ದೀಪಕ್ ಪಾಲಡ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: Manual revert
೭೮ ನೇ ಸಾಲು: ೭೮ ನೇ ಸಾಲು:
|ವಿನ್ಸಿ
|ವಿನ್ಸಿ
|ಹ್ಯಾರಿ ಫೆರ್ನಾಂಡಿಸ್
|ಹ್ಯಾರಿ ಫೆರ್ನಾಂಡಿಸ್
|ಸಂಗತಿ ಪ್ರೊಡಕ್ಷನ್ಸ್‌
|ಸಿರಿಲ್ ಕ್ಯಾಸ್ಟಲಿನೊ
|ಕೊಂಕಣಿ ಸಿನಿಮಾ
|ಕೊಂಕಣಿ ಸಿನಿಮಾ
|-
|-

೨೨:೫೪, ೮ ಸೆಪ್ಟೆಂಬರ್ ೨೦೨೧ ನಂತೆ ಪರಿಷ್ಕರಣೆ

ದೀಪಕ್ ಪಾಲಡ್ಕ
ದೀಪಕ್ ಪಾಲಡ್ಕ
ಜನನ೧೧ ಏಪ್ರಿಲ್
ಇತರೆ ಹೆಸರುಗಳುದೀಪು, ದೀಪಕ್ ಡಿ'ಸಿಲ್ವಾ
ವಿದ್ಯಾರ್ಹತೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಜೈನ ಪ್ರೌಢ ಶಾಲೆ , ಮೂಡುಬಿದಿರೆ,
ಪದವಿ ಪೂರ್ವ ಶಿಕ್ಷಣ- ಮಹಾವೀರ ಕಾಲೇಜು, ಮೂಡುಬಿದಿರೆ
ಪದವಿ ಮತ್ತು ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) - ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ , ಮುಂಬೈ.
ಉದ್ಯೋಗಚಲನಚಿತ್ರ ನಟ, ರಂಗ ಕಲಾವಿದ,
ಸಕ್ರಿಯ ವರ್ಷಗಳು೨೦೧೪ - ಇಂದಿನ ವರೆಗೆ
ಇದಕ್ಕೆ ಖ್ಯಾತರುಅಂತರಾಷ್ಟ್ರೀಯ ಚಲನಚಿತ್ರ ನಿರೆಲ್ ಎಂಬ ತುಳು ಸಿನಿಮಾದಲ್ಲಿ ನಟಿಸಿದಕ್ಕಾಗಿ
ಜೀವನ ಸಂಗಾತಿರೋಶ್ನಿ
ಪೋಷಕರುಜಾರ್ಜ್ ಡಿಸಿಲ್ವಾ (ತಂದೆ), ಫಿಲೊಮೆನಾ (ತಾಯಿ)

ದೀಪಕ್ ಡಿ'ಸಿಲ್ವಾ ಅಲಿಯಾಸ್ ದೀಪಕ್ ಪಾಲಡ್ಕ(Deepak Paladka)(ಜನನ:೧೧ ಏಪ್ರಿಲ್), ಇವರು ಭಾರತೀಯ ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ನಿರೆಲ್ ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ದಂಡ್(ತುಳು) , ಅಸತೋಮ ಸದ್ಗಮಯ(ಕನ್ನಡ), ಬೆಂಡ್ಕಾರ್(ಕೊಂಕಣಿ),ಏಕ್ ಅಸ್ಲ್ಯಾರ್ ಏಕ್ ನ (ಕೊಂಕಣಿ),ಜ಼ಾವೋಯ್ ನಂಬರ್ 1 (ಕೊಂಕಣಿ), ಅಮ್ಮೆರ್ ಪೋಲಿಸಾ(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಜನನ, ಆರಂಭಿಕ ಜೀವನ ಮತ್ತು ಶಿಕ್ಷಣ

ದೀಪಕ್ ಪಾಲಡ್ಕ ಇವರು ಜಾರ್ಜ್ ಡಿ'ಸಿಲ್ವಾ (ತಂದೆ) ಮತ್ತು ಫಿಲೊಮೆನಾ (ತಾಯಿ) ದಂಪತಿಗೆ ೧೧ ಏಪ್ರಿಲ್ ೧೯೭೪ ರಂದು ಮೂಡುಬಿದಿರೆಯ ಪಾಲಡ್ಕದಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ಮೂಡುಬಿದಿರೆಯ ಜೈನ ಪ್ರೌಢ ಶಾಲೆಯಲ್ಲಿ ಪಡೆದು ಅಲ್ಲಿನ ಮಹಾವೀರ ಕಾಲೇಜಿನಲ್ಲಿ ಪಿಯು ಶಿಕ್ಷಣವನ್ನು ಪಡೆದರು. ನಂತರ ಮುಂಬೈನ ಕೈಝನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತ್ತಕೋತ್ತರ ಪದವಿ(ಎಂ.ಬಿ.ಎ) ಪೂರ್ಣಗೊಳಿಸಿದರು. ರಂಗನಟನಾಗಿ, ಇವರು ಸುಮಾರು ೧೫-೨೦ ಕೊಂಕಣಿ, ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.[೧]

ವೃತ್ತಿಜೀವನ

ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ನಿರೆಲ್ ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ದಂಡ್ ಸಿನಿಮಾದಲ್ಲಿ ಅರ್ಜುನ್ ಕಾಪಿಕಾಡ್ರ ಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು ಆಸ್ಟ್ರೇಲಿಯಾ ಮತ್ತು ಯು.ಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕ ರವರ ಕೊಂಕಣಿ ಚಿತ್ರ ಏಕ್ ಅಸ್ಲ್ಯಾರ್ ಏಕ್ ನಾ, ಸವೋಯ್ ನಂಬರ್ ೧ (೨೦೧೮), ಬೆಂಡ್ಕಾರ್ (೨೦೧೯) ಎಂಬ ಚಿತ್ರಗಳು ಯು.ಎ.ಇ, ಇಸ್ರೇಲ್, ಕುವೈಟ್ ಮತ್ತು ಭಾರತದಲ್ಲಿ ಬಿಡುಗಡೆಯಾಗಿದೆ. ಇವರು ಕನ್ನಡ ಸಿನಿಮಾ ಅಸತೋಮ ಸದ್ಗಮಯ ದಲ್ಲೂ ನಟಿಸಿದ್ದಾರೆ.[೨][೩]

ಅಭಿನಯಿಸಿದ ಸಿನಿಮಾಗಳ ಪಟ್ಟಿ

ತುಳು ಸಿನಿಮಾಗಳು

ವರ್ಷ ಸಿನಿಮಾ
ಪಾತ್ರ ನಿರ್ದೇಶಕ ನಿರ್ಮಾಪಕ ಟಿಪ್ಪಣಿ
೨೦೧೪ ನಿರೆಲ್ ದೀಪು ರಂಜಿತ್‌ ಬಜ್ಪೆ ಶೋಧನ್ ಪ್ರಸಾದ್ , ಸನ್ ಪೂಜಾರಿ
೨೦೧೫ ದಂಡ್ ದೀಪು[೪] ರಂಜಿತ್‌ ಬಜ್ಪೆ ಶೋಧನ್‌ ಪ್ರಸಾದ್
೨೦೧೮ ಅಮ್ಮೆರ್ ಪೋಲಿಸಾ[೫] ಕೆ.ಸೂರಜ್ ಶೆಟ್ಟಿ[೬] ತುಳು ಸಿನಿಮಾ

ಕೊಂಕಣಿ ಸಿನಿಮಾಗಳು

ವರ್ಷ ಸಿನಿಮಾ
ಪಾತ್ರ ನಿರ್ದೇಶಕ ನಿರ್ಮಾಪಕ ಟಿಪ್ಪಣಿ
೨೦೧೮ ಏಕ್ ಅಸ್ಲ್ಯಾರ್ ಏಕ್ ನ ದೀಪು ಪ್ರದೀಪ್ ಬರ್ಬೋಸ ಫ್ರಾಂಕ್ ಫೆರ್ನಾಂಡಿಸ್ ಕೊಂಕಣಿ ಸಿನಿಮಾ
೨೦೧೮ ಜ಼ಾವೋಯ್ ನಂಬರ್ ೧

[೧]

ವಿನ್ಸಿ ಹ್ಯಾರಿ ಫೆರ್ನಾಂಡಿಸ್ ಸಂಗತಿ ಪ್ರೊಡಕ್ಷನ್ಸ್‌ ಕೊಂಕಣಿ ಸಿನಿಮಾ
೨೦೧೯ ಬೆಂಡ್ಕಾರ್[೭] ದೀಪು ಹ್ಯಾರಿ ಫೆರ್ನಾಂಡಿಸ್ ಹ್ಯಾರಿ ಫೆರ್ನಾಂಡಿಸ್ / ಡಾಲ್ಫಿ ರೆಬೆಲ್ಲೊ ಕೊಂಕಣಿ ಸಿನಿಮಾ

ಕನ್ನಡ ಸಿನಿಮಾಗಳು

ವರ್ಷ ಸಿನಿಮಾ
ಪಾತ್ರ ನಿರ್ದೇಶಕ ನಿರ್ಮಾಪಕ ಟಿಪ್ಪಣಿ
೨೦೧೮ ಅಸತೋಮ ಸದ್ಗಮಯ[೮] ಮೆಣಸಿನಕಾಯಿ ರಾಜೇಶ್‌ ವೇಣೂರು ಅಶ್ವಿನ್ ಪೆರೀರ ಕನ್ನಡ ಸಿನಿಮಾ[೯]

ಉಲ್ಲೇಖಗಳು

  1. "Deepak Paladka, Tulunadu's comedian making passion a profession". NewsKarnataka (in ಇಂಗ್ಲಿಷ್). Archived from the original on 3 July 2020. Retrieved 3 July 2020.
  2. https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s
  3. "Bengaluru: First look of Rajesh Venoor's 'Asathoma Sadgamaya' Kannada movie released". www.daijiworld.com. Retrieved 3 July 2020.
  4. "Deepak Paladka - Tulu Industry's New Friend". canaranews.com. Retrieved 2015-10-17.
  5. Ammer Polisa Movie: Showtimes, Review, Trailer, Posters, News & Videos | eTimes, retrieved 2019-05-27
  6. Cinema, Tulu (2018-06-23). "Checkout exclusive movie review of "Ammer Polisa" a film you should not miss to watch!" (in ಅಮೆರಿಕನ್ ಇಂಗ್ಲಿಷ್). Retrieved 2019-05-27.
  7. "Udupi: It's lights, camera, action for 4th movie of Harry Fernandes' 'Benddkar'". www.daijiworld.com. Retrieved 2019-05-27.
  8. Asathoma Sadgamaya Movie Review {2.5/5}: Critic Review of Asathoma Sadgamaya by Times of India, retrieved 2019-05-27
  9. "Asathoma Sadgamaya (2018) | Asathoma Sadgamaya Movie | Asathoma Sadgamaya Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 2019-05-27.