ವಿದ್ಯಾಭೂಷಣ

ವಿಕಿಪೀಡಿಯ ಇಂದ
Jump to navigation Jump to search
'ಶ್ರೀ ವಿದ್ಯಾಭೂಷಣರು'
ಚಿತ್ರ:ವಿದ್ಯಾಭೂಷಣರು ಮುಂಬಯಿನಲ್ಲಿ (೨೦೧೫).jpg
ಶ್ರೀ.ವಿಶ್ವೇಶ್ವರತೀರ್ಥ ಸ್ವಾಮಿಗಳ ವರ್ಧಂತಿಯ ಸಮಯದಲ್ಲಿ ಕೊಟ್ಟ ಸಂಗೀತ ಕಾರ್ಯಕ್ರಮ(೨೦೧೫)

ಡಾ.ವಿದ್ಯಾಭೂಷಣ, ರು, ಭಕ್ತಿ ಭಾರತೀ ಪ್ರತಿಷ್ಠಾನ್ ಎಂಬ ಸಂಸ್ಥೆಯ ಮೂಲ ಸ್ಥಾಪಕರಲ್ಲೊಬ್ಬರು. ಈ ಪ್ರತಿಷ್ಥಾನ, ಪುರುಂದರದಾಸರ ಆರಾಧನೆ, ದಾಸರ ಪುಣ್ಯದಿನಗಳ ಸಮಯದಲ್ಲಿ ಭಕ್ತಿಸಂಗೀತದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸುಪ್ರಸಿದ್ಧ ಕಲಾವಿದರಿಂದ ಪ್ರಸ್ತುತಪಡಿಸುತ್ತದೆ.

ವಿದ್ಯಾಭೂಷಣರ ಪರಿಚಯ[ಬದಲಾಯಿಸಿ]

ಶ್ರೀ. ವಿದ್ಯಾಭೂಷಣರ ತಂದೆ ಗೋವಿಂದಾಚಾರ್ಯ. ತಾಯಿ, ಮಂದಾಕಿನಿಯಮ್ಮ ಅವರು ಜನಿಸಿದ್ದು ಅವರ ತಾಯಿಯ ತವರು ಚಿಕ್ಕಮಗಳೂರು ಜಿಲ್ಲೆಯ ಸೀತೂರಿನಲ್ಲಿ .ಇವರ ಪೂರ್ವಾಶ್ರಮದ ಹೆಸರು 'ಯೋಗೀಂದ್ರ'ನೆಂದಿತ್ತು (ಯೋಗೀಂದ್ರಭಟ್ಟ.ತಮ್ಮ ಹದಿನೈದು ವರುಷ ಪ್ರಾಯದಲ್ಲಿ ೧೯೬೭ ರ ಜೂನ್ ತಿಂಗಳಲ್ಲಿ 'ಸುಬ್ರಹ್ಮಣ್ಯ ಮಠ'[೧] ಕ್ಕಾಗಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಿದಾಗ, ಇವರ ಹೆಸರನ್ನು"ವಿದ್ಯಾಭೂಷಣತೀರ್ಥರಾಗ" ಎಂದು ಬದಲಿಸಿದರು.

ಸಂಗೀತಾಸಕ್ತರು[ಬದಲಾಯಿಸಿ]

ದಕ್ಷಿಣ ಕನ್ನಡದವರಾದ 'ವಿದ್ಯಾಭೂಷಣ'ರು,[೨] ಒಬ್ಬ ’ಪ್ರಸಿದ್ಧ ಕರ್ನಾಟಕ ಸಂಗೀತ ಕಾರರು’. ಅವರನ್ನು ಹೆಚ್ಚಾಗಿ ಆಕರ್ಷಿಸಿದ್ದು, ’ದಾಸವರೇಣ್ಯ ಪುರುಂದರದಾಸರ ರಚನೆಗಳು’. ’ಹರಿದಾಸ ಸಾಹಿತ್ಯ’ದಲ್ಲೂ ಅಷ್ಟೇ ಆಸ್ತೆ’ಯನ್ನು ಹೊಂದಿದ್ದಾರೆ. ಗೃಹಸ್ಥಾಶ್ರಮಕ್ಕೆ ಬರುವ ಮೊದಲು 'ವಿದ್ಯಾಭೂಷಣರು', 'ಸುಬ್ರಹ್ಮಣ್ಯ ಮಠದ ಸ್ವಾಮಿ'ಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಜೀವನದಲ್ಲಿ ಒಂದು ತಿರುವು ಬಂದು, ಅವರು ಮಠದ ಅಧಿಕಾರವನ್ನು ತೊರೆದು, 'ಗೃಹಸ್ಥಾಶ್ರಮ'ವನ್ನು ಸ್ವೀಕರಿಸಿದರು. ಮೊದಲೂ ಶಾಸ್ತ್ರೀಯ ಸಂಗೀತದ ಶೈಲಿಯಲ್ಲಿ ಹಲವಾರು 'ಅಪರೂಪದ ದಾಸರ ಕೃತಿ'ಗಳನ್ನು ಹಾಡಿ 'ದಾಸಸಾಹಿತ್ಯ'ವನ್ನು ಪ್ರಸಿದ್ಧಪಡಿಸಿದ್ದಾರೆ. ಈಗ ತಮ್ಮ ಜೀವನವನ್ನೇ ಅದಕ್ಕಾಗಿ ಮುಡುಪಾಗಿಟ್ಟಿದ್ದಾರೆ. ಈಗಾಗಲೇ 'ನೂರಾರು ಧ್ವನಿಮುದ್ರಿತ ಆಲ್ಬಮ್' ಗಳು ಬಿಡುಗಡೆಯಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತದ ಹಲವು ಕಡೆಗಳಲ್ಲಿ ಅಲ್ಲದೆ ವಿದೇಶಗಳಲ್ಲೂ ಅವರ ಗಾಯನ ಪ್ರಸಿದ್ಧಿಪಡೆದಿದೆ. ಮೊಟ್ಟ ಮೊದಲ ಆಲ್ಬಮ್, 'ದಾಸರಪದಗಳು' ಎಂದು. ಸುಮಾರು ಎರಡು ದಶಕಗಳಿಂದ 'ಶಾಸ್ತ್ರೀಯ ಗಾಯನ'ದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ’೧೦೦ ನೆಯದು ತನು ನಿನ್ನದು ಜೀವನನಿನ್ನದು’ ೧೯೯೯ ರಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನದ ಮೂಲೆಮೂಲೆಗಳಿಗೆ ಹೋಗಿ ತಮ್ಮ ಅಮೋಘ ಗಾಯನದಿಂದ ಅಲ್ಲಿನ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದ್ದಾರೆ.

ಪ್ರಶಸ್ತಿಗಳು[ಬದಲಾಯಿಸಿ]

ಶಾಸ್ತ್ರೀಯ ಸಂಗೀತದಲ್ಲಿ ಸಾಧನೆ[ಬದಲಾಯಿಸಿ]

ಚಿಕ್ಕ ಪ್ರಾಯದಲ್ಲೇ ಉಡುಪಿಯ ಶ್ರೀ ಬಿ.ವಿ. ನಾರಾಯಣ ಐತಾಳರ ಶಿಷ್ಯರಾಗಿ ಹಲವು ವರ್ಷಗಳ ಕಾಲ ಸಂಗೀತಶಾಸ್ತ್ರಾಭ್ಯಾಸಮಾಡಿದರು. ಸಂಗೀತ ಕಲಾನಿಧಿ ಶ್ರೀ.ಆರ್.ಕೆ.ಶ್ರೀಕಂಠನ್ ಮತ್ತು ಮುಂದೆ ಮದರಾಸಿನ, ಶ್ರೀ ಟೀ.ವಿ.ಗೋಪಾಲಕೃಷ್ಣನ್ ರವರ ಮಾರ್ಗದರ್ಶನದಲ್ಲಿ ಸಾಧನೆಮಾಡಿದ್ದಾರೆ. ಯಾವಾಗಲೂ ಸಂಗೀತಪ್ರಸಾರದ ಕಾರ್ಯದಲ್ಲೇ ತೊಡಗಿರುತ್ತಾರೆ.

'ವಿದ್ಯಾಭೂಷಣ'ರ ಪರಿವಾರ[ಬದಲಾಯಿಸಿ]

'ದಕ್ಷಿಣ ಕನ್ನಡ'ದವರಾದ 'ವಿದ್ಯಾಭೂಷಣ'ರವರು, ಈಗ 'ಬೆಂಗಳೂರಿ'ನಲ್ಲಿ ತಮ್ಮ 'ಮಡದಿ,' ಹಾಗೂ ಇಬ್ಬರು ಮಕ್ಕಳಜೊತೆಗೆ ವಾಸಿಸುತ್ತಿದ್ದಾರೆ.

ಸನ್,೨೦೧೨ ರಲ್ಲಿ ಮುಂಬೈನಗರದಲ್ಲಿ[ಬದಲಾಯಿಸಿ]

'ಸನ್. ೨೦೧೨ ರಲ್ಲಿ'

ಮುಂಬೈನಗರದ ಪ್ರತಿಶ್ಠಿತ ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ ಜನವರಿ, ೬, ಶುಕ್ರವಾರದಂದು 'ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ'ವನ್ನು ನಡೆಸಿಕೊಟ್ಟರು.'ವಿದ್ಯಾಭೂಷಣರು' ಹಾಡಿದ ೧೭ ರಚನೆಗಳ ವಿವರಗಳು :

  • 'ಕನಕದಾಸರ ಕೀರ್ತನೆ',
  • 'ತುಳು ಸಾಹಿತ್ಯದ ಪದ್ಯಗಳು',
  • 'ಪುರಂದರದಾಸವರ್ಯರ ಕೀರ್ತನೆ'ಗಳು.

ಉಲ್ಲೇಖಗಳು[ಬದಲಾಯಿಸಿ]

  1. 'ಸುಬ್ರಹ್ಮಣ್ಯ ಮಠದ ಸನ್ಯಾಸಾಶ್ರಮ ಸ್ವೀಕರಿಸಿದರು
  2. ಇಂಗ್ಲೀಷ್ ವಿಕಿಪೀಡಿಯದಲ್ಲಿ ವಿದ್ಯಾಭೂಷಣ