"ಸೈಯ್ಯದ್ ಅಹಮದ್ ಖಾನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
o
(clnup)
(o)
 
[[ಲಂಡನ್]] ನಲ್ಲಿನ ಸಹವಾಸ, ಚರ್ಚೆ, ಅಧ್ಯಯನಗಳ ಫಲವಾಗಿ ಉನ್ನತ ಚಿಂತನೆಗಳು ಇವರಿಗೆ ಮನವರಿಕೆಯಾದವು. ಭಾರತದ ಶಾಸಕಾಂಗ ಸಭೆಯಲ್ಲಿ ಭಾರತೀಯರ ಪಾಲ್ಗೊಳ್ಳುವಿಕೆಯ ಅನಿವಾರ್ಯತೆಯ ಬಗ್ಗೆ ಬ್ರಿಟಿ‍ಷ್ ಸಂಸತ್ತಿನಲ್ಲಿ ವಿಚಾರ ಮಂಡಿಸಿ ಯಶಸ್ವಿಯಾದರು. ೧೮೬೬ರಲ್ಲಿ ಪ್ರಾರಂಭವಾದ ಅಲಿಘರ್ ಇನ್ಸ್ಟಿಟ್ಯೂಟ್ ಗೆಜೆಟ್ ಭಾರತೀಯರಿಗೆ ಉನ್ನತ ಶಿಕ್ಷಣದ ಬಗ್ಗೆ ಮಾರ್ಗದರ್ಶನ ನೀಡುವಂತಾಯಿತು. ೧೮೬೬ರ ಫೆಬ್ರವರಿ ೧೪ ರಂದು ವಿಜ್ಙಾನ ಸಂಸ್ಥೆಯನ್ನು ಅಲಿಘರ್ ನಲ್ಲಿ ಸ್ಥಾಪಿಸಿದರು. ೧೮೭೦ರಲ್ಲಿ ಮಹಮ್ಮದೀಯರ ಸಾಮಾಜಿಕ ವ್ಯವಸ್ಥೆ ಕುರಿತು ಒಂದು ಲೇಖನ ಪ್ರಕಟಿಸಿದರು. ಆಗ ಇಸ್ಲಾಂ ಸಂಪ್ರದಾಯಸ್ಥರ ವಿರೋಧವನ್ನು ಎದುರಿಸಿ ತಮ್ಮದೇ ಆದ ವೈಜ್ಙಾನಿಕ ಹಿನ್ನಲೆಯಲ್ಲಿ [[ಕುರಾನ್]] ಧರ್ಮಗ್ರಂಥವನ್ನು ಕುರಿತು ವಿಮರ್ಶೆಯನ್ನು ಪ್ರಕಟಿಸಿದರು. ತಮ್ಮ ಅಧಿಕಾರದ ಅವಧಿಯಲ್ಲಿ ೧೮೫೮ರಲ್ಲಿ ಮುರಾದ್ ಬಾದ್, ೧೮೬೩ ಗಾಜೀಪುರದಲ್ಲಿ ಶಿಕ್ಷಣ ಸಂಸ್ಥೆ ತೆರೆದದ್ದು ಇವರ ಪ್ರಮುಖ ಸಾಧನೆ. ೧೮೭೬ರಲ್ಲಿ [[ಬನಾರಸ್]] ನಲ್ಲಿ ಉರ್ದು ಅಥವಾ ಪರ್ಷಿಯನ್ ಭಾಷೆ ಮಾಧ್ಯಮದ ಉನ್ನತ ಶಿಕ್ಷಣ ಕೇಂದ್ರವನ್ನು ತೆರೆಯಲು ಬ್ರಿಟಿಷ್ ಸರ್ಕಾರವನ್ನು ಆಗ್ರಹಿಸಿದಾಗ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಸಂಘರ್ಷ ಕಂಡುಬಂದಿತು. [[ಸಂಸ್ಕೃತ]] ಹಾಗೂ [[ಉರ್ದು]] ಸಮಸ್ಯೆ ಕೋಮುವಾದಕ್ಕೆ ಕಾರಣವಾಗಬಾರದೆಂದು ಅರಿತು ಅಲಿಘರ್ ಗೆ ಹಿಂದಿರುಗಿದರು.
<ref>{{cite book |last1=ಇತಿಹಾಸ ಮತ್ತು ಪುರಾತತ್ವ |first1=A Volume on HISTORY AND ARCHAEOLOGY |title=ಕನ್ನಡ ವಿಷಯ ವಿಶ್ವಕೋಶ - ಇತಿಹಾಸ ಮತ್ತು ಪುರಾತತ್ತ್ವ |date=2009 |pages=1110 |url=https://uni-mysore.ac.in/%E0%B2%95%E0%B3%81%E0%B2%B5%E0%B3%86%E0%B2%82%E0%B2%AA%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%85%E0%B2%A7%E0%B3%8D%E0%B2%AF%E0%B2%AF%E0%B2%A8-%E0%B2%B8%E0%B2%82%E0%B2%B8%E0%B3%8D%E0%B2%A5%E0%B3%86}}</ref><ref>{{cite web |url=https://www.britannica.com/biography/Sayyid-Ahmad-Khan}}</ref>
 
[[ಕಲ್ಕತ್ತ ವಿಶ್ವವಿದ್ಯಾಲಯ]]ದಂತೆಯೆ (೧೮೫೮) ಅಲಿಘರ್ ನಲ್ಲಿ ಉನ್ನತ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಮುಂದಾಗಿ ಭಾರತದಾದ್ಯಂತ ಸಂಚರಿಸಿ ದೇಣಿಗೆ ಸಂಗ್ರಹಿಸಿದರು. ೧೮೭೩ರಲ್ಲಿ ಅಖಿಲ ಭಾರತ ಮುಸ್ಲಿಂ ಸಮ್ಮೇಳನ ಆಯೋಜಿಸಿದರು. ೧೮೭೭ ಜನವರಿ ೮ ರಂದು ಭಾರತದ ಮೊದಲ ವೈಸ್ ರಾಯ್ ಲಾರ್ಡ್ ಲಿಟ್ಟನ್ ನಿಂದ ಮಹಮಡನ್ ಆಂಗ್ಲೋ ಓರಿಯಂಟಲ್ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದರು. ಎಲ್ಲ ಸಮುದಾಯದವರಿಗೂ ಉನ್ನತ ಶಿಕ್ಷಣಕ್ಕೆ ಈ ಸಂಸ್ಥೆ ತನ್ನ ಬಾಗಿಲು ತೆರೆಯಿತು. ಇದೇ ಮುಂದೆ ಪ್ರಸಿದ್ಧ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವೆಂದು ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆಯಿತು. ಇವರು ತಮ್ಮ ಜೀವನದ ಅಂತಿಮ ವರ್ಷಗಳಲ್ಲಿ ಬಹುತೇಕ ಮುಸ್ಲಿಂ ಸಮುದಾಯದ ಪರವಾದ ನಿಲುವು ಹೊಂದಿದ್ದುದು ಕಂಡುಬರುತ್ತದೆ. ಅಲಿಘರ್ ನಲ್ಲಿ ಇಸ್ಲಾಂ ಸಂಸ್ಕೃತಿಯನ್ನು ಪ್ರಚಾರ ಪಡಿಸಲು ಸ್ಥಾಪಿಸಿದ್ದ ವಿಜ್ಙಾನ ಸಂಘ ಇವರ ನಿಧನಾನಂತರ ಲಖನೌಗೆ ವರ್ಗಾಯಿಸಲ್ಪಟ್ಟು (೧೯೦೩) ಮುಸ್ಲಿಂ ಲೀಗ್ ಎಂದು ಮರುನಾಮಕರಣಗೊಂಡಿತು. ಬ್ರಿಟಿ‍ಷ್ ಸರ್ಕಾರ ೧೮೮೩ರಲ್ಲಿ ಇವರಿಗೆ ಸರ್ ಎಂಬ ಪದವಿ ನೀಡಿ ಗೌರವಿಸಿತು.
೧೦,೩೬೬

edits

"https://kn.wikipedia.org/wiki/ವಿಶೇಷ:MobileDiff/1011014" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ