ವಿಕಿಪೀಡಿಯ ಚರ್ಚೆ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೧೯-೨೦

ವಿಕಿಪೀಡಿಯ ಇಂದ
Jump to navigation Jump to search

ಸಂದೇಹವನ್ನು ಪರಿಹರಿಸಿ[ಬದಲಾಯಿಸಿ]

  • ಯಾವುದೆ ವಿಕಿಪೀಡಿಯದಲ್ಲಿ ಅಸೋಸಿಯೇಷನ್ ಮಾಡುವುದಕ್ಕೆ ಅವಕಾಶ ಇದೆಯಾ?.
  • ಯೋಜನೆಗಳಿಗೂ, ಅಸೋಸಿಯೇಷನ್ಗು ವ್ಯತ್ಯಾಸ ಇಲ್ಲವೆ?.
  • ಈ ರೀತಿ ಮಾಡಲು ವಿಕಿಪೀಡಿಯದಲ್ಲಿ ಅವಕಾಶ ಇದೆಯಾ?.
  • ಇದರ ಕುರಿತಂತೆ ಸಮುದಾಯದ ಗಮನಕ್ಕೆ ತಂದಿದ್ದಿರಾ?.
  • ಮೇಟಾದಲ್ಲಿ ಈ ಪುಟ ಇರುತ್ತಿದ್ದರೆ ಬೆಲೆ ಹೆಚ್ಚಿರುತಿತ್ತು. ಮೇಟಾದಲ್ಲಿ ನಾನು ಹಲವು education groupನ ಪುಟ ನೋಡಿದ್ದೇನೆ. ಆದರೆ ಯಾವುದೆ ವಿಕಿಪೀಡಿಯದಲ್ಲಿ ನೋಡಿಲ್ಲ. ಇವೆಲ್ಲದರ ಕುರಿತು ವಿವರಣೆ ಬೇಕು, ನನಗಂತೂ ಗೊಂದಲವಾಯಿತು.--Lokesha kunchadka (ಚರ್ಚೆ) ೧೨:೨೫, ೧೬ ಆಗಸ್ಟ್ ೨೦೧೯ (UTC)
ಇಲ್ಲಿ ಸಂದೇಹದ ಪ್ರಶ್ನೆ ಯಾಕೆ ಬಂತೋ ಗೊತ್ತಿಲ್ಲ. ಮುಖ್ಯವಾಗಿ ಯೋಜನೆ ಎಂಬ ಪುಟವನ್ನು ಮಾಡಿಕೊಂಡಿರುವುದು ನಮ್ಮ ಅಗತ್ಯಕ್ಕಾಗಿ. ವಿಕಿಪೀಡಿಯದಲ್ಲಿ ಲೇಖನ ಬರೆಯುವವರು ಈ ತರಹ ಯೋಜನೆಯ ಪುಟವನ್ನು ರೂಪಿಸಿಕೊಂಡು ನಮ್ಮ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯ. ಇದಕ್ಕೆ ವಿಕಿಪೀಡಿಯದ ಸಮುದಾಯದ ಗಮನಕ್ಕೆ ತರುವ ಅಗತ್ಯವಿಲ್ಲ. ಸಮುದಾಯದ ಸದಸ್ಯರಿಗೆ ಇದು ಗೊತ್ತಿದೆಯೆಂದು ಭಾವಿಸುತ್ತೇವೆ. ಮೆಟಾದಲ್ಲಿ ದಾಖಲಿಸುತ್ತೇವೆ. ಸಲಹೆಗೆ ಧನ್ಯವಾದ.--Vishwanatha Badikana (ಚರ್ಚೆ) ೧೩:೫೧, ೧೬ ಆಗಸ್ಟ್ ೨೦೧೯ (UTC)
ಒಂದು ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಈಗಾಗಲೇ ಆಳ್ವಾಸ್ ಕಾಲೇಜಿನಲ್ಲಿ ಅಸ್ತಿತ್ವದಲ್ಲಿದೆ. ವಿಕಿಪೀಡಿಯದಲ್ಲಿ ಈ ಪುಟ ಇದೆ ಎಂಬುದೇ ಸಮುದಾಯದ ಗಮನಕ್ಕೆ ತರುವುದಕ್ಕೆ ಎಂದು. ಈ ಪುಟ ಇರುವ ಕಾರಣವೇ ಸಮುದಾಯದ ವ್ಯಕ್ತಿಯಾದ Lokesha kunchadka ಅವರ ಗಮನಕ್ಕೆ ಬಂದುದು. ಕರಾವಳಿ ವಿಕಿಮೀಡಿಯನ್ಸ್ ಅವರ ಮೆಟಾ ಪುಟದಲ್ಲಿ ವಿಕಿಪೀಡಿಯ ಸ್ಟೂಡೆಂಟ್ ಅಸೋಸಿಯೇಶನ್ ಎಂದರೆ ಏನು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದರ ವಿವರ ಇದೆ. ಜೊತೆಗೆ ಈ ಯೋಜನೆಗೆ ಕೊಂಡಿಯೂ ಇದೆ. --Pavanaja (ಚರ್ಚೆ) ೧೫:೦೧, ೧೬ ಆಗಸ್ಟ್ ೨೦೧೯ (UTC)
ಸಂದೇಶವನ್ನು ಪರಿಹರಿಸಿ ಎಂದರೆ ಏನು? ಸಂದೇಶವನ್ನು ಪರಿಹರಿಸುವುದು ಹೇಗೆ?--Pavanaja (ಚರ್ಚೆ) ೧೫:೦೨, ೧೬ ಆಗಸ್ಟ್ ೨೦೧೯ (UTC)
ಮೊಬೈಲ್ ಸಂಪಾದನೆ ಮಾಡುವಾಗ ಮೊಬೈಲ್ ಹ್ಯಾಂಗ್ ಆಗುವಾಗ ಅಕ್ಷರ ತಪ್ಪಾಗಿ ಬರುತ್ತದೆ. ತಕ್ಷಣ ಸರಿಪಡಿಸುವುದಕ್ಕೆ ಆಗುವುದಿಲ್ಲ. ಸರಿ ಮಾಡಿದ್ದೇನೆ.--Lokesha kunchadka (ಚರ್ಚೆ) ೧೭:೦೬, ೧೬ ಆಗಸ್ಟ್ ೨೦೧೯ (UTC)
@Lokesha kunchadka: ಚರ್ಚೆಯಲ್ಲಿ ನೀವು ಬರೆದುದನ್ನು ಮಾತ್ರ ತಿದ್ದಿ. ನಾನು ಬರೆದುದನ್ನು ತಿದ್ದಬೇಡಿ.--Pavanaja (ಚರ್ಚೆ) ೦೨:೧೧, ೧೭ ಆಗಸ್ಟ್ ೨೦೧೯ (UTC)