ಲಿಂಗಾಯತ ಸಂಸ್ಕಾರಗಳು ಅಥವಾ ದೀಕ್ಷಾ ವಿಧಿ

ವಿಕಿಪೀಡಿಯ ಇಂದ
Jump to navigation Jump to search

ಸುಳ್ಳು ಮಾಹಿತಿ

ಪೀಠಿಕೆ[ಬದಲಾಯಿಸಿ]

ದಾರ್ಶನಿಕ, ಸಾಮಾಜಿಕ ಚಳುವಳಿಯಾಗಿ, ಧರ್ಮವಾಗಿ ಶರಣ ಪಂಥವೆಂದು ಹೆಸರಾದ, ಜಾತಿಬೇಧ ಧಿಕ್ಕರಿಸಿದ ಲಿಂಗಾಯತ ದರ್ಶನವಾಗಿ ಶಕ್ತಿ ವಿಶಿಷ್ಟಾದ್ವೈತವೆನಿಸಿದೆ ಇದು ೧೨ನೇ ಶತಮಾನದಲ್ಲಿ ಬಸವಣ್ಣ ನವರಿಂದ ಪ್ರಾರಂಭವಾಗಿದೆ. ಇದರ ಅನುಯಾಯಿಗಳನ್ನು ಶರಣರು ಅಥವಾ ಲಿಂಗಾಯತರೆನ್ನುತ್ತಾರೆ. ೧೨ನೆಯ ಶತಮಾನದಲ್ಲಿ, ಅಲ್ಲಮ , ಸಿದ್ದರಾಮ , ಚನ್ನಬಸವಣ್ಣ , ಅಕ್ಕ ಮಹಾದೇವಿ , ಮೊದಲಾದ ಶರಣರಿಂದ ಪ್ರಬಲವಾಗಿ ದಕ್ಷಿಣ ಭಾರತದಲ್ಲಿ ಹಬ್ಬಿತು.ಬಸವಣ್ಣ ಇದರ ನೇತಾರ , ಜನಿವಾರವನ್ನು ಕಿತ್ತೊಗೆದು ಲಿಂಗಾಯತ ಧರ್ಮ ಸ್ಥಾಪಿಸಿದನು.
ಬಸವಣ್ಣನವರು ಮತ್ತು ಲಿಂಗಾಯತ ಧರ್ಮ
ಬಸವಣ್ಣನವರು ಕಪ್ಪಡಿಯಲ್ಲಿ ತನ್ನ ಆರಂಭಿಕ ದಿನಗಳನ್ನು ಕಳೆದರು. ಕಾಲ. ಮಲಪ್ರಭಾ ಮತ್ತು ಕೃಷ್ಣಾ ಜಂಕ್ಷನ್ನಲ್ಲಿ, ಸಂಗಮೇಶ್ವರನಿಗೆ ಮೀಸಲಾಗಿರುವ ಮಂದಿರ ಇದೆ. ಇಲ್ಲಿ ಬಸವಣ್ಣನವರು ದೈವಿಕ ಕರೆಯನ್ನು ಪಡೆದರೆಂದು ಹೇಳಲಾಗುತ್ತದೆ. ಅವರು ತಮ್ಮ ಸೋದರಮಾವನ ಸಾವಿನ ನಂತರ ಅವರ ಉತ್ತರಾಧಿಕಾರಿಯಾಗಿ ಬಿಜ್ಜಳ ದೊರೆಯ ಕಲಚೂರಿ ಅರಸ (ಂಆ1156-1168)ರಲ್ಲಿ ಪ್ರಧಾನಿಯಾಗಿ ನೇಮಿಸಲಾಯಿತು ಅವರು ತಮ್ಮ ಲಿಂಗಾಯತ ಧರ್ಮ ಪ್ರಚಾರ ಕೆಲಸ ಮಾಡಲು ದೈವಿಕ ಕರೆಯ ಉದ್ದೇಶ ಪೂರೈಸುವ ದೊಡ್ಡ ಅವಕಾಶ ಪಡೆದರು.ಅವರು ಈ ಕನ್ನಡ ದೇಶದಲ್ಲಿ ಲಿಂಗಾಯತ ಧರ್ಮವನ್ನು ಜನಪ್ರಿಯ ಮಾಡುವಲ್ಲಿ ಮುಖ್ಯರಾಗಿದ್ದಾರೆ.

ಲಿಂಗಾಯತರು ಪೂಜಿಸುವ ಇಷ್ಟಲಿಂಗವನ್ನು ಗುರು ಬಸವಣ್ಣನವರು ಕಂಡು ಹಿಡಿದು ಇದನ್ನು ಯಾವುದೇ ಜಾತಿ ಭೇದ ವಿಲ್ಲದೆ ಅಂಗದ ಮೇಲೆ ಧರಿಸಿ (ಗುಡಿ ಗುಂಡಾರಗಳಲ್ಲಿ ಸ್ಥಾಪಿಸದೆ) ಪೂಜಿಸಲು ಕೊಟ್ಟಿದ್ದಾರೆ.

He spent his early days at Kappadi. at the junction of the Malaprabha and Krishna where a shrine stands, dedicated to Sangamesvara. Here Basava is said to have received a divine call to work for the revival of Virasaivism. He found a great opportunity to fulfil his mission when he was appointed prime minister of Bijjala the Kalachuri King (A.D.1156-1168) in succession to his own maternal uncle who had filled that post till his death.] who, though not the founder of the faith, was mainly responsible for making it popular in the Kannada country. Lingayatas claim the linga as the earliest object of worship and look on Basava as the restorer, not the author, of the faith.ಮಹಾರಾಷ್ಟ್ರ ಕೊಲ್ಲಾಪುರ ಗೆಜಟೀರ್ ನಿಂದ.
ಒಂದು ಇಷ್ಟಲಿಂಗವನ್ನು ಧರಿಸುವುದು, ಅಯ್ಯತನದ ಒಂದು ದೀಕ್ಷಾವಿಧಿ ಪಡೆಯುವುದು , ಮತ್ತು ಒಂದು ಶುದ್ಧೀಕರಣ ಸಮಾರಂಭ, ಈ ಮೂರು ಕ್ರಿಯನ್ನು ಇತರೆ ಹಿಂದುಗಳ ಎಲ್ಲಾ ಹದಿನಾರು ಸಂಸ್ಕಾರ ಕ್ರಿಯೆಗಳ (ಪವಿತ್ರ ವಿಧಿಗಳ) ಬದಲಿಗೆ ಹೊಂದಿರುವ, ಲಿಂಗಾಯತರು ಇತರ ಹಿಂದುಗಳಿಂದ ಭಿನ್ನವಾಗಿರುತ್ತಾರೆ. ಜೀವನದ ತಮ್ಮ ಸಂಬಂಧದಲ್ಲಿ, ಮಾಂಸಾಹಾರ ಮತ್ತು ಮದ್ಯ ಬಳಕೆ ಅವರಲ್ಲಿ ನಿಶಿದ್ಧ ಮತ್ತು ತಮ್ಮ ಸಂಪ್ರದಾಯ ನಿಯಮಗಳನ್ನು ಉಗ್ರತೆಯಿಂದ ಕಾಪಾಡಿಕೊಂಡಿರುವರು. ಅವರಲ್ಲಿ ಮರಣಹೊಂದಿದವರಿಗೆ ವಿಶೇಷ ಪ್ರಾಮುಖ್ಯತೆ ತೋರಿಸುವುದಿಲ್ಲ , ಲಿಂಗಾಯತರು ಈ ವಿಷಯದಲ್ಲಿ ಜೈನರ ಹಾಗೆ.

ಸಿದ್ಧಾಂತ ಮತ್ತು ಆಚರಣೆ[ಬದಲಾಯಿಸಿ]

ಸಮಾನತೆ
ಲಿಂಗಾಯತರು ನಂಬಿರುವ ಸಿದ್ಧಾಂತದ ಪ್ರಕಾರ ಲಿಂಗ ಧಾರಣೆ ಮಾಡಿದ ಲಿಂಗದ ಆರಾಧಕರು ಎಲ್ಲರೂ ಸಮಾನರು. ಮತ್ತು ಜಾತಿಯ ವ್ಯತ್ಯಾಸಗಳು ಇಲ್ಲ . ಬಸವಣ್ಣ, “ತೀರಾ ಕಡಿಮೆ ವರ್ಗದವರೂ ಸಹ ಹೊಸ ಪಂಥ ಸೇರಲು ಅವಕಾಶವಿದೆ”, ಎಂದಿದ್ದಾನೆ. ಆರಂಭಿಕ ಅನುಯಾಯಿಗಳು ಅನೇಕರು ಕೆಳ ಜಾತಿಯ ವ್ಯಕ್ತಿಗಳು, ಬ್ರಾಹ್ಮಣರು ಇಲ್ಲದ ಅದರಲ್ಲಿ ಕೆಳ ಜಾತಿಯವರು ಮತ್ತು ಮಹಿಳೆಯರು ಇದ್ದರು. ಆದರೆ ಶೀಘ್ರದಲ್ಲೇ ಬಸವನ ಮರಣಾನಂತರ ನಂತರ ಕೆಳಜಾತಿಯವರು ಲಿಂಗಾಯತ ಪಂಥಕ್ಕೆ ಸೇರಲು ಕಠಿಣ ನಿಯಮಗಳಿಗೆ ಒಳಪಡಬೇಕಿತ್ತು. ಇತರ ಜಾತಿಯವರು ಸದಸ್ಯರು ಎಂದು ಒಪ್ಪಿಕೊಂಡಿದ್ದರೆ , ಬಸವಣ್ಣನ ಸಿದ್ಧಾಂತಗಳನ್ನು ಇನ್ನು ಮುಂದೆ ಅಭ್ಯಾಸ ಮಾಡಲಾಗುತ್ತದೆ ಎಂದು ಮೊದಲು ಸಾಬೀತುಮಾಡುವ ಒಂದು ನಿಯಮವನ್ನು ಮಾಡಲಾಯಿತು. ಅವರು ಸಿದ್ಧಾಂತದಂತೆ ಒಂದೇ ದೇವರು, ಅವನಿಗೆ ಉಪವಾಸ ಅಥವಾ ತೀರ್ಥಯಾತ್ರೆಗಳು, ಮಧ್ಯವರ್ತಿಗಳ, ಅಗತ್ಯವಿಲ್ಲ. ಭಕ್ತರಲ್ಲಿ ಸಮಾನತೆಯ ಸಿದ್ಧಾಂತ ಇವು ಒಪ್ಪಿಕೊಳ್ಳಬೇಕಾದ ಪ್ರಮುಖ ಸಿದ್ಧಾಂತಗಳು.
ಮುಹೂರ್ತಗಳು
ಆದರೆ ಬಸವನ ನಂತರ ಈ ನಿಯಮ ಪಾಲನೆ ಸಿದ್ದಾ0ತದಲ್ಲಿ ಸೀಮಿತವಾಗಿ,ನಿಜವಾದ ನಡವಳಿಕೆಗಳಲ್ಲಿ ಉಳಿಯಲಿಲ್ಲ. ಲಿಂಗಾಯತರ ಸಿದ್ಧಾಂತದಲ್ಲಿ ಯಾವುದೇ ಒಳ್ಳೆಯ ಅಥವಾ ಕೆಟ್ಟ ದಿನಗಳಿಲ್ಲ. ಪ್ರಾಯೋಗಿಕವಾಗಿ ಕೊಲ್ಹಾಪುರ ಲಿಂಗಾಯತರು, ಒಳ್ಳೆಯ ಮತ್ತು ಕೆಟ್ಟದಿನಗಳ ಅದೃಷ್ಟ ದಿನಗಳ ನಂಬುಗೆಯನ್ನು ಹೊಂದಿದ್ದಾರೆ. ವಿಶೇಷ ಸಮಾರಂಭ ನಡೆಸುವಾಗ ಕೊಲ್ಲಾಪುರದ ಲಿಂಗಾಯತರು ಒಂದು ಒಳ್ಳೆಯ ದಿನ ಹುಡುಕಲು ಜಂಗಮ ಜ್ಯೋತಿಷಿಗಳನ್ನು ಸಂಪರ್ಕಿಸುವರು. . ಅವರು ಗ್ರಹಣಗಳ ಮೊದಲು ಮತ್ತು ಗ್ರಹಣ ನಂತರ ಸ್ನಾನ ಇತ್ಯಾದಿ ಆಚರಿಸುವರು.. (ಇತ್ತೀಚಿನ ಕೆಲವು ನೆಡವಳಿಕೆಗಳು ಬೇರೆ ಆಗಿರಬಹುದು.?)
ಮೈಲಿಗೆ/ಅಶೌಚ
ಬಸವಣ್ಣವನವರ ಪ್ರಮುಖ ಸಿದ್ಧಾಂತಗಳಂತೆ ಲಿಂಗ ಧಾರಣೆ ಮಾಡಿದವರಿಗೆ ಅಶುದ್ಧ ಅಥವಾ ಅಶೌಚ/ಮೈಲಿಗೆ ಅಗುವುದಿಲ್ಲ. ಆದ್ದರಿಂದ ಮಹಿಳೆಯರು ತಿಂಗಳ ತೊಂದರೆ /ಮುಟ್ಟು ಮೈಲಿಗೆಯಲ್ಲ. ಹಿಂದೂಗಳ ಬೇರೆ ಪಂಗಡಗಳಲ್ಲಿರುವಂತೆ ವಿಧ್ಯುಕ್ತ ಅಶುದ್ಧತೆ/ಮೈಲಿಗೆ ಆಚರಣೆ- ಎಂದರೆ ಇತರರನ್ನು ಸ್ಪರ್ಶಿಸದೆ ಮೂರು ದಿನ ಉಳಿದವ, ದೂರದಲ್ಲಿ ಇರವ ಆಚರಣೆ ಮಾಡಬೇಕಾದ್ದಿಲ್ಲ. ಜನನ ಅಥವಾ ಮರಣದಲ್ಲೂ ಅಶೌಚ ಆಚರಣೆ ಅನಗತ್ಯ. ಆದರೆ ನಿಜವಾದ ಆಚರಣೆ, ಹಲವು ಕೊಲ್ಹಾಪುರ ಲಿಂಗಾಯತರಲ್ಲಿ ಬೇರೆಯೇಯಿದ್ದು ಒಂದು ದಿನದ ಆಚರಣೆ ಇದೆ. ಜನನವಾದಾಗ ಮೂರು, ಹನ್ನರಡು ದಿನ , ಕೆಲವರು ಒಂದು ತಿಮಗಲು ಮೈಲಿಗೆ ಆಚರಿಸಿ ಶುದ್ಧೀಕರಣದ ಸರಳ ಕ್ರಿಯೆ ಮಾಡಿಕೊಳ್ಳುತ್ತಾರೆ. ಪ್ರಮುಖ ಸಿದ್ಧಾಂತಗಳ ಮತ್ತೊಂದು ವಿಚಾರ ಮಹಿಳೆಯರು ಲಿಂಗ ಧರಿಸಿದ್ದರಿಂದ , ಲಿಂಗಾಯತ ಮಹಿಳೆಯು ಲಿಂಗಾಯತ ಗಂಡಸರ ಸಮಾನ ಆಗಿರುತ್ತಾರೆ; ಆದರೆ ನಿತ್ಯ ಆಚರಣೆಯಲ್ಲಿ ಉಳಿದ ಹಿಂದೂಜನರ ಮಹಿಳೆಗಿಂತ ಲಿಂಗಾಯತ ಮಹಿಳೆ ಜೀವನ ಬೇರೆರೀತಿ ಇರುವುದು ಕಾಣುವುದಿಲ್ಲ.
ದುಷ್ಟ ನಕ್ಷತ್ರ-
ಲಿಂಗದ ಧರಿಸುವ ಲಿಂಗಾಯತ ಸಿದ್ಧಾಂತದ ಪ್ರಕಾರ, ದುಷ್ಟ ನಕ್ಷತ್ರಗಳ ಅಥವಾ ದುಷ್ಟಶಕ್ತಿಗಳ ಎಲ್ಲಾ ಪ್ರಭಾವದಿಂದ ಅವರು ಸುರಕ್ಷಿತರು. ಈ ಎರಡೂ ಅವರನ್ನು ಹಾನಿಮಾಡಲಾರದು. ಅದರೆ ಬಳಕೆಯಲ್ಲಿ ಲಿಂಗಾಯತರು ದುಷ್ಟಶಕ್ತಿಗಳಿಂದ ರಕ್ಷಿಸಿಕೊಳ್ಳಲು ಜ್ಯೋತಿಷಿಗಳನ್ನು ಸಂಪರ್ಕಿಸುತ್ತಾರೆ. ಅವುಗಳಲ್ಲಿ ನಂಬುಗೆಯನ್ನು ಹೊಂದಿದ್ದಾರೆ.
ವರ್ಗ/ಉಪಜಾತಿ
ವೀರಶೈವ/ಲಿಂಗಾತರಲ್ಲಿರುವ ವರ್ಗಗಳು ಅಥವಾ ಉಪಜಾತಿಗಳು ಉಳಿದುಕೊಂಡು ಬಂದಿವೆ. ವಿವಾಹ ಸಂಬಂಧದಲ್ಲಿ ಆ ವರ್ಗಳವರಲ್ಲೇ ಸಾಮಾನ್ಯವಾಗಿ ಸಂಬಂಧ ಮಾಡುತ್ತಾರೆ.
ವೀರಶೈವ/ಲಿಂಗಾತರಲ್ಲಿರುವ ವರ್ಗಗಳು ಅಥವಾ ಉಪಜಾತಿಗಳು : (1) ಅಯ್ಯನವರು ಅಥವಾ ಜಂಗಮರು (ಪುರೋಹಿತರು, (2) ವಣಿಜರು/ಬಣಜಿಗರು/ ಶೆಟ್ಟರು(ವ್ಯಾಪಾರಿಗಳು), (3) ಪಂಚಮರು ಅಥವಾ (ಕುಶಲಕರ್ಮಿಗಳು, ಒಕ್ಕಲಿಗರು ಮತ್ತು ಕುರುಬರು (ದನಗಾಹಿಗಳು), (4) ಸೇವಕರು ಸೇರಿದಂತೆ ಅಜ್ಞಾತ ವರ್ಗ, ಕ್ಷೌರಿಕರು, ಅಗಸರು ಇತ್ಯಾದಿ.
ಇದರ ಧಾರ್ಮಿಕ ಕ್ರಿಯೆಗಳ ಬಗೆಗೆ ಪ್ರದೇಶ ಪ್ರದೇಶಗಳಲ್ಲಿ ಮತ್ತು ಒಳ ಪಂಗಡಗಳಲ್ಲಿ ಅಲ್ಪಸ್ವಲ್ಪ ಭಿನ್ನವಾಗಿವೆ. ಇಲ್ಲಿ ಉತ್ತರ ಕರ್ನಾಟಕದ ಪದ್ದತಿಗಳನ್ನು ಕೊಲ್ಲಾಪುರದ ಮಹಾರಾಷ್ಟ್ರ ಗೆಜಟೀರ್ ನಲ್ಲಿ ಲಿಂಗಾಯತ ಸಮಾಜದ ಧಾರ್ಮಿಕ ನೆಡವಳಿಕೆ ಬಗೆಗೆ ಬರೆದ ದಾಖಲೆನ್ನು ಅನುಸರಿಸಿದೆ.

ಪೂಜೆ[ಬದಲಾಯಿಸಿ]

ಕುಟುಂಬದ ಪ್ರತಿಯೊಂದು ಸಮಾರಂಭದಲ್ಲಿ ‘ಗುರು’(ಪರೋಹಿತರು/ಜಂಗಮರು) ಉಪಸ್ಥಿತರಿರಬೇಕು. ‘ಗುರು’ ಇಲ್ಲದಿದ್ದಲ್ಲಿ.ಅವರ ಸ್ಥಳದಲ್ಲಿ ಒಬ್ಬ ಸಾಮಾನ್ಯ ‘ಅಯ್ಯ’ (ಪುರೋಹಿತ) ಸಮಾರಂಭದ ಕಾರ್ಯಕ್ರಮ ನಡೆಸುತ್ತಾನೆ. ಕೊಲ್ಹಾಪುರ ಕಡೆ ಲಿಂಗಾಯತರ ಮನೆಯಲ್ಲಿ ಒಂದು ದೇವರ ಕೋಣೆ ಮತ್ತು ದೇವರ ಪ್ರತಿಮೆ ಇಡುವ ಮರದ ಮಂಟಪ ಇರುತ್ತದೆ. (ಹಾಗೆಯೇ ಎಲ್ಲ ಕಡೆಯೂ ಇರುವುದು). ಪ್ರತಿಯೊಬ್ಬರೂ (ಲಿಂಗ ಧರಿಸಿದಾತ/ಕೆ) ದಿನಕ್ಕೆ ಒಮ್ಮೆಯಾದರೂ ಧರಿಸಿದ ಇಷ್ಟಲಿಂಗವನ್ನು ಪೂಜಿಸುತ್ತಾನೆ/ಳೆ ಆದರ ಜೊತೆಗೆ ಪ್ರತಿಯೊಂದು ಲಿಂಗಾಯತರೂ ಮನೆಯ ದೇವರನ್ನು ಪ್ರತಿ ದಿನ ಬೆಳಿಗ್ಗೆ ಪೂಜಿಸುವರು. ಮನೆಯ ದೇವರನ್ನು, ದೇವರ ಮಂಟಪವನ್ನು ಮುಖ್ಯ ಹಜಾರಕ್ಕೆ ಹೊಂದಿದ ಕೋಣೆಯಲ್ಲಿ ಜಂಗಮ ಗುರುಗಳ ಪೀಠದ ಹತ್ತಿರ ಇರುವುದು. ಮನೆಯಲ್ಲಿ ಪೂಜಿಸುವ ಲಿಂಗ ಚಿಕ್ಕದಾಗಿರುವುದು.

ಇಷ್ಟಲಿಂಗ ಪೂಜೆ[ಬದಲಾಯಿಸಿ]

ಆರಾಧನೆ . ಆರಾಧಕನು, ಸ್ನಾನ ಮಾಡಿ ರೇಷ್ಮೆಯ ಪಂಚೆ ಧರಿಸುತ್ತಾನೆ, .). ಹಣೆಗೆ ಭಸ್ಮವನ್ನು ಧರಿಸುತ್ತಾನೆ (ಹಚ್ಚಿಕೊಳ್ಳುತ್ತಾನೆ) ಲಿಂಗವನ್ನು ಪವಿತ್ರ ಬಟ್ಟೆ ಮೇಲೆ ಇರಿಸುತ್ತಾನೆ, ಹಣೆಗೆ ಭಸ್ಮವನ್ನು ಧರಿಸುತ್ತಾನೆ.. ಸಣ್ಣ ಬೆತ್ದದ ಬುಟ್ಟ್ಟಿಯಿಂದ ಅವನು ಬಿಳಿ ಬಟ್ಟೆಯಲ್ಲಿ ಸುತ್ತಿದ ಪೂಜೆಯ ಸಣ್ಣ ಕುಡಿಕೆಗಳು ಮತ್ತು ಹಲವಾರು ದೊಡ್ಡ ಮತ್ತು ಸಣ್ಣ ರುದ್ರಾಕ್ಷಿಗಳನ್ನು , ತಂತಿಯಲ್ಲಿ ಪೋಣಿಸಿದ ಮಣಿ ಗಳನ್ನೂ . ಮತ್ತು ಚಿಕ್ಕ ಚೀಲದಲ್ಲಿರುವ ಭಸ್ಮವನ್ನು ತೆಗೆದುಕೊಳ್ಳುತ್ತಾನೆ. ಒಂದು ಬಿಳಿ ಸಣ್ಣ ಹಾಸಿನ (ಬಿಳಿ ಕಂಬಳಿ) ಮೇಲೆ ಕುಳಿತು ಕೊಳ್ಳುತ್ತಾನೆ., ಭಸ್ಮವನ್ನು ಹಣೆಗೆ ಮತ್ತು ತನ್ನ ಇಡೀ ದೇಹಕ್ಕೆ ಲೇಪಮಾಡುವನು. ಮತ್ತು ಪೂಜಾ ವಿವಿಧ ವಸ್ತುಗಳನ್ನು ಇಡಲು ತಕ್ಕ ಆಕಾರದ ಸಣ್ಣ ಕುಂಡಗಳಲ್ಲಿ ಇಟ್ಟು ಹೂಗಳನ್ನು, ಕುಂಕುಮ ಮತ್ತು ಅರಿಸಿನ ಗಳನ್ನು ಅದರ ಮೇಲೆ ಇರಿಸುವನು. ತನ್ನ ಕುತ್ತಿಗಗೆ , ರುದ್ರಾಕ್ಷಿ ಮಣಿ ಹಾರಗಳನ್ನು ಹಾಕಿಕೊಳ್ಳುವನು, ಕಿವಿ, ಮತ್ತು ತೋಳು, ಕಿವಿಗಳಿಗೆ ರುದ್ರಾಕ್ಷಿ ಧರಿಸುವನು. ಅವನು, ಅವರ ಮನೆಯ ದೇವರುಗಳನ್ನು ಪೂಜಿಸುವ ರೀತಿಯಲ್ಲಿ ಇಷ್ಟ ಲಿಂಗವನ್ನೂ ಪೂಜಿಸುವನು. ಲಿಂಗವನ್ನು ನಂತರ ಕುಡಿಕೆಗಳನ್ನು ಮಣಿಹಾರವನ್ನು, ರುದ್ರಾಕ್ಷಿಗಳನ್ನು ಬೂದಿ/ವಿಭೂತಿಯ ಚೀಲವನ್ನು ಬಿಳಿಬಟ್ಟೆಯಲ್ಲಿ ಸುತ್ತಿ ಮೊದಲಿನಂತೆ ಚಿಕ್ಕ ಬುಟ್ಟಿಯಲ್ಲಿ ಇರಿಸುತ್ತಾನೆ..,. ಮಹಿಳೆಯರು ಯಾವುದೇಮಂತ್ರ ಶ್ಲೋಕಗಳನ್ನು ಹೇಳದೆ ತಮ್ಮ ಲಿಂಗ ಪೂಜೆಯನ್ನು ಮೇಲೆ ನೀಡಿದ ಎಲ್ಲಾ ವಿವರಗಳನ್ನು ಮೂಲಕ ಮಾಡುತ್ತಾರೆ. ಕೊಲ್ಲಾಪರದ ಲಿಂಗಾಯತರು ಗ್ರಾಮ ದೇವತೆಯ ದೇವಾಲಯದ ಮೂಲಕ/ಮುಂದೆ ಹಾದು ಹೋಗುವಾಗ ದೇವರಿಗೆ ಬಗ್ಗಿ ನಮಿಸಿ ಮುಂದೆಹೋಗುತ್ತಾರೆ. ಅವರು ಮಾಘ ಮಾಸದಲ್ಲಿ ಬರುವ ಶಿವರಾತ್ರಿಯಂದು, ಶ್ರಾವಣ ಸೋಮವಾರ ಕೇವಲ ಒಂದು ಸಂಜೆ ಊಟ ಮಾಡುತ್ತಾರೆ ವಾದಿ-ರತ್ನಾಗಿರಿಯಲ್ಲಿ ಕೊಲ್ಹಾಪುರ ರಾಜ ಜೋತಿಬಾ ನ ಬೆಟ್ಟದ ಮೇಲೆಕೇದಾರಲಿಂಗಕ್ಕೆ, ಮತ್ತು ಗೋಕರ್ಣಕ್ಕೆ ತೀರ್ಥಯಾತ್ರೆ ಹೋಗುವರು .


ಜನನ[ಬದಲಾಯಿಸಿ]

ಲಿಂಗಾಯತರಲ್ಲಿ ಜನನ ನಂತರದ ಧಾರ್ಮಿಕ ಕ್ರಿಯೆ,
ಮನೆಯಲ್ಲಿ ಯಾವುದೇ ಒಂದು ಸೂಕ್ತ ಕೊಠಡಿಯನ್ನು ಹೆರಿಗೆಗೆ ಬಳಸಲಾಗುತ್ತದೆ. ಗರ್ಭಿಣಿ ಮಹಿಳೆಗೆ ಹೆರಿಗೆಯ ನೋವು ಆರಂಭವಾದಾಗ ಸೂಲಗಿತ್ತಿಗೆ ಹೇಳಿ ಕಳುಹಿಸಲಾಗುತ್ತದೆ. ಹೆರಿಗೆಯ ನೋವು ದೀರ್ಘಕಾಲವಿದ್ದರೆ , ಮತ್ತು ಹೆರಿಗೆಗೆ ಪ್ರಯತ್ನಿಸುತ್ತಿರುವ ವೇಳೆ, ಜಂಗಮರನ್ನು ಕರೆಸಿ ವಚನಗಳನ್ನು ಹೇಳಲು ಕರೆಯಲಾಗುತ್ತದೆ. ಜನನದ ನಂತರ ಜಂಗಮರ (ರ/ನ) ಕಾಲು 'ತೊಳೆದು ಆ ಪಾದೋದಕದಲ್ಲಿ (ಆ ನೀರಿನಿಂದ) ಕೊಠಡಿಯನ್ನು ಚಿಮುಕಿಸಿ ಶುದ್ಧೀಕರಿಸಲಾಗುವುದು. ಜನ್ಮ ಸಮಯವನ್ನು ಬರೆದು. ಕುಟುಂಬದ ಸ್ಥಿತಿಗೆ ತಕ್ಕಂತೆ ಹಣ ನೀಡಲಾಗುವದು.
ಐದನೇ ದಿನ, ರವಿಸುತ್ತಾರೆ. ಒಬ್ಬರು ಜಂಗಮ ಗುರುಗಳು ಬರುವರು. ಅವರು ವಚನಗಳನ್ನು ಪಠಿಸುತ್ತಾರೆ. ಒಂದು ಇಷ್ಟಲಿಂಗವನ್ನು (ಗೋಲಾಕಾರದ ಕರಿಶಿಲೆಯ) ಒಂದು ಸನ್ನ ಹತ್ತಿಯ ಬಿಳಿ ವಸ್ತ್ರದಲ್ಲಿ ಸುತ್ತಿ ಮಗುವಿನ ಕುತ್ತಿಗೆಗೆ ಅಥವಾ ಅದರ ಮೇಲಿನ ಬಲಗೈ ಸುತ್ತಿನಲ್ಲಿ ಕಟ್ಟುತ್ತಾರೆ. ಇಷ್ಟಲಿಂಗವನ್ನು ತಕ್ಷಣವೇ ಅಲ್ಲಿಂದ ತೆಗೆದುಕೊಂಡು ಮಗುವಿನ ತೊಟ್ಟಿಲಿಗೆ ಕಟ್ಟಲಾಗುವುದು. . ಸಂಜೆ ನೆರೆಮನೆಯ ಮಹಿಳೆಯರು ಬಂದು ತಾಯಿಂದ ದುಷ್ಟಶಕ್ತಿಗಳನ್ನು ದೂರವಿರಿಸಲು ಆರನೇ ಸತಿಯ ಗೌರವಾರ್ಥವಾಗಿ ಕೆಲವು ವಿಧಿಗಳನ್ನು ಮಾಡುವರು.
ಹನ್ನೆರಡನೆಯ ದಿನ ಮಗುವನ್ನು ತೊಟ್ಟಿಲಿಗೆ ಹಾಕಲಾಗುವುದು. ಮತ್ತು ಹೆಸರಿಸಲಾಗುವುದು.. ಹೆಸರು ಸಾಮಾನ್ಯವಾಗಿ ಪೋಷಕರು ಅಥವಾ ಕುಟುಂಬದ ಕೆಲವು ಹಿರಿಯ ಆಯ್ಕೆ ಮಾಡುವರು ಮತ್ತು ಸಮಾರಂಭದಲ್ಲಿ ವೀಕ್ಷಿಸುತ್ತಿರುವ ಮಹಿಳೆಯರು, ನೆರೆಹೊರೆಯವರು ಸಹಾ ಹೆಸರು ಗಳನ್ನು ಸೂಚಿಸುವರು. ಮಹಿಳೆಯರು ಎಲೆ ಅಡಿಕೆ, ಗೋಧಿ/ಅಕ್ಕಿ , ಒಂದು ತೆಂಗಿನ ಕಾಯಿ, ಉತ್ತುತ್ತೆ, ಮತ್ತು ರವಿಕೆ ಬಟ್ಟೆ/ಕಣ, ಉಡಿ ತುಂಬಲು ತಾಯಿಯ ಮಡಿಲಲ್ಲಿ ಹಾಕುವರು ಮತ್ತು ಅವರ ಕೆನ್ನೆ ಮೇಲೆ ಅರಿಶಿನ ಮತ್ತು ಕುಂಕುಮ ಹಚ್ಚುವರು ಮತ್ತು ಹುಬ್ಬುಗಳನ್ನು ತಿದ್ದುವರು.

ಅಯ್ಯತನ ದೀಕ್ಷೆ[ಬದಲಾಯಿಸಿ]

ಅಯ್ಯತನ
ಲಿಂಗಾಯತ ಪುರೋಹಿತರಲ್ಲಿ ಹುಡುಗನಿಗೆ ‘ಅಯ್ಯತನ’ದ ದೀಕ್ಷಾ ವಿಧಿ ನಡೆಸಲಾಗುತ್ತದೆ. ಏಳರಿಂದ ಒಂಬತ್ತು ವರ್ಷಗಳ ವಯಸ್ಸಿನಲ್ಲಿ. ಗುರುವು ಆ ದಿನ ದಿನದ ಬೆಳಿಗ್ಗೆ ಬೇಗ ದೀಕ್ಷೆ ಪಡೆಯುವ ಹುಡುಗನ ಮನೆಗೆ ಬರುವರು. , ಒಂದು ಚದರ ಮಂಡಲ ಹಾಕಿ ಅದರ ಮಧ್ಯದಲ್ಲಿ ಒಂದು ಮತ್ತು ನಾಲ್ಕು ಮೂಲೆಗಳಲ್ಲಿ ಒಂದೊಂದು ಚಿಕ್ಕ ಮಡಕೆಯಲ್ಲಿ ನೀರನ್ನು ಇಡಲಾಗುವುದು. ಈ ಮಡಕೆ ಅಥವಾ ಸಣ್ಣಪಾತ್ರೆ ಯನ್ನು ಅಕ್ಕಿಯ ಸಣ್ಣ ರಾಶಿ ಮೇಲೆ ಇಡಲಾಗುವುದು,. ಮಡಿಕೆಗಳ ಕತ್ತನ್ನು ಬಿಳಿ ದಾರದಿಂದ ಸುತ್ತಿ ಒಂದರಿಂದ ಮತ್ತೊಂದಕ್ಕೆ ಸೀರಿಸಲಾಗುವುದು. ಹುಡುಗನ ತಲೆಯನ್ನು ಕ್ಷೌರ ಮಾಡಿಸಿ(ಬೋಳಿಸಿ), ಸ್ನಾನಮಾಡಿದಲಾಗವುದು. ಸ್ನಾನದ ನಂತರ ಮಡಕೆ ಇಟ್ಟ ಚದರದ ಮುಂದೆ ಒಂದು ಮಣೆ (ಸಣ್ಣ ಮರದ ಸ್ಟೂಲ್) ಮೇಲೆ ಹುಡುಗನು ಕುಳಿತುಕೊಳ್ಳಬೇಕು. ಗುರುವು ಸೂಕ್ತ ಶ್ಲೋಕಗಳನ್ನು ಪಠಿಸುವರು. ಹುಡುಗನ ಕಿವಿಯಲ್ಲಿ ಪಿಸುಗುಟ್ಟಿ ಸಣ್ಣ ಸ್ತುತಿಗೀತೆ /ಶ್ಲೋಕವನ್ನು ಹೇಳುತ್ತಾರೆ.ಮತ್ತು ಅದನ್ನು ಅವನಿಂದ ಹೇಳಿಸುತ್ತಾರೆ. . ಸಮಾರಂಭದಲ್ಲಿ ಓಲಗದವರು ತಮಟೆಯೊಂದಿಗೆ ಓಲಗ ಊದುವರು. ಒಂದು ಊಟದ ಸಮಾರಂಭ ನಡೆಸಲಾಗುತ್ತದೆ. ಮತ್ತು ದಾನ ದಕ್ಷಿಣೆಗಳನ್ನು ವಿತರಿಸಲಾಗುತ್ತದೆ. ಈ ರೀತಿ ದೀಕ್ಷೆ ಪಡೆದ ನಂತರ ಹುಡುಗನು ಅಯ್ಯ ನಾದನು. ಇನ್ನು ಅವನು ಸ್ನಾನ ಮತ್ತು ಲಿಂಗ ಪೂಜೆ ಮಾಡದೆ ಆಹಾರ ತೆಗೆದುಕೊಳ್ಳಬಾರದು. ದೀಕ್ಷೆ ಎಂದರೆ ಶುದ್ಧೀಕರಣ. ಶುದ್ಧೀಕರಣ ಅಂದರೆ ದೀಕ್ಷೆ, ಜಂಗಮರನ್ನು ಹೊರತುಪಡಿಸಿ ಲಿಂಗಾಯತರ ಯಾವುದೇ ವರ್ಗದ ಒಳಗಾಯಿತು ಈ ದೀಕ್ಷಾ ವಿಧಿ ಮಾಡಬಹುದು.
ದೀಕ್ಷಾ ವಿಧಿಯಿಂದ ಮೇಲಿನವರ್ಗಕ್ಕೆ ಸೇರುವುದು-
ಈ ದೀಕ್ಷಾ ವಿಧಿಯಿಂದ ಒಬ್ಬ ಪಂಚಮ ಒಬ್ಬ ಲೋಕವಂತ ನಾಗುವನು ; ಒಂದು ಲೋಕವಂತ ಒಬ್ಬ ಶೀಲವಂತನಾಗುವನು ; ಒಬ್ಬ ಶೀಲವಂತನು ಜಂಗಮನಾಗುವನು. ಹೀಗೆ ದೀಕ್ಷೆ ಪಡೆದ ಹುಡುಗಿಯು ಪಂಚಮಳು ಲೋಕವಂತಳಾಗಿ ಲೋಕವಂತನನ್ನು ವಿವಾಹ ವಾಗಬಹುದು. ಹೀಗೆ ದೀಕ್ಷೆ ಪಡೆದು ಹುಡುಗಿಯರು ತಮ್ಮ ಮೇಲಿನ ವರ್ಗದವರನ್ನು ಮದುವೆಯಾಗಬಹುದು.. ಅನೇಕ ಲಿಂಗಾಯತ ಪರುಷರು ಹಾಗೂ ಯುವತಿಯರು ಸಾವಿಗೆ ಮುಂಚೆ ಹೀಗೆ ತಮ್ಮನ್ನು ಪಾಪದಿಂದ ಶುದ್ಧೀಕರಿಸುವ ಸಲುವಾಗಿ ಅಥವಾ ಮದುವೆಗೆ ಮುಂಚೆ ಅಥವಾ ಯಾವುದೇ ಸಮಯದಲ್ಲಿ ದೀಕ್ಷೆಯನ್ನು ಪಡೆಯುವರು. ದೀಕ್ಷೆ ಪಡೆಯುವ ದಿನವನ್ನು ಒಬ್ಬ ಜಂಗಮ ಜ್ಯೋತಿಷಿ ಮೂಲಕ ಒಳ್ಳೆಯ ದಿನ ನೋಡಿಕೊಂದು ದೀಕ್ಷೆ ತೆಗೆದುಕೊಳ್ಳುವರು. ಅಯ್ಯತನ ಮತ್ತು ಬೇರೆಯವರಿಗೆ ದೀಕ್ಷೆ ಕೊಡುವ ಗ್ರಂಥಗಳು ಬೇರೆಯಾದಿವೆ/ಭಿನ್ನವಾಗಿದೆ, ಸಮಾರಂಭದಲ್ಲಿ ದೀಕ್ಷೆಯ ಕ್ರಮ ಕೊಂಚ ಭಿನ್ನವಾಗಿದೆ. ಐದು ಲೋಹದ ಕಲಶ (ಚೊಂಬು)ಗಳು ಇದ್ದು , ಅವುಗಳಲ್ಲಿ ನಾಲ್ಕು, ಒಂದು ಚದರ (ಚಚ್ಚೌಕ) ಮಂಡಲದ ಪ್ರತಿ ಮೂಲೆಯಲ್ಲಿ ಒಂದು, ಮತ್ತು ಐದನೇಯದು ಕೇಂದ್ರದಲ್ಲಿ ಇಡಲಾಗುತ್ತದೆ . ಅವನ್ನು ಅಕ್ಕಿಯ ಒಂದು ಸಣ್ಣ ರಾಶಿಯಮೇಲೆ ಇಟ್ಟು ಪ್ರತಿಯೊಂದನ್ನು ಒಂದು ಬಿಳಿ ದಾರದ ಎಳೆಯಿಂದ ಪಾತ್ರೆಗಳ ಕುತ್ತಿಗೆಗೆ ಸುತ್ತಲಾಗುವುದು. ವೀಳ್ಯದ ಎಲೆಗಳನ್ನು ಆ ಕುಡಿಕೆಗಳ ಬಾಯಲ್ಲಿ ಇಟ್ಟು ಕುಂಕುಮವನ್ನು ಹಚ್ಚುವರು. ಈ ವಿಧಿಗೆ ಒಳಪಡುವ ಗಂಡಸು ಅಥವಾ ಮಹಿಳೆ ಸ್ನಾನ ಮಾಡಿ ಚಿಕ್ಕ ಚಾಪೆ (ಉಣ್ಣೆಯ ಕಾರ್ಪೆಟ್) ಮೇಲೆ ಚದರಮಂಡಲದ ಮುಂದೆ ಕುಳಿತುಕೊಳ್ಳುವರು. ಜಂಗಮರು ಶ್ಲೋಕಗಳನ್ನು ಪಠಿಸುವರು. ಹೀಗೆ ದೀಕ್ಷೆ ತೆಗೆದುಕೊಂಡ ವ್ಯಕ್ತಿಯ ತಲೆಯ ಮೇಲೆ ಅಕ್ಷತೆಯ ಕಾಳುಗಳನ್ನು (ಕುಂಕುಮ ಬೆರೆಸಿದ ಅಕ್ಕಿ) ಎಲ್ಲಾ ಪ್ರಸ್ತುತ ಅತಿಥಿಗಳು ಆಶೀರ್ವಾದ ಪೂರ್ವಕ ಹಾಕುವರು . ಅಲ್ಲಗೆ ದೀಕ್ಷಾ ಕಾರ್ಯಕ್ರಮ ಮುಗಿಯುವುದು.
ಸಮಾರಂಭವು ಹಬ್ಬದ ಊಟ /ಸಂತರ್ಪಣೆ ಮತ್ತು ದಕ್ಷಿಣೆಯ ದಾನ ವಿತರಣೆಯೊಂದಿಗೆ ಕೊನೆಗೊಳ್ಳುತ್ತದೆ.

ವಿವಾಹ[ಬದಲಾಯಿಸಿ]

ವಿವಾಹ-
ಲಿಂಗಾಯತರಲ್ಲಿ ಹಿಂದೆ ವಯಸ್ಸಿಗೆ ಬರುವ ಮೊದಲೇ ಹುಡುಗಿಯರನ್ನು ವಿವಾಹ ಮಾಡುವ ಪದ್ದತಿ ಇತ್ತು. ಪ್ರಸ್ತುತ, ವಿವಾಹದ ಹೊಸ ಕಾನೂನು ಬಂದಮೇಲೆ ವಯಸ್ಕರಾದ ಮೇಲೆ ಮದುವೆ ಮಾಡುವ ಪದ್ದತಿ ಬಂದಿದೆ ಸಾಮಾನ್ಯವಾಗಿ ಮದುವೆಯ ಪ್ರಸ್ತಾಪವು ಹುಡುಗನ ತಂದೆಯ ಕಡೆಯಿಂದ ಬರುತ್ತದೆ, ಆದರೆ ಕೆಲವು ಸಂದರ್ಭದಲ್ಲಿ ಹುಡುಗಿಯ ಪೋಷಕರು ಉತ್ತಮ ಶಿಕ್ಷಣ ಹೊಂದಿದ ಹುಡುಗನಿಗೆ ಮಗಳನ್ನು ಕೊಡ ಬಯಸಿದರೆ ವಧುವಿನ ಕಡೆಯಿಂದಲೇ ವಿವಾಹ ಪ್ರಸ್ತಾಪ ಮಾಡಬಹುದು. ಮುಂದುವರಿದ ಕುಟುಂಬಗಳು ತಮ್ಮ ಮಕ್ಕಳು ಬಯಸುವ ವಧುವಿನ/ವರನ ಆಯ್ಕೆಗೆ ಆಯ್ಕೆ ಕೆಲವು ಸ್ವಾತಂತ್ರ್ಯ ಅವಕಾಶ ಕೊಟ್ಟು ನಂತರ ಹಿರಿಯರ ಸಮ್ಮತಿ ಮೇಲೆ ವಿವಾಹ ನೆರವೇರುವುದು. ಪ್ರಸ್ತಾವನೆಯನ್ನು ಅಂತಿಮಗೊಳಿಸುವ ಮೊದಲು ತಮ್ಮ ಒಪ್ಪಿಗೆಯನ್ನು. ಯಾವುದೇ ಮಾತುಕತೆ ಪ್ರಾರಂಭಿಸುವ ಮೊದಲು, ಸ್ವ-ಪಂಗಡ-ಅನ್ಯ-ಪಂಗಡ / ಸ್ವಗೋತ್ರ ಮತ್ತು ಅನ್ಯಗೋತ್ರ (ವಿವಾಹದ ನಿರ್ಬಂಧಗಳನ್ನು) ವಿಚಾರದಲ್ಲಿ ಎಚ್ಚರಿಕೆಯಿಂದ ತನಿಖೆ ನಡೆಸಲಾಗುತ್ತದೆ. ಹಿಂದೆ ಮದುವೆಉಲ್ಲಿ ಯಾವುದೇ ವರದಕ್ಷಿಣೆ ಅಥವಾ ವಧು ದಕ್ಷಿಣೆ ಕೊಡುವ ಪದ್ದತಿ ಇರಲಿಲ್ಲ. ವಿವಾಹ ಹೆಚ್ಚನ ಖಚಿಲ್ಲದೆ ಸರಳವಾಗಿ ನಡೆಯುತ್ತಿತ್ತು . ಆದರೆ, ಇತ್ತೀಚಿನ ವರ್ಷಗಳಲ್ಲಿ ವರದಕ್ಷಿಣೆ ಕೊಡುವ ಪದ್ದತಿ ಕಾಣಿಸಲು ಪ್ರಾರಂಭವಾಗಿದೆ.
ಆರಂಭ -
ಒಬ್ಬ ಜಂಗಮ ಜ್ಯೋತಿಷಿಯು ಒಳ್ಳೆಯ ಮುಹೂರ್ತ ನೋಡಿ ಮದುವೆ ದಿನವನ್ನು ಗೊತ್ತು ಮಾಡುವರು. ಮದುವೆಗೆ ಮೊದಲು ಹುಡುಗನ ಮತ್ತು ಹುಡುಗಿಯ ಮನೆ ಮುಂದೆ ಚಪ್ಪರ ತೋರಣ ಕಟ್ಟಲಾಗುತ್ತದೆ. ಚಪ್ಪರದ ಮೊದಲ ಕಂಬವನ್ನು ಒಳ್ಳೆಯ ಗಳಿಗೆಯಲ್ಲಿ ನೆಡಲಾಗುವುದು. ಸಾಂಪ್ರದಾಯಿಕ/ಸಂಪ್ರದಾಯದಂತೆ ಮದುವೆ ಸಮಾರಂಭವು ಸಾಮಾನ್ಯವಾಗಿ ನಾಲ್ಕು ದಿನಗಳ ಕಾಲನಡೆಯುವುದು.
ನಿಶ್ಚತಾರ್ಥ-
ಮೊದಲ ದಿನ ಮದುವೆ ನಿಶ್ಚಯ -ನಿಶ್ಚತಾರ್ಥ (ವೀಳಯದ ಎಲೆ ಅಡಕೆ ಶಾಸ್ತ್ರ-ಮದುವೆ ನಿಶ್ಚಯ) ಎನ್ನುವ ಕಾರ್ಯಕ್ರಮ. ವಧುವನ್ನು ಒಳ್ಳೆಯ ಬಟ್ಟೆ ಮತ್ತು ಆಭರಣಗಳಿಂದ ಅಲಂಕೃತ ಮಾಡುವರು . ಜಂಗಮರ ಸಮಕ್ಷಮ ಮತ್ತು ಇತರ ಜಾತಿ-ಬಾಂಧವರ, ಗೌರವಾನ್ವಿತ ಸದಸ್ಯರ ಸಮ್ಮುಖದಲ್ಲಿ ಈ ನಿಶ್ಚತಾರ್ಥ ನೆಡೆಯುವುದು. (ವಿವಾಹಕ್ಕೆ ಎರಡೂ ಕುಟುಂಬಗಳ ವಚನ ಬದ್ಧತೆ). ಸಿಹಿ ಹಂಚಲಾಗುವುದು.
ಗಣಪತಿ ಪೂಜೆ ಮತ್ತು ಗುಗ್ಗುಳ ಕಾರ್ಯಕ್ರಮ-
ಗುಗ್ಗುಳ ಕಾರ್ಯಕ್ರಮ-ವೀರಭದ್ರ ದೇವರ ಗೌರವಾರ್ಥ-
ಎರಡನೇ ದಿನ ಗಣಪತಿ ಪೂಜೆ, ವಧೂವರರಿಗೆ ಅರಿಶಿನ-ಹಚ್ಚುವ ಕ್ರಿಯೆ ಮತ್ತು ಗುಗ್ಗುಳ ಕಾರ್ಯಕ್ರಮ, ಗುಗ್ಗುಳ ಕಾರ್ಯಕ್ರಮದಲ್ಲಿ ವೀರಭದ್ರ ದೇವರ ಗೌರವಾರ್ಥವಾಗಿ ನೆಡೆಯುವುದು. ಈ ಸಮಾರಂಭಗಳಲ್ಲಿ. ವಧು ಅಥವಾ ಮದುಮಗ ಮತ್ತು ಅವರ ತಾಯಂದಿರು ಇಬ್ಬರೂ ಭಾಗವಹಿಸಬೇಕು. ಸಮಾರಂಭದಲ್ಲಿ, ಎರಡು ಮಡಕೆ ಯನ್ನು ಸಿದ್ಧಗೊಳಿಸುವರು. ಎರಡು ಸುಣ್ಣ ಬಳಿದ ಮಡಕೆಯನ್ನು ಮಧ್ಯಕ್ಕಿಂತ ಸ್ವಲ್ಪ ಕೆಳಗೆ ಕತ್ತರಿಸಲಾಗುತ್ತದೆ, ಇದರಲ್ಲಿ ಆ ತಳದ ಭಾಗವನ್ನು ಮೇಲು ಮುಖವಾಗಿಟ್ಟು ಅದರಮೇಲೆ ಮೇಲಿನ ಭಾಗವನ್ನು ತಲೆಕೆಳಗೆ ಮಾಡಿ ಮೇಲ್ಮುಖವಾಗಿ ಇಡುವರು. ಹೀಗೆ ಸಿದ್ಧತೆಮಾಡಿ ಅದರಲ್ಲಿ ಭಸ್ಮ (ಬೂದಿ)ವನ್ನು ತುಂಬುವರು. ಆರು ಇಂಚುಗಳಷ್ಟು ಉದ್ದದ ಎಣ್ಣೆ ಬಟ್ಟೆ ಸುತ್ತಿದ ಎರಡು ಕಡ್ಡಿಗಳನ್ನು ಅದgಲ್ಲಿ ನೆಟ್ಟು ಕಕ್ಕಡ/ಕಾಕಡಗಳಿಗೆ ಬೆಂಕಿ ಹಚ್ಚಿ ಪ್ರಕಾಶಮಾನವಾಗಿ ಉರಿಯುವಮತೆ ಮಾಡಲಾಗುವುದು.ಅದನ್ನು ಹೂವಿನ ದಂಡೆಗಳಿಂದ ಅಲಂಕರಿಸಲಾಗುವುದು. ಗುಗ್ಗುಲವನ್ನು (ಕೆಂಪು ಪುಡಿ). ಕುಂಕಮ, ಚಂದನದ ಗಂಧವನ್ನು (ಚಂದನ ಪೇಸ್ಟ್) , ಹೂವಿನ ದಂಡೆಗಳು ಮೇಲೆ ಎಸೆಯಲಾಗುತ್ತದೆ. ಇಬ್ಬರು ಜಂಗಮರು (ಪುರೋಹಿತರು) ಅಥವಾ ಅಥವಾ ನೆರೆಯವರು, ಅದನ್ನು ಹೊತ್ತು ನೃತ್ಯ ಮಾಡುತ್ತಾ ಓಲಗದೊಂದಿಗೆ ಹೋಗುವರು, ಮೆರವಣಿಗೆಯಲ್ಲಿ ಅವನ್ನು ಅವರ ಕೈಯಲ್ಲಿ ಅಥವಾ ತಮ್ಮ ತಲೆಯ ಮೇಲೆ ಇಟ್ಟುಕೊಳ್ಳವರು. ಒಂದು ನದಿ ಅಥವಾ ಹಳ್ಳಿಯಲ್ಲಿ ಹೊರಗೆ ಬಾವಿಯ ಬಳಿ, ಎರಡೂ ಮಡಿಕೆಗಳನ್ನು ನೆಲದ ಮೇಲೆ ಇರಿಸಲಾಗುತ್ತದೆ. ನಂತರ ಕುಟುಂಬದ ಮುಖ್ಯಸ್ಥನು ಮೆರವಣಿಗೆಯೊಂದಿಗೆ ಹೋಗಿರುವ ಜಂಗಮರ ಮುಖ್ಯಸ್ಥರ ಪಾದಗಳನ್ನು ನೀರಿನಿಂದ ತೊಳೆದು, ಅದರ ಮೇಲೆ ಹೂಗಳು ಹಾಕುವರು (ಪೂಜಿಸುವರು), ಅವರಿಗೆ ತೆಂಗಿನಕಾಯಿ ಮತ್ತು ದಕ್ಷಿಣೆ (ಹಣ) ನೀಡುತ್ತಾರೆ. ಮತ್ತು ಸಾಷ್ಟಾಂಗ ನಮಸ್ಕಾರ ಮಾಡುವರು. ಹೀಗೆ ಗುರುಗಳ ಪೂಜೆ ಮುಗಿದ ನಂತರ ಕಕ್ಕಡಗಳನ್ನು ಆರಿಸಲಾಗುವುದು. ಮತ್ತು ಮಡಕೆಗಳನ್ನು ಒಡೆಯಲಾಗುವುದು. ನಂತರ ಎಲ್ಲರಿಗೂ ಎಲೆ ಅರಿಕೆ ಕೊಡುವರು. ಜಂಗಮಿಗೆ ಹಣ ದಾನ ಮಾಡುವರು.ನಂತರ ಓಲಗ ಇಲ್ಲದೆ ಎಲ್ಲರೂ ಮೌನವಾಗಿ ಮನೆಗೆ ಹೋಗುವರು. ಹಿಂದೆ ವೀರಭದ್ರನಿಗೆ ಹರಕೆ ಇದ್ದರೆ ಮಾತ್ರಾ ಗುಗ್ಗುಲ ಮಾಡಲಾಗುತ್ತಿತ್ತು. ಈಗ ಇದು ಸಾಮಾನ್ಯವಾಗಿದೆ. ಲಿಂಗಾಯತ ಕುಟುಂಬಗಳಲ್ಲಿ ಇದು ಮದುವೆ ಸಮಾರಂಭದಲ್ಲಿ ಒಂದು ಸಾಮಾನ್ಯ ಭಾಗವಾಗಿ ಮಾರ್ಪಟ್ಟಿರುವಂತೆ ತೋರುತ್ತದೆ.
ದೇವಕ-
ದೇವಕ-ಪೋಷಕರು-ಅವರಿಗೆ ಗೌರವ-
ಮೂರನೇ ದಿನ ‘ಸಮೆ ದೇವಕ’ (ಮದುವೆ ವಾರಾಸುದಾರ ) ಸಮಾರಂಭ ನಡೆಯುವುದು. ಎಲ್ಲಾ ಲಿಂಗಾಯಿತ ಕುಟುಂಬಗಳೂ ‘ಸಮೆ ದೇವಕ’ ಕಾರ್ಯಕ್ರಮದ ಪದ್ದತಿ ಹೊಂದಿವೆ. ಇದು- ಒಂದು ಬಿದಿರು ಕೇರುವ ಮರದಲ್ಲಿ, ಅಕ್ಕಿ, ಅರಿಶಿನ, ಎಲೆ ಅಡಿಕೆಗಳು ಮತ್ತು ಧಾನ್ಯಗಳನ್ನು ಇಟ್ಟು ,ಅದರ ಮಧ್ಯದಲ್ಲಿ ಒಂದು ಚಿಕ್ಕ ಮಣ್ಣಿನ ಕುಡಿಕೆಯಲ್ಲಿ (ಚಿಕ್ಕ ಮಡಿಕೆ) ನೀರು ತುಂಬಿ ಅದರಲ್ಲಿ ಕೆಲವು ನಾಣ್ಯ ಹಾಕಿ ಅದರ ಮುಚ್ಚಳವನ್ನು ದಾರದಿಂದ ಕಟ್ಟಲಾಗುವುದು. ಕೆಲವೊಮ್ಮೆ ಈ "ದೇವಕ" ಸಮಾರಂಭ ಮದುವೆಗೆ ಒಂದು ದಿನ ಅಥವಾ ಎರಡು ದಿನ ಮುಂಚೆ ನಡೆಯುತ್ತದೆ. ಪೋಷಕರು (ದೇವಕ) ತಮ್ಮ ಸ್ಥಳದಲ್ಲಿ ಕುಳಿತ ನಂತರ , ವರನ ಸ್ನಾನ; ನಂತರ ಅವನ ಹಣೆಗೆ ಭಸ್ಮವನ್ನು ಹಚ್ಚಲಾಗುವುದು. ಅವನಿಗೆ ವಿಶೇಷ/ ಶ್ರೀಮಂತ ಉಡುಪುಗಳನ್ನು ತೊಡಿಸಲಾಗುವುದು. ತಲೆಗೆ ಬಾಸಿಗ (ಬೆಂಡಿನಿಂದ ತಯಾರಿಸಿದ ಬಣ್ಣದ ಕಿರೀಟ) ಕಟ್ಟಲಾಗುವುದು.. ಸಾಮಾನ್ಯವಾಗಿ ಇದು ಮದುವೆಗೆ ಒಂದು ಅಥವಾ ಎರಡು ಗಂಟೆ ಮುಂಚೆ ಆಗುವುದು. ಅಥವಾ ಸಂಜೆಯಲ್ಲಿ ನಡೆಯುವುದು. ಮದುಮಗ ಓಲಗ/ಸಂಗೀತದ ಜೊತೆ ಮೆರವಣಿಗೆಯಲ್ಲಿ. ವಧುವಿನ ಮನೆಗೆ ತಲುಪುವನು. ಅಲ್ಲಿ ಮದುಮಗ ಮತ್ತು ವಧು ವಧುವಿನ ಶುದ್ಧೀಕರಣಕ್ಕಾಗಿ ಮಾಡಿದ ಚದರ -ಚಚ್ಚೌಕ ಮಂಡಲದಲ್ಲಿ ಮಣೆಯ ಮೇಲೆ ಅಕ್ಕ ಪಕ್ಕ ಕೂರುವರು. ದೀಕ್ಷಾವಿಧಿಗೆ ಮಾಡಿದಂತೆ ಇರುವ ಮೂಲೆಗಳಲ್ಲಿ ಕಲಶವಿರುವ ಒಂದು ಚೌಕದ ಚದರದ ಮಂಡಲದ ಮಧ್ಯದಲ್ಲಿ ಅಕ್ಕಪಕ್ಕದಲ್ಲಿ ಕುಳಿತುಕೊಳ್ಲುವರು. ವಧುವಿಗೆ ಸಾಮಾನ್ಯವಾಗಿ ಸರಳ ಬಿಳಿಯ ಸೀರೆ ಉಡಿಸಿರುವರು . ಹಣೆಗೆ ತೊಂಡಿಲು (ಹೆಣ್ಣಿನ ಕಿರೀಟ) ಕಟ್ಟಿರುವರು .ವಧು ಮತ್ತು ವರ ಇವರು ಹೊದ್ದಿರುವ ಶಾಲುಗಳ ಅಂಚನ್ನು (ಸೆರಗಿನ ಅಂಚು) ಸೇರಿಸಿ ಗಂಟು ಹಾಕುವರು.
ವಿವಾಹ ಬಂಧ-ಮಾಗಲ್ಯಧಾರಣೆ
ಅಯ್ಯನವರು ಅತಿಥಿಗಳಿಗೆ ಕುಂಕುಮ ಲೇಪಿತ ಅಕ್ಕಿ - ಅಕ್ಷತೆಗಳನ್ನು ಕೊಡುವರು. ನಂತರ ಅವರು-ಪುರೋಹಿತರು/ಅಯ್ಯನವರು ಮಂತ್ರ/ಶ್ಲೋಕಗಳನ್ನು ಹೇಳುವರು ; ಮಂತ್ರಹೇಳುವುದು ಮುಗಿಯುವವರೆಗೂ ಬಂಧುಗಳು, ಅತಿಥಿಗಳು ವಧೂವರರತಲೆಯಮೇಲೆ ಅಕ್ಷತೆಗಳನ್ನು ಹಾಕುತ್ತಲೇ ಇರುವರು ... ಈ ಸಮಯದಲ್ಲಿ ಓಲಗದ - ಸಂಗೀತ ನುಡಿಸಲಾಗುವುದು. ಮತಾಪು/ ಪಠಾಕಿ ಹೊಡೆಯಲಾಗುವುದು..ವಿವಾಹದ ಮಂತ್ರ ಮುಗಿದ ನಂತರ ವಧುವಿನ ಕೊರಳಿಗೆ ಮದುಮಗನು ಕರಿಮಣಿ ಸರವನ್ನು ಕಟ್ಟುವನು., ಮದುವೆಯಾದ ದಂಪತಿಗಳು ಮನೆಯೊಳಗೆ ಹೋಗಿ ಮನೆ ದೇವರುಗಳಿಗೆ ತಲೆಬಾಗಿ ನಮಸ್ಕರಿಸುವರು. ಆಗ ಅವರ ಸೆರಿಗಿನ ವಸ್ತ್ರಗಳ ಗಂಟುಗಳನ್ನು ಬಿಚ್ಚಲಾಗುವುದು. ನಾಲ್ಕನೇ ರಾತ್ರಿ ಮದುಮಗನು ವಧುವಿನ ಜೊತೆ ಕುದುರೆಯ ಮೇಲೆ, (ಒಂದು ಹೋರಿಯ?/ಎತ್ತನ ಗಾಡಿ /ಈಗ ಕಾರು) ಮೆರವಣಿಗೆಯಲ್ಲಿ ತನ್ನ ಪತ್ನಿಯೊಂದಿಗೆ ಒಂದು ಮಠಕ್ಕೆ (ಮಂದಿರಕ್ಕೆ ) ಹೋಗುತ್ತಾನೆ . ಮಠದಲ್ಲಿ (ಮಂದಿರ)ಮುಖ್ಯ ಸ್ವಾಮಿಗಳಿಗೆ (ಅರ್ಚಕರ ಮುಖ್ಯಸ್ಥ) ಒಂದು ತೆಂಗಿಕಾಯಿ ಇಟ್ಟು ಇಬ್ಬರೂ ಸಾಷ್ಟಾಂಗ ನಮಸ್ಕರಿಸುತ್ತಾರೆ. ಮಠದಿಂದ ಮದುಮಗನ ಮನೆಗೆ ಮೆರವಣಿಗೆಯಲ್ಲಿ ಹೋಗುವರು. ಅಲ್ಲಿ ಊಟದ ಸಮಾರಂಭವಾದ ಮತ್ತು ದಕ್ಷಿಣೆ ದಾನದ ನಂತರ ಕಾರ್ಯಕ್ರಮ ಅಂತ್ಯಗೊಳ್ಳುವುದು.
ಮೆರವಣಿಗೆ ಹೋಗುವಾಗ ದಾರಿಯಲ್ಲಿ ಅವರು ದುಷ್ಟಶಕ್ತಿಗಳನ್ನು /ಗಣಗಳನ್ನು / ಆತ್ಮಗಳನ್ನು (ಅಂತಹ ಕೆಲವು ಗೊತ್ತಾದ ಸ್ಥಳಗಳಲ್ಲಿ ತೃಪ್ತಿ ಪಡಿಸಲು ತೆಂಗಿಕಾಯಿಗಳನ್ನು ಒಡೆದು ಅದನ್ನು ಅವಕ್ಕೆ ಅರ್ಪಿಸುವರು.

ವಿಧವೆಯರ ಮದುವೆ[ಬದಲಾಯಿಸಿ]

ವಿಧವೆಯರ ವಿವಾಹ ವಿಚಾರ-
ಲಿಂಗಾಯತರಲ್ಲಿ ಜಂಗಮ ಮತ್ತು ಶೀಲವಂತರ ಮತ್ತು ಲೋಕವಂತರ ವರ್ಗ ಅಥವಾ ಒಳಜಾತಿಯಲ್ಲಿ ವಿಧವೆಯರ ಮದುವೆಗೆ ನಿಷೇಧವಿಲ್ಲ.
ಪಂಚಮ ಒಳಜಾತಿಯವರು ವಿಧವೆಯನ್ನು ವಿವಾಹವಾಗುವರು. ಲಿಂಗಾಯತರಲ್ಲಿ ಕುಂಬಾರರು, ಕ್ಷೌರಿಕರು , ಅಗಸರು, ಮಹರರು ಈ ಒಳಜಾತಿಗಳಲ್ಲಿ ವಿಧವೆಯರು ಪುನರ್ವಿವಾಹವಾಗಲು ಅನುಮತಿ ಇದೆ.
ಲಿಂಗಾಯತರಲ್ಲಿ ವಿಧವೆಯು ಯಾವುದೇ ಬಣ್ಣದ ಸೀರೆ ಬಳಸಲು, ರವಿಕೆ ಧರಿಸಲು ಅವಕಾಶವಿದೆ. ವಿಧವೆಯರು ಮೂಗುತಿಯನ್ನು, ಮತ್ತು ಕುತ್ತಿಗೆಯಲ್ಲಿ ಮಾಂಗಲ್ಯ ಎಳೆ, ಮತ್ತು ಕಾಲ್ಬೆರಳ ಉಂಗುರಗಳು ಹೊರತುಪಡಿಸಿ ಯಾವುದೆ ಇತರ ಆಭರಣಗಳನ್ನು ಧರಿಸಬಹುದು.
ಆದರೆ ಇನ್ನೂ ಹಳೆಯ ಪದ್ದತಿಯ ಸಾಂಪ್ರದಾಯಿಕ ದೃಷ್ಟಿಯಲ್ಲಿ ವಿಧವೆಯು ದುರಾದೃಷ್ಟದ/ಅಪಶಕುನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮದುವೆ ಮತ್ತು ಇತರ ಶುಭ ಸಮಾರಂಭಗಳಿಗೆ ಆಹ್ವಾನ ಇರುವುದಿಲ್ಲ.
(ಆದರೆ ಈಗೀಗ ಪರಿಸ್ತಿತಿ ಬದಲಾಗಿದೆ. ಅವರನ್ನೂ ಗೌರವದಿಂದ ಕಾಣುವರು)

[೧][೨] [೩]

ನೋಡಿ[ಬದಲಾಯಿಸಿ]

ಆಧಾರ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. LINGAYATS/ಲಿಂಗಾಯತರು/(ವೀರಶೈವ ಪಂಥ):
  2. Why do Lingayats bury their dead rather than burn them like the other Hindus? Lingayats bury their dead
  3. http://lingayatreligion.com/LingayatRituals.htm Lingayats