"ಆಸ್ಟ್ರೇಲಿಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
 
ಆಸ್ಟ್ರೇಲಿಯ ಸ್ವಯಮಾಡಳಿತವುಳ್ಳ ಸ್ವತಂತ್ರ ಪ್ರಜಾರಾಜ್ಯ. ಪ್ರಜಾಪ್ರತಿನಿಧಿಸಭೆಯನ್ನು ಹೊಂದಿದ ಸಂಯುಕ್ತ ಸಂಸ್ಥಾನ. 1901 ರಲ್ಲಿ ಇಲ್ಲಿ ನೆಲೆಸಿದ್ದ 6 ವಸಾಹತುಗಳ ಒಮ್ಮತದಿಂದ ಈ ರಾಜ್ಯಾಂಗ ವ್ಯವಸ್ಥೆಯಾಯಿತು. ಪ್ರತಿಯೊಂದು ವಸಾಹತೂ ಒಂದು ರಾಜ್ಯವಾಯಿತು. ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಮತ್ತು ಇಂಗ್ಲೆಂಡಿನ ರಾಜ್ಯಭಾರದ ಮೂಲತತ್ತ್ವಗಳನ್ನು ಕಾಣಬಹುದು. ಸಂಯುಕ್ತ ರಾಜ್ಯದ ಅಧಿಕಾರವನ್ನು ವಿಶದವಾಗಿ ತಿಳಿಸಿ ನಿಗದಿಮಾಡಲಾಗಿದೆ. ಬ್ರಿಟಿಷ್ ದೊರೆಯ ಪ್ರತಿನಿಧಿಯಾಗಿ ಒಬ್ಬ ಗವರ್ನರ್ ಜನರಲ್ ಇದ್ದಾನೆ; ರಾಷ್ಟ್ರದ ಪಾರ್ಲಿಮೆಂಟ್ ಅಥವಾ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಆಡಳಿತ ಹೆಸರಿಗೆ ಮಾತ್ರ ಕಾರ್ಯಕಾರಿ ಸಮಿತಿಯ ಸಹಾಯದಿಂದ ಕೆಲಸಮಾಡುವ ಗವರ್ನರ್ ಜನರಲ್ನ ಕೈಯಲ್ಲಿದೆ; ವಾಸ್ತವವಾಗಿ ಆಡಳಿತದ ಜವಾಬ್ದಾರಿಯೆಲ್ಲ ಕೆಳಮನೆಯಲ್ಲಿ ಅಭಿಮತಪರಮಾಧಿಕ್ಯ ಪಡೆದ ಪಕ್ಷ ಅಥವಾ ಸಂಯುಕ್ತ ಪಕ್ಷದ ಮುಖ್ಯಸ್ಥನಾಗಿ ಪ್ರಧಾನಮಂತ್ರಿಯಾಗಿರುವವ ಮತ್ತು ಅವನಿಂದ ನಿಯಮಿತರಾಗಿರುವವರಿಂದ ಕೂಡಿದ ಮಂತ್ರಿಮಂಡಲಕ್ಕೆ ಸೇರಿದೆ. ಕೆಳಮನೆ ಸದಸ್ಯರು ಮೂರು ವರ್ಷ ಕಾಲವಾದರೂ ಆಸ್ಟ್ರೇಲಿಯದ ನಿವಾಸಿಗಳಾಗಿರಬೇಕು ಮತ್ತು ಬ್ರಿಟಿಷರಾಗಿರಬೇಕು ಎಂಬ ನಿಬಂಧನೆಯಿದೆ.
 
ಶಾಸನರಚನೆ ಪಾರ್ಲಿಮೆಂಟಿಗೆ ಸೇರಿದ್ದು; ಈ ಪಾರ್ಲಿಮೆಂಟ್, 76 ಸದಸ್ಯರನ್ನುಳ್ಳ ಸೆನೆಟ್ ಅಥವಾ ಮೇಲ್ಮನೆ ಮತ್ತು 148 ಸದಸ್ಯರನ್ನುಳ್ಳ ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ಅಥವಾ ಕೆಳಮನೆಗಳನ್ನೊಳಗೊಂಡಿದೆ. ಅನುಪಾತಿಪ್ರಾತಿನಿಧ್ಯ ಕ್ರಮದಲ್ಲಿ ಚುನಾಯಿತರಾದ ಹತ್ತು ಮಂದಿ ಸದಸ್ಯರನ್ನು ಪ್ರತಿರಾಜ್ಯವೂ ಮೇಲ್ಮನೆಗೆ ಕಳುಹಿಸುತ್ತದೆ. ಅವರ ಕಾಲಾವಧಿ ಆರು ವರ್ಷ. ಆದರೆ ಮೂರು ವರ್ಷ ಕಳೆದ ಕೂಡಲೇ ಅರ್ಧ ಸದಸ್ಯರು ಬಿಟ್ಟುಹೋಗುತ್ತಾರೆ. ಕೆಳಮನೆಯಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಚುನಾಯಿತರಾದ ಐದು ಮಂದಿ ಸದಸ್ಯರಾದರೂ ಇರಲೇಬೇಕೆಂಬ ನಿಯಮವಿದೆ. ಕೆಳಮನೆ ವರ್ಷಕ್ಕೊಂದು ಸಲವಾದರೂ ಸೇರಲೇಬೇಕು. ತೆರಿಗೆ ವಿಧಿಸುವುದು, ವಿನಿಯೋಗ, ಕೆಳಮನೆಗೆ ಸೇರಿದ್ದು. ಆದಿವಾಸಿಗಳು: ಇವರು ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲ. ಅವರೆಲ್ಲರೂ ಆಗ್ನೇಯ ಏಷ್ಯದಿಂದ, ಮುಖ್ಯವಾಗಿ ಇಂಡೊನೇಷ್ಯದಿಂದ 50,000 ವರ್ಷಗಳ ಹಿಂದೆ ವಲಸೆ ಬಂದವರು. ಪುರಾತತ್ತ್ವಶಾಸ್ತ್ರಜ್ಞರು ಆದಿವಾಸಿಗಳ ನೂರೂರು ನೆಲೆಗಳನ್ನು ಉತ್ಪನನ ಮಾಡಿದ್ದಾರೆ. ಅವುಗಳಲ್ಲಿ ಸಿಡ್ನಿ ಸಮೀಪ ಪೆನ್ರಿತ್ ಎಂಬ ನೆಲೆ ಸು. 45,000 ವರ್ಷಗಳಷ್ಟು ಪ್ರಾಚೀನವಾದುದು. ಅಗ್ನೇಯ ಏಷ್ಯದವರಾಗಿದ್ದ ಅವರು ನೀರ್ಗಲ್ಲ ಯುಗ ಬಂದು ಭೂಮಿಯ ಉತ್ತರಭಾಗದ ನೀರೆಲ್ಲ ಘನೀಭವಿಸಿದ ಮೇಲೆ ದಕ್ಷಿಣ ಪ್ರದೇಶಗಳಿಗೆ ವಲಸೆ ಬಂದರು. ಆಗ ಏಷ್ಯದ ಆಗ್ನೇಯ ಭಾಗ ಆಸ್ಟ್ರೇಲಿಯದೊಂದಿಗೆ ಭೂಸಂಪರ್ಕ ಹೊಂದಿತ್ತು. ಈ ಯುಗ ಮುಗಿದ ಮೇಲೆ, ಭೂಮಿಯ ಮೇಲೆ ಹರಡಿದ್ದ ನೀರ್ಗಲ್ಲು ಕರಗಿ ಸಮುದ್ರಕ್ಕೆ ಹರಿಯಿತು; ತಗ್ಗು ಪ್ರದೇಶಗಳೆಲ್ಲ ನೀರಿನಿಂದಾವರಿಸಲ್ಪಟ್ಟು ಎತ್ತರ ಪ್ರದೇಶಗಳೆಲ್ಲ ದ್ವೀಪಗಳಾಗಿ ನಿಂತವು.
 
== ಆದಿವಾಸಿಗಳು ==
ಇವರು ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲ. ಅವರೆಲ್ಲರೂ ಆಗ್ನೇಯ ಏಷ್ಯದಿಂದ, ಮುಖ್ಯವಾಗಿ ಇಂಡೊನೇಷ್ಯದಿಂದ 50,000 ವರ್ಷಗಳ ಹಿಂದೆ ವಲಸೆ ಬಂದವರು. ಪುರಾತತ್ತ್ವಶಾಸ್ತ್ರಜ್ಞರು ಆದಿವಾಸಿಗಳ ನೂರೂರು ನೆಲೆಗಳನ್ನು ಉತ್ಪನನ ಮಾಡಿದ್ದಾರೆ. ಅವುಗಳಲ್ಲಿ ಸಿಡ್ನಿ ಸಮೀಪ ಪೆನ್ರಿತ್ ಎಂಬ ನೆಲೆ ಸು. 45,000 ವರ್ಷಗಳಷ್ಟು ಪ್ರಾಚೀನವಾದುದು. ಅಗ್ನೇಯ ಏಷ್ಯದವರಾಗಿದ್ದ ಅವರು ನೀರ್ಗಲ್ಲ ಯುಗ ಬಂದು ಭೂಮಿಯ ಉತ್ತರಭಾಗದ ನೀರೆಲ್ಲ ಘನೀಭವಿಸಿದ ಮೇಲೆ ದಕ್ಷಿಣ ಪ್ರದೇಶಗಳಿಗೆ ವಲಸೆ ಬಂದರು. ಆಗ ಏಷ್ಯದ ಆಗ್ನೇಯ ಭಾಗ ಆಸ್ಟ್ರೇಲಿಯದೊಂದಿಗೆ ಭೂಸಂಪರ್ಕ ಹೊಂದಿತ್ತು. ಈ ಯುಗ ಮುಗಿದ ಮೇಲೆ, ಭೂಮಿಯ ಮೇಲೆ ಹರಡಿದ್ದ ನೀರ್ಗಲ್ಲು ಕರಗಿ ಸಮುದ್ರಕ್ಕೆ ಹರಿಯಿತು; ತಗ್ಗು ಪ್ರದೇಶಗಳೆಲ್ಲ ನೀರಿನಿಂದಾವರಿಸಲ್ಪಟ್ಟು ಎತ್ತರ ಪ್ರದೇಶಗಳೆಲ್ಲ ದ್ವೀಪಗಳಾಗಿ ನಿಂತವು.
 
ಈ ಕಾಲದಲ್ಲೇ ಆಸ್ಟ್ರೇಲಿಯವು ಆಗ್ನೇಯ ಏಷ್ಯದ ಭೂ ಭಾಗದಿಂದ ಪ್ರತ್ಯೇಕಿಸಲ್ಪಟ್ಟು ಅಲ್ಲಿಗೆ ಬಂದು ನೆಲೆಸಿದ್ದ ಜನರು ಏಷ್ಯದ ಇತರ ಜನರೊಂದಿಗೆ ಸಂಪರ್ಕವನ್ನು ಕಳೆದುಕೊಂಡರು. ಇವರಲ್ಲಿ ಮುಖ್ಯ ಪಂಗಡಗಳೆಂದರೆ ಈಶಾನ್ಯದ ಒರೀನಿಯನ್ ನಗ್ರಿಟೊಗಳು, ಉತ್ತರದ ಕಾರ್ಪೆಂಟೇರಿಯನ್ ಜನ, ಪಶ್ಚಿಮದ ಮರಳು ಗಾಡಿನ ಬುಡಕಟ್ಟುಗಳು, ಆಗ್ನೇಯದ ಮರೆ ಬಯಲಿನ ಆದಿವಾಸಿಗಳು.
 
ಈ ಆದಿವಾಸಿಗಳಲ್ಲಿ ಮುಖ್ಯವಾಗಿ ಕಂಡುಬರುವ ಒಂದು ಅಂಶವೆಂದರೆ, ಅವರ ಜೀವನಕ್ರಮ, ಸಂಪ್ರದಾಯಗಳು, ಕೊಂಚಮಟ್ಟಿಗೆ ಭಾಷೆಯಲ್ಲೂ ಕಂಡುಬರುವ ಸಾಮ್ಯ. ಈ ಹೋಲಿಕೆ ಬೇರೆ ಯಾವ ದೇಶದಲ್ಲೂ ಕಂಡುಬಂದಿಲ್ಲ. ಆಸ್ಟ್ರೇಲಿಯ ಒಂದು ದೊಡ್ಡ ದ್ವೀಪವಾದ ಅನಂತರ ಅವರು ಆಗ್ನೇಯ ಏಷ್ಯದ ಇತರ ಜನರ ಸಂಪರ್ಕವನ್ನು ಕಳೆದುಕೊಂಡರು; ಅಲ್ಲದೆ ಅವರಲ್ಲನೇಕರು ಆಹಾರ ಸೌಕರ್ಯಕ್ಕಾಗಿ ಅಲೆಮಾರಿಜೀವನ ನಡೆಸಬೇಕಾಗಿದ್ದುದರಿಂದ ಅವರಲ್ಲೇ ಪರಸ್ಪರ ಸಂಪರ್ಕವೇರ್ಪಡುವಂತಾಗಿ ಅನೇಕರು ತಮ್ಮ ಪ್ರತ್ಯೇಕತೆಯನ್ನು ಕಾಲಕ್ರಮೇಣ ಕಳೆದುಕೊಂಡರು. ಎತ್ತರದಲ್ಲಿ ಅವರು ಮಧ್ಯಮ ಮಟ್ಟದವರೆನ್ನಬಹುದು; ಅವರ ಅಂಗಾಂಗಗಳಲ್ಲಿ ತಕ್ಕ ಮಟ್ಟಿನ ಹೊಂದಿಕೆಯಿದೆ. ಆದರೆ ಸರಿಯಾದ ಪೋಷಣೆಯಿಲ್ಲದ ಕೃಶಾಂಗರಾಗಿದ್ದಾರೆ. ಅವರದು ಕಂದು ಬಣ್ಣ, ಕೂದಲು ತೀರ ಕಪ್ಪು. 1788ರಲ್ಲಿ, ಅಂದರೆ ಬಿಳಿಯರು ಆಸ್ಟ್ರೇಲಿಯದಲ್ಲಿ ನೆಲೆಸಲು ಪ್ರಾರಂಭಿಸಿದಾಗ, ಅಲ್ಲಿನ ಆದಿವಾಸಿಗಳ ಸಂಖ್ಯೆ ಸು. 71/2 ಲಕ್ಷದಷ್ಟಿತ್ತೆಂದು ಕೆಲವರು ಲೆಕ್ಕಹಾಕಿದ್ದಾರೆ. ಆಸ್ಟ್ರೇಲಿಯದ ಉತ್ತರ ಪ್ರಾಂತ್ಯದಲ್ಲಿ ಮಾತ್ರ ಒಟ್ಟು ಜನಸಂಖ್ಯೆಯ ಶೇ.25 ಭಾಗದಷ್ಟು ಆದಿವಾಸಿಗಳಿದ್ದಾರೆ. ಬಿಳಿಯರಿಂದ ಗೊತ್ತುಗುರಿಯಿಲ್ಲದ ಸಾಮೂಹಿಕ ಕೊಲೆಯಲ್ಲದೆ ಕೆಲವು ಕಡೆ ವಿಷಪ್ರಯೋಗ, ಸಿಡುಬು, ಕ್ಷಯ ಮುಂತಾದ ಸಾಂಕ್ರಾಮಿಕ ರೋಗಗಳು ಇವುಗಳ ಪರಿಣಾಮವಾಗಿ ಆ ಸಂಖ್ಯೆ ಬಹುಬೇಗ ಕುಗ್ಗಿ, 1966ರಲ್ಲಿ ನಡೆಸಿದ ಗಣತಿಯ ಪ್ರಕಾರ 79,620ಕ್ಕೆ ಇಳಿದಿದೆ. ಟಾಸ್ಮೇನಿಯದ ಆದಿವಾಸಿಗಳು ಮಲಯ, ಪಾಲಿನೇಷ್ಯಗಳಿಂದ ವಲಸೆ ಬಂದ ಪುಟ್ಟ ನೀಗ್ರೊಕಲ್ಪ ಜಾತಿಯವರು. ಇವರು 1888ರ ಕಾಲಕ್ಕೆ ನಿರ್ನಾಮವಾದರು. ಈ ಆದಿವಾಸಿಗಳು ಹೀಗೆ ಅಳಿಯುವುದನ್ನು ತಡೆಗಟ್ಟುವುದಕ್ಕಾಗಿ ಆಸ್ಟ್ರೇಲಿಯ ಸರ್ಕಾರ ವ್ಯಾಪಕವಾದ ಕಾರ್ಯಕ್ರಮವನ್ನು ಕೈಗೊಂಡಿದೆ. ಇದು ಒಬ್ಬ ಸಚಿವನ ನೇತೃತ್ವದಲ್ಲಿ ನಡೆಯುತ್ತಿದೆ. 1967ರಲ್ಲಿ ಆಸ್ಟ್ರೇಲಿಯದ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಆದಿವಾಸಿಗಳನ್ನು ಅಧಿಕೃತ ಜನಗಣತಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಯಿತು. ಅಲ್ಲದೆ ಅವರಿಗೆ ಮತದಾನದ ಹಕ್ಕು ನೀಡಲಾಯಿತು. ಉತ್ತರ ಪ್ರಾಂತ್ಯದಲ್ಲಿ ಮೊದಲಿಗೆ 1976ರಲ್ಲಿ ಆದಿವಾಸಿಗಳಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇತರ ಕೆಲವು ಪ್ರಾಂತ್ಯಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಆಧುನಿಕ ಸೌಲಭ್ಯಗಳಿರುವ ಮನೆಗಳನ್ನು ನಿರ್ಮಿಸಿಕೊಡುವ ಹಾಗೂ ಇತರ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಆದಿವಾಸಿಗಳ ಜನಸಂಖ್ಯೆ ಈಚೆಗೆ ಇಳಿಮುಖವಾಗಿಲ್ಲ.
 
ಈ ಆದಿವಾಸಿಗಳು ಕೃಷಿಜೀವನ ನಡೆಸುವ ಮಟ್ಟಕ್ಕೆ ಏರಲೇ ಇಲ್ಲ; ಉತ್ತರ ಪ್ರಾಂತ್ಯದ ಕೆಲವೇ ಜನರ ಹೊರತು ಬೇಟೆಯಾಡುವುದು, ದೊರಕಿದ ಆಹಾರ ವಸ್ತುಗಳನ್ನು ಸಂಗ್ರಹಿಸುವುದು, ಇವೇ ಅವರ ಮುಖ್ಯ ಕಸಬುಗಳು. ತಾವು ನೆಲೆಸಿದ ಪ್ರದೇಶದ ಜೀವನೋಪಾಯ ಸಾಧನೆಗಳನ್ನು ಇವರು ಚೆನ್ನಾಗಿ ಅರಿತಿರುತ್ತಾರೆ. ಈ ಸಾಧನಗಳು ಕಡಿಮೆಯಾದಾಗಲೆಲ್ಲ ಬೇರೆ ಪ್ರಾಂತ್ಯಗಳಿಗೆ ವಲಸೆಹೋಗುತ್ತಾರೆ. ಅವರಿಗೆ ಜೀವನಾವಶ್ಯಕ ವಸ್ತುಗಳೇ ಅತ್ಯಲ್ಪ. ಬಹುಪಾಲು ಜನರು ನಗ್ನರಾಗಿಯೇ ಇರುತ್ತಾರೆ. ಅವರು ಧರಿಸುವುದು ಕೆಲವು ಆಭರಣಗಳನ್ನು ಮಾತ್ರ. ಮರಳುಗಾಡಿನಲ್ಲಿ ಚಳಿಗಾಲದ ಕೊರೆತದಿಂದ ತಪ್ಪಿಸಿಕೊಳ್ಳಲಾರರು. ಗಾಳಿಬರುವ ದಿಕ್ಕಿಗೆದುರಾಗಿ ಸಣ್ಣದಿಬ್ಬವನ್ನೇರ್ಪಡಿಸಿ ಕೊಳ್ಳುತ್ತಾರೆ. ಪಕ್ಕದಲ್ಲೇ ಬೆಂಕಿಯನ್ನುರಿಸುತ್ತಾರೆ. ಮನೆಗಳನ್ನು ಕಾಣರು. ಅವರಿಗಿರುವುದು, ಕಡ್ಡಿಗಳು, ಎಲೆಗಳಿಂದ ಮಾಡಿದ ಗೂಡಿನಂಥ ಗುಡಿಸಲು. ರಾತ್ರಿಯ ಚಳಿಯನ್ನು ತಡೆಯುವುದಕ್ಕಾಗಿ ಅನೇಕ ಪಂಗಡಗಳ ಜನರು ತಾವು ಆಹಾರಕ್ಕಾಗಿ ಕೊಂದ ಪ್ರಾಣಿಗಳ ಕೊಬ್ಬನ್ನು ಸಾಯಂಕಾಲವೇ ಮೈಗೆಲ್ಲ ಬಳಿದುಕೊಳ್ಳುತ್ತಾರೆ. ಹೆಚ್ಚು ಶಾಖಕ್ಕಾಗಿ ಅದರಮೇಲೆ ಬೂದಿಯನ್ನು ಸವರುತ್ತಾರೆ. ರಾತ್ರಿಯೆಲ್ಲ ಆಗಾಗ್ಗೆ ಎದ್ದು ಹಾಸಿನ ಬದಿಯ ಉರಿಯನ್ನು ಸರಿಮಾಡುತ್ತಾರೆ. ಅವರು ವಾಸಿಸುವ ಪ್ರದೇಶ ಬಹುಪಾಲು ಮರಳುಗಾಡಾದ್ದರಿಂದ ನೀರು ದೊರಕುವುದು ಬಹುಕಷ್ಟ. ಅದನ್ನು ದೊರಕಿಸಿಕೊಳ್ಳುವುದಕ್ಕಾಗಿ ಚಮತ್ಕಾರವಾದ ವಿಧಾನಗಳನ್ನು ತಿಳಿದುಕೊಂಡಿದ್ದಾರೆ. [[ಡಿಂಗೋ]], ಕಾಂಗರೂ ಮುಂತಾದ ಪ್ರಾಣಿಗಳು ಒಂದೆರಡು ಅಡಿ ಆಳದಲ್ಲೇ ನೀರು ಇರುವ ಸ್ಥಳಗಳನ್ನು ವಾಸನೆಯಿಂದ ತಿಳಿದು ಅಲ್ಲಿ ಬಗೆದು ನೀರು ಕುಡಿಯುತ್ತವೆ. ಈ ಪ್ರಾಣಿಗಳನ್ನು ಹಿಂಬಾಲಿಸಿ ಹೋಗಿ ಈ ಜನರೂ ನೀರನ್ನು ದೊರಕಿಸಿಕೊಳ್ಳುತ್ತಾರೆ. ಕೆಲವು ಮರಗಳು ಕೊಳವಿಯಂತಿರುವ ತಮ್ಮ ಬೇರುಗಳಲ್ಲಿ ನೀರನ್ನು ಶೇಖರಿಸುತ್ತವೆ; ಇವುಗಳನ್ನು ಅಗೆದು ಆ ನೀರನ್ನು ಉಪಯೋಗಿಸುತ್ತಾರೆ. ಕೆಲವುವೇಳೆ ಕಪ್ಪೆಗಳು ತಮ್ಮ ಹೊಟ್ಟೆಯಲ್ಲಿ ಶೇಖರಿಸುವ ನೀರನ್ನೂ ತೆಗೆದು ಕುಡಿಯುತ್ತಾರೆ. ಕೆಲವು ಕಡೆ ಬೆಳಿಗ್ಗೆ ಮುಂಚೆಯೇ ಎದ್ದು ಗಿಡಗಳ ಎಲೆಗಳ ಮೇಲಿರುವ ಇಬ್ಬನಿಯನ್ನು ಶೇಖರಿಸುತ್ತಾರೆ.
 
ಪ್ರಾಣಿಗಳನ್ನು ಬೇಟೆಯಾಡಿಯೇ ಆಹಾರವನ್ನೊದಗಿಸಿಕೊಳ್ಳಬೇಕಾದ ಇವರು ಬೇಟೆಯಲ್ಲಿ ಬಲು ಚತುರರು; ಸುಳಿವು ಕೊಡದೆ ಬೇಟೆಯನ್ನು ಬೆನ್ನಟ್ಟಿ ಹೋಗುವ ನೈಪುಣ್ಯದಲ್ಲಿ ಇವರನ್ನು ಯಾರೂ ಮೀರಿಸಿಲ್ಲ. ಕಲ್ಲಿನ ಮತ್ತು ಮರದ ಆಯುಧಗಳು ಹೆಚ್ಚು ಕಡಿಮೆ ಇತರ ದೇಶಗಳ ಆದಿವಾಸಿಗಳ ಆಯುಧಗಳಂತೆಯೇ ಇದ್ದರೂ ಬೂಮರ್ಯಾಂಗ್ ಇವರ ವಿಶಿಷ್ಟ ಆಯುಧ. ಇದು ಗುರಿಗೆ ತಗಲಿದಮೇಲೆ ಎಸೆದವನ ಬಳಿಗೇ ಬಂದು ಬೀಳುತ್ತದೆ. ಇದನ್ನು ಪ್ರಾಚೀನ ಈಜಿಪ್ಟ್, ಭಾರತ ಮುಂತಾದ ಕೆಲವು ದೇಶಗಳಲ್ಲೂ ಉಪಯೋಗಿಸುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಆಸ್ಟ್ರೇಲಿಯದ ಆದಿವಾಸಿಗಳು ಇದನ್ನು ಪ್ರಯೋಗಿಸಿದಷ್ಟು ಬೇರೆ ಯಾವ ದೇಶದವರೂ ಪ್ರಯೋಗಿಸಲಿಲ್ಲ. ಸದ್ದಿಲ್ಲದೆ ಬೇಟೆಯನ್ನು ಬೆನ್ನಟ್ಟುವುದನ್ನು ಇವರು ಮಕ್ಕಳಿಗೆ ಬಾಲ್ಯದಿಂದಲೂ ಕಲಿಸುತ್ತಾರೆ.
೮,೯೦೪

edits

"https://kn.wikipedia.org/wiki/ವಿಶೇಷ:MobileDiff/1075105" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ