ಪರಶುರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಪರಸುರಾಮ ಪರಸುರಾಮ ಈಟಿ
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: Manual revert ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩ ನೇ ಸಾಲು: ೩ ನೇ ಸಾಲು:
| Image = Parashurama with axe.jpg
| Image = Parashurama with axe.jpg
| Caption = Lithograph by [[KFLMSBJART2018]] depicting Parashurama with his axe
| Caption = Lithograph by [[KFLMSBJART2018]] depicting Parashurama with his axe
| Name = ಪರಶುರಾಮ ಈಟಿ
| Name = ಪರಶುರಾಮ
| Devanagari = परशुराम
| Devanagari = परशुराम
| Sanskrit_Transliteration = Paraśurāma
| Sanskrit_Transliteration = Paraśurāma

೨೨:೨೩, ೨ ಮಾರ್ಚ್ ೨೦೨೧ ನಂತೆ ಪರಿಷ್ಕರಣೆ

ಪರಶುರಾಮ
Lithograph by KFLMSBJART2018 depicting Parashurama with his axe
ದೇವನಾಗರಿपरशुराम
ಸಂಸ್ಕೃತ ಲಿಪ್ಯಂತರಣParaśurāma
ಸಂಲಗ್ನತೆAvatar of Lord Vishnu
ನೆಲೆMahendragiri,KARNATAKA(ಪರಶುಘಢ)
ಆಯುಧAxe (Parshu)
ಸಂಗಾತಿDharini
Surya, the sun god, riding across the sky in his chariot
Meeting of Rama and Parashurama

ಪರಶುರಾಮ ವಿಷ್ಣುವಿನ ಆರನೆಯ ಅವತಾರ, ಮತ್ತು ಬ್ರಹ್ಮನ ವಂಶಸ್ಥ ಹಾಗೂ ಶಿವನ ಶಿಷ್ಯ. ಇವರು ರೇಣುಕಾ ಹಾಗೂ ಸಪ್ತರ್ಷಿ ಜಮದಗ್ನಿಯ ಪುತ್ರ. ಇವರು ತ್ರೇತಾಯುಗದ ಕೊನೆಯಲ್ಲಿ ಜೀವಿಸಿದ್ದರು.ಇವರು ತಮ್ಮ ತಾಯಿಗಾಗಿ ಪರಶುಘಡದಲ್ಲಿ(ಸವದತ್ತಿ) ತಪಸ್ಸು ಮಾಡಿ ವಿಶ್ನುವಿನಿಂದ ಪರುಶು(ಕೊಡಲಿ) ಪಡೆದಿದ್ದರು. ಇವರು ಹಿಂದೂ ಧರ್ಮದ ಏಳು ಅಮರ್ತ್ಯರು ಅಥವಾ ಚಿರಂಜೀವಿಗಳ ಪೈಕಿ ಒಬ್ಬರು.

ಪರಶುಘಢ ಪರಶುರಾಮರ ಜನ್ಮಸ್ಥಳ

ಪರಶುರಾಮರ ಜನ್ಮಸ್ಥಳ ರೇಣುಕಾತೀರ್ಥ. ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡ.ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ [ಬ್ರಹ್ಮ] ದೇವರ ನೇರ ತಲೆಮಾರಿನವರಾಗಿದ್ದರು ಎಂಬುದಾಗಿ ಮೂಲಗಳು ತಿಳಿಸಿವೆ.

ಭಗವಾನ್ [[ವಿಷ್ಣು]ವಿನ ಆರನೆಯ ಅವತಾರವೆಂದೇ ಖ್ಯಾತರಾಗಿರುವ ಮಹರ್ಷಿ ಪರಶುರಾಮರು ಬ್ರಾಹ್ಮಣ ಸಪ್ತರ್ಷಿಯಾದ ಜಮದಗ್ನಿ ಮತ್ತು ರೇಣುಕಾದೇವಿ ಯವರ ಪುತ್ರರಾಗಿದ್ದಾರೆ. ತ್ರೇತಾಯುಗದಲ್ಲಿ ಜನಿಸಿ, ಹಿಂದೂ ಧರ್ಮದಲ್ಲಿ ಸಪ್ತಚಿರಂಜೀವಿ ಎಂದು ಕರೆಯಲಾದ ಏಳು ದೇವತೆಗಳಲ್ಲಿ ಒಬ್ಬರೆನಿಸಿದ್ದಾರೆ. ಹುಟ್ಟುವಾಗಲೇ ಬ್ರಾಹ್ಮರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ.

ಯುದ್ಧ ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು.ಅಷ್ಟೇ ಅಲ್ಲದೆ ಕೇರಳದ ಕಲರಿಪಯಟ್ಟುವಿನ ಜನಕಕೂಡ ಹೌದು. ಭೂಮಿಯ ಮೇಲೆ 21 ಬಾರಿ ಪರ್ಯಟನೆಮಾಡಿ ಭ್ರಷ್ಟ ಕ್ಷತ್ರಿಯರನ್ನು ಇವರೊಬ್ಬರೇ ವಧಿಸಿದ್ದಾರೆ. ಪರಶು ಎಂಬುದರ ಅರ್ಥ ಕೊಡಲಿ.ಪರಶುರಾಮ ಎಂಬ ಹೆಸರು ಈ ಅರ್ಥವನ್ನು ಹೊಂದಿರುವುದರಿಂದ ಕೊಡಲಿಯನ್ನು ಹೊಂದಿರುವ ರಾಮ ಎಂಬ ಹೆಸರಿನಿಂದ ಕೂಡ ಪರಶುರಾಮ ಜನಜನಿತರಾಗಿದ್ದರು. ತಾಯಿಯ ಶಿರವನ್ನೇ ಕಡಿದ ಪರಶುರಾಮನ ಪಿತೃಭಕ್ತಿಗೆ ಎಣೆಯು೦ಟೇ..?!. ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಹೊರಟ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು. ಹಿಂದೂ ಪುರಾಣದಲ್ಲಿ ಪರಶುರಾಮರನ್ನು ಕುರಿತ ಇನ್ನಷ್ಟು ಸತ್ಯಗಳು ಮರೆಯಾಗಿದ್ದು ಅವುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನ.

ಪರಶುರಾಮ ಪೌರಾಣಿಕ ಹಿನ್ನಲೆ

ಪರಶುರಾಮ ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಹತ್ತೊಂಬತ್ತನೆಯ ತ್ರೇತಾಯುಗದಲ್ಲಿ ಭೃಗುವಂಶದ ಜಮದಗ್ನಿ ರೇಣುಕೆಯರ ಮಗ ವಿಷ್ಣುವಿನ ಆರನೆಯ ಅವತಾರ, ದಶಾವತಾರಗಳಲ್ಲೊಂದು. ಅತ್ಯಂತ ಬಲಿಷ್ಠನೂ ವಿನಯಶಾಲಿಯೂ ಆಗಿದ್ದ ಈತ ಉದ್ಭತರಾದ ಕ್ಷತ್ರಿಯರನೆಲ್ಲ ನಾಶಮಾಡುವ ಉದ್ದೇಶದಿಂದ ಹುಟ್ಟಿದವನಾದರೂ ತಂದೆಗೆ ಅತ್ಯಂತ ವಿಧೇಯನಾಗಿದ್ದ. ಇವನಿಗೆ ರಮಣ್ವಂತ, ಸುಷೇಣ ವಸು, ವಿಶ್ವಾವಸು ಎಂಬುದಾಗಿ ನಾಲ್ಕು ಜನ ಸಹೋದರರಿದ್ದರು. ತಾಯಿ ರೇಣುಕ ಪ್ರಸೇನಜಿತನ ಮಗಳು.

ಜಮದಗ್ನಿಯ ಕೋಪ

  • ರೇಣುಕ ಒಂದು ದಿನ ಸ್ನಾನಕ್ಕೆ ಹೋದಾಗ ಚಿತ್ರರಥನೆಂಬ ಗಂಧರ್ವನನ್ನು ನೋಡಿ ವ್ಯಾಮೋಹಗೊಂಡು ತಡವಾಗಿ ಆಶ್ರಮಕ್ಕೆ ಬಂದಳು. ಇದನ್ನು ಕಂಡ ತಂದೆ ಜಮದಗ್ನಿ ಅವಳ ಕತ್ತನ್ನು ಕತ್ತರಿಸಲು ಮಕ್ಕಳಿಗೆ ಆಜ್ಞಾಪಿಸಿದ. ನಾಲ್ವರು ಮಕ್ಕಳು ನಿರಾಕರಿಸಿದಾಗ ಪರಶುರಾಮ ತಂದೆಯ ಅಜ್ಞೆಯನ್ನು ನೆರವೇರಿಸಿದ. ತಂದೆ ಆ ನಾಲ್ವರಿಗೆ ಶಾಪವಿತ್ತು ಪರಶುರಾಮನಿಗೆ ವರ ಬೇಡುವಂತೆ ಕೇಳಿದ. ಕೂಡಲೆ ಈತ ತನ್ನ ತಾಯಿ ರೇಣುಕೆ ಬದುಕುವಂತೆಯೂ ಆಕೆಗೆ ಈ ಘಟನೆ ನೆನಪಿನಲ್ಲಿ ಉಳಿಯದಂತೆಯೂ ತನ್ನ ನಾಲ್ವರು ಅಣ್ಣಂದಿರು ಮೊದಲಿನ ಸ್ಥಿತಿಯನ್ನೇ ಪಡೆಯುವಂತೆಯೂ ಆಗಲೆಂದು ಕೇಳಿಕೊಂಡ. ಕೋಪವನ್ನು ಬಿಡಬೇಕೆಂದು ತಂದೆಯನ್ನು ಬೇಡಿಕೊಂಡ ತಂದೆ ಹಾಗೆಯೇ ಅನುಗ್ರಹಿಸಿದ.
  • ಕೊನೆಯಲ್ಲಿ ಅಶ್ವಮೇಧಯಾಗಮಾಡಿ ಭೂಮಿಯನ್ನೆಲ್ಲ ಗೆದ್ದು ಕಶ್ಯಪನಿಗೆ ದಾನ ಮಾಡಿದ. ತಂದೆಯ ಸಾವಿನಿಂದ ಅತ್ಯಂತ ದುಃಖಿತನಾದ ಈತ ಶಿವನನ್ನು ಸ್ತುತಿಸಿದ. ತಾನು ಮಾಡಿದ ಪಾಪಗಳು ಪರಿಹಾರವಾಗಿರುವುದಾಗಿಯೂ ತನಗೆ ಸಾವಿಲ್ಲವೆಂತಲೂ ಶಿವನಿಂದ ಅನುಗ್ರಹ ಪಡೆದ. ತಪಸ್ಸು ಮಾಡುತ್ತ ಈತ ಈಗಲೂ ಮಹೇಂದ್ರ ಪರ್ತತದಲ್ಲಿ ಇದ್ದಾನೆಂದು ನಂಬಿಕೆ.

ಜಮದಗ್ನಿಯ ಹತ್ಯೆ

  • ಕಾರ್ತವೀರ್ಯಾರ್ಜುನ ಇವರ ಆಶ್ರಮಕ್ಕೆ ಬಂದು ಅತಿಥಿಸತ್ಕಾರ ಪಡೆದು ಅಲ್ಲಿದ್ದ ಕಪಿಲೆಯನ್ನು ತನಗೆ ಕೊಡಬೇಕೆಂದು ಬೇಡಿದ. ಕೊಡಲು ಒಪ್ಪಲಿಲ್ಲವಾಗಿ ಯುದ್ಧ ಮಾಡಿ ಜಮದಗ್ನಿಯನ್ನು ಕೊಂದ. ಈ ವಿಷಯ ತಿಳಿದ ಪರುಶರಾಮ ಕೋಪಾವಿಷ್ಟನಾಗಿ ಕೂಡಲೆ ಮಾಹೀಷ್ಮತೀ ನಗರಕ್ಕೆ ಹೋಗಿ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಕೊಂದು ಅವರ ರಕ್ತದಿಂದ ಪಿತೃತರ್ಪಣ ಕೊಟ್ಟ. ವಿವಾಹ ಮಾಡಿಕೊಂಡು ಹಿಂದಿರುಗುತ್ತಿದ್ದ ಶ್ರೀರಾಮನೊಡನೆ ಸೆಣಸಿ ಸೋತು ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಆತನಿಗೆ ಕೊಟ್ಟ.

ಮಹಾಭಾರತದಲ್ಲಿ

  • ಪಾಂಡವರೊಡನೆ ಕಾಳಗಕ್ಕೆ ಇಳಿಯದೆ ಸಂಧಿ ಮಾಡಿಕೊಳ್ಳಲು ದುರ್ಯೋಧನನಿಗೆ ಭೋದಿಸಿದ. ಅಂಬೆ ಪ್ರಕರಣದಲ್ಲಿ ಭೀಷ್ಮನೊಂದಿಗೆ ಘೋರ ಕಾಳಗ ಮಾಡಿದ. ಬ್ರಾಹ್ಮಣನ ವೇಷದಲ್ಲಿ ಬಂದು ಶಸ್ತ್ರಭ್ಯಾಸ ಮಾಡಿದ ಕರ್ಣನ ಮೋಸ ಗೊತ್ತಾದಾಗ ತಾನು ಕೊಟ್ಟ ಅಸ್ತ್ರಗಳು ಯುದ್ಧದಲ್ಲಿ ಫಲಿಸದಂತೆ ಶಾಪ ಕೊಟ್ಟ. ಈತ ದ್ರೋಣಗುರು.
  • ಈತನೇ ಎಂಟನೆಯ ಸಾವರ್ಣಿ ಮನ್ವಂತರದಲ್ಲಿ ಸಪ್ತಋಷಿಗಳಲ್ಲಿ ಒಬ್ಬನಾಗುತ್ತಾನೆ. (ಬಿ.ಎನ್.ಎನ್.ಬಿ.)[೧]

ಪರಶುರಾಮನ ಶಿಷ್ಯರು

ಬೀಷ್ಮ ( ದೇವವೃತ); ದ್ರೋಣಾಚಾರ್ಯ; ಕರ್ಣ.[೨]

ಉಲ್ಲೇಖ

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  2. ಮಹಾಭಾರತ
"https://kn.wikipedia.org/w/index.php?title=ಪರಶುರಾಮ&oldid=1028708" ಇಂದ ಪಡೆಯಲ್ಪಟ್ಟಿದೆ