"ವಂಶವಾಹಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
</br> ಮೆಂಡಲ್‌ನ ಕೆಲಸಗಳು ೧೮೬೬ರಲ್ಲಿ ಮೊದಲು ಪ್ರಕಟವಾದಾಗ ಹೆಚ್ಚಿನವರ ಗಮನ ಸೆಳೆಯಲಿಲ್ಲ. ಆದರೆ ೧೯ನೆಯ ಶತಮಾನದ ಮೂರನೆಯ ಪಾದದಲ್ಲಿ ಹುಗೊ ಡೆ ವ್ರಿಸ್, ಕಾರ್ಲ್ ಕೊರ್ರೆನ್ಸ್ ಮತ್ತು ಎರಿಚ್ ವೊನ್ ಸ್ಕೆರ್ಮಕ್ ತಮ್ಮ ಸಂಶೋಧನೆಗಳ ಮೂಲಕ ಇಂತಹುದೇ ನಿರ್ಣಯಗಳಿಗೆ ಬಂದಿರುವುದಾಗಿ ಹೇಳಿದರು.<ref> Henig, Robin Marantz (2000). The Monk in the Garden: The Lost and Found Genius of Gregor Mendel, the Father of Genetics. Boston: Houghton Mifflin. pp. 1–9. ISBN 978-0395-97765-1.</ref> ವಿಶೇಷವಾಗಿ ಹುಗೊ ಡಿ ವ್ರಿಸ್ ೧೮೮೯ರಲ್ಲಿ <i>ಇಂಟರ್‌ಸೆಲ್ಯುಲಾರ್ ಪ್ಯಾನ್‌ಜೆನೆಸಿಸ್</i> ಎಂಬ ತನ್ನ ಪುಸ್ತಕವನ್ನು ಪ್ರಕಟಿಸಿದ.<ref>Vries, H. de, Intracellulare Pangenese, Verlag von Gustav Fischer, Jena, 1889. Translated in 1908 from German to English by C. Stuart Gager as Intracellular Pangenesis, Open Court Publishing Co., Chicago, 1910</ref> ಅದರಲ್ಲಿ ವಿಭಿನ್ನ ಗುಣಗಳು ಪ್ರತ್ಯೇಕ ವಾಹಕಗಳನ್ನು ಹೊಂದಿರುತ್ತವೆಂತಲೂ ಮತ್ತು ಜೀವಿಗಳಲ್ಲಿನ ನಿರ್ದಿಷ್ಟ ಗುಣಗಳು ಅನುವಂಶಿಕವಾಗಿ ಕಣಗಳಲ್ಲಿ ಬರುತ್ತವೆ ಎಂತಲೂ ಹೇಳಿದ. ಈ ಘಟಕಗಳಿಗೆ ಡಾರ್ವಿನ್‌ನ <i>ಪ್ಯಾನ್‌ಜೆನೆಸಿಸ್</i> ಸಿದ್ಧಾಂತ ಅನುಸರಿಸಿ “ಪ್ಯಾನ್‌ಜೀನ್”ಗಳು ಎಂದು ಕರೆದ.
</br> ಹದಿನಾರು ವರುಶಗಳ ನಂತರ, ೧೯೦೫ರಲ್ಲಿ ವಿಲಿಯಂ ಬೇಟ್‌ಸನ್ <i>ಜೆನೆಟಿಕ್ಸ್</i> ಪದವನ್ನು ಬಳಸಿದ<ref name="D">Gerstein MB, Bruce C, Rozowsky JS, Zheng D, Du J, Korbel JO, Emanuelsson O, Zhang ZD, Weissman S, Snyder M (June 2007). "What is a gene, post-ENCODE? History and updated definition". Genome Research 17 (6): 669–681. doi:10.1101/gr.6339607. PMID 17567988.</ref>ಆದರೆ ಎಡ್ರುಡ್ ಸ್ಟ್ರಾಸ್‌ಬರ್ಗರ್ (ಮತ್ತು ಇತರರು) ಅನುವಂಶಿಕತೆಯ ಮೂಲಭೂತ ಭೌತಿಕ ಮತ್ತು ಕಾರ್ಯಾನಿರ್ವಹಿಸುವ ಘಟಕಕ್ಕೆ ಇನ್ನೂ <i>ಪ್ಯಾನ್‌ಜೀನ್</i> ಪದವನ್ನೇ ಬಳಸುತ್ತಿದ್ದ.<ref> Gager, C.S., Translator's preface to Intracellular Pangenesis, page viii.</ref> ಡೆನ್ಮಾರ್ಕಿನ ಸಸ್ಯಶಾಸ್ತ್ರಜ್ಞ ವಿಲ್‌ಹೆಲ್ಮ್ ಜೊಹಾನ್ಸನ್ ಇದನ್ನು <i>ಜೀನ್</i> ಎಂದು ಸಣ್ಣದು ಮಾಡಿದ.<ref> "The Human Genome Project Timeline". Retrieved 13 September 2006.</ref> ಇಂಗ್ಲೀಶ್‌ನ ಜೀನ್‌ಗೆ ಕನ್ನಡ ಸಂವಾದಿ ಪದ ವಂಶವಾಹಿ.
===[[ಡಿಎನ್ಎ]] ಕಂಡುಹಿಡಿಯುವಿಕೆ===
</br>ವಂಶವಾಹಿ ಮತ್ತು ಅನುವಂಶಿಕತೆಯ ಅರ್ಥೈಸುವಿಕೆ ಇಪ್ಪನೆಯ ಶತಮಾನದಾದ್ಯಂತ ಪ್ರಗತಿ ಕಂಡಿತು. ೧೯೪೦ರದಶಕ ದಿಂದ ೧೯೫೦ರ ದಶಕದ ಪ್ರಯೋಗಗಳು [[ಡಿ.ಎನ್.ಎ|ಡಿಆಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ]] ಅನುವಂಶಿಕತೆ ಮಾಹಿತಿಯನ್ನು ಅಣು ರೂಪದಲ್ಲಿ ಹಿಡಿದಿಟ್ಟಿದೆ ಎಂದು ತೋರಿಸಿಕೊಟ್ಟವು.<ref>Avery, OT; MacLeod, CM; McCarty, M (1944). "Studies on the Chemical Nature of the Substance Inducing Transformation of Pneumococcal Types: Induction of Transformation by a Desoxyribonucleic Acid Fraction Isolated from Pneumococcus Type III". The Journal of Experimental Medicine 79 (2): 137–58. doi:10.1084/jem.79.2.137. PMC 2135445. PMID 19871359. Reprint: Avery, OT; MacLeod, CM; McCarty, M (1979). "Studies on the chemical nature of the substance inducing transformation of pneumococcal types. Inductions of transformation by a desoxyribonucleic acid fraction isolated from pneumococcus type III". The Journal of Experimental Medicine 149 (2): 297–326. doi:10.1084/jem.149.2.297. PMC 2184805. PMID 33226.</ref><ref>Hershey, AD; Chase, M (1952). "Independent functions of viral protein and nucleic acid in growth of bacteriophage". The Journal of General Physiology 36 (1): 39–56. doi:10.1085/jgp.36.1.39. PMC 2147348. PMID 12981234.</ref> ರೋಸಾಲಿಂಡ್ ಫ್ರಾಂಕ್‌ಲಿನ್ ಎಕ್ಸ್‌ರೇ ಕ್ರಿಸ್ಟಲೊಗ್ರಾಫಿ ಬಳಸಿ ಡಿಎನ್ಎ ರಚನೆ ಅಧ್ಯನ ಮಾಡಿದರು ಮತ್ತು ಇದು ಜೇಮ್ಸ್ ವ್ಯಾಟ್ಸನ್ ಮತ್ತು ಫ್ರಾನ್ಸಿಸ್ ಕ್ರೀಕ್ ಎರಡು ತಂತುಗಳ ಅಥವಾ ಎಳೆಗಳ ಡಿಎನ್ಎ ಅಣುವಿನ ಮಾದರಿ ಪ್ರಕಟಿಸಲು ಕಾರಣವಾಯಿತು. ಇಲ್ಲಿಯ ಡಿಎನ್ಎ ಅಣುವಿನ ನ್ಯೂಕ್ಲಿಯೊಟೈಡ್‌ ಜೋಡಿ ವಂಶವಾಹಿ ನಕಲಿಸುವ ಮೆಕಾನಿಸಂ ಒಂದನ್ನು ಸೂಚಿಸುವ ಊಹೆಗೆ ದಾರಿಮಾಡಿ ಕೊಟ್ಟಿತು.<ref> Judson, Horace (1979). The Eighth Day of Creation: Makers of the Revolution in Biology. Cold Spring Harbor Laboratory Press. pp. 51–169. ISBN 0-87969-477-7.</ref><ref> Watson, J. D.; Crick, FH (1953). "Molecular Structure of Nucleic Acids: A Structure for Deoxyribose Nucleic Acid" (PDF). Nature 171 (4356): 737–8. Bibcode:1953Natur.171..737W. doi:10.1038/171737a0. PMID 13054692.</ref> ಒಟ್ಟಾರೆಯಾಗಿ ಈ ಸಂಶೋಧನೆಗಳ ಸಮೂಹ [[ಅಣ್ವಿಕ ಜೀವಶಾಸ್ತ್ರ]]ದ ಕೇಂದ್ರ ಡಾಗ್ಮ (ವಿಚಾರಕ್ಕೆಡಗೊಡದ ನಂಬಿಕೆ) ಆಯಿತು. ಇದು ಡಿಎನ್‌ಎ [[ಆರ್.ಎನ್.ಎ|ಆರ್‌ಎನ್ಎ]]ಯನ್ನು ಲಿಪ್ಯಂತರಿಸುತ್ತದೆಂತಲೂ ಮತ್ತು ಆರ್‌ಎನ್ಎ [[ಪ್ರೋಟೀನ್|ಪ್ರೋಟೀನ್‌ಗಳನ್ನು]] ಅನುವಾದಿಸುತ್ತವೆಯೆಂತಲೂ ಹೇಳುತ್ತದೆ. ಈ ಡಾಗ್ಮಕ್ಕೆ ರಿಟ್ರೊವೈರಾಣುಗಳಲ್ಲಿನ ಹಿಮ್ಮುಖದ ಲಿಪ್ಯಂತರಗಳಂತಹ ಅಪವಾದಗಳಿವೆ ಎಂದು ತೋರಿಸ ಕೊಡಲಾಗಿದೆ. [[ತಳಿವಿಜ್ಞಾನ]]ದ ಡಿಎನ್ಎ ಮಟ್ಟದ ಆಧುನಿಕ ಅದ್ಯಯನವನ್ನು ಅಣ್ವಿಕ ಜೀವಶಾಸ್ತ್ರ (ಮಾಲೆಕ್ಯೂಲಾರ್ ಬಯಾಲಜಿ) ಎಂದು ಕರೆಯಲಾಗಿದೆ.
</br> ೧೯೭೨ರಲ್ಲಿ ವಾಲ್ಟರ್ ಫಿಯೆರ್ಸ್ ಮತ್ತು ಅವರ ತಂಡ ಘೆಂಟ್ ಯುನಿವರ್ಸಿಟಿಯಲ್ಲಿ ಮೊದಲು ಬ್ಯಾಕ್ಟೀರಿಯಫೇಸ್‌ನ ಎಂಎಸ್೨ ಪ್ರೋಟೀನ್ ಕವಚದ ವಂಶವಾಹಿಯ ಸರಣಿಯನ್ನು ನಿರ್ಣಯಿಸಿತು.<ref> Min Jou W, Haegeman G, Ysebaert M, Fiers W (May 1972). "Nucleotide sequence of the gene coding for the bacteriophage MS2 coat protein". Nature 237 (5350): 82–8. Bibcode:1972Natur.237...82J. doi:10.1038/237082a0. PMID 4555447.</ref> ನಂತರದಲ್ಲಿ ೧೯೭೭ರಲ್ಲಿ ಫ್ರೆಡೆರಿಕ್ ಸ್ಯಾಂಗರ್ ಸರಪಣಿ-ಕೊನೆಗೊಳಿಸುವಿಕೆ ಡಿಎನ್ಎ ಸರಣಿಯನ್ನು ಅಭಿವೃದ್ಧಿ ಪಡಿಸಿ ಸರಣಿ ಗುರುತಿಸುವ ಕಾರ್ಯಕ್ಷಮತೆಯನ್ನು ಹೆಚ್ಚಿಸಿದ ಮತ್ತು ಅದನ್ನು ರೂಢಿಯ ಪ್ರಯೋಗಶಾಲೆ ಪರಿಕರವನ್ನಾಗಿಸಿದ.<ref> Sanger, F; Nicklen, S; Coulson, AR (1977). "DNA sequencing with chain-terminating inhibitors". Proceedings of the National Academy of Sciences of the United States of America 74 (12): 5463–7. Bibcode:1977PNAS...74.5463S. doi:10.1073/pnas.74.12.5463. PMC 431765. PMID 271968.</ref> ಮಾನವ ಜಿನೋಮ್ ಪ್ರಾಜೆಕ್ಟ್‌ನ ಆರಂಭಿಕ ಹಂತದಲ್ಲಿ ಸ್ಯಾಂಗರ್ ಪದ್ಧತಿಯ ಸ್ವಯಂಚಾಲಿತ ಆವೃತ್ತಿಯನ್ನು ಬಳಸಲಾಯಿತು.<ref> Adams, Jill U. (2008). "DNA Sequencing Technologies". Nature Education Knowledge. SciTable (Nature Publishing Group) 1 (1): 193.</ref>
 
===ಆಧುನಿಕ ವಿಕಸನೀಯ ಸಂಯೋಜನೆ===
</br>೧೯೩೦ರ ದಶಕ ಮತ್ತು ೧೯೪೦ರ ದಶಕಗಳಲ್ಲಿ ಅಣ್ವಿಕ ತಳಿವಿಜ್ಞಾನ ಮತ್ತು ಡಾರ್ವಿನ್‌ನ ವಿಕಾಸವಾದಗಳನ್ನು ಬೆಸೆಯಲು ಅಭಿವೃದ್ಧಿ ಪಡಿಸಿದ ಸಿದ್ಧಾಂತಗಳಿಗೆ ಆಧುನಿಕ ವಿಕಸನೀಯ ಸಂಯೋಜನೆ (ಮಾರ್ಡನ್ ಎವುಲ್ಯೂಶನರಿ ಸಿಂಥೆಸಿಸ್) ಎಂದು ಕರೆಯಲಾಗಿದ್ದು ಈ ಪದವನ್ನು ಜ್ಯೂಲಿಯಸ್ ಹಕ್ಸಲಿ ಬಳಕೆಗೆ ತಂದ.<ref> Huxley, Julian (1942). Evolution: the modern synthesis (Definitive ed.). Cambridge, Mass.: MIT Press. ISBN 978-0262513661.</ref> ವಿಕಸನೀಯ ಜೀವಶಾಸ್ತ್ರಜ್ಞರು ನಂತರ ಈ ಪರಿಕಲ್ಪನೆಯನ್ನು ಸುಧಾರಿಸಿದರು. ಇಂತಹ ಸುಧಾರಣೆ ಮಾಡಿದವರಲ್ಲಿ ಜಾರ್ಜ ಸಿ ವಿಲಿಯಮ್ಸ್ ಒಬ್ಬ. ಅವನು ತನ್ನ ‌ವಂಶವಾಹಿ-ಕೇಂದ್ರಿತ ವಿಕಾಸದ ದೃಷ್ಟಿಕೋನದಲ್ಲಿ ಇದನ್ನು ಮಾಡಿದ. ಅವನು ವಂಶವಾಹಿಯ ವಿಕಸನೀಯ ಪರಿಕಲ್ಪನೆಯನ್ನು ನೈಸರ್ಗಿಕ ಆಯ್ಕೆಯ ಘಟಕ ಎಂದು ಸೂಚಿಸಿದ ಮತ್ತು ಅದನ್ನು “ಯಾವುದು ಗಮನಾರ್ಹವಾಗುವಷ್ಟು ಸಲ ಬೇರ್ಪಡುತ್ತದೆ ಮತ್ತು ಪುನಸೇರುತ್ತದೆಯೊ ಅದು ” ಎಂದು ವ್ಯಾಖ್ಯಾನಿಸಿದ.<ref> Williams, George C. (2001). Adaptation and Natural Selection a Critique of Some Current Evolutionary Thought. ([Online-Ausg.]. ed.). Princeton: Princeton University Press. ISBN 9781400820108.</ref><sup>:೨೪</sup> ಈ ಚಿಂತನೆಯಲ್ಲಿ ಅಣ್ವಿಕ ವಂಶವಾಹಿಯು ಒಂದು ಘಟಕವಾಗಿ <i>ಲಿಪ್ಯಂತರವಾಗುತ್ತದೆ</i> ಮತ್ತು ವಿಕಸನೀಯ ವಂಶವಾಹಿ ಒಂದು ಘಟಕವಾಗಿ ಮುಂದಿನ ಪೀಳಿಗೆಗೆ ಕೊಡಲ್ಪಡುತ್ತದೆ. ವಿಕಾಸದಲ್ಲಿ ವಂಶವಾಹಿಗಳ ಪ್ರಾಮುಖ್ಯತೆಯನ್ನು ಸಂಬಂಧಿತ ಚಿಂತನೆಗಳಿಗೆ ಒತ್ತುಹಾಕುವ ಮೂಲಕ ರಿಚರ್ಡ್ ಡಾವ್ಕಿನ್ಸ್ ಜನಪ್ರಿಯಗೊಳಿಸಿದ.<ref> Dawkins, Richard (1977). The selfish gene (Repr. (with corr.) ed.). London: Oxford Univ. Press. ISBN 0-19-857519-X.</ref><ref> Dawkins, Richard (1989). The extended phenotype. (Pbk. ed.). Oxford: Oxford University Press. ISBN 0-19-286088-7.</ref>
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/1030903" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ