ವಾಲ್ಟರ್ ರೀಡ್
ವಾಲ್ಟರ್ ರೀಡ್ (1851-1902) ಅಮೆರಿಕದ ಒಬ್ಬ ಮಿಲಿಟರಿ ಸರ್ಜನ್.[೧][೨][೩]
ಜೀವನ, ಸಾಧನೆಗಳು
[ಬದಲಾಯಿಸಿ]ಏಕಾಣುಜೀವಿವಿಜ್ಞಾನ ಇವನ ಅಧ್ಯಯನ ವಿಷಯ. ಈತನನ್ನು ಆರ್ಮಿ ಮೆಡಿಕಲ್ ಸ್ಕೂಲ್‌ನಲ್ಲಿ ಏಕಾಣುಜೀವಿವಿಜ್ಞಾನದ ಪ್ರಾಧ್ಯಾಪಕನಾಗಿ ನೇಮಿಸಲಾಯಿತು (1893). ಸ್ಪ್ಯಾನಿಷ್-ಅಮೆರಿಕನ್ ಯುದ್ಧದಲ್ಲಿ ಸ್ಪೇನಿಗರ ತುಪಾಕಿಗಳಿಂದ ಹತರಾದ ಅಮೆರಿಕನ್ ಯೋಧರ ಸಂಖ್ಯೆಗಿಂತ ಬಲು ಮಿಗಿಲಾಗಿ ಸೋಂಕು ಬೇನೆಗಳಿಂದ ಮಡಿದವರ ಸಂಖ್ಯೆ ಇತ್ತು. ಟೈಫಾಯಿಡ್ ಜ್ವರದ ಕಾರಣ ಮತ್ತು ಪಿಡುಗುರೂಪದ ಹರಡಿಕೆ ಬಗ್ಗೆ ತಿಳಿಯಲು ನೇಮಕಗೊಂಡ ಆಯೋಗದ ಮುಖ್ಯಸ್ಥ ಇವನೇ ಆಗಿದ್ದ.
ಆಗ ಜನರನ್ನು ಬಾಧಿಸುತ್ತಿದ್ದ ಇನ್ನೊಂದು ಪಿಡುಗು ಹಳದಿಜ್ವರ. ಇದು ಏಕಾಣುಜೀವಿಜನ್ಯ ರೋಗವೆಂದು ರೀಡ್ ರುಜುವಾತಿಸಿದ (1897). ಯುದ್ಧ ಮುಗಿದಾಗ (1899) ಈತನನ್ನು ಹಳದಿ ಜ್ವರದ ಕಾರಣ ಶೋಧಿಸುವ ಆಯೋಗದ ಮುಖ್ಯಸ್ಥನಾಗಿ ನೇಮಿಸಿ ಕ್ಯೂಬಾಕ್ಕೆ (ತಾತ್ಕಾಲಿಕವಾಗಿ ಅಮೆರಿಕದ ರಕ್ಷಣೆಗೆ ಒಳಪಟ್ಟ ದೇಶ) ನಿಯೋಜಿಸಲಾಯಿತು. ಈತನ ಅಧ್ಯಯನ ಎರಡು ಮುಖ್ಯ ಸಂಗತಿಗಳನ್ನು ಶ್ರುತಪಡಿಸಿತು. ದೇಹಸಂಪರ್ಕ, ಬಟ್ಟೆ, ಹಾಸಿಗೆ ಮುಂತಾದವುಗಳ ಮೂಲಕ ಹಳದಿಜ್ವರ ಹರಡುವುದಿಲ್ಲ, ಬದಲು, ಸೊಳ್ಳೆ ಕಡಿತವೇ ಇದರ ಕಾರಣ. ಏಡಿಸ್ ಎಂದು ಈ ಸೊಳ್ಳೆಯ ಹೆಸರು. ಇದರ ಪ್ರಜನನ ಮೂಲವನ್ನೇ ನಾಶಗೊಳಿಸಬೇಕು, ಅಲ್ಲದೇ ಸೊಳ್ಳೆಯ ಕಡಿತವಾಗದಂತೆ ಜಾಗರೂಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೀಡ್ ತೀರ್ಮಾನಿಸಿದ.
ಈತ ಇನ್ನೂ ಒಂದು ಸಂಶೋಧನೆ ಮಾಡಿದ: ಹಳದಿಜ್ವರವಾಹಕ ಸೊಳ್ಳೆಗಳು ವಾಸ್ತವವಾಗಿ ವಿಶಿಷ್ಟ ಬಗೆಯ ವೈರಸುಗಳನ್ನು ಒಯ್ಯುವ ಮಧ್ಯವರ್ತಿಗಳು ಮಾತ್ರ, ವ್ಯಕ್ತಿಗಳನ್ನು ಸೊಳ್ಳೆಗಳು ಕಡಿದಾಗ ವೈರಸ್ ಅವರ ರಕ್ತಗತವಾಗಿ ಮುಂದೆ ಜ್ವರಕ್ಕೆ ಕಾರಣವಾಗುತ್ತದೆ (1901). ನಿಜಕ್ಕೂ ವೈರಸ್‌ಜನ್ಯ ಪ್ರಥಮ ಮಾನವ ವ್ಯಾಧಿಯೇ ಹಳದಿಜ್ವರ. ರೀಡ್‌ನ ಸಂಶೋಧನೆ ಫಲವಾಗಿ ಹವಾನದಿಂದ ಹಳದಿಜ್ವರ ಸಂಪೂರ್ಣವಾಗಿ ಉಚ್ಚಾಟನೆಗೊಂಡಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Reed, Walter ." Complete Dictionary of Scientific Biography. . Encyclopedia.com. 18 Mar. 2024 <https://www.encyclopedia.com>.
- ↑ Underwood, E. Ashworth. "Walter Reed". Encyclopedia Britannica, 5 Apr. 2024, https://www.britannica.com/biography/Walter-Reed. Accessed 11 April 2024.
- ↑ https://www.ncpedia.org/biography/reed-walter
ಹೆಚ್ಚಿನ ಓದಿಗೆ
[ಬದಲಾಯಿಸಿ]- Bean, William B., Walter Reed: A Biography, Charlottesville: University Press of Virginia, 1982.
- Bean, William B., "Walter Reed and Yellow Fever", JAMA 250.5 (August 5, 1983): 659–62.
- Pierce J.R., (2005). Yellow Jack: How Yellow Fever Ravaged America and Walter Reed Discovered its Deadly Secrets. John Wiley and Sons. ISBN 0-471-47261-1
ಹೊರಗಿನ ಕೊಂಡಿಗಳು
[ಬದಲಾಯಿಸಿ]- Video: Reed Medical Pioneers Biography on Health.mil – The Military Health System provides a look at the life and work of Walter Reed.
- WRAMC Website Reed History