ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೫: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Archived from ವಿಕಿಪೀಡಿಯ:ಅರಳಿ_ಕಟ್ಟೆ special:diff/978358
( ಯಾವುದೇ ವ್ಯತ್ಯಾಸವಿಲ್ಲ )

೨೦:೧೨, ೪ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ

ಕ್ರೈಸ್ಟ್ ವಿ.ವಿ. ವಿದ್ಯಾರ್ಥಿಗಳ ಲೇಖನಗಳು

ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳು ಅವಸರ ಅವಸರವಾಗಿ ಯಂತ್ರಾನುವಾದದ ಮೂಲಕ ಕಡಿಮೆ ಗುಣಮಟ್ಟದ. ಕೆಲವೊಮ್ಮೆ ಅರ್ಧಂಬರ್ಧ ಕನ್ನಡದ, ಲೇಖನಗಳನ್ನು ಸೇರಿಸುತ್ತಿದ್ದಾರೆ. ಉದಾ -ಸುವರ್ಣ ಅನುಪಾತ (ಚಿನ್ನದ ಅನುಪಾತ), ಮ್ಯಾಕ್ಸ್‌ವೆಲ್‌ನ ಸಮೀಕರಣಗಳು. ನಾನು ಅವುಗಳಿಗೆ {{ಯಂತ್ರಾನುವಾದ}} ಎಂಬ ಟೆಂಪ್ಲೇಟು ಸೇರಿಸಿದ್ದೆ. ವಿದ್ಯಾರ್ಥಿಗಳು ಲೇಖನವನ್ನು ಸುಧಾರಿಸದೆ ಆ ಟೆಂಪ್ಲೇಟನ್ನು ತೆಗೆದು ಹಾಕುತ್ತಿದ್ದಾರೆ. ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ಉಸ್ತುವಾರಿ ಮಾಡುತ್ತಿರುವವರು ಯಾರು? ವಿದ್ಯಾರ್ಥಿಗಳು ಲೇಖನಗಳನ್ನು ತಮ್ಮ ತಮ್ಮ ಪ್ರಯೋಗಪುಟದಲ್ಲಿ ತಯಾರಿಸಿ ಅವುಗಳನ್ನು ಅವರ ಪ್ರಾಧ್ಯಾಪಕರು ಒಪ್ಪಿದ ನಂತರ ಮಾತ್ರವೇ ಮುಖ್ಯ ಪುಟಕ್ಕೆ ಸೇರಿಸಬೇಕು ಎಂಬುದನ್ನು ಅವರುಗಳಿಗೆ ಹೇಳಿಕೊಟ್ಟಿಲ್ಲವೇ?--ಪವನಜ (ಚರ್ಚೆ) ೧೧:೨೮, ೮ ಜುಲೈ ೨೦೧೯ (UTC)

ಹೌದು, ಯಂತ್ರಾನುವಾದದಿಂದ ತಯಾರಾದ ಲೇಖನಗಳು ಲೈವ್ ಆಗದಂತೆ ಜಾಗ್ರತೆ ವಹಿಸಬೇಕಿದೆ.--ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೨:೨೨, ೧೦ ಜುಲೈ ೨೦೧೯ (UTC)
ಯಂತ್ರಾನುವಾದ ಮಾತ್ರವಲ್ಲ, ವಿದ್ವಂಸಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇವತ್ತಿನ ಉದಾಹರಣೆ ಮುಖ್ಯ ಪುಟ1. ಅದನ್ನು ಅಳಿಸಿದ್ದೇನೆ. ಅನಂತ ಸುಬ್ರಾಯ ನೋಡಿಕೊಳ್ಳುತ್ತಿಲ್ಲವೇ?--ಪವನಜ (ಚರ್ಚೆ) ೧೦:೪೧, ೧೧ ಜುಲೈ ೨೦೧೯ (UTC)
ಕ್ರೈಸ್ಟ್ ವಿ.ವಿ. ಶಿಕ್ಷಣ ಯೋಜನೆಯ ಉಸ್ತುವಾರಿ ನಾನೆ (ಅನಂತ ಸುಬ್ರಾಯ), ವಿದ್ಯಾರ್ಥಿಗಳು ಲೇಖನಗಳನ್ನು ಪ್ರಯೋಗಪುಟದಲ್ಲಿ ತಯಾರಿಸಿ ಅವುಗಳನ್ನು ಪ್ರಾಧ್ಯಾಪಕರು ಒಪ್ಪಿದ ನಂತರ ಇಂಟರ್ನಿಗಳು ಲೇಖನವನ್ನು ಮುಖ್ಯ ಪುಟಕೆ ತರುತಾರೆ. ಕ್ರೈಸ್ಟ್ ವಿ.ವಿ.ಯ ಸುಡೆಂಟ್‌ಗಳು ರಚಿಸಿದ ಲೇಖನದ ಪಟ್ಟಿ:

ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕನ್ನಡ ವಿಕಿಪೀಡಿಯ ಕಾರ್ಯಾಗಾರ

ದಿನಾಂಕ 27 ಮತ್ತು 28, ಜುಲೈ 2019ರಂದು ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ಎರಡು ದಿನಗಳ ಕನ್ನಡ ವಿಕಿಪೀಡಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಾಗಾರದಲ್ಲಿ 50 ಮಂದಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ. ಕಾರ್ಯಾಗಾರದಲ್ಲಿ 35ಕ್ಕಿಂತ ಹೆಚ್ಚು ಮಂದಿ ಹೊಸ ಸಂಪಾದಕರಿಗೆ ವಿಕಿಪೀಡಿಯ ಸಂಪಾದಿಸಲು ಮಾಹಿತಿ, ಮಾರ್ಗದರ್ಶನ ನೀಡಲಾಗುವುದು.

--Babitha managalore (ಚರ್ಚೆ) ೧೬:೪೪, ೧೦ ಜುಲೈ ೨೦೧೯ (UTC)

ಒಳ್ಳೆಯ ಕಾರ್ಯಕ್ರಮ --Lokesha kunchadka (ಚರ್ಚೆ) ೦೪:೪೧, ೧೧ ಜುಲೈ ೨೦೧೯ (UTC)
ಈ ಕಾರ್ಯಕ್ರಮದ ಪುಟ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ) ೦೭:೨೫, ೨೬ ಜುಲೈ ೨೦೧೯ (UTC)

ಭಾರತದಲ್ಲಿನ ನಮ್ಮ ಸಮುದಾಯಗಳಿಗೆ ಬೆಂಬಲ

ಎಲ್ಲರಿಗೂ ನಮಸ್ಕಾರ,

ವಿಕಿಮೀಡಿಯಾ ಯೋಜನೆಗಳು ನಡೆಯುವುದು ನಿಮ್ಮಿಂದ—ಜಗತ್ತಿನಾದ್ಯಂತ ಇರುವ ಸ್ವಯಂಸೇವಕರು, ಗುಂಪುಗಳು ಮತ್ತು ಸಂಸ್ಥೆಗಳ ಒಂದು ಜಾಲದಿಂದ. ನೀವೆಲ್ಲರೂ ಸೇರಿ ವಿಕಿಮೀಡಿಯಾ ಯೋಜನೆಗಳನ್ನು ಹಾಗೂ ಮುಕ್ತಜ್ಞಾನದ ಧ್ಯೇಯೋದ್ದೇಶವನ್ನು ಬೆಳೆಸುತ್ತೀರಿ, ಶ್ರೀಮಂತಗೊಳಿಸುತ್ತೀರಿ ಮತ್ತು ಮುನ್ನಡೆಸುತ್ತೀರಿ.

ವಿಕಿಮೀಡಿಯಾ-ಇಂಡಿಯಾದ ಅಂಗೀಕರಣವನ್ನು ರದ್ದು ಮಾಡುವ ಅಂಗಸಂಸ್ಥೆ ಸಮಿತಿಯ (Affiliations Committee / AffCom) ನಿರ್ಧಾರದ ಬಗ್ಗೆ ನೀವು ಕೇಳಿರಬಹುದು. ಭಾರತದ ವಿಕಿಮೀಡಿಯಾ ಸಮುದಾಯಗಳ ಮೇಲೆ ಇದರ ಪರಿಣಾಮದ ಬಗ್ಗೆ ಕೆಲವು ಸಮುದಾಯದ ಸದಸ್ಯರು ಕೇಳಿದ್ದಾರೆ. AffCom ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಭಾರತದಾದ್ಯಂತದ ನಮ್ಮ ಅನೇಕ ಸಮುದಾಯಗಳಿಗೆ ನಮ್ಮ ಬದ್ಧತೆ ಮತ್ತು ಬೆಂಬಲವನ್ನು ಪುನರುಚ್ಚರಿಸುತ್ತೇವೆ.

ಅಫಿಲಿಯೇಷನ್ಸ್ ಕಮಿಟಿ (AffCom) ವಿಕಿಮೀಡಿಯಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುವ ಮತ್ತು ಬೆಂಬಲಿಸುವ ಸ್ವಯಂಸೇವಕರ ಸಮುದಾಯ-ನಡೆಸುವ ಸಂಸ್ಥೆ. ಅಧ್ಯಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಚಟುವಟಿಕೆಗಳನ್ನು ತರಲು ವಿಕಿಮೀಡಿಯಾ-ಇಂಡಿಯಾದೊಂದಿಗೆ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ನಂತರ (m:Wikimedia_chapters/Requirements), ವಿಕಿಮೀಡಿಯಾ ಫೌಂಡೇಶನ್ ಅಧ್ಯಾಯ ಒಪ್ಪಂದವನ್ನು ನವೀಕರಿಸಬಾರದೆಂದು ಜೂನ್ 2019 ರಲ್ಲಿ (AffCom) ಶಿಫಾರಸು ಮಾಡಿತು.

ವಿಕಿಮೀಡಿಯಾ-ಇಂಡಿಯಾ ಮೊದಲ ಬಾರಿಗೆ 2011 ರಲ್ಲಿ ಒಂದು ಅಧ್ಯಾಯವಾಗಿ ಗುರುತಿಸಲಾಯಿತು. 2015 ರಲ್ಲಿ, ಇದು ಅಧ್ಯಾಯ ಒಪ್ಪಂದದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಗಳನ್ನು ಅನುಭವಿಸಿತು. ಅಫಿಲಿಯೇಷನ್ಸ್ ಕಮಿಟಿ ಮತ್ತು ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ಅಧ್ಯಾಯವು ಕ್ರಿಯಾಶೀಲ ಯೋಜನೆಯನ್ನು ಅಭಿವೃದ್ಧಿಪಡಿಸಿತು ಮತ್ತು 2017 ರ ಹೊತ್ತಿಗೆ ಉತ್ತಮ ಸ್ಥಿತಿಯಲಿೢತ್ತು. ಆದಾಗ್ಯೂ, 2017 ಮತ್ತು 2019 ರ ನಡುವೆ ಅಧ್ಯಾಯವು ವಿಶ್ವಾಸಾರ್ಹ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪರವಾನಗಿ ಪಡೆಯಲು ಸಾಧ್ಯವಾಗಲಿಲ್ಲ, ಮತ್ತು ಪ್ರಸ್ತುತ ಕಾನೂನುಬದ್ಧವಾಗಿಲ್ಲ ಪ್ರತಿಷ್ಠಾನದಿಂದ ಹಣವನ್ನು ಸ್ವೀಕರಿಸಲು ಭಾರತದಲ್ಲಿ ಚಾರಿಟಿಯಾಗಿ ನೋಂದಾಯಿಸಲಾಗಲಿಲೢ. ಫೌಂಡೇಶನ್ ಮತ್ತು ಅಫಿಲಿಯೇಷನ್ಸ್ ಕಮಿಟಿ (AffCom) ಎರಡೂ ಈ ಪರವಾನಗಿ ಮತ್ತು ನೋಂದಣಿಯನ್ನು ಭವಿಷ್ಯದಲ್ಲಿ ಸುರಕ್ಷಿತಗೊಳಿಸಬಹುದು ಮತ್ತು ಅಧ್ಯಾಯವು ಮಾನ್ಯತೆಗೆ ಅರ್ಹರಾಗಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಶಿಸುತ್ತದೆ.

ಉತ್ತಮ ನಾಯಕತ್ವವನ್ನು ತೋರಿಸಿದ ಮತ್ತು ನಮ್ಮ ಜಾಗತಿಕ ಚಳವಳಿಯೊಳಗೆ ಗಮನಾರ್ಹ ಪರಿಣಾಮವನ್ನು ಬೀರಿದ ಭಾರತದಲ್ಲಿ ಅತ್ಯಾಸಕ್ತಿಯಿಂದ ಬೆಳೆಯುತ್ತಿರುವ ಸಮುದಾಯಕ್ಕೆ ನಾವು ಆಭಾರಿಯಾಗಿದ್ದೇವೆ. ಫೌಂಡೇಶನ್ ಪ್ರಸ್ತುತ ಎಂಟು ಭಾರತೀಯ ಭಾಷಾ ಸಮುದಾಯ ಬಳಕೆದಾರರ ಗುಂಪುಗಳನ್ನು ಬೆಂಬಲಿಸುತ್ತದೆ, ಮತ್ತು ಮುಂಬರುವ ವಾರಗಳಲ್ಲಿ ಇನ್ನೂ ಎರಡು AffCom ಘೋಷಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತದಲ್ಲಿನ ಓದುಗರಿಂದ ನಾವು ಪ್ರತಿ ತಿಂಗಳು 700 ದಶಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ವಿಕಿಪೀಡಿಯಾಗೆ ಸ್ವೀಕರಿಸುತ್ತೇವೆ, ಮತ್ತು ವಿಕಿಪೀಡಿಯಾ ಮತ್ತು ವಿಕಿಮೀಡಿಯಾ ಯೋಜನೆಗಳ ಭವಿಷ್ಯಕ್ಕಾಗಿ ಭಾರತೀಯ ಸಮುದಾಯದ ಬೆಳವಣಿಗೆಯು ಮೊದಲ ಆದ್ಯತೆಯಾಗಿದೆ.

ವಿಕಿಮೀಡಿಯಾ ಆಂದೋಲನಕ್ಕೆ ಭಾರತದ ಗಣರಾಜ್ಯ ಬಹಳ ಮಹತ್ವದ್ದಾಗಿದೆ. ವಿಕಿಮೀಡಿಯಾ ಫೌಂಡೇಶನ್ ಭಾರತದಾದ್ಯಂತ ಸ್ವಯಂಸೇವಕ ಸಂಪಾದಕರು, ಕೊಡುಗೆದಾರರು, ಓದುಗರು ಮತ್ತು ದಾನಿಗಳನ್ನು ಬೆಂಬಲಿಸಲು ಬದ್ಧವಾಗಿದೆ. ವಿಕಿಮೀಡಿಯಾ ಯೋಜನೆಗಳು ಮತ್ತು ನಮ್ಮ ಮುಕ್ತ ಜ್ಞಾನ ಮಿಷನ್ ಅನ್ನು ಬೆಂಬಲಿಸುವ ನಿಮ್ಮ ಮುಂದುವರಿದ ಮತ್ತು ಬೆಳೆಯುತ್ತಿರುವ ಪ್ರಯತ್ನಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮೊಂದಿಗೆ ನಮ್ಮ ಕೆಲಸವನ್ನು ಮುಂದುವರಿಸಲು ನಾವು ಎದುರು ನೋಡುತ್ತೇವೆ.

ವಿಕಿಮೀಡಿಯ ಫೌಂಡೇಶನ್ ಪರವಾಗಿ,

ವಲೆರಿ ಡಿ ಕೋಸ್ಟಾ
ಕಮ್ಯುನಿಟಿ ಎಂಗೇಜ್ಮೆಂಟ್ ಮುಖ್ಯಸ್ಥ
ವಿಕಿಮೀಡಿಯ ಫ಼ೌಂಡೇಶನ್

ಟೆಂಪ್ಲೇಟ್ ಅಮದಿಗೆ ಕೋರಿಕೆ

Infobox Spacecraft ಈ ಟೆಂಪ್ಲೇಟ್ ಅವಶ್ಯಕತೆ ಇದೆ. ಆದಷ್ಟು ಬೇಗ ಅಮದು ಮಾಡಿ ಕೋಡಿ.--Lokesha kunchadka (ಚರ್ಚೆ) ೦೪:೦೯, ೨೫ ಜುಲೈ ೨೦೧೯ (UTC)

ಆ ಹೆಸರಿನ ಟೆಂಪ್ಲೇಟು ಇಂಗ್ಲಿಷ್ ವಿಕಿಪೀಡಿಯದಲ್ಲಿ ಇಲ್ಲ. ಟೆಂಪ್ಲೇಟಿನ ಕೊಂಡಿ ನೀಡಿದರೆ ಉತ್ತಮವಿತ್ತು.--ಪವನಜ (ಚರ್ಚೆ) ೦೧:೪೨, ೨೬ ಜುಲೈ ೨೦೧೯ (UTC)
ಕನ್ನಡ ವಿಕಿಪೀಡಿಯದಲ್ಲಿ ಟೆಂಪ್ಲೇಟು:Infobox spacecraft ಇದೆ ಪರೀಕ್ಷಿಸಿ Sangappadyamani (ಚರ್ಚೆ) ೦೧:೫೩, ೨೬ ಜುಲೈ ೨೦೧೯ (UTC)

Update on the consultation about office actions

Hello all,

Last month, the Wikimedia Foundation's Trust & Safety team announced a future consultation about partial and/or temporary office actions. We want to let you know that the draft version of this consultation has now been posted on Meta.

This is a draft. It is not intended to be the consultation itself, which will be posted on Meta likely in early September. Please do not treat this draft as a consultation. Instead, we ask your assistance in forming the final language for the consultation.

For that end, we would like your input over the next couple of weeks about what questions the consultation should ask about partial and temporary Foundation office action bans and how it should be formatted. Please post it on the draft talk page. Our goal is to provide space for the community to discuss all the aspects of these office actions that need to be discussed, and we want to ensure with your feedback that the consultation is presented in the best way to encourage frank and constructive conversation.

Please visit the consultation draft on Meta-wiki and leave your comments on the draft’s talk page about what the consultation should look like and what questions it should ask.

Thank you for your input! -- The Trust & Safety team ೦೮:೦೩, ೧೬ ಆಗಸ್ಟ್ ೨೦೧೯ (UTC)

ಸಿ.ಐ.ಎಸ್.-ಎ೨ಕೆ ಯಿಂದ ಕನ್ನಡದ ಕಮ್ಯುನಿಟಿ ಅಡ್ವೊಕೇಟ್

ಸಿ.ಐ.ಎಸ್.-ಎ೨ಕೆ ಯಿಂದ ಕನ್ನಡದ ಕಮ್ಯುನಿಟಿ ಅಡ್ವೊಕೇಟ್ ಸ್ಥಾನಕ್ಕೆ ಸಮುದಾಯದವರು ಒಪ್ಪಿ ಗೋಪಾಲಕೃಷ್ಣ ಅವರನ್ನು ನೇಮಿಸಲಾಗಿತ್ತು. ಅವರು ಇತ್ತೀಚೆಗೆ ನಾನು ಕೋರ ಕಂಪೆನಿಗೆ ಸೇರಿದ್ದೇನೆ ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು. ಆದರೆ ಅವರನ್ನು ಸಿ.ಎ. ಆಗಿ ನೇಮಿಸಿದ ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಇದುತನಕ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು ಎರಡು ಕೆಲಸಗಳನ್ನು ಒಟ್ಟಿಗೆ ಮಾಡುತ್ತಿದ್ದಾರೆಯೇ? ಈ ಬಗ್ಗೆ ಕೂಡ ಯಾವುದೇ ಮಾಹಿತಿ ಇಲ್ಲ. ಗೋಪಾಲಕೃಷ್ಣ ಮತ್ತು ಸಿ.ಐ.ಎಸ್.ನವರು ಈ ಬಗ್ಗೆ ಸ್ಪಷ್ಟೀಕರಣ ನೀಡಬಹುದೇ?--Pavanaja (ಚರ್ಚೆ) ೦೯:೫೫, ೧೬ ಆಗಸ್ಟ್ ೨೦೧೯ (UTC)

@Pavanaja: ನಿಮ್ಮ ಪ್ರಶ್ನೆಗಳಿಗೆ ಧನ್ಯವಾದಗಳು. ನಾನು ಸಿ. ಐ. ಎಸ್‌ನ ಖಾತೆಯ ಮೂಲಕವೇ ಈ ಸ್ಪಷ್ಟನೆಯನ್ನು ನೀಡಲು ಇಚ್ಚಿಸುತ್ತೇನೆ. ಮೊದಲನೇಯದಾಗಿ ಜುಲೈ ೧ ೨೦೧೯ ರಿಂದ ನಾನು ಸಂಪೂರ್ಣವಾಗಿ ಪ್ರಾಜೆಕ್ಟು ಟೈಗರ್‌ನಲ್ಲಿ ತೊಡಗಿಸಿಕೊಂಡಿದ್ದೆ. ನಿಮಗೆಲ್ಲರಿಗೂ ಈ ಬಗ್ಗೆ ಮೊದಲೇ ತಿಳಿದಂತೆ CIS-A2Kಯು FLA (Focused Language Area)ಯಿಂದ FPA (Focused Project Area) ಗೆ ಪರಿವರ್ತನೆ ಹೊಂದಿರುವುದರಿಂದ ಕನ್ನಡದ ಕಮ್ಯೂನಿಟಿ ಅಡ್ವೊಕೇಟ್ ಆಗಿ ಸಣ್ಣ ಪಾತ್ರವನ್ನು ವಹಿಸಿದ್ದೆ. (ಸಿಐಎಸ್‌ನ ಕಾರ್ಯ ಯೋಜನೆಯನ್ನು ಇಲ್ಲಿ ನೋಡಬಹುದು) ಈ ಬಗ್ಗೆ ನಾವು ಇಲ್ಲಿ ಪ್ರಸ್ತಾಪಿಸಿರಲಿಲ್ಲ. ಅದಕ್ಕಾಗಿ ಕ್ಷಮಿಸಿ. CISನಲ್ಲಿ ನಾನು ನಿಭಾಯಿಸುತ್ತಿದ್ದ ಹುದ್ದೆಯ ವಿಚಾರವಾಗಿ ಸದ್ಯದಲ್ಲೇ ಭಾರತೀಯ ಸಮುದಾಯದ ಮೈಲಿಂಗ್ ಲಿಸ್ಟಿನಲ್ಲಿ ಬರೆಯಲಿದ್ದೇನೆ. ಸಿಐಎಸ್‌ನಲ್ಲಿ ನನ್ನ ಕೊನೆಯ ಕೆಲಸದ ದಿನ ಜುಲೈ ೩೧ ೨೦೧೯ ಆಗಿತ್ತು ಮತ್ತು ನಿಯಮದ ಪ್ರಕಾರ ನಾನು ನನ್ನ ಕೆಲಸಗಳನ್ನು ಇತರರಿಗೆ ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಕಮ್ಯೂನಿಟಿ ಅಡ್ವೊಕೇಟ್ ಸ್ಥಾನದಿಂದ ನಿರ್ಗಮಿಸುವುದು ನನ್ನ ವೈಯಕ್ತಿಕ ನಿರ್ಧಾರ ಹಾಗೂ ಸಂಸ್ಥೆ ಎಂದಿಗೂ ಕನ್ನಡ ವಿಕಿಮೀಡಿಯ ಪ್ರಾಜೆಕ್ಟುಗಳ ಬೆಳವಣಿಗೆಗಾಗಿ ಶ್ರಮಿಸುತ್ತದೆ ಎಂಬ ಭರವಸೆ ನನ್ನಲ್ಲಿದೆ. ನಾನು ಮೊದಲಿನಂತೆಯೇ ಕನ್ನಡ ಸಮುದಾಯದ ಸ್ವಯಂಸೇವಕನಾಗಿರುತ್ತೇನೆ. ನೀಡಿದ ಎಲ್ಲಾ ಅವಕಾಶಗಳಿಗೆ ಧನ್ಯವಾದಗಳು. ಯಾವುದೇ ವಿಷಯಗಳಿಗೆ ನನ್ನ ಸ್ವಯಂಸೇವಕ ಖಾತೆ ಸದಸ್ಯ:Gopala Krishna A ಖಾತೆಯ ಚರ್ಚೆ ಪುಟದಲ್ಲಿ ಬರೆಯಬೇಕಾಗಿ ವಿನಂತಿ. -- (CIS-A2K) (ಚರ್ಚೆ) ೧೧:೨೬, ೧೬ ಆಗಸ್ಟ್ ೨೦೧೯ (UTC)

ಹೀಗೊಂದು ಯೋಜನೆ ಪುಟ

ಇದನೊಮ್ಮೆ ಗಮನಿಸಿ.ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೧೯-೨೦.

@Lokesha kunchadka: - ನಿಮ್ಮ ಸಮಸ್ಯೆ ಏನು ಎಂಬುದೇ ಅರ್ಥವಾಗುತ್ತಿಲ್ಲ. ನಿಮ್ಮ ಅನುಮಾನಗಳನ್ನು ಯೋಜನೆಯ ಚರ್ಚಾಪುಟದಲ್ಲಿ ಮೊದಲು ಬರೆದಿದ್ದಿರಿ. ಅವುಗಳಿಗೆ ಅಲ್ಲೇ ಉತ್ತರಿಸಲಾಗಿದೆ. ಅವುಗಳನ್ನು ಮತ್ತೊಮ್ಮೆ ಓದಿಕೊಳ್ಳಬೇಕಾಗಿ ವಿನಂತಿ.--Pavanaja (ಚರ್ಚೆ) ೦೨:೧೯, ೧೭ ಆಗಸ್ಟ್ ೨೦೧೯ (UTC)

ಸ್ವತಂತ್ರ ದಿನ ವೈಕಿಡಾಟಾ ಮೇಳ ೨೦೧೯

ಸ್ವತಂತ್ರ ದಿನ ವೈಕಿಡಾಟಾ ಮೇಳ ದಲ್ಲಿ ಐಟಂ ಜೋಡಿಸಲು Category:ASI Monument Karnataka ಈ ಕ್ಯಾಟಗರಿಯನ್ನ ವೈಕಿ ಕಾಮನ್ಸ್ ನಲ್ಲಿ ಶುರು ಮಾಡಿದ್ದೇನೆ. https://www.wikidata.org/wiki/Wikidata:WikiProject_India/Events/Indian_Independence_Day_2019 https://commons.wikimedia.org/wiki/Category:ASI_Monument_Karnataka

ವಿಜಯಪುರ ಜಿಲ್ಲೆಯಲ್ಲಿನ ಸ್ಮಾರಕಗಳನ್ನ ಸೇರಿಸಲು ಯತ್ನ ಮಾಡ್ತಾ ಇದ್ದೇನೆ.

  1. d:Q66598383
  2. d:Q66597967
  3. d:Q66541984
  4. d:Q66457024


ಈ ಸಮಸ್ಯೆಗಳು ಇವೆ.

  1. ವೈಕಿ ಕಾಮನ್ಸ್ ಫೋಟೋ ಗಳು ಕಡ್ಡಾಯ. ಬಹುತೇಕ ಸ್ಮಾರಕಗಳ ಫೋಟೋ ಇಲ್ಲ. ಅವನ್ನ ಈ ಮೇಳದಲ್ಲಿ ಕೂಡಿಸಲು ಆಗದು.
  2. ವೈಕಿ ಕಾಮನ್ಸ್ ಫೋಟೋಗಳಿಗೆ ಕ್ಯಾಟಗರಿ ಕಡ್ಡಾಯ.ಯಾವುದಕ್ಕೂ ಒಂದೇ ಬಗೆಯ ಕ್ಯಾಟಗರಿ ಇರಲಿಲ್ಲ. Category:ASI Monument Karnataka ಅಂತ ಹೊಸ ಕ್ಯಾಟಗರಿ ಶುರು ಮಾಡಿದೆ.
  3. ಜಿಪಿಎಸ್ ಅಕ್ಷಾಂಶ ಕಡ್ಡಾಯ. ಗೂಗಲ್ ಮ್ಯಾಪ್ ನ ಸ್ಯಾಟಲೈಟ್ ವ್ಯೂ ==> ವಾಟ್ಸ್ ಹಿಯರ್ ==> ಇಲ್ಲಿಂದ ತೆಗೆಯಬೇಕು.

ಸ್ವಲ್ಪ ಗೊಂದಲಮಯವಾಗಿದೆ.


Mallikarjunasj (talk) ೧೫:೩೯, ೧೯ ಆಗಸ್ಟ್ ೨೦೧೯ (UTC)

@Mallikarjunasj ತಡವಾದ ಉತ್ತರಕ್ಕಾಗಿ ಕ್ಷಮಿಸಿ,ಗೊಂದಲಮಯವಾದದ್ದನ್ನು ದಯವಿಟ್ಟ ನಮಗೆ ತಿಳಿಸಿ, ಯಾವುದೇ ಚಿತ್ರಗಳಿಲ್ಲದಿದ್ದರೆ ನೀವು ಆ ಹಂತವನ್ನು ಬಿಟ್ಟು ಮುಂದುವರಿಯಬಹುದು.★ Anoop✉ ೦೧:೨೩, ೨೪ ಆಗಸ್ಟ್ ೨೦೧೯ (UTC)      

Project Tiger 2.0

Sorry for writing this message in English - feel free to help us translating it


Newbie Biting

We are all aware of Newbie biting. One editor by User:Lokesha kunchadka who is indulging in Newbie biting in Kannada and Tulu Wikipedias from almost last 2-3 months. He was issued a warning by the admin in Kannada Wikipedia, link is here.

I have been conducting Diversity Editathons from last 3 months. One of the major aims of these editathons is to bring more women editors. Before the new editor completes the article this person jumps in and adds templates to imply the article is not of good quality. The new editors, especially the women editors, are scared to continue editing because of this newbie biting. Apart from this I had written an article on 13th October 2019 with the template Under constriction for which he commented saying there is no such topic. I was planning to complete the article with reference to the title today. 

I would like to bring to the notice of the community and to hear suggestions from experienced people on how do deal with this kind of situation.--Dhanalakshmi .K. T (ಚರ್ಚೆ) ೧೭:೦೬, ೧೪ ಅಕ್ಟೋಬರ್ ೨೦೧೯ (UTC)

ಅಕ್ಟೋಬರ್ ೧೨ ಮತ್ತು ೧೩ ರಂದು ಉಡುಪಿಯ ಮಹಿಳಾ ಕಾಲೇಜಿನಲ್ಲಿ ನೆಡೆದ ವೈವಿಧ್ಯತೆಯ ಸಂಪಾದನೋತ್ಸವಗಳು ೨೦೧೯ ರಲ್ಲಿ ನಮ್ಮ ಕಾಲೇಜಿನ ೧೯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮಹಿಳಾ ವಿಜ್ಞಾನಿಗಳ ಬಗ್ಗೆ ಲೇಖನಗಳನ್ನು ಕನ್ನಡ ಮತ್ತು ತುಳು ವಿಕಿಪೀಡಿಯಕ್ಕೆ ಸೇರಿಸಲಾಗಿತ್ತು. ಲೇಖನಕ್ಕೆ ಎರಡು ಉಲ್ಲೇಖಗಳು ಇರಲೇ ಬೇಕು, ಎಲ್ಲಾ ಲೇಖನಗಳಿಗೂ ಎರಡು ಉಲ್ಲೇಖಗಳನ್ನು ಸೇರಿಸಲಾಗಿತ್ತು. ಆದರೆ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ ಎಂದು Lokesha kunchadka ರವರು ಟೆಂಪ್ಲೇಟ್ ಸೇರಿಸಿದ್ದಾರೆ. ಲೇಖನದ ಗುಣಮಟ್ಟದ ಮೇಲೆ ನಮಗೂ ಅರಿವಿದೆ. ಹೊಸಬರಿಗೆ ಹೆಚ್ಚಿನ ನಿಯಮವನ್ನು ತಿಳಿಸಿದರೆ ಅವರು ವಿಕಿಪೀಡಿಯಕ್ಕೆ ಬರೆಯಲು ಬರುವುದಿಲ್ಲ. ಈ ರೀತಿ ಮಾಡಿದರೆ ಹೊಸಬರು ನಿರುತ್ಸಾಹಗೊಳ್ಳುತ್ತಾರೆ. ನನ್ನ ಸ್ನೇಹಿತೆಯರು ಈಗ ಬರೆಯಲು ಹಿಂಜರಿಯುತ್ತಿದ್ದಾರೆ. ಕಾರಣ ಕೇಳಿದರೆ ನಾವು ಹಾಕಿದ ಲೇಖನದ ಉಲ್ಲೇಖಗಳು ಸರಿ ಇಲ್ಲ ಎಂದು ಬರುತ್ತಿದೆ ಮತ್ತು ಲೇಖನ ಸೇರಿಸಿದ ನಂತರ ಅದರಲ್ಲಿ ಉಲ್ಲೇಖದ ಅಗತ್ಯವಿದೆ ಎಂದು ಬರುತ್ತಿದೆ ಹಾಗಾಗಿ ನಾವು ಬರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ.

ನಾನು ಆ ಲೇಖನಗಳಿಗೆ ಅಗತ್ಯವಿರುವ ಉಲ್ಲೇಖಗಳನ್ನು, ಇನ್ಫೋಬಾಕ್ಸ್, ಆಂತರಿಕ ಮತ್ತು ಬಾಹ್ಯ ಕೊಂಡಿಗಳನ್ನು ಸೇರಿಸುತ್ತಿದ್ದೇನೆ. ಅಕ್ಷರಗಳು ಮತ್ತು ವಾಕ್ಯಗಳಲ್ಲಿ ತಪ್ಪಿದ್ದಲ್ಲಿ ಅದನ್ನೂ ಸರಿಪಡಿಸಿ ಲೇಖನ ಸೇರಿಸಿದ ವಿದ್ಯಾರ್ಥಿನಿಯರಿಗೆ ಅದರ ಬಗ್ಗೆ ತಿಳಿಸಿದ್ದೇನೆ ಕೂಡ. ಇದಲ್ಲದೆ ಕೆಲವು ಲೇಖನಗಳ ವಯಕ್ತಿಕ ಜೀವನ ಎಂಬ ವಿಭಾಗವನ್ನು ತೆಗೆದಿದ್ದಾರೆ. ಲೇಖನಗಳ ಗುಣಮಟ್ಟ ಕಡಿಮೆ ಇದ್ದರೆ ಯಾರು ಬೇಕಾದರು ಸರಿಪಡಿಸಬಹುದಲ್ಲ. ಅದಕ್ಕೆ ಟೆಂಪ್ಲೇಟ್ ಸೇರಿಸ ಬೇಕೆಂದಿಲ್ಲವಲ್ಲ.

ಇದು ಹೊಸ ಲೇಖಕರ ಉತ್ಸಾಹವನ್ನು ಕಡಿಮೆ ಮಾಡುತ್ತಿದೆ. ಈ ಸಮಸ್ಯೆಗೆ ಪರಿಹಾರವನ್ನು ಸಮುದಾಯದವರು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.--Arpitha05 (ಚರ್ಚೆ) ೧೪:೩೬, ೧೫ ಅಕ್ಟೋಬರ್ ೨೦೧೯ (UTC)

@Lokesha kunchadka: In spite of warnings, you are continuing your disruptive behaviour in Kannada and Tulu Wikipedias. This time you have also harassed newly joined woman editors. Explain me the reasons for your behaviour and give me reasons why you should not be barred from Kannada and Tulu Wikipedias? I am expecting a convincing logical answer by tomorrow--ಪವನಜ ಯು. ಬಿ. (ಚರ್ಚೆ) ೧೭:೩೪, ೧೫ ಅಕ್ಟೋಬರ್ ೨೦೧೯ (UTC) (Admin, Kannada and Tulu Wikipedias)
@Lokesha kunchadka: - Instead of answering to the warning, you are indulging in whataboutery. It is noticed that you are harassing newly joined woman editors. You have continued this in spite of warnings. Hence User:Lokesha kunchadka is barred from Kannada Wikipedia for a month. If the practice is continued after the expiry of the ban, User:Lokesha kunchadka will be barred permanently from Kannada Wikipedia.--ಪವನಜ ಯು. ಬಿ. (ಚರ್ಚೆ) ೦೫:೧೧, ೧೭ ಅಕ್ಟೋಬರ್ ೨೦೧೯ (UTC)(Admin, Kannada Wikipedia)
ಸದ್ಯ ಮೇಲಿನ ವಿಚಾರಕ್ಕೆ ನನ್ನ ಒಪ್ಪಿಗೆಯಿದೆ. ಸಮುದಾಯದಲ್ಲಿ ಸ್ವಲ್ಪ ಏರು ತಗ್ಗಿನ ಮಾತುಗಳು ಬರುವುದು ಸಹಜ. ಆದರೆ ಹೊಸ ಸಂಪಾದಕರನ್ನು ಆದಷ್ಟು ಆಧರಿಸಿ ಅವರಿಗೆ ಸಲಹೆ, ಸೂಚನೆ, ಮಾರ್ಗದರ್ಶನ ನೀಡಬೇಕಾದದ್ದು ಪ್ರತಿಯೊಬ್ಬ ಹಿರಿಯ ಸಂಪಾದಕರ ಜವಾಬ್ದಾರಿ. ಇಂತಹ ಸಂದರ್ಭದಲ್ಲಿ ಹೊಸ ಸಂಪಾದಕರು ಗಾಬರಿಯಾಗುವುದು, ಅಡಿಟ್ ಮಾಡೋದನ್ನೇ ಬಿಡುವುದು, ಇದರಿಂದೇನು ಲಾಭವೆಂದು ನಿರಾಸೆಗೊಳ್ಳುವುದು ಸಹಜ. ಆರಂಭದಲ್ಲಿ ನನಗೂ ಹೀಗಾಗುತ್ತಿತ್ತು. ತಪ್ಪುಗಳನ್ನು ಎತ್ತಿ ತೋರಿಸುವಾಗ ಸ್ವೀಕರಿಸುವ ಮನೋಭಾವವೂ ಬಹಳ ಮಂದಿಯಲ್ಲಿ ಇಲ್ಲ. ತಪ್ಪು ಆದದ್ದು ನನ್ನ ವೀಕ್‌ನೆಸ್ ಅಲ್ಲ. ಆದರೆ ಮಾಡಿದ ತಪ್ಪನ್ನೇ ಮಾಡುವುದು ತಪ್ಪೇ. ಗೊತ್ತಿಲ್ಲದೆ ಆದಾಗ ಹೇಳಿಕೊಡುವವರು ಸ್ವಲ್ಪ ಹಿತಮಿತವಾದ ಭಾಷೆಯಲ್ಲಿ ಅರ್ಥವಾಗುವಂತೆ ಒಬ್ಬರಿಗೇ ಕರೆದು, ಆಥವಾ ಫೋನ್ ಕರೆಮಾಡಿ ಹೇಳಿದರೆ ಉತ್ತಮವೂ ಹೌದು. ಯಾಕೆ ಸಮುದಾಯದಲ್ಲಿ ಆಗಾಗ ಜಗಳ ಆಗುತ್ತದೆ? ಅದೂ ನಮ್ಮ ನಮ್ಮ ಮೂಗಿನ ನೇರದ ಜಗಳ. ನಾನು ತಿಳಿದವನು. ಬಿಟ್ಟುಕೊಡಲಾರೆ. ನಾನು ಇನ್ನೂ ಹೆಚ್ಚು ತಿಳಿದವನು. ನಾನು ಬಿಟ್ಟು ಕೊಡಲಾರೆ. ಹೀಗೆ ಉಂಟಾದ ಮನಸ್ತಾಪಗಳು ಯಾವ ಪಂಚಾತಿಗೆಯಿಂದಲೂ ಸರಿಯಾಗಲಾರದು. ಒಳಗೊಳಗಿಂದ ನಡೆಸುವ ಪಿತೂರಿಯವರೂ ಇದ್ದಾರೆ. ಎದುರಿಗೆ ಚೆನ್ನಾಗಿರುವುದು ಹಿಂದಿನಿಂದ ಬೈಯೋದು. ನಾವೆಲ್ಲ ಕೆಲಸ ಮಾಡೋದು ಕನ್ನಡ ಭಾಷೆಗಾಗಿ ಎಂಬ ಅರಿವಿದ್ದರೆ ಎಲ್ಲ ಜಗಳಗಳೂ ತಣ್ಣಗಾಗುತ್ತವೆ. ಹೀಗೆ ಕನ್ನಡ ಸಮುದಾಯದಲ್ಲೂ ಜಗಳ ಇದ್ದರೆ ಅದನ್ನು ಪರಿಹರಿಸೋದು ನಮ್ಮ ಕೆಲಸದಿಂದ. ಉತ್ತಮ ಲೇಖನಗಳನ್ನು ಆಗಾಗ ಮಾಡುವ ಸಂಪಾದನೋತ್ಸವ ಮಾಡೋಣ. ಅಲ್ಲಲ್ಲಿ ಸೇರೋಣ. ಮೈಸೂರು, ಮಂಗಳೂರು, ಬೆಂಗಳೂರು, ಹಂಪಿ, ಶಿವಮೊಗ್ಗ ಹೀಗೆ ಎಲ್ಲ ಕಡೆ ಹೋಗುವ ಅವಕಾಶವೂ ಬರಲಿ. ಸಿರಿಗನ್ನಡಂ ಗೆಲ್ಗೆ. --Vishwanatha Badikana (ಚರ್ಚೆ) ೦೯:೪೮, ೧೮ ಅಕ್ಟೋಬರ್ ೨೦೧೯ (UTC)

Opposition for the way blocking process handled by admin

It is very sad to see blocking process happened in this way. I am writing this purely from my personal motivation but not with any interest or concern about blocking Lokesha kunchadka. But I have opposition for the way bureaucrat handled this process. I will list out the policies which bureaucrat did not abide by.

Firstly, in the warning Pavanaja said on Lokesha's talkpage

Many new editors are coming to Kannada Wikipedia because of editathons. I have noticed that you are simply going on adding templates to the articles by these new editors. This is not going to be of much help. The action by you of adding templates to almost every article by new editors will be considered as newbie biting. Your aim may be improving the quality of articles in Kannada Wikipedia, but the outcome might be that the new editors will simply quit editing. Instead of adding these templates, I suggest you to improve the articles and and show the editors how exactly an article can be improved. That example will help the editors rather than the templates added by you. You may even create a tutorial on improving the quality of an article. If you can't do that I reprimand from adding templates to articles at random and doing newbie biting. This is also a warning to you to desist from doing so.--ಪವನಜ ಯು. ಬಿ. (ಚರ್ಚೆ) ೦೯:೧೨, ೧೨ ಅಕ್ಟೋಬರ್ ೨೦೧೯ (UTC)

There is no link to the policy and it is not clear what template he was adding and under newbie biting which policy he did not follow. Editor may not know the policy so admin must cite policy pages either in Kannada or English. Newbie biting policy and guidelines are here and here. In this case it is the duty of the administrator to give proper citation to the policy and educate before blocking, which is not done. Also as I can see the blocked user is only adding “references needed” tags, which is not at all newbie biting. If newbies are getting demotivated by just seeing those tags, it organisers’ responsibility to explain the importance of such tags. If a user doesn’t learn how to receive constructive criticism at the beginning, it will be very problematic when they grow as a user, and eventually affecting the quality of content produced. If a users sends continuous talk page warning, that may count as newbie biting but not this. This should be discussed with the community than just one person deciding on what newbie biting is. And Arpitha05 told

ನಾನು ಆ ಲೇಖನಗಳಿಗೆ ಅಗತ್ಯವಿರುವ ಉಲ್ಲೇಖಗಳನ್ನು, ಇನ್ಫೋಬಾಕ್ಸ್, ಆಂತರಿಕ ಮತ್ತು ಬಾಹ್ಯ ಕೊಂಡಿಗಳನ್ನು ಸೇರಿಸುತ್ತಿದ್ದೇನೆ. ಅಕ್ಷರಗಳು ಮತ್ತು ವಾಕ್ಯಗಳಲ್ಲಿ ತಪ್ಪಿದ್ದಲ್ಲಿ ಅದನ್ನೂ ಸರಿಪಡಿಸಿ ಲೇಖನ ಸೇರಿಸಿದ ವಿದ್ಯಾರ್ಥಿನಿಯರಿಗೆ ಅದರ ಬಗ್ಗೆ ತಿಳಿಸಿದ್ದೇನೆ ಕೂಡ. ಇದಲ್ಲದೆ ಕೆಲವು ಲೇಖನಗಳ ವಯಕ್ತಿಕ ಜೀವನ ಎಂಬ ವಿಭಾಗವನ್ನು ತೆಗೆದಿದ್ದಾರೆ.

You are doing good job Arpitha05. Thank you. Kindly give the links so that community also can understand that problem.
While blocking a proper explanation and evidence should be given with links, which are not at all seen here. Please provide the evidence of harassing new women Wikipedian. So that community understands the actual situation. And it’s clearly mentioned

Block reasons should avoid the use of jargon as much as possible so that blocked users may better understand them.

Here admin used “you are indulging in whataboutery”. User many not even understand this. I had to go to a dictionary to see the meaning of the words because it’s Kannada Wikipedia. Block reason could have at least translated. Also please provide links to where you have previously warned the user in question, on Wikipedia about this matter. It was stated that there have been multiple warning given.

I do not see enough community discussion went for long. According to WP:INVOLVED “Do not block someone where you have, or may seem to have, a conflict of interest with regards to the editor in question or the topic in dispute – known as being "involved". This is generally construed very broadly by the community, to include current or past conflicts with an editor (or editors) and disputes on topics, regardless of the nature, age, or outcome of the dispute. However, issuing warnings, calm and reasonable discussion and explanation of those warnings, advice about communal norms, and suggestions on possible wordings and approaches, do not make an administrator 'involved'.” I clearly see conflicts of interest here. That is Pavanaja conducted workshop and previously Pavanaja and Lokesha commented against each other on CIS-A2K request page on Meta. And Pavanaja was resource person for the workshop. From this workshop user complained. So User:Pavanaja should not block User:Lokesha kunchadka. Instead he can request other admins to do so.
I was trained by User:Pavanaja and during that time I had informed that when community members add any templates take it positively and they are helping you to write quality articles. But why is not that case now! Why new users are not being motivated positively! Let's Assume good faith on senior editors and newbie's. --ಗೋಪಾಲಕೃಷ್ಣ (ಚರ್ಚೆ) ೧೧:೪೨, ೨೨ ಅಕ್ಟೋಬರ್ ೨೦೧೯ (UTC)

ಪ್ರತಿಕ್ರಿಯೆ

ಈ ಪರಿಸ್ಥಿತಿಯಲ್ಲಿ ನಿರ್ವಾಹಕರು ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಹಮತವಿದೆ, ಏಕೆಂದರೆ ಅರ್ಪಿತಾಳೊಂದಿಗೆ ಲೋಕೇಶ್ ನವರ ಇತ್ತೀಚಿನ ಸಂವಹನವು ಉತ್ತಮವಾಗಿರಲಿಲ್ಲ, ಅದು ಕಿರುಕುಳದ ರೂಪದಲ್ಲಿತ್ತು - w:Wikipedia:No_personal_attacks. ★ Anoop✉ ೦೨:೪೦, ೨೩ ಅಕ್ಟೋಬರ್ ೨೦೧೯ (UTC)

@AnoopZ: ಅರ್ಪಿತಾ (ಹಾಗೂ ಧನಲಕ್ಷ್ಮಿ) ಅವರ ಮೇಲೆ ಕೆಟ್ಟ ವೈಯಕ್ತಿಕ ದಾಳಿ ಎಂದು ನಾನು ಒಪ್ಪುತ್ತೇನೆ. ಅರ್ಪಿತಾ ಅವರು ತುಂಬಾ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಹಾಗೂ ನಿರ್ವಾಹಕರುಗಳ ಮೇಲೆ ಇರುವಂತೆಯೇ ಅವರ ಮೇಲೂ ತುಂಬಾ ಗೌರವವಿದೆ. ಅದಕ್ಕಾಗಿಯೇ ನಾನು ಆರಂಭದಲ್ಲಿ ಹೇಳಿದ್ದೇನೆ "I am writing this purely from my personal motivation but not with any interest or concern about blocking [[User:Lokesha kunchadka|Lokesha kunchadka". ಅವರು ವೈಯಕ್ತಿಕವಾಗಿ ಆಕ್ರಮಣ ಮಾಡಿದಾಗ ನಿರ್ವಾಹಕರು ಸಮುದಾಯದೊಂದಿಗೆ ಚರ್ಚಿಸಬೇಕಾಗಿತ್ತು ಹಾಗೂ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕಿತ್ತು (ಮಹಿಳಾ ಸಂಪಾದಕರು ಆದ್ದರಿಂದ). ಅದು ನಡೆದಿದ್ದಲ್ಲಿ ನಾನು ಆರಂಭಿಕ ಬ್ಲಾಕ್ (8 ಗಂಟೆಗಳ) ಗೆ ಸಹಮತ ಕೊಡುತ್ತಿದ್ದೆ. ಮತ್ತು ಈಗಲೂ ನಾನು ಬ್ಲಾಕ್‌ಅನ್ನು ವಿರೋಧಿಸುತ್ತಿಲ್ಲ. ನಿರ್ವಾಹಕರನ್ನು ಬ್ಲಾಕ್ ಮಾಡಿದ ಪ್ರಕ್ರಿಯೆಯನ್ನು ನಾನು ವಿರೋಧಿಸುತ್ತಿದ್ದೇನೆ. ಆರಂಭದಲ್ಲಿ ಗಂಭೀರ ಎಚ್ಚರಿಕೆ ನೀಡಿ ಚರ್ಚೆಪುಟದಲ್ಲಿ ಬರೆಯುವುದನ್ನು ಬ್ಯಾನ್ ಮಾಡಬೇಕಿತ್ತು. ವ್ಯಕ್ತಿಯು ಅದನ್ನೇ ಮುಂದುವರಿಸಿದ್ದಲ್ಲಿ ಸಮುದಾಯಕ್ಕೂ ಸಹ ಇಡೀ ಸಮಸ್ಯೆಯನ್ನು ತಿಳಿಸಬೇಕಾಗಿತ್ತು, ಆಗ ಸಮುದಾಯವು ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಿತ್ತು. (ನಾನು ಇಲ್ಲಿ 8 ಗಂಟೆಗಳ ಬ್ಲಾಕ್ ಅನ್ನು ಪ್ರಸ್ತಾಪಿಸುತ್ತಿದ್ದೆ) ಸಮುದಾಯಕ್ಕೆ ಚರ್ಚಿಸಲು ಸಮಯ ನೀಡದೆ ಒಂದು ತಿಂಗಳ ಮಟ್ಟಿಗೆ ಬ್ಲಾಕ್ ಮಾಡುವುದು ಯಾವುದೇ ನೀತಿಯ ಪ್ರಕಾರ, ವಿಶ್ವದ ಯಾವುದೇ ವಿಕಿಪೀಡಿಯಾದಲ್ಲಿ ಸ್ವೀಕಾರಾರ್ಹವಲ್ಲ. ಬ್ಯೂರಾಕ್ರಾಟ್ ಹಕ್ಕುಗಳಿಗಾಗಿ ನಾನು ಈ ಹಿಂದೆ ಬೆಂಬಲಿಸಿದ್ದೆ. ನಾಳೆ ವಿಕಿಪೀಡಿಯ ನೀತಿ ನಿಯಮಗಳನ್ನು ತಿಳಿದಿರುವ ಯಾರಾದರೂ ನೀವು ಯಾಕೆ ಬೆಂಬಲಿಸಿದ್ದೀರಿ ಎಂದು ನನ್ನನ್ನು ಕೇಳಬಾರದು (ಕಾರಣ: ಎಲ್ಲಾ ಕಾಮೆಂಟ್‌ಗಳು ಇಲ್ಲಿ ಇಂಗ್ಲಿಷ್‌ನಲ್ಲಿವೆ ಮತ್ತು ಕನ್ನಡವನ್ನು ತಿಳಿಯದ ಯಾರಾದರೂ ಅರ್ಥೈಸಿಕೊಳ್ಳಬಹುದು (ಸ್ಟೀವರ್ಡುಗಳು ಅಥವಾ ಯಾವುದೇ ವಿಕಿಪೀಡಿಯನ್ನರು). ನಿಮ್ಮ ನಿರ್ವಾಹಕರು ತಪ್ಪು ಮಾಡಿದ್ದರಲ್ಲವೇ ನೀವು ಏಕೆ ವಿರೋಧಿಸಿಲ್ಲ ಎಂದು ನನ್ನನ್ನು ಕೇಳಿದರೆ ನಾನೇನು ಹೇಳಲಿ? ಈ ಎಲ್ಲಾ ಕಾರಣಗಳಿಂದಾಗಿ ಬ್ಲಾಕ್ ಮಾಡಿದ ವಿಧಾನ ಮತ್ತು ಪ್ರಕ್ರಿಯೆಯನ್ನು ವಿರೋಧಿಸಿದ್ದು. --ಗೋಪಾಲಕೃಷ್ಣ (ಚರ್ಚೆ) ೦೫:೦೫, ೨೩ ಅಕ್ಟೋಬರ್ ೨೦೧೯ (UTC)
ದಯವಿಟ್ಟು ಗೋಪಾಲಕಷ್ಣ ಅವರು ನಾನು Lokesha kunchadka ಅವರಿಗೆ ಈಗಾಗಲೇ ನೀಡಿರುವ ಇತರೆ ಹಲವು ಎಚ್ಚರಿಕೆಗಳನ್ನು ನೋಡಬೇಕಾಗಿ ವಿನಂತಿ. ಹೊಸಬರಿಗೆ ಕುಟುಕುವುದನ್ನು, ಅದರಲ್ಲೂ ಹೊಸ ಮಹಿಳಾ ಸದಸ್ಯರಿಗೆ ಕಿರುಕುಳ ನಿಡುವುದನ್ನು, ಕೇವಲ ಒಂದು ಸಂದರ್ಭವಾಗಿ ಪರಿಗಣಿಸಿ ಇಷ್ಟು ತೀವ್ರವಾದ ತೀರ್ಮಾನ ತೆಗೆದುಕೊಂಡದ್ದಲ್ಲ. ಗೋಪಾಲಕೃಷ್ಣ ಅವರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯ ಸದಸ್ಯರಾಗಿದ್ದಲ್ಲಿ, ಅರಳಿಕಟ್ಟೆ ಮತ್ತು ಲೋಕೇಶ ಕುಂಚಡ್ಕರ ಚರ್ಚಾ ಪುಟದಲ್ಲಿ ಹಿಂದೆ ಹಲವು ಸಲ ಬರೆದವುಗಳನ್ನು ಗಮನಿಸಿರಬಹುದು. ಇಲ್ಲವಾದಲ್ಲಿ ಇನ್ನೊಮ್ಮೆ ಸ್ವಲ್ಪ ಸಂಶೋಧನೆ ಮಾಡಬೇಕಾಗಿ ವಿನಂತಿ. ಹಾಗೆಯೇ ತುಳು ವಿಕಿಪೀಡಿಯದಲ್ಲೂ ಒಮ್ಮೆ ಕಣ್ಣು ಹಾಯಿಸಿ. ಅಲ್ಲೂ ತುಂಬ ಕಿರಿಕಿರಿ ಮಾಡುತ್ತಿದ್ದರು. ಜೊತೆಗೆ ಕಾಮನ್ಸ್‍ನಲ್ಲೂ ನೋಡಿ. ಲೋಕೇಶ ಅವರು ಭರತೇಶ ಹಾಕಿರುವ ಫೋಟೋ ಮತ್ತು ವಿಡಿಯೋಗಳನ್ನು ಯಾವುದೇ ದಾಖಲೆ ನೀಡದೆ ಕಾಪಿರೈಟ್ ಉಲ್ಲಂಘನೆ ಎಂದು ಅಳಿಸಲು ಹಾಕಿದ್ದರು. ಆ ಬಗ್ಗೆಯೂ ಎಚ್ಚರಿಕೆ ನೀಡಲಾಗಿತ್ತು. ಪ್ರತಿಯೊಂದು ಘಟನೆಗೂ ಕೊಂಡಿ ಹುಡುಕಿ ನೀಡಲು ಸಮಯಾವಕಾಶವಾಗಲಿಲ್ಲ. ನಿರ್ವಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಹಲವು ಪುಟಗಳನ್ನು ಸಂಶೋಧನೆ ಮಾಡಿ ಹುಡುಕಿದ ಗೋಪಾಲಕೃಷ್ಣರಿಗೆ ಅವುಗಳನ್ನೂ ಸಂಶೋಧನೆ ಮಾಡುವುದು ಕಷ್ಟದ ಕೆಲಸವಲ್ಲ. ನಿರ್ವಾಹಕರ ಕೆಲಸ ಹೆಚ್ಚಿನ ಜವಾಬ್ದಾರಿಯ ಕೆಲಸ ಅದಕ್ಕೆ ಯಾರೂ ಸಂಬಳ ನಿಡುತ್ತಿಲ್ಲ. ಜವಾಬ್ದಾರಿಯನ್ನು ಅದರ ಘನತೆಗೆ ತಕ್ಕಂತೆಯೇ ನರ್ವಹಿಸಲಾಗುತ್ತಿದೆ ಎಂಬ ನಂಬಿಕೆ ನನಗಿದೆ.--ಪವನಜ ಯು. ಬಿ. (ಚರ್ಚೆ) ೦೫:೫೫, ೨೩ ಅಕ್ಟೋಬರ್ ೨೦೧೯ (UTC)
ನಿಮ್ಮ ಪ್ರತಿಕ್ರಿಯೆಗಾಗಿ ಧನ್ಯವಾದಗಳು Pavanaja ಅವರೇ. ಓಹ್!

ಕಾಮನ್ಸ್‌ನಲ್ಲಿ ಭರತೇಶರ ವಿರುದ್ಧ ಲೋಕೇಶರ ನಡವಳಿಕೆಯೂ ಈ ನಿರ್ಧಾರಕ್ಕೆ ಕಾರಣವೇ? --ಗೋಪಾಲಕೃಷ್ಣ (ಚರ್ಚೆ) ೦೬:೩೯, ೨೩ ಅಕ್ಟೋಬರ್ ೨೦೧೯ (UTC)

ಗೋಪಾಲಕಷ್ಣ ನಿಮ್ಮ ಮಾತಿನಲ್ಲಿ ತುಂಬ ವ್ಯಂಗ್ಯಗಳಿವೆ. ಬಹಳ ಹಿಂದೆ ವಿಕಿಪೀಡಿಯದ ಒಳ ಜಗಳದ ಬಗ್ಗೆ ಕ್ರೈಸ್ಟ್‌ನಲ್ಲಿ ಸಭೆ ನಡೆಸಿ ಸರಿಪಡಿಸಲು ಪ್ರಯತ್ನಿಸಿದ್ದೀರಿ. ಅದು ಯಾರ ಪರವಾದ ಪ್ರಯತ್ನವೆಂದು ಈಗ ಸ್ಪಷ್ಟವಾಗುತ್ತಿದೆ. ಲೇಖನ ಮಾಡುವಾಗ ಬಂದು ಟೆಂಪ್ಲೆಟ್ ಹಾಕುವವರಿಗೆ ಅದೇ ಲೇಖನವನ್ನು ಇನ್ನಷ್ಟು ಉನ್ನತೀಕರಿಸಲು ಪ್ರಯತ್ನಿಸಬಹುದಲ್ವಾ? ಯಾವಾಗ ಲೇಖನವನ್ನು ಮುಗಿಸಿದ್ದಾರೆ ಎಂಬುದೂ ತಿಳಿಯದಷ್ಟು ಜವಾಬ್ದಾರಿಯನ್ನೂ ತಿಳಿಯದ ಸಂಪಾದಕರಿಗೆ ಏನನ್ನಬೇಕು. ಬರೇ ಟೆಂಪ್ಲೆಟ್, ಅಲಿಸುವುದು, ಟೀಕೆ ಇಷ್ಟಕ್ಕೇ ಒಬ್ಬರು ಇದ್ದರೆ ಸಾಕೇ? ವಿಕಿಪೀಡಿಯದ ನಿರೀಕ್ಷೆ ಒಂದು ಲೇಖನವನ್ನು ಹಲವರು ಸೇರಿ ತಯಾರಿಸುವುದು. ಒಬ್ಬರು ಬರೆದದ್ದು ಸರಿಯಿಲ್ಲವೆಂದು ಇನ್ನೊಬ್ಬರು ದೂರುವುದು. ಹೀಗೇ ಆದರೆ ವಿಕಿಪೀಡಿಯದಲ್ಲಿ ಯಾಕೆ ಬರೆಯಬೇಕು? ಅಡ್ಮಿನ್ ಬೈಸಿಕೊಂಡು ವಿಕಿಪೀಡಿಯ ಕೆಲಸ ಮಾಡಬೇಕಾ? ಕಾಮನ್ಸ್‌ನಲ್ಲಿ ಹಾಕಿರುವ ಚಿತ್ರಗಳಿಗೆ ಗುಣಮಟ್ಟ ಸರಿ ಇಲ್ಲವೆಂದು ತೀರ್ಮಾನಿಸುವ ಏಕಾಏಕಿ ನಿರ್ಧಾರವೂ ಸರಿಯೇ? ದ್ವೇಷ ಮಾಡುವಿರಾದರೆ ವಿಕಿಪೀಡಿಯ ಲೇಖನವನ್ನು ಬರೆಯುವವರು ಯಾರು? ಬಹಳ ಹಿಂದೆ ಅಲೋಶಿಯಸ್ ಕಾಲೇಜಿನಲ್ಲಿ ಗುಣಮಟ್ಟದ ಲೇಖನಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿದ್ದೆವು. ಅದರಲ್ಲಿ ನೀವೂ ಒಬ್ಬರಿದ್ರಿ. ಅಂತಹ ಯಾವುದೇ ಕೆಲಸಗಳ ನೆನಪು ಈಗ ಇಲ್ಲವೇ? ನನಗನಿಸುತ್ತದೆ ಕೆಲಸಕ್ಕಿಂತ ಪಿತೂರಿಯೇ ಹೆಚ್ಚಾಯಿತು ಅಂತ. --Vishwanatha Badikana (ಚರ್ಚೆ) ೧೩:೪೩, ೨೪ ಅಕ್ಟೋಬರ್ ೨೦೧೯ (UTC)
‍ವಿಕಿಪೀಡಿಯಾ ಸಂಪಾದನೋತ್ಸವ ಇತ್ಯಾದಿಗಳಲ್ಲಿ ತರಬೇತಿಕೊಡುತ್ತಿರುವ ನೀವುಗಳೆಲ್ಲಾ ಈ ರೀತಿಯ ವಾಗ್ಯುದ್ಧಕ್ಕೆ ಇಳಿದಿರುವುದು ಬೇಸರದ ವಿಷಯ. ಟೆಂಪ್ಲೇಟ್ ಹಾಕುವುದು‍ ಕೂಡ ಒಂದು ಸಂಪಾದನೆಯೇ, ಅದನ್ನು ತಿಳಿಸಿ ಹೇಳುವುದೂ ಒಂದು ಕೆಲಸವೇ. ಒಬ್ಬರ‍ ‍ಕೆಲಸ ಮಾತ್ರ ದೊಡ್ಡದು, ಒಬ್ಬರದು ಚಿಕ್ಕದು ಎಂದು ತೋರಿಸುವ ಕಾರ್ಯ ಸಮುದಾಯಕ್ಕೆ ಒಳ್ಳೆಯದಲ್ಲ. ಆ ಟೆಂಪ್ಲೇಟು ‌ಸೃಷ್ಟಿಸಿದ‍ವರಲ್ಲಿ ಒ‍‌‌ಬ್ಬನಾದ ನಾನು ಅದರ ಹಿಂದೆಯ ಚರ್ಚೆಯಲ್ಲಿ ಇಲ್ಲಿರುವ ಅನೇಕ‍ರು ಭಾಗಿಯಾಗಿದ್ದರೆಂದು ಮಾತ್ರ ಹೇಳಲು ಇಷ್ಟ‍ಪಡುತ್ತೇನೆ. ಇಲ್ಲಿನ ಸಂದೇಶಗಳನ್ನು ನೋಡಿದಾಗ ಅರಳೀಕಟ್ಟೆಯ ಹೊರಗೆ ಕನ್ನಡ ವಿಕಿ ಸಮುದಾಯ‍ ಮತ್ತು ಅದರ ನಡವಳಿಕೆ‍ ಹಾಗೂ ಅಲ್ಲಿಯ ಮಾತುಕತೆಗಳು ಇಲ್ಲಿನ ಸಂವಹನದ ಆರೋಗ್ಯದ ಬಗ್ಗೆ ಒಂದು ಕಿರುನೋಟವನ್ನೇ ನೀಡುತ್ತವೆ. ಯಾವುದೇ ವ್ಯಕ್ತಿ/ನಿರ್ವಾಹಕ ಮೊದಲಿಗೆ ತಮ್ಮ ಕೆಲಸ‍/ಜವಾಬ್ದಾರಿಯ ಬಗ್ಗೆ ಅನುಮಾನಗಳಿದ್ದಲ್ಲಿ‍ ಮೊದಲು ಅದನ್ನು ಸಮುದಾಯದ ಮುಂದಿಡಬೇಕು. ಇತರ‍ರು ಅದನ್ನು ಪ್ರಶ್ನಿಸುವುದ‍ಕ್ಕೂ ಇಲ್ಲಿ ಅವಕಾಶವಿದೆ. ಮಹಿಳೆಯರ ಮೇಲೆ ದೌರ್ಜನ್ಯ‍/‍Harassment - 'ಜೊ‍ತೆಗೆ ಹೊರಗೆ ಆಡಿದ ಮಾತುಗಳು' ಹೀಗೆ ನಾನು ಇಲ್ಲಿ ಓದಿದ ಮಾತುಗಳು ಯಾರ ಬಗ್ಗೆಯೂ ಗೌರವದ ಭಾವನೆ ಬೆಳೆಸುವುದಿಲ್ಲ‍. ಈ ಮಾತುಗಳನ್ನು ಓದುವವರಿಗೆ ನೀವು ಹೇಳಬೇಕೆಂದಿರುವ ಮಾತು ತಲುಪದೇ ಬೇರೆಯದೇ ಅರ್ಥ ಕೊಡುತ್ತವೆ. ಇವುಗಳನ್ನು ಪುನರ್ವಿಮರ್ಶಿಸಿ‍ಕೊಂಡು ಸಂಪಾದನೆಯಲ್ಲಿ ಮತ್ತೆ ತೊಡಗುತ್ತೀರಿ ಎಂದು ಭಾವಿಸುತ್ತೇನೆ. ಲೋಕೇಶ್ ಅವರನ್ನು ‍ಬ್ಲಾಕ್ ಮಾಡುವ ಮೊದಲು ಅ‍ದ‍ನ್ನು ಬ್ಲಾಕ್ ಮಾಡುತ್ತಿರುವ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದಂತಿಲ್ಲ. ಅವರಿಗೂ ಅಲ್ಲಿ ಉತ್ತರಿಸಲಿಕ್ಕೆ ಒಂದು ಅವಕಾಶ ಕೊಡಬೇಕಿತ್ತು. ಇದನ್ನು ಸರಿಪಡಿಸಿ. ಧನ್ಯವಾದಗಳು ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೫:೩೮, ೩೦ ಅಕ್ಟೋಬರ್ ೨೦೧೯ (UTC)


@Dhanalakshmi .K. T: Can you give the link or the reference to the article you were working on 13th October.? Also would like to see some real reference where a new editor got demotivated and quit the editing.!? --Akasmita (ಚರ್ಚೆ) ೦೯:೦೩, ೧ ನವೆಂಬರ್ ೨೦೧೯ (UTC)

@Pavanaja: ನನ್ನ ಮೇಲಿನ ಪ್ರಶ್ನೆಗೆ ಉತ್ತರಕ್ಕಾಗಿ ಕಾಯುತ್ತಿರುವೆ. --ಗೋಪಾಲಕೃಷ್ಣ (ಚರ್ಚೆ) ೧೧:೧೭, ೧ ನವೆಂಬರ್ ೨೦೧೯ (UTC)
  1. Newbie biting is a recent act, Lokesha kunchadka has attacked me personally in this page
  1. Lokesha kunchadka has opposed Gender Gap activity in Tulu Wikipedia as well by saying this. (translation:Instead of working for Tulu, there is only feminism. In the name of Tulu, more women related activities are done in Kannada and no work is done in Tulu). On what basis did he make this statement when there are women contributors.
  2. If Lokesha kunchadka is more concerned on the quality, he should have improved the quality by adding references or demonstrating how it has to be done, instead of adding templates and thereby discouraging new editors.
  3. @Akasmita: After the editathons I do followup with the new editors through telephone calls. I heard the same feedback from the newly joined editors especially women editors, what Arpitha05 has mentioned above. --Dhanalakshmi .K. T (ಚರ್ಚೆ) ೧೮:೧೪, ೨ ನವೆಂಬರ್ ೨೦೧೯ (UTC)
  4. One more instance of personal attack is here in my talk page of Kannada Wikipedia. He said that I am lying (ಸುಳ್ಳು ಹೇಳುವುದು ಬಿಡಿ.) --Dhanalakshmi .K. T (ಚರ್ಚೆ) ೧೮:೨೧, ೨ ನವೆಂಬರ್ ೨೦೧೯ (UTC)
ಅಡ್ಮಿನ್ ಅವರು ಸರಿಯಾದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಮೊದಲಿನಿಂದಲೇ Lokesha kunchadka ಅವರ ಚಟುವಟಿಕೆಗಳನ್ನು ಗಮನಿದ್ದೇವೆ. ಲೇಖನಗಳನ್ನು ಸರಿಪಡಿಸದೆ ಕೇವಲ ಟೆಂಪ್ಲೆಟ್ ಮಾತ್ರ ಹಾಕುವುದರಿಂದ ವಿಕಿಪೀಡಿಯದ ಲೇಖನಗಳ ಸುಧಾರಣೆಯಾಗಲಾರದು. ಇದು ಅಡ್ಮಿನರ ಕೆಲಸವನ್ನು ದ್ವಿಗುಣಗೊಳಿಸುತ್ತದೆ. ಇದಲ್ಲದೆ ಕೆಟ್ಟ ಭಾಷೆಯನ್ನು ಬಳಸುವ ಮೂಲಕ ಸಮುದಾಯದ ಆರೋಗ್ಯವನ್ನು ಕೆಡಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ತುಳು ಚಾವಡಿಯಲ್ಲಿದೆ. ಅಡ್ಮಿನ್ ಸತ್ತು ಹೋಗಿದ್ದಾರಾ? ಎಂದು ಕೇಳಿರುವುದು. ಫೋಟೋ ಮತ್ತು ವಿಡಿಯೋಗಳನ್ನು ಸರಿಯಾದ ದಾಖಲೆ ನೀಡದೇ ಕಾಪಿರೈಟ್ ಉಲ್ಲಂಘನೆ ಎಂದು ಅಳಿಸಲು ಹಾಕಿದ್ದರು. --Kishorekumarrai (ಚರ್ಚೆ) ೦೫:೨೬, ೩ ನವೆಂಬರ್ ೨೦೧೯ (UTC)

ಉತ್ತರಗಳು

  • ಲೋಕೇಶ ಕುಂಚಡ್ಕ ಅವರು ಹೊಸಬರಿಗೆ ಕುಟುಕುವ/ಕುಟುಕಿದ ಒಂದೇ ಕಾರಣಕ್ಕಾಗಿ ಅವರನ್ನು ನಿರ್ಬಂಧಿಸಿದ್ದಲ್ಲ. ಹುಡುಕಿದರೆ ಎಲ್ಲ ವಿವರಗಳು ವಿಕಿಪೀಡಿಯದಲ್ಲೇ ಇವೆ. ಅರಳಿಕಟ್ಟೆ ಮತ್ತು ಅವರ ಅವರ ಚರ್ಚಾ ಪುಟ ನೋಡಿದರೂ ಸಾಕು. ಹಾಗೆಂದು ಗೋಪಾಲಕೃಷ್ಣ ಅವರಿಗೆ ಉತ್ತರಿಸಿಯೂ ಇದ್ದೆ. ಆದರೆ ಅವರು ಅದನ್ನು ಮಾಡದೆ ಮತ್ತೆ ನನಗೇ ಪ್ರಶ್ನೆ ಮಾಡಿದ್ದಾರೆ.
  • ಮೊದಲನೆಯದಾಗಿ ಹೊಸಬರಿಗೆ, ಅದರಲ್ಲೂ ಮಹಿಳಾ ಸದಸ್ಯರಿಗೆ ಕಿರಿಕಿರಿ ಮಾಡಿದ ಬಗ್ಗೆ -
    • ಉಡುಪಿ ಸಂಪಾದನೋತ್ಸವದಲ್ಲಿ ಮಹಿಳೆಯರ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಭಾರತೀಯ ಮಹಿಳಾ ವಿಜ್ಞಾನಿಗಳ ಬಗ್ಗೆ ಲೇಖನಗಳನ್ನು ಸೇರಿಸಿದ್ದರು. ಸಂಪಾದನೋತ್ಸವ ನಡೆದುದು ಅಕ್ಟೋಬರ್ ೧೨ ಮತ್ತು ೧೩, ೨೦೧೯ ರಂದು. ಲೋಕೇಶ ಕುಂಚಡ್ಕ ಅಲ್ಲಿ ತಯಾರಾದ ಲೇಖನಗಳಿಗೆ ಗುಣಮಟ್ಟ ಚೆನ್ನಾಗಿಲ್ಲ, ಸೂಕ್ತ ಉಲ್ಲೇಖಗಳು ಬೇಕು ಎಂದು ಟೆಂಪ್ಲೇಟು ಸೇರಿಸಿದ್ದು ಅಕ್ಟೋಬರ್ ೧೪, ೨೦೧೯ ರಂದು. ಅಂದರೆ ಲೇಖನಗಳು ತಯಾರಾಗಿ ಇನ್ನೂ ಒಂದು ದಿನ ಆಗಿತ್ತಷ್ಟೆ. ಹೊಸ ಸದಸ್ಯರು ಲೇಖನ ತಯಾರು ಮಾಡುವುದನ್ನೇ ಕಾದು ಕುಳಿತು ಟೆಂಪ್ಲೇಟು ಸೇರಿಸಿದಂತೆ ಕಾಣಿಸುತ್ತದೆ. ಈಗ ಅವರು ಟೆಂಪ್ಲೇಟು ಸೇರಿಸಿದ ಲೇಖನಗಳನ್ನು ಗಮನಿಸೋಣ. ಅವರು ಉಲ್ಲೇಖಗಳು ಉತ್ತಮವಾಗಿಲ್ಲ, ಅವು ಸಾಲದು ಎಂದು ಟೆಂಪ್ಲೇಟು ಸೇರಿಸಿದ ಎಲ್ಲ ಲೇಖನಗಳಲ್ಲೂ ಕನಿಷ್ಠ ಎರಡು ಉಲ್ಲೇಖಗಳಿದ್ದವು. ಅವುಗಳ ಪಟ್ಟಿ ಇಲ್ಲಿದೆ -
    • ತುಮಕೂರು ಸಂಪಾದನೋತ್ಸವದಲ್ಲಿ ತಯಾರಾದ ಲೇಖನಕ್ಕೂ ಹೀಗೇ ಟೆಂಪ್ಲೇಟು ಸೇರಿಸಿದ್ದರು -
    • ಉಡುಪಿ ಸಂಪಾದನೋತ್ಸವದಲ್ಲಿ ತಯಾರಾದ ಒಂದು ಲೇಖನದಿಂದ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕಿದ್ದಾರೆ. ಈ ಲೇಖನ ಇಂಗ್ಲಿಷ್ ವಿಕಿಪೀಡಿಯ ಲೇಖನದ ಕನ್ನಡಾನುವಾದ. ಇಂಗ್ಲಿಷಿನಲ್ಲಿ ವೈಯಕ್ತಿಕ ಮಾಹಿತಿ ಇರಬಹುದಾದರೆ ಕನ್ನಡದಲ್ಲಿ ಏಕಿರಬಾರದು? ಯಾಕೆ ಈ ರಿತಿ ಸಂಪಾದನೆ ಮಾಡಿ ಹೊಸ ಸಂಪಾದಕರಿಗೆ ನಿರುತ್ಸಾಹ ತುಂಬಬೇಕು?
  • ಲೋಕೇಶ ಕುಂಚಡ್ಕರಿಗೆ ಎಚ್ಚರಿಕೆ ನೀಡಲಾಗಿತ್ತು. ಎಚ್ಚರಿಕೆ ನೀಡದೆ ನಿರ್ಬಂಧಿಸಿದ್ದಲ್ಲ.
  • ಸೂಕ್ತ ಉಲ್ಲೇಖ ಬೇಕು ಎಂದು ಕೆಲವು ಆಯ್ದ ಹೊಸಬರ ಲೇಖನಗಳಿಗೆ ಟೆಂಪ್ಲೇಟು ಸೇರಿಸುವ ಲೋಕೇಶ ಕುಂಚಡ್ಕ ತಾವೇ ಉಲ್ಲೇಖವಿಲ್ಲದ ಲೇಖನ ಸೇರಿಸಿದ್ದರು. ಆ ಬಗ್ಗೆ ಅವರಿಗೆ ನೆನಪು ಮಾಡಲಾಗಿತ್ತು. ದಾಖಲೆ ಇಲ್ಲಿದೆ.
  • ಲೋಕೇಶ ಕುಂಚಡ್ಕರಿಗೆ ಅರಳಿಕಟ್ಟೆಯಲ್ಲೇ ಎಚ್ಚರಿಸಲಾಗಿತ್ತು. ದಾಖಲೆ ಇಲ್ಲಿದೆ.
  • ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ತರುವುದು, ಅವರನ್ನು ಸಂಪಾದನೆ ಮಾಡುವುಂತೆ, ಕನ್ನಡಕ್ಕೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುವುದು ಎಷ್ಟು ಕಷ್ಟದ ಕೆಲಸ ಎಂಬುದು ಈ ಕೆಲಸಗಳಲ್ಲಿ ತೊಡಗಿಕೊಂಡಿರುವ ನನ್ನಂತವರಿಗೆ ಚೆನ್ನಾಗಿ ಗೊತ್ತು. ಉಡುಪಿಯಲ್ಲಿ ಸಂಪಾದನೋತ್ಸವ ನಡೆದುದು ಮಹಿಳೆಯರ ಸರಕಾರಿ ಕಾಲೇಜಿನಲ್ಲಿ, ಶನಿವಾರ ಮತ್ತು ಭಾನುವಾರ, ಅಂದರೆ ರಜಾ ದಿನಗಳಲ್ಲಿ. ಸರಕಾರಿ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿನಿಯರು ಅಂದರೆ ಹೆಚ್ಚಿನವರು ಬಡವರು, ಸ್ವಂತ ಲ್ಯಾಪ್‍ಟಾಪ್ ಇಲ್ಲದವರು. ಕಾಲೇಜಿನಲ್ಲೂ ಒಂದೇ ಒಂದು ಕಂಪ್ಯೂಟರ್ ಲ್ಯಾಬ್ ಇರುವುದು. ಅದು ಸಂಪಾದನೋತ್ಸವಕ್ಕೆ ದೊರಕಿದ್ದುದು ಶನಿವಾರ, ಭಾನುವಾರ. ರಜಾ ದಿನ ಲ್ಯಾಬ್ ಅಟೆಂಡರ್ ಬರುವುದಿಲ್ಲ. ಪ್ರೊ. ರಾಮಚಂದ್ರ ಅಡಿಗ ಅವರು ತಾವೇ ಸ್ವತಃ ಎರಡು ದಿನಗಳೂ ಬಂದು ಲ್ಯಾಬ್ ತೆರೆದು ಸಂಪಾದನೋತ್ಸವಕ್ಕೆ ಸಹಾಯ ಮಾಡಿದ್ದರು. ಅಷ್ಟು ಮಾತ್ರವಲ್ಲ ತಾವೇ ಲೇಖನ ಕೂಡ ಸೇರಿಸಿದ್ದರು. ತಮ್ಮ ಲೇಖನಗಳು ಲೈವ್ ಆದಾಗ ಅವನ್ನು ನೋಡಿ ವಿದ್ಯಾರ್ಥಿನಿಯರು ಎಷ್ಟು ಖುಷಿ ಪಟ್ಟುಕೊಂಡಿದ್ದರು ಎಂದು ಅಲ್ಲಿ ಇದ್ದೇ ನೋಡಬೇಕಿತ್ತು. ಬಹುತೇಕ ವಿದ್ಯಾರ್ಥಿನಿಯರು ತಮ್ಮ ಲೇಖನದ ಕೊಂಡಿಯನ್ನು ತಮ್ಮ ತಮ್ಮ ವಾಟ್ಸ್ ಆಪ್ ಸ್ಟಾಟಸ್ ಆಗಿ ಹಾಕಿಕೊಂಡಿದ್ದರು. ಅಷ್ಟರಲ್ಲಿ ಲೋಕೇಶ ಕುಂಚಡ್ಕ ಎಲ್ಲ ಲೇಖನಗಳಿಗೆ ಗುಣಮಟ್ಟ ಸಾಲದು ಎಂದು ಟೆಂಪ್ಲೇಟು ಸೇರಿಸಿದ್ದರು. ವಿದ್ಯಾರ್ಥಿನಿಯರ ಪರಿಚಿತರು ಅವರ ಲೇಖನದ ಕೊಂಡಿ ಮೂಲಕ ಲೇಖನ ತೆರೆದರೆ ಗುಣಮಟ್ಟ ಚೆನ್ನಾಗಿಲ್ಲ ಎಂಬ ಸೂಚನೆ ಮುಖಕ್ಕೆ ರಾಚುವಂತೆ ಕಂಡರೆ ಲೇಖನ ಬರೆದವರಿಗೆ ಪ್ರೋತ್ಸಾಹಿಸಿದಂತೆ ಆಗುತ್ತದೆಯಾ ಅಥವಾ ಅವರು ಮುಂದೆ ಎಂದೆಂದಿಗೂ ವಿಕಿಪೀಡಿಯಕ್ಕೆ ಲೇಖನ ಬರೆಯದಂತೆ ನಿರುತ್ಸಾಹಿಸಿದಂತೆ ಆಗುತ್ತದೆಯಾ? ಅಷ್ಟಕ್ಕೂ ಆ ಲೇಖನಗಳ ಗುಣಮಟ್ಟ ಕೆಟ್ಟದಾಗಿರಲಿಲ್ಲ. ಕನಿಷ್ಠ ಎರಡು ಉಲ್ಲೇಖಗಳು ಇದ್ದೇ ಇದ್ದವು.
  • ಲೋಕೇಶ ಕುಂಚಡ್ಕರು ತುಳು ವಿಕಿಪೀಡಿಯದಲ್ಲೂ ಇತರೆ ಸಂಪಾದಕರುಗಳಿಗೆ ಕಿರಿಕಿರಿ ಮಾಡಿದ್ದರು. ಕೆಟ್ಟ ಭಾಷೆಯನ್ನು ಬಳಸಿದ್ದರು ಅಡ್ಮಿನ್ ಸತ್ತು ಹೋಗಿದ್ದಾರಾ ಎಂದೆಲ್ಲ ಬರೆದಿದ್ದರು. ಧನಲಕ್ಷ್ಮಿ ಮತ್ತು ಅರ್ಪಿತಾರಿಗೆ ಕೆಟ್ಟದಾಗಿ ಬರೆದುದರ ಬಗ್ಗೆ ಅವರೇ ದಾಖಲೆ ನೀಡಿದ್ದಾರೆ.
  • ಕಾಮನ್ಸ್‍ನಲ್ಲಿ ಸುಮ್ ಸುಮ್ಮನೆ ಕೆಲವರು ಸೇರಿಸಿದ ಫೋಟೋ ಮತ್ತು ವಿಡಿಯೋಗಳನ್ನು ಅಳಿಸಲು ಹಾಕಿದ್ದರು.
  • ಹೀಗೆ ಎಲ್ಲ ಕಾರಣಗಳು ಸೇರಿ ಅವರನ್ನು ನಿರ್ಬಂಧಿಸಿದ್ದು.--ಪವನಜ ಯು. ಬಿ. (ಚರ್ಚೆ) ೧೧:೪೩, ೭ ನವೆಂಬರ್ ೨೦೧೯ (UTC)



Feedback wanted on Desktop Improvements project

೦೭:೧೮, ೧೬ ಅಕ್ಟೋಬರ್ ೨೦೧೯ (UTC)

Project Tiger Article writing contest Jury Update

Hello all,

There are some issues that need to be addressed regarding the Juries of the Project Tiger 2.0 article writing contest. Some of the User has shown interest to be a jury and evaluate the articles created as the part of the writing contest. But they don't meet the eligibility criteria. Please discuss this aspect with the community, if the community feel that they have the potential to be a jury then we can go ahead. If not please make a decision on who can be the jury members from your community within two days. The community members can change the juries members in the later stage of the writing contest if the work done is not satisfactory or the jury member is inactive with the proper discussion over the village pump.

Regards,
Project Tiger team at CIS-A2K
Sent through--MediaWiki message delivery (ಚರ್ಚೆ) ೧೦:೫೧, ೧೭ ಅಕ್ಟೋಬರ್ ೨೦೧೯ (UTC)

Beta feature "Reference Previews"

-- Johanna Strodt (WMDE) ೦೯:೪೭, ೨೩ ಅಕ್ಟೋಬರ್ ೨೦೧೯ (UTC)

ಪ್ರೋಜೆಕ್ಟ್ ಟೈಗರ್-೨ ಲೇಖನ ಬರೆಯುವ ಸ್ಪರ್ಧೆ

ಪ್ರೋಜೆಕ್ಟ್ ಟೈಗರ್-೨ ಲೇಖನ ಬರೆಯುವ ಸ್ಪರ್ಧೆ ಚಾಲನೆಯಲ್ಲಿದೆ. ಸ್ಪರ್ಧೆಯ ವಿವರಗಳು ಈ ಪುಟದಲ್ಲಿವೆ. ಸ್ಪರ್ಧೆಗೆ ಹೆಸರು ಸೇರಿಸಲು ಈ ಪುಟಕ್ಕೆ ಭೇಟಿ ನೀಡಿ ಅಲ್ಲಿ ನಿಮ್ಮ ಹೆಸರನ್ನು ಸೇರಿಸಿ. ಬರೆಯಬೇಕಾದ ಲೇಖನಗಳ ಪಟ್ಟಿ ಈ ಪುಟದಲ್ಲಿದೆ. ಲೇಖನ ಬರೆದ ನಂತರ ಈ ಪುಟದಲ್ಲಿ ಅವನ್ನು ಸಲ್ಲಿಸಬೇಕು.

ನೀವು ಸಲ್ಲಿಸುವ ಲೇಖನ ಹೊಸದಾಗಿದ್ದಲ್ಲಿ [[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ]] ಎಂದು ಸೇರಿಸಿ. ಮೊದಲೇ ಇದ್ದ ಲೇಖನವನ್ನು ವಿಸ್ತರಿಸಿದ್ದಾದಲ್ಲಿ [[ವರ್ಗ:ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ]] ಎಂದು ಸೇರಿಸಿ.--ಪವನಜ ಯು. ಬಿ. (ಚರ್ಚೆ) ೦೪:೪೬, ೨೫ ಅಕ್ಟೋಬರ್ ೨೦೧೯ (UTC)

ಫೌಂಟೈನ್ ಲಿಂಕ್ ನಿಂತು ಹೋಗಿದೆ.

ಫೌಂಟೈನ್ ಲಿಂಕ್ ನಿಂತು ಹೋಗಿದೆ.https://tools.wmflabs.org/fountain/editathons/project-tiger-2.0-ka --Mallikarjunasj (talk) ೧೪:೦೬, ೬ ನವೆಂಬರ್ ೨೦೧೯ (UTC)

ವರದಿ ಮಾಡಲಾಗಿದೆ.--ಪವನಜ ಯು. ಬಿ. (ಚರ್ಚೆ) ೧೭:೧೨, ೬ ನವೆಂಬರ್ ೨೦೧೯ (UTC)
@Mallikarjunasj: & @Pavanaja: The issue related to the fountain tool has been fixed. please let me know if you have any other concerns.  --Ananth subray (ಚರ್ಚೆ) ೦೭:೧೫, ೭ ನವೆಂಬರ್ ೨೦೧೯ (UTC)

ಬ್ಯಾಡ್ ಗೇಟ್ ವೇ ಸಮಸ್ಯೆ

502 Bad Gateway nginx/1.14.2

ಲೇಖನ ಸಲ್ಲಿಸುವಾಗ/ಸಬ್ಮಿಟ್ ಮಾಡುವಾಗ, ಮೇಲಿನ ಸಮ್ಸ್ಯೆ ಬರ್ತಾ ಇದೆ. ಸಲ್ಲಿಸಲು ಆಗುತ್ತಿಲ್ಲ. --Mallikarjunasj (talk) ೧೮:೨೧, ೯ ನವೆಂಬರ್ ೨೦೧೯ (UTC)

ಭಾಷಾವಾರು ತುಲನೆ

ಎಲ್ಲಾ ಭಾಷೆಗಳ ಪ್ರಾಜೆಕ್ಟ್ ಟೈಗರ್ ಅಂಕಿಅಂಶ ಇಲ್ಲಿದೆ. ನಮಗೆ ೧೪ನೆಯ ಸ್ಥಾನ. https://tools.wmflabs.org/neechal/tigerarticle.html

ಫೌಂಟೇನ್ ಕೊಂಡಿ ತೆರೆಯುತ್ತಾ ಇಲ್ಲ, ಲೋಡ್ ಆಗಲು ೧೦ ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಾ ಇದೆ

ಈ ಕೊಂಡಿ https://tools.wmflabs.org/fountain/editathons/project-tiger-2.0-ka ಫೌಂಟೇನ್ ಕೊಂಡಿ ತೆರೆಯುತ್ತಾ ಇಲ್ಲ, ಲೋಡ್ ಆಗಲು ೧೦ ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಾ ಇದೆ. ದಯವಿಟ್ಟು ಸಹಾಯ ಮಾಡಿ Mallikarjunasj (talk) ೦೦:೦೧, ೨೩ ಡಿಸೆಂಬರ್ ೨೦೧೯ (UTC)

ಅದು ka ಅಲ್ಲ, kn ಆಗಬೇಕು -ಪವನಜ ಯು. ಬಿ. (ಚರ್ಚೆ) ೦೧:೪೧, ೨೩ ಡಿಸೆಂಬರ್ ೨೦೧೯ (UTC)

೨ ದಿನದಿಂದ ಫೌಂಟೇನ್ ಕೊಂಡಿ ತೆರೆಯುತ್ತಾ ಇಲ್ಲ

No webservice The URL you have requested, https://tools.wmflabs.org/fountain/editathons/project-tiger-2.0-kn, is not currently serviced. ದಯವಿಟ್ಟು ಸಹಾಯ ಮಾಡಿ. Siddasute (ಚರ್ಚೆ) ೧೦:೩೭, ೯ ಜನವರಿ ೨೦೨೦ (UTC)

Project Tiger update: Let's walk together with Wikipedia Asian Month and WWWW

The Tiger says "Happy Dipavali" to you
Apologies for writing in English, Kindly translate this message if possible.

Greetings!

First of all "Happy Dipavali/Festive season". On behalf of the Project Tiger 2.0 team we have exciting news for all. Thanks for your enthusiastic participation in Project Tiger 2.0. You also know that there is a couple of interesting edit-a-thons around. We are happy to inform that the Project Tiger article list just got bigger.

We'll collaborate on Project Tiger article writing contest with Wikipedia Asian Month 2019 (WAM2019) and Wiki Women for Women Wellbeing 2019 (WWWW-2019). Most communities took part in these events in the previous iterations. Fortunately this year, all three contests are happening at the same time.

Wikipedia Asian Month agenda is to increase Asian content on Wikipedias. There is no requirement for selecting an article from the list provided. Any topic related to Asia can be chosen to write an article in WAM. This contest runs 1 November till 30 November. For more rules and guidelines, you can follow the event page on Meta or local Wikis.

WWWW focus is on increase content related to women's health issues on Indic language Wikipedias. WWWW 2019 will start from 1 November 2019 and will continue till 10 January 2020. A common list of articles will be provided to write on.

In brief: The articles you are submitting for Wikipedia Asian Month or WWWW, you may submit the same articles for Project Tiger also. Articles created under any of these events can be submitted to fountain tool of Project Tiger 2.0. Article creation rule will remain the same for every community. -- sent using MediaWiki message delivery (ಚರ್ಚೆ) ೧೨:೪೪, ೨೯ ಅಕ್ಟೋಬರ್ ೨೦೧೯ (UTC)

Wikipedia Asian Month 2019

ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ

Wikipedia Asian Month is back! We wish you all the best of luck for the contest. The basic guidelines of the contest can be found on your local page of Wikipedia Asian Month. For more information, refer to our Meta page for organizers.

Looking forward to meet the next ambassadors for Wikipedia Asian Month 2019!

For additional support for organizing offline event, contact our international team on wiki or on email. We would appreciate the translation of this message in the local language by volunteer translators. Thank you!

Wikipedia Asian Month International Team.

MediaWiki message delivery (ಚರ್ಚೆ) ೧೬:೫೭, ೩೧ ಅಕ್ಟೋಬರ್ ೨೦೧೯ (UTC)

Project Tiger 2.0 - Hardware support recipients list

Excuse us for writing in English, kindly translate the message if possible

Hello everyone,

tiger face
tiger face

Thank you all for actively participating and contributing to the writing contest of Project Tiger 2.0. We are very happy to announce the much-awaited results of the hardware support applications. You can see the names of recipients for laptop here and for laptop see here.

78 Wikimedians will be provided with internet stipends and 50 Wikimedians will be provided with laptop support. Laptops will be delivered to all selected recipients and we will email you in person to collect details. Thank you once again.

Regards. -- User:Nitesh (CIS-A2K) and User:SuswethaK(CIS-A2K) (on benhalf of Project Tiger team)
using --MediaWiki message delivery (ಚರ್ಚೆ) ೦೭:೧೫, ೮ ನವೆಂಬರ್ ೨೦೧೯ (UTC)

ಟೆಂಪ್ಲೇಟು ರಚನೆಯ ಬಗ್ಗೆ

ಕನ್ನಡ ವಿಕಿಪೀಡಿಯ ದಲ್ಲಿ ಟೆಂಪ್ಲೇಟುಗಳನ್ನು ರಚನೆ ಮಾಡಿ ಅನುಭವ ಇದ್ದಲ್ಲಿ ದಯಮಾಡಿ ಟೆಂಪ್ಲೇಟು:Infobox football club ಇದನ್ನು ರಚಿಸುವಲ್ಲಿ ಸಹಾಯ ಮಾಡಿ. -Manthara (ಚರ್ಚೆ) ೧೬:೦೪, ೧೧ ನವೆಂಬರ್ ೨೦೧೯ (UTC)

ನೀವು ಟೆಂಪ್ಲೇಟ್ಅನ್ನು ಸರಿಯಾಗಿ ಸೇರಿಸಿದ್ದೀರಿ.ನಿಮಗೆ ಇನ್ನೂ ಹೆಚ್ಚಿನ ಟೆಂಪ್ಲೇಟ್‌ಗಳು ಬೇಕು ಎಂದರೆ ನಮಗೆ ತಿಳಿಸಿ.★ Anoop✉ ೧೧:೨೮, ೧೨ ನವೆಂಬರ್ ೨೦೧೯ (UTC)

Research Study on Indic-Language Wikipedia Editions

ASK: I would really appreciate it if any community member could help translate this content to the local language। Thank you!

Research Study

Although cultural and linguistic diversity on the Internet has exploded, English content remains dominant. Surprisingly, this appears to be true even on Wikipedia which is driven by increasingly linguistically diverse groups of participants. Although Wikipedia exists in almost three hundred language versions, participation and content creation is not distributed proportional to readership—or even proportional to editors’ mother tongues. A widely discussed puzzle within studies of online communities is that some small language communities thrive while other similar communities fail.

I hope to study this dynamic in Indic-language Wikipedia communities. There are dozens of Wikipedias in Indian language versions. I hope to study the experiences of several Indic-language Wikipedia communities with different levels of success in building communities of online participants but with similar numbers of Internet-connected native speakers, that face similar technical and linguistic challenges, that have similar socio-economic and political conditions, and so on.

The results of this study will help provide design recommendations to help facilitate the growth of Indian Language communities. sent by User:Ananth subray on behalf of Sejal Khatri

Participate

We are looking for people interested in participating in this study!

In exchange for your participation, you will receive a ₹1430 gift card.

To join the study, you must be at least 18 years of age and must be an active member of your native Indic language Wikipedia. You should also feel comfortable having an interview discussion in Hindi or English.

Fill the form in this Link

Community Support and Feedback

I look forward to community's feedback and support!

ಗೂಗಲ್ ವಾರ್ನಿಂಗ್

  • Site cannot be opened because,
Privecy error Your connection is not private
Attackers maybe trying to steal your infrmation from kn.wikipedia.(.for Example passwords massages or redit cards) 26-11-2019/12.56pm.
  • ಯಾರಾದರು ನನ್ನ ಪ್ರವೇಶ ಪದ ಇತ್ಯಾದಿ- ಹುಡುಕಲು ಪ್ರಯತ್ನಿಸುತ್ತಿದ್ದರೆ ದಯವಿಟ್ಟು ನಿಲ್ಲಿಸಿ. ಗೂಗಲ್ ತೆರೆಯದೆ- ಪದೇ ಪದೇ ಮೇಲಿನಂತೆ ಎಚ್ಚರಿಕೆ ಕೊಡುತ್ತಿದೆ.Bschandrasgr (ಚರ್ಚೆ) ೦೭:೩೫, ೨೬ ನವೆಂಬರ್ ೨೦೧೯ (UTC)
ka.wikipedia.. or kn.wikipedia..? -ಪವನಜ ಯು. ಬಿ. (ಚರ್ಚೆ) ೦೮:೫೭, ೨೬ ನವೆಂಬರ್ ೨೦೧೯ (UTC)
  • ಅದು kn.wikipedia ವೇ- ನಾನು ಟೈಪ್ ಮಾಡುವಾಗ ತಪ್ಪಾಗಿದೆ.Bschandrasgr (ಚರ್ಚೆ) ೦೯:೫೮, ೨೬ ನವೆಂಬರ್ ೨೦೧೯ (UTC)

Extension of Wikipedia Asian Month contest

In consideration of a week-long internet block in Iran, Wikipedia Asian Month 2019 contest has been extended for a week past November. The articles submitted till 7th December 2019, 23:59 UTC will be accepted by the fountain tools of the participating wikis.

Please help us translate and spread this message in your local language.

Wikipedia Asian Month International Team

--MediaWiki message delivery (ಚರ್ಚೆ) ೧೪:೧೬, ೨೭ ನವೆಂಬರ್ ೨೦೧೯ (UTC)

ಸಮುದಾಯಕ್ಕೆ ಮಾಹಿತಿ ಇಲ್ಲ.

ಕನ್ನಡ ಸಮುದಾಯದ ಸಮ್ಮಿಲನ ಕಾರ್ಯಕ್ರಮದ ಕುರಿತು ಇದುವರೆಗೆ ಅರಳಿಕಟ್ಟೆಯಲ್ಲಿ ಮಾಹಿತಿ ಹಾಕಿಲ್ಲ. ಯಾಕೆ.?. ಕಾರ್ಯಕ್ರಮ ಸಂಘಟಿಸುವವರಿಗೆ ಇದರ ಅರಿವಿಲ್ಲವೆ?. ಒಂದು ಕಾರ್ಯಕ್ರಮ ನಡೆಸುವಾಗ ಸಮುದಾಯದ ಗಮನಕ್ಕೆ ತರಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ವೆ?. ನೀವು ಹಾಕಿದ್ದಿರಿ ಎನ್ನುವುದಿದ್ದರೆ ಸಾಕ್ಷ್ಯದೊಂದಿಗೆ ಉತ್ತರಿಸಿ. --Lokesha kunchadka (ಚರ್ಚೆ) ೦೭:೦೭, ೪ ಡಿಸೆಂಬರ್ ೨೦೧೯ (UTC)

[WikiConference India 2020] Invitation to participate in the Community Engagement Survey

This is an invitation to participate in the Community Engagement Survey, which is one of the key requirements for drafting the Conference & Event Grant application for WikiConference India 2020 to the Wikimedia Foundation. The survey will have questions regarding a few demographic details, your experience with Wikimedia, challenges and needs, and your expectations for WCI 2020. The responses will help us to form an initial idea of what is expected out of WCI 2020, and draft the grant application accordingly. Please note that this will not directly influence the specificities of the program, there will be a detailed survey to assess the program needs post-funding decision.

MediaWiki message delivery (ಚರ್ಚೆ) ೦೯:೦೫, ೧೮ ಡಿಸೆಂಬರ್ ೨೦೧೯ (UTC)

Project Tiger updates - quality of articles

Excuse us for writing in English, kindly translate the message if possible

Hello everyone,

tiger face
tiger face

It has been around 70 days since Project Tiger 2.0 started and we are amazed by the enthusiasm and active participation being shown by all the communities. As much as we celebrate the numbers and statistics, we would like to reinstate that the quality of articles is what matters the most. Project Tiger does not encourage articles that do not have encyclopedic value. Hence we request participants to take care of the quality of the articles submitted. Because Wikipedia is not about winning, it is about users collectively building a reliable encyclopedia.

Many thanks and we hope to see the energy going! (on behalf of Project Tiger team)
sent using --MediaWiki message delivery (ಚರ್ಚೆ) ೧೬:೨೧, ೧೯ ಡಿಸೆಂಬರ್ ೨೦೧೯ (UTC)

Out Reach Program

ಕನ್ನಡಕ್ಕೆ ವಿಕಿಮೀಡಿಯದ ಕೊಡುಗೆ ಎನ್ನುವ ವಿಷಯದ ಕುರಿತು ಮಾತಾನಾಡಲು ಇಚ್ಚಿಸಿದ್ದೇನೆ. ತುಮಕೂರಿನಲ್ಲಿ ರಾಷ್ಡ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡ ವಿಕಿಪೀಡಿಯದ ಕುರಿತು ಸುಮಾರು ೧೫ ನಿಮೀಷಗಳ ಕಾಲ ಮಾತಾಡಲು ಅವಕಾಶ ಸಿಕ್ಕಿದೆ. ಕಾರ್ಯಕ್ರಮ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.--Lokesha kunchadka (ಚರ್ಚೆ) ೧೬:೦೯, ೨೩ ಡಿಸೆಂಬರ್ ೨೦೧೯ (UTC)