"ಮನ್ನಾ ಡೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
No edit summary
==ಪ್ರಬೋಧ್ ಚಂದ್ರ ಡೇ==
೧೯೬೦-೭೦ ರ ದಶಕದ ಸಮಯದಲ್ಲಿ, ದೇಶದಾದ್ಯಂತ ಹಿಂದಿ, ಬಂಗಾಳೀ ಚಿತ್ರರಂಗದ ಮಧುರಗೀತೆಗಳನ್ನು ಹಾಡಿರಂಜಿಸುತ್ತಿದ್ದ ಮನ್ನಾಡೆಯವರ ಛಾಪನ್ನು ಮೂಡಿಸುವ ಗೀತೆಗಳನ್ನು ಕೇಳಿದ ಕೂಡಲೇ ಮನ್ನಾಡೆ, ನಮಗೆ ಫಕ್ಕನೆ ನೆನೆಪಾಗುತ್ತಾರೆ. ಆಗಿನಕಾಲದಲ್ಲಿ ’ಮುಖೇಶ್’, ಒಂದು ಶೈಲಿಯ ಗಾಯಕರು. ’ಮೊಹಮ್ಮದ್ ರಫಿ,’ ಇನ್ನೊಂದು ತರಹ. ಮತ್ತೆ ’ಮನ್ನಾಡೆ’, ಹಿಂದೂಸ್ತಾನಿ ಸಂಗೀತದ ಜಾಡನ್ನು ಆಧರಿಸಿ ಹಲವಾರು ಹಾಡುಗಳನ್ನು ಹಾಡಿದ್ದಾರೆ, ’ಏ ಭಾಯ್ ಝರ ದೇಖ್ ಕೆ ಚಲೊ’, ಗೀತೆ, ರಾಜ್ ಕಪೂರ್ ರವರ ಕಾಲದ್ದು. ಆದರೆ ಅದನ್ನು ಮನ್ನಾಡೆ ಹಾಡಿದರೀತಿ ಅತ್ಯಂತ ರೋಚಕವಾದದ್ದು. ಆ ಹಾಡಿನಲ್ಲಿ ತಮ್ಮೆಲ್ಲಾ ಭಾವನೆ ಸಂವೇದನೆಗಳನ್ನು ತುಂಬಿ, ರಾಜ್ಕಪೂರ್ ರವರ ಪಾತ್ರಕ್ಕೆ ತುಂಬು-ಪೋಷಣೆ ನೀಡಿದ್ದಾರೆ. ಬಹುಶಃ ಆ ಹಾಡು ಅವರಲ್ಲದೆ ಬೇರೆ ಯಾರೂ ಹಾಡಲು ಸಾಧ್ಯವಿಲ್ಲವೇನೋ ಎನ್ನುವಷ್ಟು ಭಾವ ಆ ಗೀತೆಯಲ್ಲಡಗಿದೆ !
’ಪಡೋಸನ್’ ಚಿತ್ರದ ’ಏಕ್ ಚತುರ ನಾರ್,’ ’ಆಶೀರ್ವಾದ್’ ಚಿತ್ರದ ’ಪೂಛೋನ ಕೈಸೆ’, ಮತ್ತು ’ಯೆ ಮೆರೆ ಪ್ಯಾರ ವತನ್’ ’ಯೇ ದೋಸ್ತಿ, ಹಮ್ ನಹಿ ಛೋಡೇಂಗೆ’, ಗಳನ್ನು ಹಾಡಿ ಹಿಂದಿಚಿತ್ರದ-ಸಿನಿ-ರಸಿಕರ ಮನವನ್ನು ತಣಿಸಿದ ’ಮನ್ನಾಡೆ’ ಯವರಿಗೆ ಸಂಗೀತದ ಬಗ್ಗೆ ತೀವ್ರ ಆಸಕ್ತಿ, ಹಾಗೂ ಪ್ರೇಮ. ತಮ್ಮ ಬಾಲ್ಯದ ದಿನಗಳಲ್ಲಿ ಗೆಳೆಯರ ಮುಂದೆ ಬೆಂಚಿನ ಮಣೆಯನ್ನು ಕುಟ್ಟಿ, ಧ್ವನಿಹೊರಡಿಸಿ ರಂಜಿಸುತ್ತಿದ್ದರು. ಕಾಲೇಜ್ ವ್ಯಾಸಂಗದ ಸಮಯದಲ್ಲಿ ಸತತವಾಗಿ ಅಂತರ ಕಾಲೇಜ್ ಸ್ಪರ್ಧೆಯಲ್ಲಿ ೩ ವರ್ಷ ಪ್ರಥಮ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದರು. ಬೊಂಬಾಯಿನ ’ಬಾಲಿವುಡ್ ಚಿತ್ರರಂಗ’ದಲ್ಲಿ ವರ್ಚನ್ನು ಹೊಂದಿದ್ದ ಅನೇಕ ನಟರು, ನಿರ್ದೇಶಕರು, ಸಂಗೀತಗಾರರು ತುಂಬಿಕೊಂಡಿದ್ದರು. ಅವರಲ್ಲಿ ಪ್ರಮುಖರು ಸಂಗೀತ ಸಂಯೋಜಕ, ಶ್ರೀ ಕೃಷ್ಣ ಚಂದ್ರ ಡೇ. ಅವರು, ಆಗಿನ (K. C. DEDe), ಮೇರು ಸಂಗೀತಕಾರರನ್ನು ಮನ್ನಾಡೆ ಯವರಿಗೆ ಪರಿಚಯಿಸಿದರು. ’ಉಸ್ತಾದ್ ದಬೀರ್ ಖಾನ್’, ’ಉಸ್ತಾದ್ ಅಮ ನ್ ಆಲಿ ಖಾನ್’, ’ಉಸ್ತಾದ್ ಅಬ್ದುಲ್ ರೆಹ್ಮಾನ್ ಖಾನ್’, ಮುಂತಾದವರು. ಇಂತಹ ಹೆಸರುವಾಸಿಯಾಗಿದ್ದ ಗುರುಗಳ ಶಿಕ್ಷಣದಿಂದ ಅವರು ಒಳ್ಳೆಯ ಕಂಠಶ್ರೀಯನ್ನು ಹೊಂದಿದ್ದು, ಚಿತ್ರ ರಸಿಕರ ಮನವನ್ನು ಗೆದ್ದಿದ್ದರು.
 
==ಕನ್ನಡ ಚಿತ್ರಗೀತೆ ಹಾಗು ಕರ್ನಾಟಕದ ನಂಟು==
೧೯೬೦ರ ದಶಕದಲ್ಲಿ ಬಿಡುಗಡೆಯಾದ ಉದಯಕುಮಾರ್, ಜಯಂತಿ ನಟಿಸಿದ [[ಕಲಾವತಿ]] ಚಿತ್ರದಲ್ಲಿ ರಾಷ್ಟ್ರ ಕವಿ ಕುವೆಂಪು ವಿರಚಿತ 'ಕುಹೂ ಕುಹೂ ಎನ್ನುತ ಹಾಡುವ ಕಿನ್ನರ ಕಂಠದ ಕೋಗಿಲೆಯೇ' ಕವಿತೆಯನ್ನು ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಹಾಡಿದ್ದರು. ಈಗಲು ಸಹ ಆಕಾಶವಾಣಿಯಲ್ಲಿ ಪ್ರಸಾರವಾಗುವ ಈ ಗೀತೆ ಬಹಳ ಜನಪ್ರಿಯವಾಗಿದೆ. ೬೦-೭೦ರ ದಶಕದಲ್ಲಿ ಇನ್ನು ಕೆಲವು ಕನ್ನಡ ಚಿತ್ರಗೀತೆಗಳನ್ನು ಹಾಡಿದ್ದರು. ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲೇ ವಾಸಿಸುತ್ತಿದ್ದಾರೆ. ಬೆಂಗಳೂರು ನಿವಾಸಿ ಮನ್ನಾಡೆ ಇತ್ತೀಚೆಗೆ ಕನ್ನಡದ ಗಾಯಕಿ ದಿವ್ಯಾ ರಾಘವನ್ ಜೊತೆ ದುಬೈ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಕೂಡ ಭಾಗವಹಿಸಿದ್ದಾರೆ.
೨೫,೬೧೩

edits

"https://kn.wikipedia.org/wiki/ವಿಶೇಷ:MobileDiff/121466" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ