ಲ್ಯಾಮಿಂಗ್ಟನ್ ರೋಡ್, ಮುಂಬೈ

ವಿಕಿಪೀಡಿಯ ಇಂದ
Jump to navigation Jump to search
Lamington Road
India-locator-map-blank.svg
Red pog.svg
Lamington Road
ರಾಜ್ಯ
 - ಜಿಲ್ಲೆ
ಮಹಾರಾಷ್ಟ್ರ
 - Mumbai City
ನಿರ್ದೇಶಾಂಕಗಳು 18.9433° N 72.8286° E
ವಿಸ್ತಾರ
 - ಎತ್ತರ
{{{area_total}}} km²
 - 10 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ
{{{population_total}}}
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 400 007
 - +{{{area_telephone}}}
 - {{{vehicle_code_range}}}

'ಲಾರ್ಡ್ ಲ್ಯಾಮಿಂಗ್ಟನ್' ರ ಹೆಸರಿನಲ್ಲಿರುವ ಈ ಚಿಕ್ಕರಸ್ತೆಯನ್ನು ಹುಡುಕಿಕೊಂಡು ಭಾರತದ ದೂರ ದೂರ ಸ್ಥಳಗಳಿಂದ ಜನಬರುತ್ತಾರೆ. ಲ್ಯಾಮಿಂಗ್ಟನ್ ರೋಡ್, ಎಲೆಕ್ಟ್ರಾನಿಕ್ಸ್ ನಲ್ಲಿ ಏನೆಲ್ಲಾ ಹೊಸ ಉಪಕರಣಗಳು ಸೋವಿಯಾಗಿ ದೊರೆಯುತ್ತವೆ. ಬೆಲೆಯಲ್ಲಿ ಚೌಕಾಸಿಮಾಡಿ ಏನನ್ನು ಬೇಕಾದರೂ ಖರೀದಿಸಬಹುದು. ಹಳೆಯದು, ತೀರಹೊಸದು, ಎರಡನೆಯ ಬಾರಿಬಳಸಿದ್ದು ಎಲ್ಲವೂ ಬಿಸಿಬಿಸಿ ಬೋಂಡಾದ ತರಹ ನಿಮಿಷದಲ್ಲಿ ಖರ್ಚಾಗಿಹೋಗುತ್ತವೆ. ಫುಟ್ಪಾತ್ ಮೇಲೆ ಮಾರುವ ವಸ್ತುಗಳೇ ಹೆಚ್ಚು. ಜನ ಆಧುನಿಕ ದೊಡ್ಡ ದೊಡ್ಡ ಶಾಪುಗಳಿಗೆ ಹೋಗುವುದಿಲ್ಲ. ಅಲ್ಲಿ ಬೆಲೆಯಲ್ಲಿ ಚೌಕಾಸಿಮಾಡಲು ಕಷ್ಟ. ಲಾರ್ಡ್ ಲ್ಯಾಮಿಂಗ್ಟನ್ ಸನ್. ೧೯೦೩ ಮತ್ತು ೧೯೦೭ ರಲ್ಲಿ ಬೊಂಬಾಯಿನಗರದ ಗವರ್ನರ್ ಆಗಿದ್ದರು. ಲ್ಯಾಮಿಂಗ್ಟನ್ ರಸ್ತೆ, ಮುಂಬಯಿ ಸೆಂಟ್ರೆಲ್ ನಿಂದ ಒಪೇರಾ ಹೌಸ್ ವರೆಗೂ ಹಬ್ಬಿದೆ. ಭಾರಿ ವ್ಯಾಪಾರಸ್ಥಳ. ದಿನ ರಾತ್ರಿಯೆನ್ನದೆ ಎಲ್ಲಾ ಸಮಯದಲ್ಲೂ ಭರ್ಜರಿ ವ್ಯಾಪಾರನಡೆಯುತ್ತಿರುತ್ತದೆ. ಈ ರಸ್ತೆ, ಪಶ್ಚಿಮರೈಲ್ವೆಯ, ಗ್ರಾಂಟ್ ರೊಡ್ ರೈಲ್ವೆ ಸ್ಟೇಷನ್ ಬಳಿಯಿದೆ. ಎಲೆಕ್ಟ್ರಾನಿಕ್ ವಸ್ತುಗಳ ಸಗಟು ಹಾಗೂ ಬಿಡಿ ವ್ಯಾಪಾರಕ್ಕೆ ಪ್ರಸಿದ್ಧಿಯಾಗಿದೆ. ರಸ್ತೆಯ ಉದ್ದಕ್ಕೂ ಕಂಪ್ಯೂಟರ್ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಸಾಮಗ್ರಿಗಳು ಪ್ರತಿ ಅಂಗಡಿಯಲ್ಲೂ ತುಂಬಿ-ತುಳುಕುತ್ತಿರುತ್ತವೆ. ಅವನ್ನು ಕೊಳ್ಳಲು ಇದಕ್ಕಿಂತ ಯೋಗ್ಯವಾದ ಸ್ಥಳ ಮುಂಬಯಿನಲ್ಲಿ ಎಲ್ಲೂ ಇಲ್ಲ. ಅಲ್ಲಿಯೇ ಒಂದು ಸುತ್ತು ಹಾಕಿದರೆ, ನಮಗೆ ಅತ್ಯಂತ ಹಳೆಯ ಹಾಗೂ ಕೆಲಸಕ್ಕೆ ಯೋಗ್ಯವಲ್ಲದ ವಸ್ತುಗಳಿಂದ ಹಿಡಿದು, ಅತ್ಯಾಧುನಿಕ ಹಾಗೂ ಕಳ್ಳ ಸಾಗಾಟದ ಕೆಪಾಸಿಟರ್ಸ್, ರೇಡಿಯೋ ಟ್ರಾನ್ಸಿಸ್ಟರ್ಸ್, ಕೇಬಲ್ಸ್, ಸೌಂಡ್ ಕಾರ್ಡ್ಸ್, ಟಿವಿ ಟ್ಯೂನರ್ಸ್, ಅಡಾಪ್ಟರ್ಸ್ ಮೊದಲಾದ ವಸ್ತುಗಳನ್ನೂ (Pirated)) ctronic parts for radios like tuners & Lap tops ಸಹಿತ, ಖರೀದಿಸಬಹುದು.[೧]

ಮುಂಬಯಿನ ಬದಲಾದ ಹಳೆಯ ರಸ್ತೆಗಳ ನಾಮಫಲಕಗಳು[ಬದಲಾಯಿಸಿ]

ಲ್ಯಾಮಿಂಗ್ಟನ್ ರೋಡ್' ಹೆಸರನ್ನು ಈಗ, ಡಾ. ಬಾಬಾಸಾಹೇಬ್ ಭಡ್ ಕಾಮ್ಕರ್ ಮಾರ್ಗ್ ಎಂದು ಬದಲಾಯಿಸಿದ್ದಾರೆ. ಸಮೀಪದಲ್ಲಿ ಡಾ.ಬಾಬಾಸಾಹೇಬ್ ಭಡ್ ಕಾಮ್ಕರ್ ಮಾರ್ಕ್ ಪೋಲಿಸ್ ಸ್ಟೇಷನ್ ಇದೆ. ಇದಕ್ಕೆ ಪೋಲಿಸ್ ಕಾಲೊನಿಯೂ ಸೇರಿಕೊಂಡಿದೆ. ಮುಂಬಯಿನ ಹೆಸರಾಂತ ಸಿನೆಮ ಗೃಹಗಳಾದ,

ಲ್ಯಾಮಿಂಗ್ಟನ್ ರೋಡ್ ನ ಬಳಿಯಲ್ಲಿ, ಸುಪ್ರಸಿದ್ಧ, ಸಾಯಿಬಾಬಾ ಮಂದಿರ, ಹಾಗೂ ಮರಾಠಿಮೀಡಿಯಮ್ ನಲ್ಲಿ ಕಲಿಸುವ, ಡಿ.ಜಿ.ಟಿ ಹೈಸ್ಕೂಲ್ ಗಳಿವೆ.

ಉಲ್ಲೇಖಗಳು[ಬದಲಾಯಿಸಿ]

  1. Nehru Place, Lamington Road in US list of six 'notorious markets' in India