"ಆಸ್ಟ್ರೇಲಿಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚು
(obs tag)
'''ಸೈಲೂರಿಯನ್ ಯುಗ''': ಉತ್ತಮ ದರ್ಜೆಯ ಶಿಲಾಸ್ತರಗಳು ಪೂರ್ವ ಆಸ್ಟ್ರೇಲಿಯದ ಟಾಸ್ಮನ್ ಮಹಾಅಭಿನತಿಯ ಶಿಲಾಸಮುದಾಯಕ್ಕೆ ಸೀಮಿತವಾಗಿವೆ. ಸುಣ್ಣಶಿಲಾ ದಿಬ್ಬಗಳು ನ್ಯೂಸೌತ್ವೇಲ್ಸ್ ನ ಚಿಲಾಗೊ, ಕ್ವೀನ್ಸ್ ಲೆಂಡ್ ಮತ್ತು ಜೆನೊಲಾನ್ ಗುಹಾಪ್ರದೇಶಗಳಲ್ಲಿವೆ. ವಿಕ್ಟೋರಿಯ ಪ್ರಾಂತ್ಯದಲ್ಲೂ ಇದೇ ಯುಗದ ಗ್ರಾಪ್ಟೊಲೈಟ್ ಮತ್ತು ಚಿಪ್ಪುಗಳುಳ್ಳ ಜೇಡು ಮತ್ತು ಮರಳು ಶಿಲಾಸ್ತರಗಳನ್ನು ನೋಡಬಹುದು. ಮೆಲ್ಬೋರ್ನಿಯನ್ ಸ್ತರಗಳಲ್ಲಿ ಅತಿಪುರಾತನ ಭೂಸಸ್ಯ (ವ್ಯಾಸ್ಕ್ಯುಲರ್ ಲ್ಯಾಂಡ್ ಪ್ಲಾಂಟ್ಸ್) ಬಾಗೊರ್ವ್ವನಾತಿಯ ಮತ್ತು ಗ್ರಾಪ್ಟೊಲೈಟ್ ಅವಶೇಷಗಳಿವೆ
 
'''[[ಡಿವೋನಿಯನ್]] ಯುಗ''': ವಿಕ್ಟೋರಿಯ ಪ್ರಾಂತ್ಯದಲ್ಲಿ ಕೆಳ ಡಿವೋನಿಯನ್ ಸ್ತರಗಳು ಎರಿಂಜಿಯನ್ ಶ್ರೇಣಿಯಲ್ಲಿ ಬಹು ಚೆನ್ನಾಗಿ ಕಂಡುಬರುತ್ತವೆ. ಅಡಿಯಲ್ಲಿ ಪೆಂಟೆ ಶಿಲೆ (ಕಂಗ್ಲಾಮರೇಟ್), ಕ್ರಮೇಣ ಅದರ ಮೇಲೆ ಸುಣ್ಣ ಶಿಲಾಸ್ತರ, ಸಹಸ್ರಾರು ಅಡಿ ಮಂದವಿರುವ ವಾಲ್ಹಲಾ ಶ್ರೇಣಿ ಎನಿಸಿದ ಜೇಡು ಶಿಲಾಸ್ತರಗಳು ಮತ್ತು ಮರಳು ಶಿಲಾಸ್ತರಗಳಿವೆ. ಮಧ್ಯ ಡಿವೋನಿಯನ್ ಸುಣ್ಣಶಿಲಾ ದಿಬ್ಬಗಳಲ್ಲಿ ಮತ್ತು ಸುಣ್ಣಯುಕ್ತ ಜೇಡುಶಿಲಾ ಸ್ತರಗಳಲ್ಲಿ ಅಸಂಖ್ಯಾತ ಅಕಶೇರುಕಗಳ ಮತ್ತು ಮೀನುಗಳ ಅವಶೇಷಗಳಿವೆ. ಬಹುಶಃ ಈ ಯುಗದಲ್ಲೇ ಪರ್ವತ ಜನ್ಯ ಶಕ್ತಿಗಳು ಉದ್ಭವಿಸಿ ಅವುಗಳ ಪ್ರಭಾವಕ್ಕೆ ಪೂರ್ವ ಆಸ್ಟ್ರೇಲಿಯದ ಶಿಲೆಗಳೂ ಒಳಗಾದುವು. ವಿಕ್ಟೋರಿಯ ಪ್ರಾಂತ್ಯದ ಭೂಖಂಡದ ಮರಳು ಶಿಲಾಸ್ತಂಭಗಳು ಜೇಡು ಶಿಲಾಸ್ತರಗಳು ಮತ್ತು ಟಫ಼್ ಗಳಲ್ಲಿ ಸಸ್ಯಗಳ ಮತ್ತು ಮೀನುಗಳ ಅವಶೇಷಗಳಿವೆ. ಇದೇ ಭೂಕಾಲದ ನ್ಯೂ ಸೌತ್ವೇಲ್ಸ್ ನ ಲ್ಯಾಂಬಿಯನ್ ಶಿಲಾಸಮೂಹ ಸಮುದ್ರ ಆಕ್ರಮಣಕ್ಕೆ ಸಂಬಂಧಿಸಿದುದೆಂದು ಊಹಿಸಲಾಗಿದೆ.
ಇದೇ ಕಾಲದಲ್ಲಿ ಅಗ್ನಿಶಿಲಾ ಚಟುವಟಿಕೆಯೂ ತೀವ್ರಗತಿಯಲ್ಲಿತ್ತು. ವಿಕ್ಟೋರಿಯ ಪ್ರಾಂತ್ಯದಲ್ಲಿ ಅಧಿಕ ಸಿಲಿಕಾಂಶ ಲಾವಾ ಸ್ತರಗಳೂ ಲ್ಯಾಂಪ್ರೊಫೈರ್ ಮತ್ತು ಡಯೊರೈಟ್ ಡೈಕ್ ಶಿಲೆಗಳೂ ಕಂಡುಬಂದಿವೆ. ಅಲ್ಲದೆ ಯುಗದ ಅಂತ್ಯದಲ್ಲಿ ಉಂಟಾದ ಈ ಬಗೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಡೇಸೈಟ್, ರಯೊಲೈಟ್ ಮುಂತಾದ ಅಗ್ನಿಶಿಲಾ (ಲಾವಾ) ಸ್ತರಗಳನ್ನು ನೋಡಬಹುದು. ಅಲ್ಲದೆ ಗ್ರಾನೊಡಯೊರೈಟ್ ಮತ್ತು ಅಡಮಲೈಟ್ ಡೈಕುಗಳನ್ನೂ ಸ್ಟಾಕ್ಗಳನ್ನೂ ಅನೇಕ ಕಡೆ ನೋಡಬಹುದು.
 
೮,೯೧೮

edits

"https://kn.wikipedia.org/wiki/ವಿಶೇಷ:MobileDiff/1073846" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ