ಮರಿಯಾ ರೇಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಉಲ್ಲೇಖ ಮತ್ತು ಚಿತ್ರ ಸೇರ್ಪಡೆ
೪೧ ನೇ ಸಾಲು: ೪೧ ನೇ ಸಾಲು:
*[http://www.maria-reiche.de/ ''Homepage Maria Reiche'']
*[http://www.maria-reiche.de/ ''Homepage Maria Reiche'']
*[http://www.bilderbuch-der-wueste.de/BDW.pdf Zetzsche, Viola and Schulze, Dietrich: Biography of Maria Reiche, ''Picture Book of the Desert – Maria Reiche and the Ground Designs of Nasca''], Mitteldeutscher Verlag Halle, September 2005, {{ISBN|3-89812-298-0}}
*[http://www.bilderbuch-der-wueste.de/BDW.pdf Zetzsche, Viola and Schulze, Dietrich: Biography of Maria Reiche, ''Picture Book of the Desert – Maria Reiche and the Ground Designs of Nasca''], Mitteldeutscher Verlag Halle, September 2005, {{ISBN|3-89812-298-0}}
*{{Find a Grave|10784406}}
*[http://www.am-sur.com/am-sur/peru/Nasca/Munoz_Maria-Reiche-ENGL.html Maria Reiche. Detailed chronology] (with literature from Peru)
*[http://www.am-sur.com/am-sur/peru/Nasca/Munoz_Maria-Reiche-ENGL.html Maria Reiche. Detailed chronology] (with literature from Peru)
*[http://www.nazcaresources.com/MariaReiche.html "Maria Reiche and the Stars of Nazca"], Anita Jepson-Gilbert, Nazca Resources.
*[http://www.nazcaresources.com/MariaReiche.html "Maria Reiche and the Stars of Nazca"], Anita Jepson-Gilbert, Nazca Resources.

೨೩:೩೦, ೨೭ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ಮರಿಯಾ ರೇಕಿ ಗ್ರಾಸ್-ನ್ಯೂಮನ್[೧] (೧೫ ಮೇ ೧೯೦೩ - ೦೮ ಜೂನ್ ೧೯೯೮) ಜರ್ಮನ್ ಮೂಲದ ಪೆರುವಿಯನ್ ಗಣಿತಜ್ನೆ, ಪುರಾತತ್ತ್ವ ಶಾಸ್ತ್ರಜ್ನೆ ಮತ್ತು ತಾಂತ್ರಿಕ ಭಾಷಾಂತರಗಾರ್ತಿ. ಅವರು ನಾಸ್ಕಾಗೆರೆಗಳ ಬಗ್ಗೆ ತಮ್ಮ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅಮೆರಿಕದ ಇತಿಹಾಸಕಾರ ಪಾಲ್ ಕೊಸೊಕ್ ಜೊತೆಯಲ್ಲಿ ಇದನ್ನು ಅವರು ಮೊದಲು ೧೯೪೧ರಲ್ಲಿ ನೋಡಿದ್ದು. ಲೇಡಿ ಆಫ್ ದಿ ಲೈನ್ಸ್ ಎಂದು ಕರೆಯಲ್ಪಡುವ ರೇಕಿಯವರು, ನಾಸ್ಕಾ ಲೈನ್ಸ್ ನ ದಾಖಲೀಕರಣ, ಸಂರಕ್ಷಣೆ ಮತ್ತು ಜಗತ್ತಿಗೆ ಇದರ ಬಗ್ಗೆ ಪ್ರಚುರಪಡಿಸಲು ಅರ್ಧಶತಮಾನಗಳ ಕಾಲ ಕೆಲಸ ಮಾಡಿ ಜೀವನದ ಸಾಧನೆ ಮಾಡಿದ್ದಾರೆ.[೨][೩]

ಅವರು ನಾಸ್ಕಾ ಗೆರೆಗಳ ಮೇಲ್ವಿಚಾರಕಿಯಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟರು ಮತ್ತು ಅವುಗಳನ್ನು ರಕ್ಷಿಸಲು ಅದರ ಹತ್ತಿರದಲ್ಲೇ ವಾಸಿಸುತ್ತಿದ್ದಳು. ನ್ಯಾಷನಲ್ ಯೂನಿವರ್ಸಿಟಿ ಆಫ್ ಸ್ಯಾನ್ ಮಾರ್ಕೋಸ್ ಮತ್ತು ಲಿಮಾದಲ್ಲಿರುವ ಯೂನಿವರ್ಸಿಡಾಡ್ ನ್ಯಾಶನಲ್ ಡಿ ಇಂಜೆನೇರಿಯಾದಿಂದ Doctor Honoris Causa ಎಂದು ಗುರುತಿಸಲ್ಪಟ್ಟಳು. ನಾಜ್ಕಾ ಲೈನ್ಸ್‌ಗಾಗಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಮನವನ್ನು ಪಡೆಯಲು ರೇಕಿ ಸಹಾಯ ಮಾಡಿದರು. ಇದರಿಂದಾಗಿ 'ಪೆರು' ಇದನ್ನು ಸಂರಕ್ಷಣೆ ಮಾಡಿತು, ಮತ್ತು ಅವುಗಳನ್ನು ೧೯೯೪ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು.[೪]

ಆಕೆಯ ಮರಣದ ನಂತರ, ನಾಜ್ಕಾದಲ್ಲಿರುವ ಅವರ ಹಳೆಯ ಮನೆಯನ್ನು ಮ್ಯೂಸಿಯೊ ಮರಿಯಾ ರೇಕಿ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು. ನಾಜ್ಕಾದ ಮರಿಯಾ ರೇಕಿ ನ್ಯೂಮನ್ ವಿಮಾನ ನಿಲ್ದಾಣ ಮತ್ತು ಪೆರುವಿನ ಹಲವು ಶಾಲೆಗಳು ಮತ್ತು ಇತರ ಸಂಸ್ಥೆಗಳಿಗೆ ಅವರ ಹೆಸರನ್ನು ಇಟ್ಟು ಗೌರವಿಸಲಾಗಿದೆ. ಆಕೆಯ 115ನೇ ಜನ್ಮವಾರ್ಷಿಕೋತ್ಸವದ ಪ್ರಯುಕ್ತ ಮೇ ೨೦೧೮ರಲ್ಲಿ ಗೂಗಲ್ ಡೂಡಲ್ ಮೂಲಕ ಸ್ಮರಿಸಲಾಯಿತು.[೫][೬][೭]

ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ

೧೯೧೦ರಲ್ಲಿ ರೇಕಿ

ಮರಿಯಾ ರೇಕಿ ಡ್ರೆಸ್ಡೆನ್‌ನಲ್ಲಿ ೧೫ ಮೇ ೧೯೦೩ ರಂದು ಫೆಲಿಕ್ಸ್ ರೀಚೆ ಗ್ರಾಸ್ ಮತ್ತು ಅನಾ ಎಲಿಜಬೆತ್ ನ್ಯೂಮನ್ ದಂಪತಿಗೆ ಜನಿಸಿದರು. ಅವರು ಡ್ರೆಸ್ಡೆನ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗಣಿತ, ಖಗೋಳಶಾಸ್ತ್ರ, ಭೂಗೋಳ ಮತ್ತು ವಿದೇಶಿ ಭಾಷೆಗಳನ್ನು ಅಧ್ಯಯನ ಮಾಡಿದರು.[೮] ಅವರು ಐದು ಭಾಷೆಗಳನ್ನು ಮಾತನಾಡಲು ಕಲಿತರು.

೧೯೩೨ರಲ್ಲಿ ಯೌವನದಲ್ಲಿ ಪೆರು ದೇಶದ ಕುಸ್ಕೋದಲ್ಲಿ ಜರ್ಮನ್ ರಾಯಭಾರಿ ಮಕ್ಕಳಿಗೆ ಬೋಧಕಿ ಮತ್ತು ಉಸ್ತುವಾರಿಣಿಯಾಗಿ ಹೋದರು. ೧೯೩೪ರಲ್ಲಿ, ಕುಸ್ಕೋದಲ್ಲಿದ್ದಾಗ, ಅವರು ಆಕಸ್ಮಿಕವಾಗಿ ಪಾಪಾಸುಕಳ್ಳಿಯಿಂದ ಗಾಯಗೊಂಡು ಗ್ಯಾಂಗ್ರೀನ್‌ ಆಗಿ ಬೆರಳನ್ನು ಕಳೆದುಕೊಂಡರು.

೧೯೩೯ರಲ್ಲಿ, ಅವರು ಲಿಮಾದಲ್ಲಿ ಶಿಕ್ಷಕರಾದರು ಮತ್ತು ವೈಜ್ಞಾನಿಕ ಅನುವಾದಗಳಲ್ಲಿ ಕೆಲಸ ಮಾಡಿದರು. ಆ ವರ್ಷ ಎರಡನೇ ಮಹಾಯುದ್ಧ ಪ್ರಾರಂಭವಾದಾಗ, ರೇಕಿ ಪೆರುವಿನಲ್ಲಿ ಉಳಿದುಕೊಂಡರು. ಮುಂದಿನ ವರ್ಷ ಅವರು ಅಮೇರಿಕನ್ ಪಾಲ್ ಕೊಸೊಕ್ ಅವರನ್ನು ಭೇಟಿಯಾದರು. ಅವರು ದೇಶದ ಪುರಾತನ ನೀರಾವರಿ ವ್ಯವಸ್ಥೆಗಳನ್ನು ಸಂಶೋಧಿಸುತ್ತಿದ್ದರು. ೧೯೪೧ರಲ್ಲಿ ದೇಶದಲ್ಲಿ ಏರ್ಪಾಡುಗಳನ್ನು ಮಾಡಲು ರೇಕಿಯವರು ಪಾಲ್ ಕೊಸೋಕ್'ಗೆ ನೆರವಾದರು. ಈ ಏರ್ಪಾಟಿನಲ್ಲಿ ಅವರು ವಿಮಾನದ ಮೂಲಕ ಎತ್ತರದಿಂದ ಮೊಟ್ಟಮೊದಲು ನಾಸ್ಕಾದ ರೇಖೆಗಳು ಮತ್ತು ಚಿತ್ರಗಳನ್ನು ಕಂಡರು.[೯] ಅವರಿಬ್ಬರೂ ಸೇರಿ ಈ ಗೆರೆಗಳ ಬಗ್ಗೆ ಹೆಚ್ಚಿನ ಅಧ್ಯಯನಗಳನ್ನು ವರ್ಷಗಳ ಕಾಲ ಮಾಡಿದರು. ಅವುಗಳನ್ನು ಹೇಗೆ ರಚಿಸಲಾಯಿತು ಮತ್ತು ಯಾವ ಉದ್ದೇಶಕ್ಕಾಗಿ ಅಷ್ಟು ಕಷ್ಟದಿಂದ ರಚಿಸಲಾಯಿತು ಎಂಬುದನ್ನು ಕಂಡಿಹಿಡಿಯಲು ಪ್ರಯತ್ನಿಸಿದರು.

ನಾಸ್ಕಾ ಗೆರೆಗಳ ಬಗ್ಗೆ ಸಂಶೋಧನೆ

1940 ರಲ್ಲಿ, ಪೆರುದಲ್ಲಿನ ಪುರಾತನ ನೀರಾವರಿ ವ್ಯವಸ್ಥೆಯನ್ನು ಅಧ್ಯಯನ ಮಾಡುತ್ತಿದ್ದ ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಲಾಂಗ್ ಐಲ್ಯಾಂಡ್ ವಿಶ್ವವಿದ್ಯಾಲಯದ ಅಮೇರಿಕನ್ ಇತಿಹಾಸಕಾರ ಪಾಲ್ ಕೊಸೊಕ್‌ಗೆ ರೇಕಿ ಸಹಾಯಕರಾದರು.

ಜೂನ್ ೧೯೪೧ರಲ್ಲಿ, ಕೊಸೊಕ್ ದಕ್ಷಿಣಾಯಣದ ಚಳಿಗಾಲದ ಸಂಕ್ರಮಣದಲ್ಲಿ ದಕ್ಷಿಣ ಗೋಳಾರ್ಧದಲ್ಲಿ ಸೇರುವ ಮರುಭೂಮಿಯ ಸಾಲುಗಳನ್ನು ಗಮನಿಸಿದರು. ಅವರು ಮತ್ತು ರೇಕಿ ಸೇರಿ ಖಗೋಳ ಘಟನೆಗಳಿಗೆ ಆ ಗೆರೆಗಳ ಸಂಬಂಧ ಕಂಡುಹಿಡಿಯಲು ಆ ರೇಖೆಗಳ ನಕ್ಷೆ ಮಾಡಲು ಮತ್ತು ಅಂದಾಜಿಸಲು ಪ್ರಾರಂಭಿಸಿದರು. ನಂತರ ರೇಕಿ ಬೇಸಿಗೆಯ ಅಯನ ಸಂಕ್ರಮಣದಲ್ಲಿ ಗೆರೆಗಳು ಒಮ್ಮುಖವಾಗುವುದನ್ನು ಕಂಡುಕೊಂಡರು ಮತ್ತು ಆ ರೇಖೆಗಳು ದೊಡ್ಡ ಪ್ರಮಾಣದ ಆಕಾಶ ಕ್ಯಾಲೆಂಡರ್'ನಂತೆ ರಚಿಸಿಲಾದವು ಎಂಬ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು.[೧೦] ೧೯೪೬ರ ಸುಮಾರಿಗೆ ರೇಕಿ ನಾಜ್ಕಾ ಗೆರೆಗಳಿಂದ ರೂಪಿಸಲಾದ ಚಿತ್ರಗಳ ನಕಾಶೆ ಮಾಡಲು ಆರಂಭಿಸಿದರು ಮತ್ತು ೧೮ ವಿವಿಧ ರೀತಿಯ ಪ್ರಾಣಿ ಮತ್ತು ಪಕ್ಷಿಗಳ ಚಿತ್ರಗಳಿರುವುದನ್ನು ಅನ್ವೇಷಿಸಿದರು.

1948 ರಲ್ಲಿ ಅವರ ಎರಡನೇ ಅಧ್ಯಯನದ ಅವಧಿಯ ನಂತರ ಕೊಸೊಕ್ ಪೆರುವಿನಿಂದ ತೆರಳಿದ ನಂತರ, ರೇಕಿ ಕೆಲಸವನ್ನು ಮುಂದುವರಿಸಿದರು ಮತ್ತು ಆ ಪ್ರದೇಶವನ್ನು ಮ್ಯಾಪ್ ಮಾಡಿದರು. ಇಷ್ಟು ದೊಡ್ಡ ಪ್ರಮಾಣದ ಚಿತ್ರಗಳನ್ನು ನಾಸ್ಕಾದಲ್ಲಿ ಹೇಗೆ ಸೃಷ್ಟಿಸಿರಬಹುದು ಎಂದು ವಿಶ್ಲೇಷಿಸಲು ಆಕೆ ತನ್ನ ಗಣಿತದ ಹಿನ್ನೆಲೆಯನ್ನು ಬಳಸಿಕೊಂಡರು. ಇವು ಸುಸಜ್ಜಿತವಾದ ಗಣಿತೀಯ ನಿಖರತೆಯನ್ನು ಹೊಂದಿರುವುದನ್ನು ಅವರು ಕಂಡುಕೊಂಡಳು. ಆ ಗೆರೆಗಳನ್ನು ರಚಿಸಿದವರು ಅವುಗಳನ್ನು ಸೌರಮಾನ ಕ್ಯಾಲೆಂಡರ್ ಮತ್ತು ಖಗೋಳ ಘಟನೆಗಳ ವೀಕ್ಷಣಾಲಯವಾಗಿ ಬಳಸುತ್ತಿದ್ದರು ಎಂದು ರೇಕಿ ಸಿದ್ಧಾಂತ ಮಂಡಿಸಿದರು.

ಈಗ ಮ್ಯೂಸಿಯಂ ಆಗಿರುವ ಅವರ ಹಳೆಮನೆಯಲ್ಲಿ ರೇಕಿಯವರ ಮೇಣದ ಪ್ರತಿಕೃತಿ

ಮೇಲಿನಿಂದ ರೇಖೆಗಳನ್ನು ಉತ್ತಮವಾಗಿ ನೋಡಬಹುದಾದ ಕಾರಣ, ತನ್ನ ವೈಮಾನಿಕ ಛಾಯಾಚಿತ್ರ ಸಮೀಕ್ಷೆಗಳನ್ನು ಮಾಡಲು ಸಹಾಯಕ್ಕಾಗಿ ಪೆರು ವಾಯುಪಡೆಯು ಮನವೊಲಿಸಿದರು. ಅವರು ನಾಜ್ಕಾದಲ್ಲಿರುವ ತನ್ನ ಮನೆಯಿಂದ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದಳು. ರೇಕಿ ತನ್ನ ಸಿದ್ಧಾಂತಗಳನ್ನು ದಿ ಮಿಸ್ಟರಿ ಆನ್ ದಿ ಡೆಸರ್ಟ್ (1949, ಮರುಮುದ್ರಣ 1968) ಪುಸ್ತಕದಲ್ಲಿ ಪ್ರಕಟಿಸಿದರು. ದೈತ್ಯ ಕೋತಿಯ ದೊಡ್ಡ ರೇಖಾಚಿತ್ರವು ಈಗ ಉರ್ಸಾ ಮೇಜರ್ (ಗ್ರೇಟ್ ಬೇರ್) ಎಂದು ಕರೆಯಲ್ಪಡುವ ನಕ್ಷತ್ರಪುಂಜವನ್ನು ಪ್ರತಿನಿಧಿಸುತ್ತದೆ ಎಂದು ಅವರು ನಂಬಿದ್ದರು. ಆಕೆಯ ಪುಸ್ತಕಕ್ಕೆ ವಿದ್ವಾಂಸರಿಂದ ಮಿಶ್ರ ಪ್ರತಿಕ್ರಿಯೆ ಇತ್ತು. ಅಂತಿಮವಾಗಿ ವಿದ್ವಾಂಸರು ಈ ಗೆರೆಗಳು ಮುಖ್ಯವಾಗಿ ಖಗೋಳ ಉದ್ದೇಶಗಳಿಗಾಗಿ ಅಲ್ಲ ಎಂದು ತೀರ್ಮಾನಿಸಿದರು, ಆದರೆ ರೇಕಿ ಮತ್ತು ಕೊಸೊಕ್ ಅವರ ಕೆಲಸವು ದೊಡ್ಡ ಸಂಪನ್ಮೂಲದ ಬಗ್ಗೆ ವಿದ್ವಾಂಸರ ಗಮನವನ್ನು ಸೆಳೆಯಿತು. ಈ ಗೆರೆಗಳು 'ದೇವತೆಗಳಿಂದ ಮಳೆಯನ್ನು ಕರೆಯುವುದಕ್ಕೆ' ಸಂಬಂಧಿಸಿದ ಆರಾಧನೆ ಮತ್ತು ಧಾರ್ಮಿಕ ಸಮಾರಂಭಗಳ ಭಾಗವಾಗಿದ್ದವು ಕೆಲವು ಸಂಶೋಧಕರು ನಂಬಿದ್ದಾರೆ.[೧೧]

ರೇಕಿ ತಮ್ಮ ಪುಸ್ತಕದಿಂದ ಬಂದ ಲಾಭವನ್ನು ನಾಸ್ಕಾ ಮರುಭೂಮಿಯ ಸಂರಕ್ಷಣೆಗಾಗಿ ಪ್ರಚಾರ ಮಾಡಲು ಹಾಗೂ ಕಾವಲುಗಾರರನ್ನು ಮತ್ತು ಸಹಾಯಕರನ್ನು ನೇಮಿಸಿಕೊಳ್ಳಲು ಬಳಸಿದರು. ಪ್ಯಾನ್ ಅಮೇರಿಕನ್ ಹೆದ್ದಾರಿ ಎಂಬ ಸರ್ಕಾರದ ಅಭಿವೃದ್ಧಿ ಯೋಜನೆಯಿಂದಾಗಿ ಹೆದ್ದಾರಿಯು ಒಂದು ರೇಖಾಚಿತ್ರದ ಮೇಲೆ ಹಾದುಹೋದಾಗ ನಂತರ ಅಲ್ಲಿನ ವಾಹನಸಂಚಾರವು ನಾಸ್ಕಾ ಪ್ರದೇಶವನ್ನು ಅತಿಕ್ರಮಿಸದಂತೆ ಸಂರಕ್ಷಿಸಲು ಬಯಸಿದ ರೇಕಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಆ ಬಗ್ಗೆ ತಿಳುವಳಿಕೆ ನೀಡಲು ಸಾಕಷ್ಟು ಹಣವನ್ನು ಖರ್ಚು ಮಾಡಿದರು. ಖಾಸಗಿ ಭದ್ರತೆಗೂ ಖರ್ಚು ಮಾಡಿದ ಆಕೆ, ಆ ಪ್ರದೇಶಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲು ಸರ್ಕಾರಕ್ಕೆ ಮನವರಿಕೆ ಮಾಡಿದರು. ಹೆದ್ದಾರಿಯ ಬಳಿ ಗೋಪುರದ ನಿರ್ಮಾಣವನ್ನು ಅವಳು ಪ್ರಾಯೋಜಿಸಿದಳು, ಇದರಿಂದಾಗಿ ಸಂದರ್ಶಕರು ಅವುಗಳನ್ನು ಹಾನಿಗೊಳಿಸದೆ ನಾಸ್ಕಾ ಗೆರೆಗಳನ್ನು ಅವಲೋಕಿಸ ಮೆಚ್ಚಲು ಸಾಧ್ಯವಾಗುತ್ತಿತ್ತು. ೧೯೯೪ರಲ್ಲಿ ಈ ಗೆರೆಗಳು ವಿಶ್ವ ಪರಂಪರೆಯ ತಾಣವಾಗಲು ರೇಕಿಯ ಕೊಡುಗೆಯೇ ಕಾರಣ.[೧೦]

೧೯೭೭ರಲ್ಲಿ, ರೇಕಿ ಸೌತ್ ಅಮೆರಿಕಾ ಎಕ್ಸ್‌ಪ್ಲೋರರ್ಸ್ ಎಂಬ ಪ್ರಯಾಣ, ವೈಜ್ಞಾನಿಕ ಮತ್ತು ಶೈಕ್ಷಣಿಕ ಲಾಭರಹಿತ ಸಂಸ್ಥೆಯ ಸ್ಥಾಪಕ ಸದಸ್ಯರಾದರು. ಅವರು ಸಂಸ್ಥೆಯ ಸಲಹಾ ಮಂಡಳಿಯಲ್ಲಿದ್ದರು ಮತ್ತು ಸೌತ್ ಅಮೆರಿಕಾ ಎಕ್ಸ್‌ಪ್ಲೋರರ್'ಗಾಗಿ ನಾಸ್ಕಾ ಗೆರೆಗಳ ಪ್ರಾಮುಖ್ಯತೆಯ ಕುರಿತು ಸಂದರ್ಶನ ನೀಡಿದರು.[೧೨]

ಜೀವನ, ಕೊನೆಗಾಲ ಮತ್ತು ನಿಧನ

ರೇಕಿಯ ಆತ್ಮೀಯ ಸ್ನೇಹಿತೆ ಆಮಿ ಮೆರೆಡಿತ್, ಆಕೆಯ ಕೆಲಸಕ್ಕೆ ಹಣ ನೀಡಿದ ಮೊದಲ ವ್ಯಕ್ತಿ ಮಾತ್ರವಲ್ಲದೆ, ಮರಿಯಾಳ ನಾಸ್ಕಾ ಗೆಳಲ್ಲಿ ಆಸಕ್ತಿ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಏಕೆಂದರೆ ಅವಳು "ಟಿಯೆರೂಮ್" ಎಂಬ ಕೆಫೆಯನ್ನು ನಡೆಸುತ್ತಿದ್ದಳು ಜೂಲಿಯೊ ಸಿ ಟೆಲ್ಲೊ ಮತ್ತು ಪಾಲ್ ಕೊಸೊಕ್ ಸೇರಿದಂತೆ. ಅಲ್ಲಿ ಅನೇಕ ಬುದ್ಧಿಜೀವಿಗಳು ಸೇರುತ್ತಿದ್ದರು. ಈ ಸ್ಥಳದಲ್ಲಿಯೇ ರೇಕಿ ಇಬ್ಬರೂ ವಿಜ್ಞಾನಿಗಳನ್ನು ಭೇಟಿಯಾದರು. ಜನವರಿ ೧೯೬೦ರಲ್ಲಿ ಮೆರೆಡಿತ್ ಸಾವು ಮರಿಯಾಳ ಜೀವನದಲ್ಲಿ ದೊಡ್ಡ ಪರಿಣಾಮ ಬೀರಿತು.[೧೩]

ವಯಸ್ಸಾದಂತೆ ರೇಕಿ ಆರೋಗ್ಯ ಹದಗೆಟ್ಟಿತು. ಗಾಲಿಕುರ್ಚಿಯ ಬಳಸತೊಡಗಿದರು. ಚರ್ಮದ ಕಾಯಿಲೆಗಳಿಂದ ಬಳಲುತ್ತಿದ್ದರು ಮತ್ತು ಕಣ್ಣಿನ ದೃಷ್ಟಿ ಕಳೆದುಕೊಂಡರು. ಆಕೆಯ ನಂತರದ ವರ್ಷಗಳಲ್ಲಿ, ಪಾರ್ಕಿನ್ಸನ್ ಕಾಯಿಲೆಯಿಂದಲೂ ಬಳಲುತ್ತಿದ್ದರು. ೯೦ನೇ ವಯಸ್ಸಿನಲ್ಲಿ ಅವರು ಪ್ರಾಚೀನ ಪೆರುವಿನಲ್ಲಿ ಜ್ಯಾಮಿತಿ ಮತ್ತು ಖಗೋಳಶಾಸ್ತ್ರಕ್ಕೆ ಕೊಡುಗೆಗಳನ್ನು(Contributions to Geometry and Astronomy in Ancient Peru) ಪ್ರಕಟಿಸಿದರು. ಅಂಡಾಶಯದ ಕ್ಯಾನ್ಸರ್‌ನಿಂದ , ಪೆರುದ ಸ್ಯಾಂಟಿಯಾಗೊ ಡಿ ಸುರ್ಕೊದ ಲಾಸ್ ಪಾಲ್ಮಾಸ್ ಏರ್ ಬೇಸ್‌ನಲ್ಲಿರುವ ಫ್ಯೂರ್ಜಾ ಏರಿಯಾ ಡೆಲ್ ಪೆರ್ (ಪೆರುವಿಯನ್ ಏರ್ ಫೋರ್ಸ್) ಆಸ್ಪತ್ರೆಯಲ್ಲಿ, ೮ ಜೂನ್ ೧೯೯೮ ರಂದು ನಿಧನರಾದರು. ನಾಸ್ಕಾ ಬಳಿ ಅವರ ಸಹೋದರಿ ಡಾ. ರೆನೆಟ್ ರೇಕಿ-ಗ್ರಾಸ್ ರ[೧೪] ಸಮಾಧಿಯೊಂದಿಗೆ ಅಧಿಕೃತ ಗೌರವಗಳೊಂದಿಗೆ ರೇಕಿಯವರ ಅಂತ್ಯಕ್ರಿಯೆ ಮಾಡಲಾಯಿತು. ನಾಸ್ಕಾದ ಒಂದು ರಸ್ತೆ ಮತ್ತು ಶಾಲೆಗೆ ಅವರ ಹೆಸರಿಡಲಾಗಿದೆ.

ಬಾಹ್ಯ ಸಂಪರ್ಕಕೊಂಡಿಗಳು

Page ಮಾಡ್ಯೂಲ್:Portal/styles.css has no content.

  • Asociación Maria Reiche, website, non-profit for conservation and preservation of the Lines and Figures of Nasca
  • Association "Dr. Maria Reiche – Lines and Figures of the Nasca culture in Peru", University of Applies Sciences, Dresden
  • Homepage Maria Reiche
  • Zetzsche, Viola and Schulze, Dietrich: Biography of Maria Reiche, Picture Book of the Desert – Maria Reiche and the Ground Designs of Nasca, Mitteldeutscher Verlag Halle, September 2005, ISBN 3-89812-298-0
  • Maria Reiche. Detailed chronology (with literature from Peru)
  • "Maria Reiche and the Stars of Nazca", Anita Jepson-Gilbert, Nazca Resources.

ಉಲ್ಲೇಖಗಳು

  1. "Obituary: Maria Reiche". 22 October 2011.
  2. Jr, Robert McG Thomas (15 ಜೂನ್ 1998). "Maria Reiche, 95, Keeper of an Ancient Peruvian Puzzle, Dies". The New York Times (in ಅಮೆರಿಕನ್ ಇಂಗ್ಲಿಷ್). ISSN 0362-4331. Archived from the original on 5 ಡಿಸೆಂಬರ್ 2018. Retrieved 3 ಮಾರ್ಚ್ 2018.
  3. ನೇಮಿಚಂದ್ರ. ಪೆರುವಿನ ಪವಿತ್ರ ಕಣಿವೆಯಲ್ಲಿ (೨೦೦೮ ed.). ಬೆಂಗಳೂರು: ನವಕರ್ನಾಟಕ ಪ್ರಕಾಶನ. p. ೬೬,೬೭,೬೮.
  4. Centre, UNESCO World Heritage. "Lines and Geoglyphs of Nasca and Palpa". whc.unesco.org (in ಇಂಗ್ಲಿಷ್). Archived from the original on 2018-12-05. Retrieved 2018-05-15.
  5. Smith, Kiona N. "Tuesday's Google Doodle Celebrates Nazca Line Archaeologist Maria Reiche". Forbes (in ಇಂಗ್ಲಿಷ್). Archived from the original on 5 ಡಿಸೆಂಬರ್ 2018. Retrieved 15 ಮೇ 2018.
  6. "Today's Google Doodle celebrates the scientist who studied the mysterious desert lines of Peru". The Verge. Archived from the original on 2018-12-05. Retrieved 2018-05-15.
  7. "Maria Reiche's 115th Birthday". Google Doodles Archive. 15 ಮೇ 2018. Archived from the original on 5 ಡಿಸೆಂಬರ್ 2018. Retrieved 15 ಮೇ 2018.
  8. "Indianer-Welt: Nazca - Biographie: Maria Reiche". www.indianer-welt.de. Archived from the original on 5 ಡಿಸೆಂಬರ್ 2018. Retrieved 3 ಮಾರ್ಚ್ 2018.
  9. "Maria and the Stars of Nazca". www.nazcaresources.com. Archived from the original on 23 ಜೂನ್ 2014. Retrieved 3 ಮಾರ್ಚ್ 2018.
  10. ೧೦.೦ ೧೦.೧ "Who was the German governess obsessed with the mystery of Peru's Nazca Lines?". The Independent (in ಬ್ರಿಟಿಷ್ ಇಂಗ್ಲಿಷ್). 2018-05-15. Archived from the original on 2018-12-05. Retrieved 2018-05-15.
  11. "The Nazca Lines", Peru Cultural Society. Archived from the original on 2012-01-28. Retrieved 2012-01-27.
  12. "Bean Sprouts New Theory" (PDF). Retrieved 16 February 2013. South American Explorer, January 1983[ಶಾಶ್ವತವಾಗಿ ಮಡಿದ ಕೊಂಡಿ]
  13. ""Celebraciones por el aniversario de nacimiento de María Reiche" 15 May 2020".
  14. "Obituary: Maria Reiche". 22 October 2011.

ಹೆಚ್ಚಿನ ಓದು

  • 'ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ನಾನಿಗಳು', ಲೇ: ನೇಮಿಚಂದ್ರ, ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್.