ವಿಕಿಪೀಡಿಯ ಚರ್ಚೆಪುಟ:ಯೋಜನೆ/ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳ್ಳೆಯ ಯೋಜನೆ[ಬದಲಾಯಿಸಿ]

  • ಒಳ್ಳೆಯ ಯೋಜನೆ- ಆದರೂ, ಮೈಸೂರು ವಿಶ್ವವಿದ್ಯಾಲಯದ ಒಂದು ವೆಬ್ ಸೈಟ್ ಮಾಡಿ ಅದಕ್ಕೆ "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ", ಹೆಸರನ್ನೇ ಇಟ್ಟಿದ್ದರೆ ಚೆನ್ನಾಗಿತ್ತು ; ಅದಕ್ಕೊಂದು ವಿಶೇಷ ಮಾನ್ಯತೆ ಇರುತ್ತಿತ್ತು.ಅದರಲ್ಲೇ ಎಡಿಟಿಂಗ್ ಗೆ ಅವಕಾಶ ಕಲ್ಪಿಸಬಹುದಿತ್ತು. ಅದು ಅನೇಕ ವಿದ್ವಾಂಸರ ಕೊಡಿಗೆ -ಬಹಳ ಪರಿಶ್ರಮದಿಂದ ಮಾಡಿದ್ದು. Bschandrasgr ೧೬:೩೩, ೫ ಮೇ ೨೦೧೪ (UTC) ಸದಸ್ಯ:Bschandrasgr/ಪರಿಚಯ :ಬಿ.ಎಸ್ ಚಂದ್ರಶೇಖರ
ವಿಕಿಪೀಡಿಯ ಒಂದು ವಿಶ್ವಕೋಶ. ಇತರೆ ವಿಶ್ವಕೋಶಗಳಿಂದ ಮಾಹಿತಿ ಅದಕ್ಕೆ ಹರಿದು ಬಂದರೆ ಎಲ್ಲ ಮಾಹಿತಿಗಳೂ ಒಂದೇ ಕಡೆ ಲಭ್ಯವಾಗುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಮಾಹಿತಿಯ ನವೀಕರಣ ಸತತವಾಗಿ ಆಗುತ್ತಿರುತ್ತದೆ. ಉದಾಹರಣೆಗೆ ವಿಕಿಪೀಡಿಯದಲ್ಲಿ ಒಬ್ಬ ಖ್ಯಾತನಾಮರ ಬಗ್ಗೆ ವಿವರ ಇದೆ ಎಂದಿಟ್ಟುಕೊಳ್ಳಿ. ಅವರಿಗೆ ಇನ್ನೊಂದು ಪ್ರಶಸ್ತಿ ಬಂದಾಗ ವಿಕಿಪೀಡಿಯ ಸಮುದಾಯ ಅದನ್ನು ವಿಕಿಪೀಡಿಯದಲ್ಲಿನ ಅವರ ಪುಟದಲ್ಲಿ ಸೇರಿಸುತ್ತಾರೆ. ಇದೆಲ್ಲ ಅತಿ ವೇಗವಾಗಿ ಆಗುತ್ತವೆ. ವಿಕಿಸೋರ್ಸ್‍ನಲ್ಲಿ ಈಗಾಗಲೆ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಎಂಬ ವಿಭಾಗ ತೆರೆಯಲಾಗಿದೆ. ಮೈಸೂರು ವಿ.ವಿ.ಯ ವಿಶ್ವಕೋಶದ ಎಲ್ಲ ಲೇಖನಗಳನ್ನು ಅಲ್ಲಿ ಒಂದೇ ಕಡೆ ಸೇರಿಸಲಾಗುತ್ತಿದೆ. ಈ ಯೋಜನೆಗೆ ಎಲ್ಲರೂ ಕೈಜೋಡಿಸಬಹುದು. ಹೆಚ್ಚಿನ ವಿಬವರಗಳನ್ನು ಸದ್ಯದಲ್ಲೇ ಯೋಜನೆ ಪುಟದಲ್ಲಿ ಸೇರಿಸುತ್ತೇನೆ. --Pavanaja (talk) ೦೪:೪೭, ೬ ಮೇ ೨೦೧೪ (UTC)