ಲಿಂಗದೊಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Diplocyclos palmatus
Diplocyclos palmatus
Ripe fruit of Diplocyclos palmatus
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಕುಕುರ್ಬಿಟೇಲ್ಸ್
ಕುಟುಂಬ: ಕುಕುರ್ಬಿಟೇಸಿಯೇ
ಕುಲ: ಡಿಪ್ಲೊಸೈಕ್ಲಾಸ್
ಪ್ರಜಾತಿ:
D. palmatus
Binomial name
Diplocyclos palmatus
(L.) C.Jeffrey

ಲಿಂಗದೊಂಡೆ ಕುಕರ್‌ಬಿಟೇಸೀ ಕುಟುಂಬಕ್ಕೆ ಸೇರಿದ ಡಿಪ್ಲೊಸೈಕ್ಲಾಸ್ ಪಾಮಾಟಿಸ್ ಪ್ರಭೇದದ ಸಸ್ಯ.

ವಿವರ[ಬದಲಾಯಿಸಿ]

ಬಳ್ಳಿಯಂತೆ ಆಸರೆ ಸುತ್ತಿ ಬೆಳೆಯುತ್ತದೆ. ಇದರ ಎಲೆಗಳು ಸಾಮಾನ್ಯವಾಗಿ, ಅಂಗೈಯಂತಿದ್ದು ಬೆರಳುಗಳಂತೆ ಸೀಳಿಕೊಂಡಿರುತ್ತವೆ. ಹೂಗೊಂಚಲುಗಳು ರೆಸಿಮ್ ಮಾದರಿಯಲ್ಲಿರುವುವು; ಅಥವಾ ಎಲೆ ಕಂಕುಳಲ್ಲಿ ಒಂದೊಂದೇ ಹೂವಿರುತ್ತದೆ. ಹೂಗಳು ಏಕಲಿಂಗಿಗಳು. ಇವನ್ನು ಗಂಡು ಮತ್ತು ಹೆಣ್ಣು ಎಂದು ವಿಂಗಡಿಸಬಹುದು. ಗಂಡು ಹೂವು ಹೆಣ್ಣು ಹೂವಿಗಿಂತ ದೊಡ್ಡದಾಗಿರುತ್ತದೆ. ಸುರುಳಿಯಂತಿರುವ ಇಬ್ಭಾಗವಾದ ಕುಡಿಬಳ್ಳಿಗಳಿವೆ. ಪುಷ್ಪಪಾತ್ರೆಯ ಎಸಳುಗಳು 5, ದಳಗಳು 5, ಒಟ್ಟಿಗೆ ಸೇರಿ ಗಂಟೆಯಾಕಾರದಲ್ಲಿವೆ. ಹೂವಿನ ಬಣ್ಣ ಹಸುರು ಮಿಶ್ರಿತ ಹಳದಿ. ಹಣ್ಣು ಒಂಟಿಯಾಗಿರುತ್ತದೆ ಅಥವಾ ೨-೪ ರ ಗುಚ್ಛದಲ್ಲಿರುತ್ತವೆ.[೧]

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: