"ಡೇವಿಡ್ ರಿಕಾರ್ಡೋ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ರಿಕಾರ್ಡೊ ಓರ್ವ ಶ್ರೇಷ್ಠ ಅರ್ಥಶಾಸ್ತ್ರಜ್ಞನಾದರೂ ತನ್ನ ನಿರಾಶಾವಾದದಿಂದಗಿ ಟೀಕೆಗೆ ಒಳಗಾಗಿದ್ದಾನೆ, ಆತನ ಶ್ರಮ ಆಧಾರಿತ ಮೌಲ್ಯತತ್ವವು ಅನೇಕ ಅರ್ಥಶಾಸ್ತ್ರಜ್ಞರ ಅಕ್ರಮಣಕ್ಕೆ ಒಳಗಾಗಿದೆ ಆತನ ಲಾಭ ತತ್ವವು ತೀರಾ ದುರ್ಬಲವಾದುದರಿಂದ ಸಮಸ್ತ ಸಂಪ್ರದಾಯ ಪಂಥವು ಮಾರ್ಕ್ಸ್ ನ ಕಟು ಟೀಕೆಗೆ ಒಳಗಾಯಿತು, ರಿಕಾರ್ಡೊನ ನಿಗಮನ ಪದ್ಧತಿ ಕೂಡಾ ಜರ್ಮನಿಯ ಐತಿಹಾಸಿಕ ಪಂಥದ ಟೀಕೆಗೆ ಒಳಗಾಗಿದೆ. ನಿರಾಶಾವಾದದಿಂದ ಪ್ರೇರಿತವಾದ ಆತನ ತತ್ವಗಳು ಪ್ರಬಲವಾಗಿ ಟೀಕಿಸಲ್ಪಟ್ಟಿವೆ. ಅತ ತನ್ನ ತೀರ್ಮಾನಗಳಿಗೆ ಇತಿಹಾಸದ ಮತ್ತು ಅಂಕೆ-ಸಂಖ್ಯೆಗಳ ಆಧಾರವನ್ನು ನೀಡದಿರುವುದು ಒಂದು ದೋಷವೆಂದು ಕೇನ್ಸ್ ಅಭಿಪ್ರಾಯಪಟ್ಟದ್ದಾನೆ, ನ್ಯೂಮನ್ನನ ಅಭಿಪ್ರಾಯದಂತೆ ರಿಕಾರ್ಡೊನ ತತ್ವವು ಆತನಿಗೆ ಮೇಲ್ವರ್ಗದ ಬುದ್ಧಿ ಜೀವಿಗಳ ಸೀಮಿತ ವರ್ತುಲದದಲ್ಲಿ ಇರುವ ಪರಿಚಯ ಮತ್ತು ಪೂರ್ವಾಗ್ರಹಗಳನ್ನು ಆಧರಿಸಿದೆ.
ಇವೆಲ್ಲಾ ಟೀಕೆಗಳ ಹೊರತಾಗಿಯೂ ರಿಕಾರ್ಡೊನನ್ನು ಸಂಪ್ರದಾಯ ಪಂಥದ ಅತಿ ದೊಡ್ಡ ಪ್ರತಿನಿಧಿ ಎಂದ ಗೌರವಿಸಲಾಗುತ್ತದೆ, ಗೈಡ್ ಮತ್ತು ರಿಸ್ಟ್ ರ ಪ್ರಕಾರ "ಸ್ಮಿತ್ ನ ಬಳಿಕ ಅರ್ಥಶಾಸ್ತ್ರದಲ್ಲಿ ರಿಕಾರ್ಡೊನದ್ದು ಬಲು ದೊಡ್ಡ ಹೆಸರು, ರಿಕಾರ್ಡೊ ವಿತ್ತ ಮತ್ತು ಬ್ಯಾಂಕ್ ನೀತಿಗಳು ಉತ್ಕೃಷ್ಟವಾದವುಗಳೆಂದು ಪ್ರಶಂಸಿಸಲ್ಪಟ್ಟಿವೆ, ನೋಟು ಮುದ್ರಣಕ್ಕೆ ಪ್ರತಿಯಾಗಿ ಚಿನ್ನದ ದಾಸ್ತಾನು ಇಡ್ಬೇಕೆಂದು ರಿಕಾರ್ಡೊ ಸಲಹೆ ನೀಡಿದ್ದ. ಈ ಸಲಹೆಯು ಬ್ಯಾಂಕ್ ಆಫ್ ಇಂಗ್ಲೆಂಡನ್ನು ಆರ್ಥಿಕ ಬಿಕ್ಕಟ್ಟಿನಿಂದ ರಕ್ಷಿಸಿತು, ಜಗತ್ತಿನ ಎಲ್ಲಾ ಕೇಂದ್ರ ಬ್ಯಾಂಕುಗಳೂ ರಿಕಾರ್ಡೊನ ಈ ಸಲಹೆಯನ್ನು ಮಾನ್ಯ ಮಾಡಿ ಅನುಷ್ಠಾನಕ್ಕೆ ತಂದವು;ಆದುದರಿಂದ ಎರಿಕ್ ರೋಲ್ ರಿಕಾರ್ಡೊನನ್ನು 'ಅರ್ಥವಿಜ್ಞಾನದ ಮುಂದಾಳು' ಎಂದು ಕೊಂಡಾಡಿದ್ದಾನೆ.
ರಿಕಾರ್ಡೊನ ಸ್ರಮ ಆಧರಿತ ಮೌಲ್ಯ ತತ್ವವು ಮಾರ್ಕ್ಸ್ ನ ಮೌಲ್ಯ ತತ್ವದ ತಳಪಾಯವಾಯಿತು, ರಿಕಾರ್ಡೊ ಓರ್ವ ಮುಕ್ತ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ವ್ಯಕ್ತಿವಾದಿ, ಆತನ ತತ್ವಗಳು ಮಾರ್ಕ್ಸ್ ನ ಸಮಾಜವಾದಕ್ಕೆ ಪ್ರೇರಣೆಯಾದುದು ಆಶ್ಚರ್ಯವಾದರೂ,ನಿಜವಾದ ಸಂಗತಿಯಾಗಿದೆ, ರಿಕಾರ್ಡೊನ ಗೇಣಿ ಮತ್ತು ಲಾಭ ತಪ್ಪುಗಳು ಖಾಸಗಿ ಆಸ್ತಿಯ ಹಕ್ಕನ್ನು ಟೀಕಿಸಲು ಪ್ರಬಲ ತತ್ವಗಳಾದವು, ಆತನ ಕೂಲಿ ಮತ್ತು ಲಾಭ ತತ್ವಗಳು ವರ್ಗ ಸಂಘರ್ಷವನ್ನು ಸೂಚಿಸಿದವು ಸಮತಾವಾದದ ಆತಿ ಮುಖ್ಯ ಅಂಶವಾದ ವರ್ಗ ಸಂಘರ್ಷ ರಿಕಾರ್ಡೊನ ಮಾನಸಿಕ ಕೂಸು ಎನ್ನುವುದು ಗಮನಾರ್ಹ, ಆದುದರಿಂದ ಆಲೆಗ್ಸ್ಂಡರ್ ಗ್ರೇ ಹೇಳುತ್ತಾನೆ, "ಮಾಕ್ಸ್ ಮತ್ತು ಲೆನಿನರು ಪೂರ್ಣವಿಗ್ರಹಕ್ಕೆ ಅರ್ಹರಾದರೆ, ಹಿನ್ನೆಲೆಯಲ್ಲಿ ಎಲ್ಲಾದರೂ ರಿಕಾರ್ಡೊನ ಅರ್ಧವಿಗ್ರಹಕ್ಕೆ ಸ್ಥಳಾವಕಾಶ ಇರಲೇಬೇಕು," ಇದು ರಿಕಾರ್ಡೊ ಅರ್ಧ ಪ್ರಪಂಚಕ್ಕೆ ಮಾಡಿದ ದೊಡ್ಡ ಉಪಕಾರ.<ref>Miller, Roger LeRoy. Economics Today. Fifteenth Edition. Boston, MA: Pearson Education.</ref><ref> Sowell, Thomas (2006). On classical economics. New Haven, CT: Yale University Press.</ref><ref>"David Ricardo | Policonomics".</ref>
 
==ಹೊರಗಿನ ಕೊಂಡಿಗಳು==
೪೨,೬೭೧

edits

"https://kn.wikipedia.org/wiki/ವಿಶೇಷ:MobileDiff/1028000" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ