತ್ತಮ ಮೃದು ಗುಣಮಟ್ಟದ 10 ಮೈಕ್ರಾನ್ ಉಣ್ಣೆ ವಿಂಡ್ ಸ್ಕ್ರೀನ್ ಇದು ನಿವ್ ಸೌತ್ ವೇಲ್ಸ್ ನ ಪಿರಮುಲ್ ಬಳಿ ಇದೆ,ಅಂತಾರಾಷ್ಟ್ರೀಯ ದಾಖಲೆ ನಿರ್ಮಿಸಿದೆ.ಇದು ಎರ್ಮೆನೆಗಿಲ್ಡೊ ಜೆಗ್ನಾ ವೆಲ್ಲುಸ್ ಔರಿಯುಮ್ ಇಂಟರ್ ನ್ಯಾಶನಲ್ ಟ್ರೊಫಿಗೆ ಪಾತ್ರವಾಯಿತು.[೩೫]

ಸುಮಾರು 2000ರಿಂದ ಲೊರೊ ಪಿಯ್ನಾ ಗೆ ಉತ್ತಮ ಗುಣಮಟ್ಟದ ಅಂಡಿಗೆಯಲ್ಲಿನ ಉಣ್ಣೆ ಉತ್ಪನ್ನಕ್ಕೆ ನೀಡಲಾಗಿದೆ.ಇದರ ಒಂದು ಅಂಡಿಗೆಯಲ್ಲಿ ಕೇವಲ 50 ಹೊಲಿಗೆಗೆ ಸಾಕಾಗುವ ಉಣ್ಣೆ ತುಂಬಲಾಗಿತ್ತು,ಅದು ಅಂತಾರಾಷ್ಟ್ರೀಯ ವಲಯದಲ್ಲಿ ಹೆಸರಾಯಿತು.ಇದಕ್ಕೆ ಕಪ್ಪೊಂದರ ಬಹುಮಾನ ದೊರೆಯಿತು. ಈ ಬಹುಮಾನವನ್ನು ಆಸ್ಟ್ರೇಲಿಯಾ ಅಥವಾ ನ್ಯುಜಿಲ್ಯಾಂಡ್ ನ ಬೆಳೆಗಾರ ಯಾರು ಒಂದು ಅಂಡಿಗೆಯ ಉತ್ತಮ ಗುಣಮಟ್ಟದ ಉಣ್ಣೆ ನೀಡುತ್ತಾರೋ ಅವರಿಗೆ ಇದನ್ನು ನೀಡಿ ಪುರಸ್ಕರಿಸಲಾಗುತ್ತದೆ.[೩೬]

ನ್ಯು ಇಂಗ್ಲೆಂಡ್ ನ ಮೆರಿನೊ ಕ್ಷೇತ್ರ ಪ್ರಾತ್ಯಕ್ಷಿಕೆಗೆಗಳನ್ನು ಏರ್ಪಡಿಸಲಾಗುತ್ತದೆ.ಕುರಿ ಪ್ರದರ್ಶನ,ಜನವರಿ ಪ್ರತಿವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಇದನ್ನು ವಾಲ್ಶಾ ,ನಿವ್ ಸೌತ್ ವೇಲ್ಸ್ ಜಿಲ್ಲೆನಲ್ಲಿ ನೆರವೇರಿಸುತ್ತದೆ. ದಿ ಆನ್ಯುವಲ್ ವುಲ್ ಫ್ಯಾಶನ್ ಅವಾರ್ಡ್ಸ್ ಮೆರಿನೊ ಉಣ್ಣೆಗೆ ಅದರ ವಿನ್ಯಾಸಗರನಿಗೆ ಅರ್ಮೈಡೇಲ್ ನಿವ್ ಸೌತ್ ವೇಲ್ಸ್ ಪ್ರಶಸ್ತಿಯನ್ನು ಪ್ರತಿವರ್ಷ ಮಾರ್ಚ್ ನಲ್ಲಿ ಆಯೋಜಿಸಲಾಗುತ್ತದೆ. ಈ ಪ್ರಶಸ್ತಿಯು ಯುವ ವಿನ್ಯಾಸಕಾರರನ್ನು ಪ್ರೊತ್ಸಾಹಿಸಿ ಅವರ ವಿನ್ಯಾಸ ಪ್ರದರ್ಶನಗಳಿಗೆ ಅವಕಾಶ ನೀಡುತ್ತದೆ. ಪ್ರತಿವರ್ಷ ಮೇನಲ್ಲಿ ಅರ್ಮಿಡೇಲ್ ವಾರ್ಷಿಕ ನಿವ್ ಇಂಗ್ಲೆಂಡ್ ವುಲ್ ಎಕ್ಸಪೊ ಏರ್ಪಡಿಸಿ ಉಣ್ಣೆಯ ಬಟ್ಟೆ,ಫ್ಯಾಶನ್ ,ಕರಕುಶಲ ವಸ್ತುಗಳು,ತರಬೇತುಗಳು ಸ್ಪರ್ಧೆಗಳು ಹೀಗೆ ಹಲವನ್ನು ಉತ್ತೇಜಿಸುತ್ತದೆ.

ಜುಲೈನಲ್ಲಿ ಆಸ್ಟ್ಯ್ರೇಲಿಯನ್ ವಾರ್ಷಿಕ ಶೀಪ್ ಅಂಡ್ ವುಲ್ ಶೊವನ್ನು ಬೆಂಡಿಗೊ ವಿಕ್ಟೋರಿಯಾದಲ್ಲಿ ಏರ್ಪಡಿಸಲಾಗಿತ್ತು. ಇದು ವಿಶ್ವದಲ್ಲೇ ಅತಿ ದೊಡ್ಡ ಉಣ್ಣೆ ಮತ್ತು ಅದರ ಉತ್ಪನ್ನಗಳ ಪ್ರದರ್ಶನದ ವಿಶಿಷ್ಟ ಕ್ಷಣವಾಗಿತ್ತು.ಉಣ್ಣೆ ಹೆಣೆಗೆ ಸ್ಪರ್ಧೆಗಳು,ಕತ್ತರ್ರಿಸುವ ಪ್ರದರ್ಶನಗಳು,ಪೊದೆ ಉಣ್ಣೆ ತಳಿ,ವಿವಿಧ ತಳಿಗಳ ಪ್ರದರ್ಶನ ಇದಾಗಿತ್ತು. ಪೊದೆ ಉಣ್ಣೆ ಉತ್ಪನ್ನದ ಅತಿ ದೊಡ್ಡ ಪ್ರದರ್ಶನ ಸ್ಪರ್ಧೆಯು ಆಸ್ಟ್ರೇಲಿಯನ್ ಫ್ಲೀಸ್ ಕಾಂಪಿಟೇಶನ್ ಹೆಸರಿನಲ್ಲಿ ಪ್ರತಿವರ್ಷ ದೊಡ್ಡ ಪ್ರಮಾಣದಲ್ಲಿ ಬೆಂಡಿಗೊದಲ್ಲಿ ಪ್ರಾಯೋಜಿಸಲಾಗುತ್ತದೆ. ಕಳೆದ 2008 ರಲ್ಲಿ ಇದಕ್ಕಾಗಿ 475 ಪ್ರವೇಶಗಳು ಬಂದಿದ್ದವು,ನಾರ್ದರ್ನ್ ಟೇಬಲ್ ಲ್ಯಾಂಡ್ಸ್ ನಿವ್ ಸೌತ್ ವೇಲ್ಸ್ ಗೆ ಮೊದಲ ಮತ್ತು ಎರಡನೆಯ ಬಹುಮಾನ ದೊರೆಯಿತು.[೩೭]

ಇವನ್ನೂ ಗಮನಿಸಿ

ಉಲ್ಲೇಖಗಳು

  1. Braaten, Ann W. (2005). "Wool". In Steele, Valerie (ed.). Encyclopedia of Clothing and Fashion. Vol. 3. Thomson Gale. pp. 441–443. ISBN 0-684-31394-4.
  2. D'ಆರ್ಕೆ,J.B.,ಶೀಪ್&ವುಲ್ ಟೆಕ್ನೋಲಜಿ, NSW ಯೂನಿವರ್ಸಿಟಿ ಪ್ರೆಸ್,ಕೆನ್ಶಿಂಗ್ಟನ್, 1986 ISBN 0-8684-0106-4
  3. ವುಲ್ ಫ್ಯಾಕ್ಟ್ಸ್ ಮರುಪಡೆದದ್ದು 12 ಜನವರಿ 2009
  4. ಉಣ್ಣೆ ಇತಿಹಾಸ
  5. ೫.೦ ೫.೧ ದಿ ಲ್ಯಾಂಡ್,ಮೆರಿನೊಸ್ ಗೊಯಿಂಗ್ ಫಾರ್ ಗ್ರೀನ್ &ಗೋಲ್ಡ್,-p.46, US ಯೂಸ್ ಫ್ಲೇಮ್ ರೆಸಿಸ್ಟನ್ಸ್, 21ಆಗಸ್ಟ್2008
  6. ಮಾರ್ಶಲ್,A.J.T.,ವುಲ್ ಕ್ಲಾಸಿಂಗ್, ಟ್ರಸ್ಟ್ ಪಬ್ಲಿಕೇಷನ್,1984,ISBN 0 7244 9890 7
  7. ೭.೦ ೭.೧ ೭.೨ ೭.೩ ೭.೪ ಪ್ರಿಪರೇಶನ್ ಆಫ್ ಆಸ್ಟ್ರೇಲಿಯನ್ ವುಲ್ ಕ್ಲಿಪ್ಸ,ಕೋಡ್ ಆಫ್ ಪ್ರಾಕ್ಟೀಸ್,2010-2012,ಆಸ್ಟೇಲಿಯನ್ ವುಲ್ ಎಕ್ಸ್ಚೆಂಜ್(AWEX), 2010
  8. "Technology in Australia 1788-1988". Australian Science and Technology Heritage Centre. 2001. Retrieved 2006-04-30.
  9. "Wool on The Web - Carbonising". Retrieved 2006-04-30.
  10. "Merino Sheep in Australia". Retrieved 2006-11-10.[ಮಡಿದ ಕೊಂಡಿ]
  11. Van Nostran, Don. "Wool Management - Maximizing Wool Returns". Mid-States Wool growers Cooperative Association. Retrieved 2006-11-10.
  12. D’ಆರ್ಸಿ,J.B.ಶೀಪ್ ಮ್ಯಾನೇಜ್ ಮೆಂಟ್& ವುಲ್ ಟೆಕ್ನೋಲಜಿ, NSW ಯೂನಿವರ್ಸಿಟಿ ಪ್ರೆಸ್, 1986, ISBN 0 86840 106 4
  13. 1PP Certification: http://www.awex.com.au/scripts/nc.dll?AWEX.3408442:STANDARD:527792715:pc=1PPCER
  14. "AWI". Woolmark. Retrieved 2009-11-27.
  15. [3] ^ ಬಾಲ್ಟರ್ M. (2009). ಕ್ಲೋತ್ಸ್ ಮೇಕ್ ದಿ(ಹು) ಮ್ಯಾನ್. ವಿಜ್ಞಾನ,325(5946):1329.doi:10.1126/science.325_1329a
  16. [5] ^ಕ್ವಾವಡ್ಜೆ E,ಬಾರ್-ಯೋಸೆಫ್ O,ಬೆಲ್ಫರ್-ಕೋಹೆನ್ A,ಬೊಯರೆಟ್ಟೊE,ಜ್ಯಾಕೆಲಿ N,ಮ್ಯಾಟ್ಸ್‌ಕೆವಿಚ್ Z, ಮೆಶ್ವೆಲಿಯಾನಿ T. (2009).30,000-ವರ್ಷ-ಹಳೆಯದಾದ-ಕಾಡಿನಲ್ಲಿ ಬೆಳೆಯುವ ಲಿನಮ್ ಕುಲದ ನಾರುಗಳು. ವಿಜ್ಞಾನ,325(5946):1359. [4] ಸಪೋರ್ಟಿಂಗ್ ಆನ್‌ಲೈನ್ ಮೆಟೀರಿಯಲ್
  17. ೧೭.೦ ೧೭.೧ {ಫಾರ್ನಡ್ ಬ್ರಾಡೆಲ್{/1}, 1982. ದಿ ವೀಲ್ಸ್ ಆಫ್ ಕಾಮರ್ಸ್ ,vol 2 ಆಫ್ಸಿವಿಲಿಝೇರ್ಶ್ ಮತ್ತು ಕಾಪಿಟಾಲಿಜಮ್ ಮತ್ತು (ನ್ಯೂ ಯಾರ್ಕ್:ಹಾರ್ಪರ&ರೊ),pp.312-317
  18. ಕಾಂಟರ್2001,64
  19. "ದಿ ಎಂಡ್ ಆಫ್ ಪಾಸ್ಟ್ರಲ್ ಡಾಮಿನೆನ್ಸ್"
  20. 1301.0 -ಇಯರ್ ಬುಕ್,2000, ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್
  21. "ಶೀಪ್, ಲಾಮ್,ಮಟ್ಟನ್ ಮತ್ತು ಮೇಕೆ ಮಾಂಸ
  22. ಸೂಪರ್ ವಾಶ್ ವುಲ್ರಿಟ್ರೀವ್ಡ್ ಆನ್ ನವೆಂಬರ್ 10 2008
  23. [೧][ಮಡಿದ ಕೊಂಡಿ]
  24. ಕಂಟ್ರೀ ಲೀಡರ್,NSW ವುಲ್ ಸೆಲ್ಸ್ ಫಾರ್ ಎ ಕ್ವಾರ್ಟರ್ ಆಫ್ ಎ ಮಿಲಿಯನ್,7ಜುಲೈ 2008
  25. {1ಷೊವರ್ ಸೂಟ್{/1}ರಿಟ್ರೀವ್ಡ್ ಆನ್ 11 ನವೆಂಬರ್2008
  26. "WoolFacts" (PDF). Australian Wool Innovation. September 2005. {{cite journal}}: Cite journal requires |journal= (help)
  27. Speer, Jordan K. (2006-05-01). "Shearing the Edge of Innovation". Apparel Magazine.
  28. [೨][ಮಡಿದ ಕೊಂಡಿ]
  29. NZ ವುಲ್
  30. http://www.sheepusa.org/index.phtml?page=site/text&nav_id=b5cd92c158e527a90be72c1ce8be84a2
  31. ABC ರೂರಲ್ ರೇಡಿಯೊ:ವುಡಾಮ್ಸ,Dr.ಲಿಬ್ಬಿ,ನ್ಯೂ ರಿಸರ್ಚ್ ಶೊಸ್ ಉಲ್ಲನ್ ಅಂಡರ್ ವೇರ್ ಹೆಲ್ಪ್ಸ್ ಪ್ರಿವೆಂಟ್ ರಾಶಿಸ್ ರಿಟ್ರೈವ್ಡ್ 2010-3-24
  32. ೩೨.೦ ೩೨.೧ ೩೨.೨ ೩೨.೩ ಕಡೋಲ್ಫ್, ಸಾರಾ J.,ed.:ಟೆಕ್ಸ್ ಟೈಲ್ಸ್ , 10 ನೆಯ ಎಡಿಶನ್,ಪೀಯರ್ಸನ್/ಪ್ರೆನ್ಟೈಸ್-ಹಾಲ್,2007, ISBN 0-13-118769-4, p. 63
  33. ಒಸ್ಟಾರ್ ಗಾರ್ಡ್, ಎಲ್ಸೆ: ವುವೆನ್ ಇನ್ ಟು ದಿ ಅರ್ಥ್:ಟೆಕ್ಸ್ ಟೈಲ್ಸ್ ಫ್ರಮ್ ನಾರ್ಸ್ ಗ್ರೀನ್ ಲ್ಯಾಂಡ್ ,ಆರೂಸ್ ಯೂನಿವರ್ಸಿಟಿ ಪ್ರೆಸ್,2004,ISBN 8772889357,p.50
  34. "2004/51/1 Trophy and plaque, Ermenegildo Zegna Vellus Aureum trophy and plaque, plaster / bronze / silver / gold, trophy designed and made by Not Vital for Ermenegildo Zegna, Switzerland, 2001". Powerhouse Museum, Sydney. Retrieved 2008-04-27.
  35. ಕಂಟ್ರೀ,26 ಎಪ್ರೀಲ್ 2010,ಫೈನೆಸ್ಟ್ ವುಲ್ ರಿವಾರ್ಡ್ಡೆಡ್ ,ರೂರಲ್ ಪ್ರೆಸ, ನಾರ್ತ್ ರಿಚ್ಮಂಡ್
  36. ಆಸ್ಟೇಲಿಯನ್ ವುಲ್ ನೆಟ್ ವರ್ಕ್ ನಿವ್ಸ್,ಇಶ್ಯು #19, ಜುಲೈ2008
  37. ವಾಲ್ಶಾ ನಿವ್ಸ್,24 ಜುಲೈ 2008,ಫ್ಲೆಚರ್ ವಿನ್ಸ್ ಆಸ್ಟೇಲಿಯನ್ ಫ್ಲೀಸ್ ಕಾಂಪ್, p.3

ಬಾಹ್ಯ ಕೊಂಡಿಗಳು

ಟೆಂಪ್ಲೇಟು:Link FA

"https://kn.wikipedia.org/w/index.php?title=ಉಣ್ಣೆ&oldid=170042" ಇಂದ ಪಡೆಯಲ್ಪಟ್ಟಿದೆ