ರೂಪಾಯಿ ಮೌಲ್ಯದ ಕುಸಿತ

ವಿಕಿಪೀಡಿಯ ಇಂದ
Jump to navigation Jump to search

ರಫ್ತುದಾರರ ಮೇಲೆ ಬೀರುವ ಪರಿಣಾಮಗಳು ಮತ್ತು ಸವಾಲುಗಳು

ಡಾಲರ್ ವಿರುದ್ದ ರುಪಾಯಿ ಮೌಲ್ಯ ಇಳಿಕೆ ನಮ್ಮ ದೇಶದ ರಫ್ತುದಾರರಿಗೆ ವಿಶೇಷವಾಗಿ ಮಾಹಿತಿ ತಂತ್ರಙ್ಞಾನ ಕ್ಷೇತ್ರಕ್ಕೆ ಮತ್ತು ಆಮದಾಗುವ ವಸ್ತುಗಳನ್ನು ಬಳಸಿರುವವರಿಗೆ ಶುಭ ಸುದ್ದಿ ಯಾಗಿರುತ್ತದೆ. ಹೆಚ್ಚಿನಮಟ್ಟಿನ ಆಮದಾಗುವ ವಜ್ರ, ಆಭರನಗಳು, ಎಂಜಿನಿಯರಿಂಗ್ ಉತ್ಪನ್ನಗಳು ಇತ್ಯದಿಗಳನ್ನು ಬಳಸುವ ರಫ್ತುದಾರರಿಗೆ ದಾಲರ್ನ ಮೌಲ್ಯದ ವೃದ್ಧಿಯಿಂದ ತೀವ್ರ ಸಂಕಷ್ಟ ಎದುರಾಗುತ್ತದೆ. ಲಾಭಗಳಿಕೆಗೆ ಬಾಧಕವಾಗದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಗಳಲ್ಲಿ ಇತರ ಪೂರೈಕೆದಾರರಿಗೆಸ್ಪರ್ಧಿಸಲು ನಮ್ಮ ರಫ್ತುದಾರರಿಗೆ ರೂಪಾಯಿ ಅಪಮೌಲ್ಯ ಒಂದು ಸೂಕ್ತ ವೇದಿಕೆಯನ್ನು ಒದಗಿಸಿರುತ್ತದೆ.

ರಫ್ತುದಾರರು ಇಂತಹ ಅವಕಾಶಗಳನ್ನು ಬಳಸಿಕೊಂಡು ಹಾಲಿ ಮಾರುಕಟ್ಟೆಗಳಲ್ಲಿ ವಿದೇಶಿ ಖರೀದಿದಾರರ ವ್ಯವಹಾರ ಮಾದರಿಗಳನ್ನು ಅರ್ಥಮಾಡಿಕೊಂಡು ಆಳವಾಗಿ ತಳಾವೂರಬೇಕು. ರಫ್ತುದಾರರು ತಮ್ಮ ರಫ್ತು ಪೂರೈಕೆ ಸರಣಿಯನ್ನು ಪರಿಣಾಮಕಾರಿ ಹಾಗೂ ದಕ್ಷಗೊಳಿಸಿ ಭವಿಷ್ಯದ ಸವಾಲುಗಳನ್ನು ಎದುರಿಸಬೇಕು. ಇಂತಹ ತಂತ್ರ ಸ್ಪರ್ಧಾತ್ಮಕ ಸಾಮರ್ಥ್ಯ ಮತ್ತು ದರ ದಕ್ಷತೆಗಳನ್ನು ಹೆಚ್ಚಿಸುತ್ತದೆ ಹಾಗೂ ಇವು ಅಂತಾರಾಷ್ಟ್ರಿಯವ್ಯವಹಾರದಲ್ಲಿ ದೀರ್ಘಕಾಲೀನ ತಂತ್ರಗಳನ್ನು ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತದೆ.

ರೂಪಾಯಿ ಅಪಮೌಲ್ಯ ದಿಂದ ರಫ್ತುದಾರರು ಹೊಸ ಸವಾಲುಗಳನ್ನು ಎದುರಿಸಬೇಕಾಗಿರುತ್ತದೆ. ಹಾಲಿ ಮತ್ತು ಹೊಸ ಮಾರುಕಟ್ಟೆಗಳಲ್ಲಿ ರಫ್ತುದಾರರಿಗೆ ತಮ್ಮ ಛಾಪನ್ನು ಮೂಡಿಸಲು ಇದು ಪ್ರಶಸ್ತವಾದ ಸಮಯವಾಗಿರುತ್ತದೆ. ರಫ್ತು ಕ್ಷೇತ್ರವು ತಂತ್ರಙ್ಞಾನವನ್ನು ಉತ್ತಮಗೊಳಿಸಲು, ವೆಚ್ಚಗಳನ್ನು ಕಡಿತಗೊಳಿಸಲು, ಗುಣಮಟ್ಟವನ್ನು ಉತ್ತಮಗೊಳಿಸಲು, ಗುಣಮಟ್ಟವನ್ನು ಉತ್ತಮಗೊಳಿಸಲು ಉತ್ಪಾದನಾ ಸ್ಪರ್ಧಾ ಸಾಮರ್ಥ್ಯ ಅಭಿವೃದ್ಧಿಗೊಳಿಸಲು ಹಾಗೂ ಕಡಿಮೆ ವೇತನದ ಕೆಲಸಗಾರರ ದಕ್ಷತೆಯನ್ನು ಸುಧಾರಿಸಲು ಹೆಚ್ಚು ಗಮನ ನೀಡಬೇಕು. ಹತ್ತಿರದ ಭವಿಷ್ಯದಲ್ಲಿ ರಫ್ತುದಾರಿಕೆಯನ್ನು ಪ್ರೋತ್ಸಾಹಿಸಲು ಇದಕ್ಕ್ಂತ ಉತ್ತಮ ಅವಕಾಶ ದೊರಕದಿರಬಹುದು. ನೀತಿ ರೂಪಿಸುವ ಸಂಸ್ಥೆಗಳು ರಫ್ತು ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಒಂದು ಸಮಗ್ರೀಕೃತ ಪ್ಯಾಕೇಜನ್ನು ಅಭಿವೃದ್ಧಿಗೊಳಿಸಬೇಕು. ನಮ್ಮ ರಫ್ತುದಾರರು ಚೀನಾದೇಶದ ಜೊತೆ ಸ್ಪರ್ಧಿಸಲು ಮತ್ತು ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ಅವರ ಸ್ಥಾನವನ್ನು ಪಡೇಯಲು ಇದು ಪ್ರಶಸ್ತ ಸಮಯವಾಗಿರುತ್ತದೆ.ದ್ದ್

ಆಮದುಗಳು ಮತ್ತು ಸಾಲಗಳ ಮೇಲಿನ ಪರಿಣಾಮಗಳು

ಆಮದು ವ್ಯವಹಾರಗಳ ಒಟ್ಟ್ಟಾರೆ ವೆಚ್ಚಗಳನ್ನ್ನು ರೂಪಾಯಿ ಅಪಮೌಲ್ಯ್ಯಗೊಲಳ್ಳುವಿಕೆ ಆಮದುದಾರರಿಗೆ ಕಡಿಮೆ ಬಡ್ಡಿ ದರಗಳಲ್ಲಿ ವಿದೇಶಿ ಸಾಲಗಳನ್ನು ಪಡೆದವರಿಗೆ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಉದ್ದೇಶಿಸಿರುವ ವಿದ್ಯರ್ಥಿಗಳಿಗೆ, ವಿದೇಶಗಳಲ್ಲಿ ಪ್ರವಾಸ ಮಾಡುವ ಆಸಕ್ತಿ ಇರುವವರಿಗೆ ಹಾಗೂ ವಿದೇಶದಲ್ಲಿ ವ್ಯೆದ್ಯಕೀಯ ಸೌಲಭ್ಯ ಪಡೆಯಲು ಇಚ್ಚಿಸುವವರಿಗೆ ಹಾಗೂ ಮತೀತರರಿಗೆ ಸಹಾಯಕವಾಗುವುದಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ನ ಸಮೀಕ್ಷೆಯ ಪ್ರಕಾರ ಡಾಲರ್ ಮೌಲ್ಯದಲ್ಲಿ ಸಾಲ ಪಡೆದ ಬಹುತೇಕ ಭಾರತೀಯ ಕಂಪೆನಿಗಳು ವಿದೇಶಿ ವಿನಿಮಯ ಏರಿಳಿತಗಳಿಂದ ನಷ್ಟವಾಗದಿರುವಂತೆ ಮಾರುಕಟ್ಟೆಯಲ್ಲಿ ಅವಕಾಶಗಳಿದ್ದರೂ ಭದ್ರತಾ ಒಪ್ಪಂದಗಳನ್ನು ಮಾಡಿಕೊಂಡಿರುವುದಿಲ್ಲ. ಇಂತಹ ವಿವೇಚನಾರಹಿತ ಕ್ರಮಗಳಿಂದ ಅಗ್ಗದ ವಿದೇಶಿ ಸಾಲಗಳು ಡಾಲರ್ ಮೌಲ್ಯದ ಏರಿಕೆಯಿಂದ ರೂಪಾಯಿ ಸಾಲಗಳಿಗಿಂತ ದುಬಾರಿಯಾಗಿ ಪರಿಣಮಿಸಿರುತ್ತದೆ. ಹಾಗೆಯೇ ಭಾರತೀಯ ಕಂಪೆನಿಗಳ ವಿದೇಶಿ ಸ್ವಾಧೀನಪಡಿಸಿಕೊಳ್ಳುವಿಕೆಗಳು ಹೆಚ್ಚು ದುಬಾರಿಯಾಗಿರುತ್ತವೆ ಮತ್ತು ಅದೇ ಸಮಯದಲ್ಲಿ ಈ ಹಿಂದೆ ಖರೀದಿಸಲಾದ ಆಸ್ತಿಗಳು ಈಗ ಬಹು ಮೌಲ್ಯದ ಆಸ್ತಿಗಳಾಗಿರುತ್ತವೆ.

ಆಮದುದಾರರು ಏರಿಕೆಗೊಂಡ ವೆಚ್ಚಗಳನ್ನು ಸ್ಥಳೀಯ ಗ್ರಾಹಕರಿಗೆ ರವಾನಿಸಬೇಕಾಗುತ್ತದೆ ಹಾಗೂ ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ ಅಥವಾ ಭಾರತೀಯ ವಾಹನ ಕ್ಷೇತ್ರದ ರೀತಿಯಲ್ಲಿ ಸ್ಥಳೀಯ ಕಚ್ಚಾಸಾಮಗ್ರಿಗಳನ್ನು ಅನ್ವೇಷಿಸಬೇಕು. ವಾಹನ ಕ್ಷೇತ್ರದಲ್ಲಿ ನುರಿತ ಜಪಾನ್ , ಕೊರಿಯಾ, ಐರೋಪ್ಯ ಮತ್ತು ಅಮೇರಿಕಾದ ಬಹುದೇಶಿಯ ವಾಹನ ಕಂಪೆನಿಗಳೇ ಪ್ರಧಾನವಾಗಿರುತ್ತವೆ. ರೂಪಾಯಿ ಅಪಮೌಲ್ಯದ ಸವಾಲುಗಳನ್ನು ಎದುರಿಸಲು ಭಾರತೀಯ ಪೂರೈಕೆ ಘಟಕಗಳಿಂದ ವಾಹನ ಬಿಡಿ ಭಾಗಗಳನ್ನು ಸರಬರಾಜು ಮಾಡಲು ವಾಹನ ಕ್ಷೇತ್ರ ಧೀರ್ಘಕಾಲೀನ ತಂತ್ರವನ್ನು ಅಭಿವೃದ್ಧಿಗೊಳಿಸಿರುತ್ತದೆ. ರೂಪಾಯಿ ಅಪಮೌಲ್ಯವು ಸ್ಥಳೀಯ ಪೂರೈಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ವ್ಯಪಾರ ಮಾದರಿಯನ್ನು ಬದಲಿಸಿ ದುರ್ಬಲ ವಿನಿಮಯ ದೇಶಗಳಿಂದ ಆಮದು ಮತ್ತು ಪ್ರಬಲ ವಿನಿಮಯ ದೇಶಗಳಿಗೆ ರಫ್ತು ಮಾಡುವುದನ್ನು ಪ್ರೋತ್ಸಾಹಿಸುತ್ತದೆ.

ಮುಂದಿನ ಹಾದಿ

ಡಾಲರ್ ರೂಪಾಯಿ ದರಗಳ ಇತಿಹಾಸ ತೆಳಿಸುವುದು ಏನೆಂದರೆ ರೂಪಾಯಿ ಮೌಲ್ಯ ಕುಸಿತಗೊಂಡನಂತರ ಹಿಂದಿನ ದರಗಳ ಮಟ್ಟಕ್ಕೆ ರುಪಾಯಿ ಮೌಲ್ಯ ಮರಳುವುದೇ ಇಲ್ಲ . ಈಗ ಕ್ಂಪನಿಗಳು ಡಾಲರ್ ಬೆಲೆ ರೂ೬೦ ಗಿಂತ ಹೆಚ್ಚೇ ಇರುತ್ತದೆ ಎಂಬುದನ್ನು ಗಣನೆಗೆ ತೆಗೆದುಕೊಂಡು ತಮ್ಮ ವ್ಯವಹಾರ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ನಮ್ಮ ರಫ್ತನ್ನು ಹೆಚ್ಚಿನ ಅಗತ್ಯವಲ್ಲದ ಆಮದುಗಳನ್ನು ಮಿತಗೊಳಿಸಿ ಚಾಲ್ತಿ ಖಾತೆ ಪಾವತಿ ಬಾಕಿಯನ್ನು ಸರಿಪಡಿಸಿ ರೂಪಾಯಿಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಇದು ಪ್ರಶಸ್ತ ಅವಕಾಶವಾಗಿರುತ್ತದೆ. ಬೃಹತ್ ರಫ್ತುದಾರರು ವಿದೇಶಗಳಲ್ಲಿ ದಾಸ್ತಾನು ಸೌಲಭ್ಯಗಳನ್ನು ಸ್ಥಾಪಿಸುವುದು ಅಥವ ತಮ್ಮ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪಾದನಾ ಸೌಲಭ್ಯಗಳಾನ್ನು ನಿರ್ಮಿಸಬಹುದಾಗಿರುತ್ತದೆ. ದೀರ್ಘಕಾಲೀನ ರಫ್ತು ಪ್ರೋತ್ಸಹನ ತಂತ್ರಗಳನ್ನು ರೂಪಿಸಬೇಕಾಗುತ್ತದೆ. ಪ್ರತಿಯೊಂದು ವ್ಯವಹಾರ ಪ್ರಕ್ರಿಯೆ ವೆಚ್ಚಗಳನ್ನು ಕಡುತಗೊಳಿಸುವುದೇ ವ್ದೇಶಿ ವ್ಯವಹಾರವನ್ನು ನಡೆಸಲು ಅಗತ್ಯವಾಗಿರುವ ಗುರುಮಂತ್ರವಾಗಿರುತ್ತದೆ.