"ಪ್ರಿಯದರ್ಶಿನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು
'''ಪ್ರಿಯದರ್ಶಿನಿ''' ಭಾರತೀಯ ಚಿತ್ರರಂಗದ [[ಹಿನ್ನೆಲೆ ಗಾಯನ|ಹಿನ್ನೆಲೆ ಗಾಯಕಿ]], ಸಂಗೀತ ಸಂಶೋಧಕಿ, ಇವರು ಸಿಂಗಪೂರ್ ನ ರೇಡಿಯೋ ಕಾರ್ಪೋರೆಷನ್ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದು ನಂತರ ಹಿನ್ನಲೆಗಾಯಕಿ ಯಾಗಬೇಕೆಂಬ ಹಂಬಲದಿಂದ ಭಾರತೀಯ ಚಿತ್ರರಂಗದ ಕಡೆಗೆ ಒಲವು ತೋರಿದರು. ಪ್ರಪ್ರಥಮವಾಗಿ ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ 'ಕಾದಲ್ ಡಾಟ್ ಕಾಮ್' ಎಂಬ ತಮಿಳು ಚಿತ್ರಕ್ಕೆ ಹಿರಿಯಗಾಯಕ [[ಹರಿಹರನ್]] ಅವರೊಂದಿಗೆ ಯುಗಳ ಗೀತೆ ಹಾಡುವ ಮೂಲಕ ಅವರು ತಮ್ಮ ಸಿನಿ ಗಾಯನ ವೃತ್ತಿ ಪ್ರಾರಂಭಿಸಿದರು. ಹಲವಾರು ಹಿಟ್ ಹಾಡುಗಳು ನೀಡುವುದರೊಂದಿಗೆ ತಮಿಳು, ತೆಲುಗು, ಕನ್ನಡ, ಮಲಯಾಲಂ ಹಿಂದಿ ಚಿತ್ರರಂಗದಲ್ಲಿ ಪಂಚಭಾಷಾ ಗಾಯಕಿಯಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.<ref>http://mio.to/artist/Priyadarshini</ref><ref>https://www.deccanherald.com/content/70077/all-ears-melodious-nostalgic-numbers.html</ref>
== ಜನನ ಮತ್ತು ವಿದ್ಯಾಭ್ಯಾಸ ==
ಪ್ರಿಯದರ್ಶಿನಿ ಚನೈನ, ಮೈಲಾಪುರಂ ನಲ್ಲಿ ರಾಮಂ ಹಾಗೂ ಸುಮತಿ ದಂಪತಿಗಳಿಗೆ ಜನಿಸಿದರು, ತಂದೆ ಕೆಮಿಕಲ್ ಇಂಜಿನಿಯರ್ ಉದ್ಯೋಗನಿಮಿತ್ತ ಮಧ್ಯ ಪೂರ್ವದೇಶ ಕತಾರ್ ನ ದೋಹದಲ್ಲಿ ನೆಲಸಬೇಕಾಯಿತು. ೩ನೇತರಗತಿವರೆಗೆ೫ ನೇತರಗತಿವರೆಗೆ ದೋಹದಲ್ಲಿ ವ್ಯಾಸಂಗ ಮಾಡಿ ನಂತರ ಸಿಂಗಪೂರ್ ದೇಶದಲ್ಲಿ ಪ್ರಾಥವಿಕ, ಪ್ರೌಢ ಶಿಕ್ಷಣ ನಾರ್ತಲ್ಯಾಂಡ್ ಸ್ಕೂಲ್ ನಲ್ಲಿ ಓದಿ, ನನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮುಗಿಸಿದರು. ವಿದ್ಯಾರ್ಥಿದೆಸೆಯಿಂದಲ‍ಲೇ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದರು. ಸಂಗೀತದಲ್ಲಿ ಬಹಳ ಆಸಕ್ತಿಯಿದ್ದ ಇವರು ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.<ref>Music is her world – Deccan Herald – Internet Edition. Archive.deccanherald.com (2006-01-29). Retrieved on 2017-10-24.</ref> ಸಿನಿಮಾ ಗಾಯನಕ್ಕೆ ಬೇಕಾದ ವಾಯ್ಸ್ ಕಲ್ಚರ್ಗಾಗಿ ಹಿಂದುಸ್ತಾನಿ ಸಂಗೀತ, ಆಲಾಪ್, ಠುಮರಿಗಳನ್ನು ಕಲೆತರು ಹಾಗೂ ಅಸೋಸಿಯೇಟ್ ಬೋರ್ಡ್ ಆಫ್ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್, ಲಂಡನ್ ನಿಂದ ಪಾಶ್ಚಾತ್ಯ ಸಂಗೀತ ಕಲಿತರು.
 
== ವೃತ್ತಿ ಜೀವನ ==
"ಅಜ್ಜು" ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ ಹಾಡಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ಖ್ಯಾತ ನಟ [[ಯಶ್(ನಟ)|ಯಶ್]] ಆಭಿನಯದ 'ರಾಕಿ' ಚಿತ್ರದಲ್ಲಿ  [[ಎಸ್.ಪಿ.ಬಾಲಸುಬ್ರಹ್ಮಣ್ಯಂ]]ರೊಂದಿಗೆ ಯುಗಳಗೀತೆ ಹಾಡಿರುವುದು ವಿಶೇಷ.
 
ಚಲುವಿನ ಚಿತ್ತಾರ, ಜ್ಯೂಲಿ, ನನ್ನೆದೆಯ ಹಾಡು, ಸೀನ, ಪ್ರೀತಿಯಿಂದ ರಮೇಶ್ ಹಲವಾರು ಚಿತ್ರಗಳು ಸೇರಿ ಸುಮಾರು110 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹಾಡಿದ್ದಾರೆ. ಅವರು ಭಾರದ್ವಾಜ್ [[ಹಂಸಲೇಖ]] [[ಮನೋ ಮೂರ್ತಿ]], [[ಗುರುಕಿರಣ್]], ಡಿ.ಇಮಾನ್, ಆರ್. ಪಿ. ಪಟ್ನಾಯಕ್, [[ಮಹೇಶ್ ಮಹದೇವ್]], ರಾಜೇಶ್ ರಾಮನಾಥ್, [[ಕೆ. ಕಲ್ಯಾಣ್|ಕೆ. ಕಲ್ಯಾಣ್,]] [[ಮಹೇಶ್ ಮಹದೇವ್]] ಎಸ್.ಎ. ರಾಜಕುಮಾರ್, ವೆಂಕಟ್, ಗಣೇಶ ನಾರಾಯಣ್, [[ಎಂ.ಎನ್.ಕೃಪಾಕರ್|ಎಂ.ಎನ್. ಕೃಪಾಕರ್]], , ಸಿ. ಆರ್. ಬಾಬಿ ಮತ್ತು ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸಿರುತ್ತಾರೆ.
 
ಅವರ ಇತ್ತೀಚಿನ ತಮಿಳು ಚಲನಚಿತ್ರ ನಾನ್ ದನ್ ಬಾಲಾ ಚಿತ್ರದ ಧ್ವನಿಸುರುಳಿಯನ್ನು ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ [[ಎ. ಆರ್. ರಹಮಾನ್‌|ಎ.ಆರ್.ರಹಮಾನ್]] ಬಿಡುಗಡೆ ಮಾಡಿದರು.<ref>http://www.thehindu.com/features/cinema/cinema-reviews/audio-beat-naan-thaan-bala-story-and-songs-that-impress/article5590134.ece</ref> ಇವರು 200 ಕ್ಕೂ ಹೆಚ್ಚು ಧ್ವನಿಸುರುಳಿಗಳು ಮತ್ತು ೫೦ ಕ್ಕೂ ಹೆಚ್ಚು ಜಿಂಗಲ್ಸ್ ಗಳಲ್ಲಿ ಹಾಡಿದ್ದಾರೆ.
೨೮೯

edits

"https://kn.wikipedia.org/wiki/ವಿಶೇಷ:MobileDiff/1011345" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ