ವಿಲಿಯಂ ಕ್ಯಾಕ್ಸ್ಟನ್
William Caxton | |
|---|---|
![]() | |
| ಜನನ | c. 1422 |
| ನಿಧನ | c. ಟೆಂಪ್ಲೇಟು:Death year and given age |
| ವಿಶ್ರಾಂತಿ ಸ್ಥಳ | St Margaret's, Westminster |
| ಉದ್ಯೋಗ |
|
| ಅವಧಿ |
|
| ಪ್ರಮುಖ ಕೃತಿ | |

ವಿಲಿಯಂ ಕ್ಯಾಕ್ಸ್‌ಟನ್ 1422-1491. ಇಂಗ್ಲೆಂಡ್ ದೇಶದ ಮೊದಲನೆಯ ಮುದ್ರಣಕಾರ.
ಆರಂಬಿಕ ಜೀವನ
[ಬದಲಾಯಿಸಿ]ಕೆಂಟ್ ಪ್ರಾಂತದಲ್ಲಿ ಜನನ. ರಾಬರ್ಟ್ ಲಾರ್ಜ್ ಎಂಬ ವರ್ತಕನಲ್ಲಿ ಕೆಲಸಕ್ಕೆ ಸೇರಿ (1438) ಆತನ ಮರಣಾನಂತರ(1444) ಯೂರೋಪ್ ದೇಶದ ಉಣ್ಣೆ ವ್ಯಾಪಾರ ಕೇಂದ್ರವಾದ ಬ್ರೂಜಸ್ ಪಟ್ಟಣವನ್ನು ಸೇರಿದ. ಅಲ್ಲಿ 30 ವರ್ಷಕಾಲ ಇಂಗ್ಲಿಷ್ ವಾಣಿಜ್ಯೋದ್ಯಮಿಗಳ ಅಭಿವೃದ್ಧಿಗೋಸ್ಕರ ಶ್ರಮಿಸಿ ಅವರ ಸಂಘಕ್ಕೆ ಗವರ್ನರ್ ಆಗಿ ಚುನಾಯಿಸಲ್ಪಟ್ಟ (1463). ಬರ್ಗಂಡಿ ಪ್ರಾಂತದ ಡಚೆಸ್ ಆಗಿದ್ದ ಮಾರ್ಗರೇಟಳಿಗೆ ಆರ್ಥಿಕ ಸಲಹೆಗಾರನಾಗಿ ನೇಮಕ ಪಡೆದ (1470). ಸಾಹಿತ್ಯದಲ್ಲಿಯೂ ಈತನಿಗೆ ಒಲವು ಇತ್ತು.
ಮುದ್ರಣಕಲೆಯ ಪರಿಣತಿ
[ಬದಲಾಯಿಸಿ]
ಮುದ್ರಣಕಲೆಯನ್ನು ಕ್ಯಾಕ್ಸ್‍ಟನ್ ಕಲಿತದ್ದು ಕೋಲೋನ್ ಪಟ್ಟಣದಲ್ಲಿ. ತರುವಾಯ ಒಂದು ಅಚ್ಚುಕೂಟವನ್ನು ಬ್ರೂಜ್ ಪಟ್ಟಣದಲ್ಲಿ ಕೊಲಾರ್ಡ್ ಮಾನ್‍ಷನ್ನನ ಸಹಾಯದಿಂದ ಸ್ಥಾಪಿಸಿದ (1474). ತಾನೇ ಭಾಷಾಂತರಿಸಿದ್ದ ಒಂದು ಪುಸ್ತಕದ ಇಂಗ್ಲಿಷ್ ಮುದ್ರಣವನ್ನು ಈ ಅಚ್ಚುಕೂಟದಲ್ಲಿ ಪ್ರಥಮವಾಗಿ ಮುದ್ರಿಸಿದ (1475). ಮರುವರ್ಷ (1476) ಇನ್ನೊಂದು ಸ್ವಂತ ಭಾಷಾಂತರ ಗ್ರಂಥವನ್ನು ಮುದ್ರಿಸಿದ. ಇವಲ್ಲದೆ ಇನ್ನೂ 2-3 ಪುಸ್ತಕಗಳನ್ನು ಫ್ರೆಂಚ್ ಭಾಷೆಯಲ್ಲಿ ಸಹ ಮುದ್ರಿಸಿದ ಖ್ಯಾತಿ ಈತನದು. 1476ರ ವರ್ಷಾಂತ್ಯದಲ್ಲಿ ಕ್ಯಾಕ್ಸ್‍ಟನ್ ಇಂಗ್ಲೆಂಡ್ ದೇಶಕ್ಕೆ ಹಿಂತಿರುಗಿ ವೆಸ್ಟ್ ಮಿನಿಸ್ಟರ್ ಪಟ್ಟಣದಲ್ಲಿ ಮೊದಲ ಬಾರಿಗೆ ಒಂದು ಅಚ್ಚುಕೂಟವನ್ನು ಸ್ಥಾಪಿಸಿದ[೧][೨] . ಕ್ಯಾಕ್ಸ್ಟನ್ ತನ್ನ ಜೀವಿತ ಕಾಲದಲ್ಲಿ ಸುಮಾರು 80 ಪುಸ್ತಕಗಳನ್ನು ಮುದ್ರಿಸಿ ಪ್ರಕಟಣೆ ಮಾಡಿದ್ದ. ಇಂಗ್ಲೆಂಡಿನ ಮೊದಲನೆಯ ಚಿತ್ರರಂಜಿತ ಪುಸ್ತಕವನ್ನು ಈತ 1481ರಲ್ಲಿ ಮುದ್ರಿಸಿದ. ಕ್ಯಾಕ್ಸ್‍ಟನ್ನನ ಪುಸ್ತಕಗಳಲ್ಲಿ ಮುಖಪತ್ರಗಳಿರಲಿಲ್ಲ. ಬದಲಾಗಿ ಪೀಠಿಕೆ ಮತ್ತು ಸಮಾಪ್ತಿ ವಿವರಣೆಗಳು ಅಲ್ಲಲ್ಲಿ ಇವೆ. ಇವನು ಹಳೆಕಾಲದ ಬರೆವಣಿಗೆಯನ್ನು ಅನುಕರಿಸುವ ಅಚ್ಚುಮೊಳೆಗಳನ್ನು 4-6 ಗಾತ್ರದಲ್ಲಿ ಮುದ್ರಣಕ್ಕೆ ಉಪಯೋಗಿಸಿದ್ದಾನೆ. ಅವನು ತನ್ನ ಪುಸ್ತಕಗಳಲ್ಲೆಲ್ಲ ತನ್ನ ಹೆಸರಿನ ಮೊದಲನೆಯ ಅಕ್ಷರಗಳಿಂದ W.ಅ ಗಳ ಮಧ್ಯೆ 1474 ಇಸವಿಯನ್ನೂ ಮೇಲೆ ಕೆಳಗೆ ಅಂದವಾದ ಅಂಚುಗಳನ್ನುಳ್ಳ ಒಂದು ಆಕೃತಿಯನ್ನೂ ತನ್ನ ಉದ್ಯೋಗ ಸಂಜ್ಞೆಯಾಗಿ ಉಪಯೋಗಿಸಿದ್ದಾನೆ. ಇಂಗ್ಲೆಂಡಿನಲ್ಲಿ ಮುದ್ರಣ ಕಲೆಯಲ್ಲಿ ಕ್ಯಾಕ್ಸ್‍ಟನ್ ಮೊತ್ತಮೊದಲಿಗನಾದರೂ ಮುದ್ರಣಕಲೆಯ ಅಭಿವೃದ್ಧಿಗಾಗಲಿ ಸುಂದರ ಕೃತಿಗಳನ್ನು ಮುದ್ರಿಸುವ ಕಾರ್ಯಕ್ಕಾಗಲಿ ಆತ ವಿಶೇಷ ಆಸಕ್ತಿ ತೋರಲಿಲ್ಲ. ಮುದ್ರಣಕಾರ್ಯವನ್ನು ಒಂದು ಕಲೆಯೆಂದು ಅವನು ಭಾವಿಸಿದಂತಿಲ್ಲ. ಆದರೂ ಸಾಹಿತ್ಯಕ್ಕಾಗಿ ಹಸಿದ ಜನರಿಗೆ ಇವನ ಮುದ್ರಣಗಳು ಪ್ರಯೋಜನಕಾರಿಯಾದುವು.
ಕ್ಯಾಕ್ಸ್‍ಟನ್ ಸೊಸೈಟಿ
[ಬದಲಾಯಿಸಿ]1485ರಲ್ಲಿ ಕ್ಯಾಕ್ಸ್‍ಟನ್ ಸೊಸೈಟಿ ಎಂಬ ಸಂಘ ಸ್ಥಾಪಿತವಾಯಿತು. ಇದರ ಕೆಲಸ ಲ್ಯಾಟಿನ್ ಮತ್ತು ಆಂಗ್ಲೊ ನಾರ್ಮನ್ನರ ಕಾಲದಲ್ಲಿ ನಡೆದ ಘಟನೆಗಳನ್ನು ಕಾಲಾನುಕ್ರಮವಾಗಿ ಬರೆದು ಪ್ರಕಟಿಸುವ ಮತ್ತು ಜೀವನಚರಿತ್ರೆಗಳನ್ನು ಪ್ರಕಟಿಸುವುದೇ ಆಗಿತ್ತು. 1854ರಲ್ಲಿ ಇದು ಮುಚ್ಚಿಹೋಯಿತು.
ಪ್ರಭಾವ
[ಬದಲಾಯಿಸಿ]ಕ್ಯಾಕ್ಸ್‍ಟನ್ ಮುದ್ರಣವನ್ನು ಇಂಗ್ಲೆಂಡಿಗೆ ತಂದದ್ದರ ಪರಿಣಾಮ ವ್ಯಾಪಕವಾದದ್ದು ಬಹುಮುಖವಾದದ್ದು, ಇದುವರೆಗೆ ಒಬ್ಬರು ಓದಿ ಹಲವರು ಕೇಳುವುದು ರೂಢಿಯಾಗಿತ್ತು. ಈಗ ಒಬ್ಬೊಬ್ಬರು ಒಂದು ಪ್ರತಿಯನ್ನಿಟ್ಟುಕೊಂಡು ತಮ್ಮದೇ ವೇಗದಲ್ಲಿ, ರೀತಿಯಲ್ಲಿ ಓದುವುದು ಪ್ರಾರಂಭವಾಯಿತು. ಇದರಿಂದ ಓದುಗ ವರ್ಗದ ಸ್ವರೂಪವೇ ಬದಲಾಯಿಸಿತು. ಪದಗಳ ಕಾಗುಣಿತ, ಪದಗಳ ಬಳಕೆ ಇವೆಲ್ಲ ಏಕರೂಪಗೊಂಡು ಒಂದು `ಸ್ಟ್ಯಾಂಡರ್ಡ್ ಭಾಷೆ ರೂಪುಗೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆಯಿತು. ಒಂದು ಗದ್ಯ ಶೈಲಿ ರೂಪುಗೊಳ್ಳುವುದಕ್ಕೂ ಮುದ್ರಣ ಕಲೆಯ ಕೊಡುಗೆ ಗಣನೀಯವಾದದ್ದು.೨೦೦೨ರಲ್ಲಿ ಇವನನ್ನು ಬಿಬಿಸಿ ಯವರು ಪ್ರಕಟಿಸಿದ ೧೦೦ ಜನ ಅತ್ಯುತ್ತಮ ಬ್ರಿಟಿಷರ ಪಟ್ಟಿಯಲ್ಲಿ ಸೇರಿಸಲಾಗಿತ್ತು.[೩]
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Works by ವಿಲಿಯಂ ಕ್ಯಾಕ್ಸ್ಟನ್ at Project Gutenberg
- Works by or about ವಿಲಿಯಂ ಕ್ಯಾಕ್ಸ್ಟನ್ at Internet Archive
- Works by ವಿಲಿಯಂ ಕ್ಯಾಕ್ಸ್ಟನ್ at LibriVox (public domain audiobooks)

- Caxton's Canterbury Tales Archived 3 July 2009 at the Portuguese Web Archive from the British Library
- Selected works, printed by Caxton Archived 2023-11-17 ವೇಬ್ಯಾಕ್ ಮೆಷಿನ್ ನಲ್ಲಿ. from the Folger Shakespeare Library's digital image collection
- The Game and Playe of the Chesse. Introduction and text, part of the TEAMS Middle English Texts Series
- Hutchinson, John (1892). . Men of Kent and Kentishmen (Subscription ed.). Canterbury: Cross & Jackman. pp. 31–32.
- "Industries: Printing. A History of the County of Middlesex Volume 2. pages 197-200". 1911. Retrieved 26 June 2023.
- William Caxton and the Birth of English Printing 2015 exhibition of Caxton’s imprints at the Morgan Library & Museum.
- William Caxton at the London Book Trades
Works published by Caxton from the Rare Book and Special Collections Division at the Library of Congress
- A book of the chesse moralysed
- AL Ingratitude vtterly settying apart, we owe to calle to our myndes the manyfolde gyftes of grace ...
- Cordiale quattuor novissimorum.
- Here begynneth the prohemye vpon the reducynge, both out of latyn as of frensshe in to our englyssh tongue of the polytyque book named Tullius de senectute.
- Here begynneth the table of the rubrices of this presente volume named the Mirrour of the World or thymage of the same.
- Livre des faits d'armes et de chevalerie
- The recuyles or gaderige to gyder of ye hystoryes of Troye...
ಉಲ್ಲೇಖಗಳು
[ಬದಲಾಯಿಸಿ]
- ↑ Timbs, John (1855). Curiosities of London: Exhibiting the Most Rare and Remarkable Objects of Interest in the Metropolis. D. Bogue. p. 4.
- ↑ Cunningham, Peter (1850). "Victorian London – Districts – Areas – The Almonry". Hand-Book of London. Retrieved 26 September 2020.
- ↑ "Great Britons 11–100". BBC. Archived from the original on 4 December 2002. Retrieved 1 August 2012.
