ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಭಾವಚಿತ್ರ
ಸ್ಥಾಪನೆ೧೯೮೨
ಸ್ಥಳವಿಜಯಪುರ, ಕರ್ನಾಟಕ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರ್ಜಾಲ ತಾಣhttp://bldeacet.ac.in

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ (ಡಾ.ಫಕೀರಪ್ಪ .ಗುರುಬಸಪ್ಪ .ಹಳಕಟ್ಟಿ ) ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಯಪುರ ನಗರದ ಆಶ್ರಮ ರಸ್ತೆಯಲ್ಲಿ ಇದೆ. ಇದು ೧೯೮೨ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ) ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದಲೂ ಕೂಡ ಮಾನ್ಯತೆ ಪಡೆದಿದೆ. ಪ್ರಸ್ತುತ ೧೦ ಪದವಿ ಹಾಗೂ ೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಚರಿತ್ರೆ[ಬದಲಾಯಿಸಿ]

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಿ.ಎಲ್.ಡಿ.ಈ. ಸಂಸ್ಠೆಯಿಂದ ೧೯೮೨ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಯಪುರ ನಗರದಲ್ಲಿದೆ.

ವಿಭಾಗಗಳು[ಬದಲಾಯಿಸಿ]

ಪದವಿ ವಿಭಾಗಗಳು

  1. ವಾಹನ ಎಂಜಿನಿಯರಿಂಗ್
  2. ಸಿವಿಲ್ ಎಂಜಿನಿಯರಿಂಗ್
  3. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  4. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  5. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  6. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  7. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  8. ಯಾಂತ್ರಿಕ ಎಂಜಿನಿಯರಿಂಗ್
  9. ವಾಸ್ತುಶಿಲ್ಪ ಎಂಜಿನಿಯರಿಂಗ್

ಸ್ನಾತಕೋತ್ತರ ಪದವಿ ವಿಭಾಗಗಳು

  1. ಎಮ್. ಸಿ. ಎ.
  2. ಎಮ್.ಬಿ.ಎ.
  3. ಸಿವಿಲ್ ಎಂಜಿನಿಯರಿಂಗ್
  4. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  5. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  6. ಯಾಂತ್ರಿಕ ಎಂಜಿನಿಯರಿಂಗ್

ಆಡಳಿತ[ಬದಲಾಯಿಸಿ]

ಶ್ರೀ ಎಮ್.ಬಿ.ಪಾಟೀಲರು ಬಿ.ಎಲ್.ಡಿ.ಈ.ಸಂಸ್ಠೆಯ ಅಧ್ಯಕ್ಷರಾಗಿದ್ದಾರೆ.

ಆವರಣ[ಬದಲಾಯಿಸಿ]

ಮಹಾವಿದ್ಯಾಲಯವು ೫೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ[ಬದಲಾಯಿಸಿ]

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ[ಬದಲಾಯಿಸಿ]

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ[ಬದಲಾಯಿಸಿ]

  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಜೀವನ ಮಾರ್ಗದರ್ಶನ ಕೇಂದ್ರ[ಬದಲಾಯಿಸಿ]

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ಬಿಜಾಪುರ ಅಧಿಕೃತ ಅಂತರ್ಜಾಲ ತಾಣ