ರೋಮನ್ ನ್ಯಾಯ
ರೋಮನ್ ನ್ಯಾಯ ಎನ್ನುವುದು ಪ್ರಾಚೀನ ರೋಮ್‍ನ ನ್ಯಾಯ ವ್ಯವಸ್ಥೆಯಾಗಿತ್ತು. ಇದು ನ್ಯಾಯಶಾಸ್ತ್ರದ ಸಾವಿರಕ್ಕಿಂತ ಹೆಚ್ಚು ವರ್ಷಗಳು ವ್ಯಾಪಿಸಿದ ಕಾನೂನು ಬೆಳವಣಿಗೆಗಳನ್ನು ಒಳಗೊಂಡಿತ್ತು, ಅಂದರೆ ಹನ್ನೆರಡು ಕೋಷ್ಟಕಗಳಿಂದ (ಸು. ಕ್ರಿ.ಪೂ. ೪೪೯) ಹಿಡಿದು ಪೂರ್ವ ರೋಮನ್ ಚಕ್ರವರ್ತಿ ಮೊದಲನೇ ಜಸ್ಟೀನಿಯನ್ ಕಟ್ಟಳೆ ಮಾಡಿದ ಕಾರ್ಪಸ್ ಜ್ಯೂರಿಸ್ ಸಿವಿಲಿಸ್‍ವರೆಗೆ.
ಗ್ರೀಸ್‍ನಲ್ಲಿ - ಹೆಲೆನಿಸ್ಟಿಕ್ ಯುಗ (ಕ್ರಿ.ಪೂ. 146-ಕ್ರಿ.ಶ. 565)
[ಬದಲಾಯಿಸಿ]ಕ್ರಿ.ಪೂ. 1ನೆಯ ಶತಮಾನದ ಮುಕ್ತಾಯದ ವೇಳೆಗೆ ಗ್ರೀಕ್ ನಗರರಾಜ್ಯಗಳು ರೋಮನ್ ಸಾಮ್ರಾಜ್ಯದ ಭಾಗಗಳಾಗಿದ್ದವು. ಅನೇಕ ಶತಮಾನಗಳವರೆಗೆ ಈ ಭೂಭಾಗದಲ್ಲಿ ರೋಮನ್ ಮತ್ತು ಗ್ರೀಕ್ ನ್ಯಾಯಸೂತ್ರಗಳು ಪರಸ್ಪರ ಪೂರಕವಾಗಿ ಬೆಳೆದವು. ಕ್ರಿ.ಶ. 212ರಲ್ಲಿ ರೋಮನ್ ಸಾಮ್ರಾಜ್ಯದ ಸಮಸ್ತ ಜನರಿಗೂ ನಾಗರಿಕ ಹಕ್ಕುಬಾಧ್ಯತೆಗಳು ದೊರೆತ ಮೇಲೆ[೧] ರೋಮನ್ ಮತ್ತು ಗ್ರೀಕ್ ನ್ಯಾಯಸೂತ್ರಗಳಲ್ಲಿ ಹೆಚ್ಚಿನ ಒಡಂಬಡಿಕೆ ತಲೆದೋರಹತ್ತಿತು. ಎರಡೂ ನ್ಯಾಯವ್ಯವಸ್ಥೆಗಳ ಸಂಮಿಶ್ರ ಸ್ವರೂಪದ ನ್ಯಾಯಸೂತ್ರಗಳು ಆಚರಣೆಯಲ್ಲಿ ಬರಹತ್ತಿದವು. ಜಸ್ಟಿನಿಯನನ ನ್ಯಾಯಸೂತ್ರಗಳು ಗ್ರೀಕಿಗೆ ಭಾಷಾಂತರವಾದುವು. ಇವು ಮತ್ತು ಗ್ರೀಕರ ಪ್ರಾಚೀನ ನ್ಯಾಯಸೂತ್ರಗಳು ಪರಸ್ಪರ ಹೊಂದಾಣಿಕೆಯಾಗುವಂತೆ ಮಾರ್ಪಾಡು ಹೊಂದಿದುವು. ರೋಮನರು ರಾಜಕೀಯವಾಗಿ ಗ್ರೀಸ್ ದೇಶವನ್ನು ವಶಪಡಿಸಿಕೊಂಡಿದ್ದರೂ ಗ್ರೀಕರ ಬಗ್ಗೆ ಅವರಿಗೆ ವೈಷಮ್ಯವಿರಲಿಲ್ಲ. ಅಲ್ಲದೆ ಗ್ರೀಕರ ಕಲೆ, ವೈಚಾರಿಕ ಪ್ರಜ್ಞೆ, ಸಾಹಿತ್ಯ ಇವುಗಳ ಬಗ್ಗೆ ಅವರಿಗೆ ಆದರವಿತ್ತು. ಅಂತೆಯೇ ಗ್ರೀಕ್ ನ್ಯಾಯ ಮತ್ತು ಸಂಸ್ಕೃತಿಗಳು ಉಳಿದುಕೊಂಡವು.
ಉಲ್ಲೇಖಗಳು
[ಬದಲಾಯಿಸಿ]- ↑ "The Text of the Edict". constitutio (in ಇಂಗ್ಲಿಷ್). Retrieved 2025-05-24.
ಹೊರಗಿನ ಕೊಂಡಿಗಳು
[ಬದಲಾಯಿಸಿ]- The Roman Law Articles of Smith's Dictionary
- Roman Legal Tradition: open access journal devoted to Roman law
. Encyclopædia Britannica (11th ed.). 1911. {{cite encyclopedia}}: Cite has empty unknown parameters:|separator=and|HIDE_PARAMETER=(help)
