ಲೀ ಕೋರ್ಬೂಸಿಯೇ

ವಿಕಿಪೀಡಿಯ ಇಂದ
(ಲೇ ಕಾರ್ಬ್ಯೂಸಿಯರ್ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೀ ಕೋರ್ಬೂಸಿಯೇ
Le Corbusier 1933.JPG
ಲೀ ಕೋರ್ಬೂಸಿಯೇ
ಹೆಸರು ಚಾರ್ಲ್ಸ್-ಎಡ್ವರ್ಡ್ ಜೀನ್ನೆರೆಟ್
ಹುಟ್ಟು (1887-10-06)ಅಕ್ಟೋಬರ್ 6, 1887ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�".
ಲಾ-ಚಾಯು-ಡೆ-ಫಾಂಡ್ಸ್, ಸ್ವಿತ್ಸರ್ಲೇಂಡ್
ಸಾವು ಆಗಸ್ಟ್ 27, 1965(1965-08-27) (aged 77)ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"�".
ರೊಖ್ಬ್ರೂನ್-ಕ್ಯಾಪ್-ಮಾರ್ಟಿನ್, ಫ್ರಾನ್ಸ್
ರಾಷ್ಟ್ರೀಯತೆ ಸ್ವಿಸ್ / ಫ್ರೆಂಚ್ (೧೯೩೦ರಿಂದ)
ಪ್ರಭಾವಗಳು ಏಥೆನ್ಸಿನಲ್ಲಿರುವ ಅಕ್ರೋಪೋಲಿಸ್, ಚಾರ್ಲ್ಸ್ ಎಪ್ಲಟ್ಟೆನಿಯರ್, ಒಗಸ್ಟ್ ಪೆರೆಟ್, ಫರ್ನಾಂಡ್ ಲೆಗ್ಗರ್, ಪೇಬ್ಲೋ ಪಿಕಾಸೋ
ಪ್ರಭಾವಿತರು ಆಸ್ಕರ್ ನಿಮಯರ್, ರಿಚರ್ಡ್ ಮಿಯರ್, ಟಡಾವೋ ಆಂಡೋ, ಫಿಲಿಪ್ ಜೋನ್ಸನ್, ತೊಯೋ ಇತೊ, ಲೂಯಿ ಐ. ಕಾನ್, ಕೇಂಜೊ ತಾಂಗೆ, ವಾಂಗ್ ಶು
ಪುರಸ್ಕಾರಗಳು ಎಐಎ ಚಿನ್ನದ ಪದಕ (೧೯೬೧)

ಚಾರ್ಲ್ಸ್-ಎಡ್ವರ್ಡ್ ಜೀನರೆಟ್-ಗ್ರಿಸ್, ಅಥವಾ ಲೀ ಕೋರ್ಬೂಸಿಯೇ (೬ ಅಕ್ಟೋಬರ್ ೧೮೮೭ – ೨೭ ಆಗಸ್ಟ್ ೧೯೬೫) ಒಬ್ಬ ವಾಸ್ತುಶಿಲ್ಪಿ, ವಿನ್ಯಾಸಕ, ವರ್ಣಚಿತ್ರಕಾರ, ನಗರ ಯೋಜಕ, ಲೇಖಕ ಮತ್ತು ಆಧುನಿಕ ವಾಸ್ತುಶಿಲ್ಪದ ಪ್ರವರ್ತಕರಾಗಿದ್ದವರು. ಇವರು ಸ್ವಿತ್ಸರ್ಲೇಂಡಿನಲ್ಲಿ ಹುಟ್ಟಿ ೧೯೩೦ರಲ್ಲಿ ಫ್ರಾನ್ಸಿನ ನಾಗರಿಕತೆಯನ್ನು ಪಡೆದರು. ಲೀ ಕೋರ್ಬೂಸಿಯೇ ಐವತ್ತು ವರ್ಷಗಳ ವೃತ್ತಿ ಜೀವನದಲ್ಲಿ ಯುರೋಪ್, ಭಾರತ ಮತ್ತು ಅಮೇರಿಕದಲ್ಲಿ ಅನೇಕ ಕಟ್ಟಡಗಳನ್ನು ನಿರ್ಮಿಸಿದರು.

ಪ್ರಾಥಮಿಕ ಜೀವನ ಮತ್ತು ವಿದ್ಯಾಭ್ಯಾಸ, (೧೮೮೭-೧೯೧೪)[ಬದಲಾಯಿಸಿ]

ಲೀ ಕೋರ್ಬೂಸಿಯೇ ಫ್ರಾನ್ಸ್ ದೇಶದ ಗಡಿಯ ಸಮೀಪವಿರುವ ಲಾ-ಚಾಯು-ಡೆ-ಫಾಂಡ್ಸ್ ಎಂಬ ಸ್ವಿತ್ಸರ್ಲೇಂಡಿನ ಸಣ್ಣ ಪಟ್ಟಣದಲ್ಲಿ ಹುಟ್ಟಿದರು. ಬಾಲ್ಯದಲ್ಲಿ ಅವರಿಗೆ ಚಿತ್ರಕಲೆಯತ್ತ ಅತೀವ ಆಕರ್ಷಣೆಯಿತ್ತು. ಈ ಕಾರಣದಿಂದಲಾಗಿ ಅವರು ಲಾ-ಚಾಯು-ಡೆ-ಫಾಂಡ್ಸ್ ಕಲಾಶಾಲೆಯಲ್ಲಿ ಪ್ಯಾರಿಸಿನ್ ಬುಡಾಪೆಸ್ಟ್ ನಗರದಿಂದ ನೈಪುಣ್ಯವನ್ನು ಸಾಧಿಸಿದ್ದ ಚಾರ್ಲ್ಸ್ ಎಲ್ ಎಪ್ಲತ್ತನಿಯರ್ ಎಂಬವರ ಬಳಿ ಕಲೆಯ ಬಗೆಗಿನ ತರಬೇತಿ ಪಡೆದರು. ಕಲಾಶಾಲೆಯ ಆರ್ಕಿಟೆಕ್ಚರ್ ಅಧ್ಯಾಪಕ ರೆನಿ ಚಾಪಲಸ್ ಲೀ ಕೋರ್ಬೂಸಿಯೇರವರ ಮೇಲೆ ಅತೀವ ಪ್ರಭಾವ ಬೀರಿದರು. ಕೋರ್ಬೂಸಿಯೇರವರ ಆರಂಭಿಕ ಗೃಹವಿನ್ಯಾಸಗಳಲ್ಲಿ ಈ ಪ್ರಭಾವವನ್ನು ಕಾಣಬಹುದು.

೧೯೦೬ರಲ್ಲಿ ಲೀ ಕೋರ್ಬೂಸಿಯೇ ಇಟೆಲಿಗೆ ಪ್ರಯಾಣಿಸಿದರು. ಸ್ವಿತ್ಸರ್ಲೇಂಡಿನ ಹೊರಗೆ ಇದು ಅವರ ಮೊದಲ ಪ್ರಯಾಣವಾಗಿತ್ತು. ೧೯೦೭ರಲ್ಲಿ ಪ್ಯಾರಿಸಿಗೆ ಪ್ರಯಾಣಿಸಿದರು. ಅಲ್ಲಿ ಅವರಿಗೆ 'ರೀ-ಇನ್ಫೋರ್ಸ್ಡ್ ಕಾಂಕ್ರೀಟಿನ ವಿಶೇಷ ನೈಪುಣ್ಯ ಸಾಧಿಸಿದ್ದ ಒಗಸ್ಟ್ ಪೆರೆಯವರ ಕಾರ್ಯಾಲಯದಲ್ಲಿ ಉದ್ಯೋಗ ದೊರೆಯಿತು. ಅವರ ಇಟೆಲಿ ಪ್ರಯಾಣ ಮತ್ತು ಪೆರೆಯವರ ಬಳಿ ಮಾಡುತ್ತಿದ್ದ ಉದ್ಯೋಗ ಆರ್ಕಿಟೆಕ್ಚರಿನ ಕುರಿತಾದ ಸ್ವತಂತ್ರ ಅಭಿಪ್ರಾಯಗಳು ಮೂಡಲು ಎಡೆ ಮಾಡಿಕೊಟ್ಟಿತು. ೧೯೦೮ರಲ್ಲಿ ಲೀ ಕೋರ್ಬೂಸಿಯೇ ವಿಯೆನ್ನದಲ್ಲಿ ಜೋಸೆಫ್ ಹೋಫ್‍ಮೇನ್‍ರವರ ಬಳಿ ಆರ್ಕಿಟೆಕ್ಚರ್ ಕಲಿತರು. ೧೯೧೦ ಮತ್ತು ೧೯೧೧ರ ನಡುವೆ ಬರ್ಲಿನಿನ ಖ್ಯಾತ ಆರ್ಕಿಟೆಕ್ಟ್ ಪೀಟರ್ ಬಹರೆನ್ಸ್‍ರವರಲ್ಲಿ ಉದ್ಯೋಗ ಕೈಗೊಂಡರು. ಅಲ್ಲಿ ಅವರಿಗೆ ಖ್ಯಾತ ಆರ್ಕಿಟೆಕ್ಟುಗಳಾಗಿದ್ದ ಲುದ್ವಿಗ್ ಮೀಸ್ ವೇಂಡರ್ ರೋಹೆ ಮತ್ತು ವಾಲ್ಟರ್ ಗ್ರೋಪಿಯಸ್ ಎಂಬಿಬ್ಬರ ಪರಿಚಯವಾಯಿತು. ಜರ್ಮನ್ ಭಾಷೆಯಲ್ಲಿ ನಿರರ್ಗಳತೆ ಸಾಧಿಸಿದರು. ಇದೆಲ್ಲದಕ್ಕಿಂತ ಮಿಗಿಲಾಗಿ ಎಮಾ ಕಣಿವೆಯಲ್ಲಿದ್ದ ಚಾರ್ಟರ್‍ಹೌಸಿಗೆ ನೀಡಿದ ಭೇಟಿ ಆರ್ಕಿಟೆಕ್ಚರಿನ ಕುರಿತಾದ ಅವರ ದರ್ಶನವನ್ನು ಬದಲಾಯಿಸಿತು.

1911ರಲ್ಲಿ ಬಲ್ಕನ್ಸ್ ಪ್ರದೇಶದತ್ತ ಪಯಣಿಸಿದರು ಮತ್ತು ಬಲ್ಗೇರಿಯಾ, ಗ್ರೀಸ್ ಮತ್ತು ಟರ್ಕಿ ದೇಶಗಳತ್ತ ಪ್ರಯಾಣಿಸಿ ಎಂಬತ್ತರಷ್ಟು ಸ್ಕೆಚ್‍ಪುಸ್ತಕಗಳಲ್ಲಿ ತಾವು ಕಂಡದ್ದನ್ನು ರೇಖಿಸಿದರು. ಈ ಚಿತ್ರಗಳಲ್ಲಿ ಏಥೆನ್ಸಿನ ಅಕ್ರೋಪೋಲಿಸ್ ಬೆಟ್ಟದ ಪಾರ್ಥೆನೋನ್ ಕಟ್ಟಡ ಸಮೂಹದ ಹಲವಾರು ಚಿತ್ರಗಳೂ ಒಳಗೊಂಡಿವೆ. ಇವುಗಳನ್ನು ಲೀ ಕೋರ್ಬೂಸಿಯೇ ತನ್ನ ಟುವರ್ಡ್ಸ್ ಅ ನ್ಯೂ ಆರ್ಕಿಟೆಕ್ಚರ್ (1923) ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.

ಆರಂಭಿಕ ವೃತ್ತಿಜೀವನ: ವಿಲ್ಲಗಳು (೧೯೧೪-೨೦)[ಬದಲಾಯಿಸಿ]

ಮೊದಲ ವಿಶ್ವ ಮಹಾಯುದ್ಧದ ಕಾಲದಲ್ಲಿ ಲೀ ಕೋರ್ಬೂಸಿಯೇ ಲಾ-ಚಾಯು-ಡೆ-ಫಾಂಡ್ಸ್ ಪಟ್ಟಣದಲ್ಲಿ ತಾವು ಕಲಿತ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಯುದ್ಧ ಮುಗಿಯುವವರೆಗೆ ಪ್ಯಾರಿಸಿಗೆ ಹಿಂದಿರುಗಲಿಲ್ಲ. ಸ್ವಿತ್ಸರ್ಲೇಂಡಿನಲ್ಲಿ ಈ ನಾಲ್ಕು ವರ್ಷಗಳ ಕಾಲ ಆಧುನಿಕ ತಂತ್ರಗಳನ್ನು ಉಪಯೋಗಿಸಿ ಆರ್ಕಿಟೆಕ್ಚರಿನ ತಾತ್ತ್ವಿಕ ತಳಹದಿಯ ಪ್ರಯೋಗಗಳನ್ನು ಕೈಗೊಂಡರು. [೧] ಇವುಗಳಲ್ಲಿ ಮುಖ್ಯವಾದುದು ಡೊಮಿನೋ ಹೌಸಿನದ್ದು (೧೯೧೪-೧೫).

ಮನ್ನಣೆಗಳು[ಬದಲಾಯಿಸಿ]

ಲೀ ಕೋರ್ಬೂಸಿಯೇ ೧೯೬೧ರಲ್ಲಿ ಫ್ರಾಂಕ್ಲಿನ್ ಇನ್ಸ್‍ಟ್ಯೂಟ್ ಕೊಡಮಾಡುವ ಫ್ರಾಂಕ್ ಪಿ. ಬ್ರೌನ್ ಪದಕ ಮತ್ತು ಎಐಎ ಚಿನ್ನದ ಪದಕದ ಗೌರವ ಪಡೆದರು. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಲೀ ಕೋರ್ಬೂಸಿಯೇರವರಿಗೆ ೧೯೫೯ರಲ್ಲಿ ಗೌರವ ಪದವಿಯನ್ನು ಇತ್ತು ಗೌರವಿಸಿತು.[೨]

ಹೆಚ್ಚಿಗೆ ಓದಲು[ಬದಲಾಯಿಸಿ]

 • ಅವಿನಾಶ್ ರಾಜಗೋಪಾಲ್ 'The Little Prince' and Le Corbusier ಆರ್ಕಿಟೆಕ್ಚರ್ ಬಗೆಗಿನ ನಿಯತಕಾಲಿಕ ಮೆಟ್ರೋಪೋಲಿಸ್ ಬ್ಲೋಗದಲ್ಲಿ ಪ್ರಕಟವಾದ ಪೋಯಿಂಟ್ ಓಫ್ ವ್ಯೂ ಎಂಬ ಲೇಖನ, ಜನವರಿ 29, 2014.

ಉಲ್ಲೇಖಗಳು[ಬದಲಾಯಿಸಿ]

 1. ಚೋಯಿ, ಫ್ರಾನ್‍ಸ್ವಾ (1960). ಲೀ ಕೋರ್ಬೂಸಿಯೇ. George Braziller, Inc. pp. 10–11. ISBN 0-8076-0104-7. (Subscription required (help)).  zero width joiner character in |first= at position 7 (help)
 2. "About the Faculty". ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ. Retrieved 2014-03-18.  Check date values in: |access-date= (help)

ಆಕರಗಳು[ಬದಲಾಯಿಸಿ]

 • ಸರಬ್‍ಜೀತ್ ಬಹಗ, ಸುರೀಂದರ್ ಬಹಗ (2014) ಲೀ ಕೋರ್ಬೂಸಿಯೇ ಎಂಡ್ ಪಿಯರಿ ಜೆನರೆಟ್: ದ ಇಂಡಿಯನ್ ಆರ್ಕಿಟೆಕ್ಚರ್, ಕ್ರಿಯೇಟ್ ಸ್ಪೇಸ್ ಪ್ರಕಾಶನ, ISBN 978-1495906251
 • ರೋಯ್ ಆರ್. ಬಹರೆನ್ಸ್ (2005). Cook Book: Gertrude Stein, William Cook and Le Corbusier. Dysart, Iowa: ಬೋಬೋಲಿಂಕ್ ಬುಕ್ಸ್ ಪ್ರಕಾಶನ. ISBN 0-9713244-1-7.
 • ಅಲೆನ್ ಎಚ್ ಬ್ರೂಕ್ಸ್ (1999) Le Corbusier's Formative Years: Charles-Edouard Jeanneret at La Chaux-de-Fonds, ಚಿಕಾಗೋ ವಿಶ್ವವಿದ್ಯಾನಿಲಯ ಪ್ರಕಾಶನ, ISBN 0-226-07582-6
 • ಕರೋಲ್ ಎಸ್ ಎಲಿಯಲ್ (2002). L'Esprit Nouveau: Purism in Paris, 1918 – 1925. ನ್ಯೂ ಯೋರ್ಕ್: ಹ್ಯಾರಿ ಎನ್ ಅಬ್ರಂಸ್ ಪ್ರಕಟಣೆ, ISBN 0-8109-6727-8
 • ವಿಲಿಯಂ ಜೆ. ಆರ್. ಕರ್ಟಿಸ್ (1994) ಲೀ ಕೋರ್ಬೂಸಿಯೇ: Ideas and Forms, Phaidon, ISBN 978-0-7148-2790-2
 • ಕೆನತ್ ಫ್ರಾಮ್ಟನ್. (2001). ಲೀ ಕೋರ್ಬೂಸಿಯೇ, ಲಂಡನ್, ಥೇಮ್ ಎಂಡ್ ಹಡ್ಸನ್.
 • ಚಾರ್ಲ್ಸ್ ಜೆಂಕ್ಸ್ (2000) Le Corbusier and the Continual Revolution in Architecture, ಮೋನಾಸೆಲ್ಲಿ ಪ್ರಕಾಶನ, ISBN 978-1-58093-077-2
 • Jornod, Naïma and Jornod, Jean-Pierre (2005) ಲೀ ಕೋರ್ಬೂಸಿಯೇ (Charles Edouard Jeanneret), catalogue raisonné de l'oeuvre peint, ಸ್ಕೈರಾ ಪ್ರಕಾಶನ, ISBN 88-7624-203-1
 • ಸ್ಟಾನಿಸ್ಲಸ್ ವೋನ್ ಮೂಸ್ (2009) ಲೀ ಕೋರ್ಬೂಸಿಯೇ: Elements of A Synthesis, ರೋಟರ್‍ದ್ಯಾಂ, 010 ಪ್ರಕಾಶನ.
 • ನಿಕೋಲಸ್ ಫೋಕ್ಸ್ ವೆಬರ್ (2008) ಲೀ ಕೋರ್ಬೂಸಿಯೇ: ಎ ಲೈಫ್, ಅಲ್ಫ್ರೆಡ್ ಎ ಕ್ನೋಫ್, ISBN 0-375-41043-0

ಬಾಹ್ಯ ಸಂಪರ್ಕಗಳು[ಬದಲಾಯಿಸಿ]