ಲಸ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಸ್ಸಿ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಜನಪ್ರಿಯ ಸಾಂಪ್ರದಾಯಿಕ ಮೊಸರು ಆಧಾರಿತ ಪಾನೀಯ.[೧][೨] ಲಸ್ಸಿ ಮೊಸರು, ನೀರು, ಸಂಬಾರ ಪದಾರ್ಥಗಳು ಮತ್ತು ಕೆಲವೊಮ್ಮೆ ಹಣ್ಣಿನ ಮಿಶ್ರಣವಾಗಿರುತ್ತದೆ. ಉಪ್ಪಿರುವ ಲಸ್ಸಿ ಡೂಗ್‍ನ್ನು ಹೋಲುತ್ತದೆ. ಸಿಹಿ ಮತ್ತು ಮಾವಿನಹಣ್ಣಿನ ಲಸ್ಸಿಗಳು ಮಿಲ್ಕ್ ಶೇಕ್‍ಗಳಂತಿರುತ್ತವೆ. ಭಾಂಗ್ ಲಸ್ಸಿಯಲ್ಲಿ ಭಾಂಗ್‍ನ ರೂಪದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಹಾಕಲಾಗುತ್ತದೆ. ಛಾಸ್ ಇದನ್ನು ಹೋಲುವ ಪಾನೀಯವಾಗಿರುತ್ತದೆ ಆದರೆ ಇದು ಹೆಚ್ಚು ತೆಳುವಾದ ಸಾಂದ್ರತೆಯನ್ನು ಹೊಂದಿರುತ್ತದೆ.

ಸಿಹಿ ಲಸ್ಸಿಯು ಲಸ್ಸಿಯ ಒಂದು ರೂಪವಾಗಿದ್ದು ಇದನ್ನು ಸಕ್ಕರೆ, ಗುಲಾಬಿ ಜಲ ಅಥವಾ ನಿಂಬೆ ರಸ, ಸ್ಟ್ರಾಬೆರಿ ಅಥವಾ ಇತರ ಹಣ್ಣಿನ ರಸಗಳನ್ನು ಸೇರಿಸಿ ರುಚಿಗೊಳಿಸಲಾಗುತ್ತದೆ. ವಿಶೇಷವಾಗಿ ಸಮೃದ್ಧವಾಗಿರುವ ಕೇಸರಿ ಲಸ್ಸಿಯು ರಾಜಸ್ಥಾನ, ಗುಜರಾತ್ ಮತ್ತು ಸಿಂಧ್‍ನ ವಿಶೇಷತೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Indian Lassi: The Ultimate Summer Refresher". Imbibe. Retrieved 29 May 2018.
  2. "Lassi". Encyclopædia Britannica.
"https://kn.wikipedia.org/w/index.php?title=ಲಸ್ಸಿ&oldid=992459" ಇಂದ ಪಡೆಯಲ್ಪಟ್ಟಿದೆ