ರೇಮಂಡ್ ಥಾರ್ನ್ಟನ್ ಚ್ಯಾಂಡ್ಲರ್
ಗೋಚರ
(ರೇಮಂಡ್ ಥಾರ್ನ್ಟನ್ ಚ್ಯಾಂಡ್ಲರ್ ಇಂದ ಪುನರ್ನಿರ್ದೇಶಿತ)

ರೇಮಂಡ್ ಥಾರ್ನ್ಟನ್ ಚ್ಯಾಂಡ್ಲರ್ (1888-1959) ಅಮೆರಿಕದ ಒಬ್ಬ ಪತ್ತೇದಾರಿ ಕಾದಂಬರಿಕಾರ.
ಜೀವನ, ಸಾಧನೆಗಳು
[ಬದಲಾಯಿಸಿ]ಷಿಕಾಗೊನಲ್ಲಿ ಹುಟ್ಟಿದ ಈತ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ. ಮೊದಲ ಮಹಾಯುದ್ಧದಲ್ಲಿ ಕೆನೆಡಿಯನ್ ಸೈನಿಕರೊಂದಿಗೆ ಹೋರಾಡಿ 1919ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ವಾಪಸ್ಸಾದ.[೧] ಅಲ್ಲಿ ಹಲವಾರು ವ್ಯವಹಾರಗಳಲ್ಲಿ ತೊಡಗಿ ಹಲವು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯತೊಡಗಿದ. ದ ಬಿಗ್ ಸ್ಲೀಪ್ (1939); ಫೇರ್‌ವೆಲ್, ಮೈ ಲವ್ಲೀ (1940) ಕಾದಂಬರಿಗಳು ಪ್ರಕಟಗೊಂಡ ಮೇಲೆ ಕ್ಲಿಷ್ಟ ಹಾಗೂ ಭಯಾನಕ ಪತ್ತೇದಾರಿ ಕಥೆಗಳ ಪ್ರವರ್ತಕನೆಂದು ಹೆಸರಾದ. ಅನಂತರ ದ ಹೈ ವಿಂಡೊ (1942), ದ ಲೇಡಿ ಇನ್ ದ ಲೇಕ್ (1943), ದ ಲಿಟ್ಲ್ ಸಿಸ್ಟರ್ (1949) ಪ್ರಕಟಗೊಂಡವು. ಈತನ ಎಲ್ಲ ಕಾದಂಬರಿಗಳಲ್ಲೂ ಫಿಲಿಪ್ ಮಾರ್ಲೊ ಎಂಬ ಖಾಸಗಿ ಪತ್ತೇದಾರ ಕಾಣಿಸಿಕೊಳ್ಳುತ್ತಾನೆ. ಈತನ ಕಥೆಗಳಲ್ಲಿ ದರೋಡೆ, ಸುಲಿಗೆ, ಕೊಲೆ ಮೊದಲಾದ ಅಪರಾಧಗಳೆಲ್ಲ ಬೃಹತ್ ಪ್ರಮಾಣದಲ್ಲಿ ನಡೆಯುತ್ತವೆ.
ಹಲವಾರು ಚಲನಚಿತ್ರಗಳಿಗೆ ಚಾಂಡ್ಲರ್ ಸಂಭಾಷಣೆ ಒದಗಿಸಿದ್ದಾನೆ.
ಉಲ್ಲೇಖಗಳು
[ಬದಲಾಯಿಸಿ]- ↑ Trott, Sarah (February 16, 2017). "Raymond Chandler and the Trauma of War". The Strand Magazine. Retrieved October 28, 2023.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: