ರೂಪಾಂತರ (ಚಲನಚಿತ್ರ)
| ರೂಪಾಂತರ | |
|---|---|
| ನಿರ್ದೇಶನ | ಮಿಥಿಲೇಶ್ ಎಡವಲತ್ |
| ನಿರ್ಮಾಪಕ |
|
| ಚಿತ್ರಕಥೆ |
|
| ಪಾತ್ರವರ್ಗ |
|
| ಸಂಗೀತ | ಮಿಧುನ್ ಮುಕುಂದನ್ |
| ಛಾಯಾಗ್ರಹಣ | ಪ್ರವೀಣ್ ಶ್ರಿಯಾನ್ |
| ಸಂಕಲನ |
|
| ಸ್ಟುಡಿಯೋ |
|
| ವಿತರಕರು | ಲೈಟರ್ ಬುದ್ಧ ಫಿಲ್ಮ್ಸ್[೧] |
| ಬಿಡುಗಡೆಯಾಗಿದ್ದು |
|
| ಅವಧಿ | ೧೫೨ ನಿಮಿಷಗಳು |
| ದೇಶ | ಭಾರತ |
| ಭಾಷೆ | ಕನ್ನಡ |
ರೂಪಾಂತರ ೨೦೨೪ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಇದನ್ನು ಸುಹಾನ್ ಪ್ರಸಾದ್ ಮತ್ತು ಪಾರ್ಥ್ ಜಾನಿ ಅವರು ಮ್ಯಾಂಗೋ ಪಿಕಲ್ ಎಂಟರ್‌ಟೈನ್‌ಮೆಂಟ್ ಮತ್ತು ಜಾನಿ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಿದ್ದಾರೆ. ಮಿಥಿಲೇಶ್ ಎಡವಲತ್ ಅವರು ಮೊದಲ ಬಾರಿ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಹನುಮಕ್ಕ, ಸೋಮಶೇಖರ್ ಬೋಳೆಗಾಂವ್, ಲೇಖಾ ನಾಯ್ಡು, ಭರತ್ ಜಿಬಿ, ಅಂಜನ್ ಭಾರದ್ವಾಜ್ ಮತ್ತು ಸಲ್ಮಿನ್ ಶೆರಿಫ್ ಅವರನ್ನೊಳಗೊಂಡ ದೊಡ್ಡ ತಾರಾಗಣವಿದೆ . ನಟನೆಯ ಹೊರತಾಗಿ, ರಾಜ್ ಬಿ. ಶೆಟ್ಟಿ ಸಂಭಾಷಣೆ ಮತ್ತು ಹೆಚ್ಚುವರಿ ಚಿತ್ರಕಥೆಯನ್ನು ಬರೆದಿದ್ದಾರೆ.
ಈ ಚಿತ್ರವು ಮಾನವರಲ್ಲಿ ಸ್ವಯಂ ರೂಪಾಂತರದ ಮೇಲೆ ಕೇಂದ್ರೀಕರಿಸುವ ನಾಲ್ಕು ಕಥೆಗಳನ್ನು ಒಳಗೊಂಡಿದೆ, ಮತ್ತು ಈ ಕಥೆಗಳು ವಿಭಿನ್ನ ಹಿನ್ನೆಲೆಯಲ್ಲಿವೆ. [೨] ಈ ಚಿತ್ರವು ಹೈಪರ್‌ಲಿಂಕ್ ನಿರೂಪಣೆಯನ್ನು ಅನುಸರಿಸುತ್ತದೆ. ಇದು ಕಥೆಗಾರನೊಬ್ಬ ಡಿಸ್ಟೋಪಿಯನ್(ತೀವ್ರ ಹಾನಿಗೊಳಗಾದ ಪ್ರಪಂಚದಲ್ಲಿ) ಭವಿಷ್ಯದಲ್ಲಿ ನೆನಪಿಸಿಕೊಳ್ಳುವ ಎಲ್ಲಾ ಕಥೆಗಳನ್ನು ತೋರಿಸುತ್ತದೆ. [೩]
ರೂಪಾಂತರ ಜುಲೈ 26, 2024 ರಂದು ಬಿಡುಗಡೆಯಾಯಿತು. [೪] ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು, ಇದರಲ್ಲಿ ಪಾತ್ರವರ್ಗದ ಅಭಿನಯವನ್ನು ಶ್ಲಾಘಿಸಲಾಯಿತು. [೨] [೫]
ಕಥಾವಸ್ತು
[ಬದಲಾಯಿಸಿ]ಡಿಸ್ಟೋಪಿಯನ್ ಜಗತ್ತಿನಲ್ಲಿ ಒಂದು ಸಶಸ್ತ್ರ ಗ್ಯಾಂಗ್, ಒಬ್ಬ ಅಲೆಮಾರಿಯನ್ನು ಎದುರಿಸುತ್ತದೆ. ಅವನು ಬದಲಾವಣೆಯ ನಾಲ್ಕು ಕಥೆಗಳನ್ನು ವಿವರಿಸುತ್ತಾನೆ:
೧. ವಯಸ್ಸಾದ ರೈತನ ಹೆಂಡತಿ ನಗರ ಜೀವನದ ಕನಸು ಕಾಣುತ್ತಾಳೆ ೨. ಒಬ್ಬ ಹುಡುಗ ಅಪಾಯಕಾರಿ ಆನ್‌ಲೈನ್ ಆಟವನ್ನು ಅನ್ವೇಷಿಸುತ್ತಾನೆ ೩. ಒಬ್ಬ ಹೊಸ ಕಾನ್‌ಸ್ಟೆಬಲ್, ಆರೋಪಿಯಾಗಿರುವ ಭಿಕ್ಷುಕ ಮಹಿಳೆಯ ತನಿಖೆ ನಡೆಸುತ್ತಾನೆ ೪. ಒಬ್ಬ ರೌಡಿ ಮತ್ತು ಒಬ್ಬ ಐಟಿ ಕೆಲಸಗಾರನೊಂದಿಗೆ ಘರ್ಷಣೆ [೬] [೭] ಈ ಕಥೆಗಳು ಸಮಕಾಲೀನ ಭಾರತದಲ್ಲಿನ ವೈಯಕ್ತಿಕ ಮತ್ತು ಸಾಮಾಜಿಕ ಪರಿವರ್ತನೆಗಳನ್ನು ಪ್ರತಿಬಿಂಬಿಸುತ್ತವೆ.
ಪಾತ್ರವರ್ಗ
[ಬದಲಾಯಿಸಿ]| ಮೊದಲ ಕಥೆ | ಎರಡನೇ ಕಥೆ | ಮೂರನೇ ಕಥೆ | ನಾಲ್ಕನೇ ಕಥೆ |
|---|---|---|---|
|
|
|
|
ನಿರ್ಮಾಣ
[ಬದಲಾಯಿಸಿ]ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ ಮಿಥಿಲೇಶ್ ಎಡವಲತ್, ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಉಡುಪಿನಲ್ಲಿದ್ದ ದಂಪತಿಗಳನ್ನು ನೋಡಿದ ನಂತರ ಬರೆಯಲು ಸ್ಫೂರ್ತಿ ಪಡೆದರು. ಚಲನಚಿತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲು, ಅವರು ನಿಜ ಜೀವನದಲ್ಲಿ ಭೇಟಿಯಾದ ಜನರನ್ನು ಆಧರಿಸಿ ವಿವಿಧ ಸಣ್ಣ ಕಥೆಗಳನ್ನು ಬರೆದರು ಮತ್ತು ವೃತ್ತಪತ್ರಿಕೆ ತುಣುಕುಗಳಿಂದ ಕೂಡ ಸ್ಫೂರ್ತಿ ಪಡೆದರು. ಎಡವಲತ್ ಕೆಲ ಕಿರುಚಿತ್ರಗಳನ್ನು ಮಾಡಿದರು, ನಂತರ ಅವುಗಳನ್ನು ಚಲನಚಿತ್ರವಾಗಿ ಜೋಡಿಸಬಹುದೆಂದು ಅರಿತುಕೊಂಡರು. ಡಿಸ್ಟೋಪಿಯನ್ ಲೋಕವನ್ನು ಸೃಷ್ಟಿಸುವ ಮೂಲಕ, ಅವರು ಬರೆದ ನಾಲ್ಕು ಕಥೆಗಳನ್ನು ನಿರೂಪಣೆಯಲ್ಲಿ ಪರಿಚಯಿಸಿ,ಜೋಡಿಸಿದರು. [೮] ಸ್ಕ್ರಿಪ್ಟ್ ಮುಗಿದ ನಂತರ, ರಾಜ್ ಬಿ. ಶೆಟ್ಟಿ ಅಭಿನಯದ ಒಂದು ಮೊಟ್ಟೆಯ ಕಥೆ (೨೦೧೭) ಅನ್ನು ನೋಡಿದ ನಂತರ ಅವರು ಆ ಚಿತ್ರದ ನಿರ್ಮಾಪಕ ಸುಹಾನ್ ಪ್ರಸಾದ್ ಅವರನ್ನು ಭೇಟಿಯಾಗಿ ಕಥೆಯನ್ನು ವಿವರಿಸಿದರು, ಅವರಿಗೆ ಅದು ಇಷ್ಟವಾಯಿತು. ಸಂಭಾಷಣೆ ಬರೆಯಲು ಮತ್ತು ಹೆಚ್ಚುವರಿ ಚಿತ್ರಕಥೆ ಬರೆಯಲು ರಾಜ್ ಬಿ. ಶೆಟ್ಟಿ ಅವರನ್ನು ಕರೆತಂದರು. [೯] [೧೦]
ವಿಮರ್ಶಾತ್ಮಕ ಪ್ರತಿಕ್ರಿಯೆ
[ಬದಲಾಯಿಸಿ]ಡೆಕ್ಕನ್ ಹೆರಾಲ್ಡ್‌ನ ಪ್ರಣತಿ ಎ.ಎಸ್. ಐದು ನಕ್ಷತ್ರಗಳಲ್ಲಿ ಮೂರುವರೆ ನಕ್ಷತ್ರಗಳನ್ನು ನೀಡಿ, " ರೂಪಾಂತರವು ಚೆನ್ನಾಗಿ ಬರೆಯಲ್ಪಟ್ಟ ಚಿತ್ರಕಥೆಯೊಂದಿಗೆ ಒಂದು ಆಕರ್ಷಕ ಕಥಾಹಂದರವನ್ನು ಹೊಂದಿದೆ. ಆದಾಗ್ಯೂ, ಬರವಣಿಗೆಯು ಕಥೆಗೆ ಅರ್ಹವಾದ ಭಾವನೆಗಳಾಗಿ ಸಂಪೂರ್ಣವಾಗಿ ರೂಪಾಂತರಗೊಳ್ಳುವುದಿಲ್ಲ. ಚಿತ್ರವು ಉಪದೇಶ ನೀಡುವ ಕ್ಷಣಗಳನ್ನೂ ಪುನರಾವರ್ತಿತ ಸಂದೇಶಗಳನ್ನೂ ಹೊಂದಿದೆ" ಎಂದು ಬರೆದಿದ್ದಾರೆ. [೧೧]
ಟೈಮ್ಸ್ ನೌ ನ ಶಶಿಪ್ರಸಾದ್ ಎಸ್.ಎಂ. ಐದು ನಕ್ಷತ್ರಗಳಲ್ಲಿ ಮೂರುವರೆ ನಕ್ಷತ್ರಗಳನ್ನು ನೀಡಿ, " ರೂಪಾಂತರ ಇತ್ತೀಚಿನ ದಿನಗಳಲ್ಲಿ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿದೆ ಏಕೆಂದರೆ ಇದು ನಾಲ್ಕು ವಿಭಿನ್ನ ಕ್ಷೇತ್ರಗಳಲ್ಲಿ ಜೀವ ಮತ್ತು ಜೀವನದ ಬಗ್ಗೆ ಮಾತನಾಡುತ್ತದೆ. ರಾಜ್ ಬಿ ಶೆಟ್ಟಿ ಅವರ ಅತ್ಯುತ್ತಮ - ಆಕರ್ಷಕ ಕಥೆ ಹೇಳುವಿಕೆ ಮತ್ತು ಅದ್ಭುತ ಅಭಿನಯವು ಚಿತ್ರವನ್ನು ನೋಡಲೇಬೇಕಾದ ಚಿತ್ರವನ್ನಾಗಿ ಮಾಡಿವೆ" ಎಂದು ಬರೆದಿದ್ದಾರೆ. [೧೨] ಸಿನಿಮಾ ಎಕ್ಸ್‌ಪ್ರೆಸ್‌ನ ಶಾರದಾ ಐದು ನಕ್ಷತ್ರಗಳಲ್ಲಿ ಮೂರುವರೆ ನಕ್ಷತ್ರಗಳನ್ನು ನೀಡಿ, "ಹೋರಾಟ ಮತ್ತು ವಿಮೋಚನೆಯ ಪರಸ್ಪರ ಸಂಬಂಧ ಹೊಂದಿರುವ ಈ ಕಥೆಗಳು, ಮಾನವ ಸ್ವಭಾವ ಮತ್ತು ಬದಲಾವಣೆಯ ನಮ್ಮ ಅನ್ವೇಷಣೆಯ ಆಳವಾದ ವಿಮರ್ಶೆಯನ್ನು ನೀಡುತ್ತವೆ. ಇದು ರೂಪಾಂತರವನ್ನು ಆಳವಾಗಿ ಪ್ರಭಾವ ಬೀರುವ ಸಿನಿಮೀಯ ಅನುಭವವನ್ನಾಗಿ ಮಾಡುತ್ತದೆ" ಎಂದು ಬರೆದಿದ್ದಾರೆ. [೧೩]
ದಿ ಸೌತ್ ಫಸ್ಟ್‌ನ ಸುನಯನಾ ಸುರೇಶ್ ಇದಕ್ಕೆ ಐದು ನಕ್ಷತ್ರಗಳಲ್ಲಿ ಮೂರುವರೆ ನಕ್ಷತ್ರಗಳನ್ನು ನೀಡಿ, "ರೂಪಾಂತರ ಎಲ್ಲರಿಗೂ ಇಷ್ಟವಾಗದಿರಬಹುದು, ಆದರೆ ಈ ಕಟುವಾದ ಕಥೆಯು, ಪ್ರತಿ ವೀಕ್ಷಕನನ್ನು ಯೋಚಿಸಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ" ಎಂದು ಬರೆದಿದ್ದಾರೆ. [೬]
ದಿ ನ್ಯೂಸ್ ಮಿನಿಟ್ ನ ಸ್ವರೂಪ್ ಕೊಡೂರ್ ಇದಕ್ಕೆ ಐದು ನಕ್ಷತ್ರಗಳಲ್ಲಿ ಮೂರು ನಕ್ಷತ್ರಗಳನ್ನು ನೀಡಿ, " ರೂಪಾಂತರವು ಅತ್ಯಂತ ಅತ್ಯಾಧುನಿಕ ಕಲ್ಪನೆಯಾಗಿದ್ದರೂ, ಅಂತಿಮವಾಗಿ ತನ್ನದೇ ಆದ ಮಹತ್ವಾಕಾಂಕ್ಷೆಯಿಂದ ಸ್ವಲ್ಪ ಕುಸಿದಿದೆ" ಎಂದು ಬರೆದಿದ್ದಾರೆ. [೧೪] ದಿ ಹಿಂದೂ ನ ವಿವೇಕ್ ಎಂವಿ ಚಿತ್ರಕ್ಕೆ ಸಕಾರಾತ್ಮಕ ವಿಮರ್ಶೆಯನ್ನು ನೀಡಿ, "ನಿರ್ದೇಶಕ ಮಿಥಿಲೇಶ್ ಎಡವಲತ್ ತಮ್ಮ ಆಲೋಚನೆಗಳ ಘನ ಅನುಷ್ಠಾನದಿಂದಾಗಿ ಚಿತ್ರವನ್ನು ನಿರಂತರವಾಗಿ ಆಕರ್ಷಕವಾಗಿರುವಂತೆ ಮಾಡುತ್ತಾರೆ" ಎಂದು ಬರೆದಿದ್ದಾರೆ. [೨]
ಬೆಂಗಳೂರು ಮಿರರ್ ನ ವೈ. ಮಹೇಶ್ವರ ರೆಡ್ಡಿ ಈ ಚಿತ್ರಕ್ಕೆ ಐದು ನಕ್ಷತ್ರಗಳಲ್ಲಿ ಮೂರು ನಕ್ಷತ್ರಗಳನ್ನು ನೀಡಿದ್ದಾರೆ ಮತ್ತು "ನಿರ್ದೇಶಕ ಮಿಥಿಲೇಶ್ ಎಡವಲತ್ ಈ ಚಿತ್ರದಲ್ಲಿ ನಾಲ್ಕು ಪರಸ್ಪರ ಸಂಬಂಧ ಹೊಂದಿರುವ ಕಥೆಗಳನ್ನು ಬಹಳ ಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ. ಅವರು ಸಮಾಜಕ್ಕೆ, ವಿಶೇಷವಾಗಿ ತಪ್ಪು ಹಾದಿಯಲ್ಲಿರುವವರಿಗೆ, ಸುಧಾರಣೆಯ ಅಗತ್ಯದ ಬಗ್ಗೆ ಸೂಕ್ತ ಸಂದೇಶವನ್ನು ನೀಡುತ್ತಾರೆ" ಎಂದು ಬರೆದಿದ್ದಾರೆ. [೭] ಪ್ರೀತಿ, ನ್ಯಾಯ ಮತ್ತು ವಿಮೋಚನೆಗಾಗಿ ಹೋರಾಟದ ಕಥೆಗಳು ಪ್ರೇಕ್ಷಕರನ್ನು ಆಕರ್ಷಿಸುತ್ತವೆ ಮತ್ತು ನಿಧಾನಗತಿಯ ಆರಂಭದ ಹೊರತಾಗಿಯೂ, ಚಿತ್ರದ ಛಾಯಾಗ್ರಹಣ ಮತ್ತು ಸಂಗೀತವನ್ನು ಮೆಚ್ಚಲೇಬೇಕು ಎಂದು ಕನ್ನಡ ಪ್ರಭದ ವಿಮರ್ಶಕರೊಬ್ಬರು ಬರೆದಿದ್ದಾರೆ. [೧೫]
ಉಲ್ಲೇಖಗಳು
[ಬದಲಾಯಿಸಿ]- ↑ "Raj B Shetty Returns With Roopantara". Times Now (in ಇಂಗ್ಲಿಷ್). 28 June 2024. Archived from the original on 30 July 2024. Retrieved 30 July 2024.
- ↑ ೨.೦ ೨.೧ ೨.೨ M.V, Vivek (24 July 2024). "Roopanthara movie review: Raj B Shetty stars in an engaging anthology on self-transformation". The Hindu (in Indian English). Archived from the original on 30 July 2024. Retrieved 30 July 2024. ಉಲ್ಲೇಖ ದೋಷ: Invalid
<ref>tag; name ":1" defined multiple times with different content - ↑ "Roopanthara trailer: Director Mithilesh Edavalath's 5 hyper-linked stories are about hope in the humanity in people". OTTPlay (in ಇಂಗ್ಲಿಷ್). Retrieved 30 July 2024.
- ↑ "Kannada Film Roopanthara Is Simply, Or Not So Simply, A Masterpiece". Times Now (in ಇಂಗ್ಲಿಷ್). 26 July 2024. Archived from the original on 30 July 2024. Retrieved 30 July 2024.
- ↑ "Kannada Film Roopanthara Is Simply, Or Not So Simply, A Masterpiece". Times Now (in ಇಂಗ್ಲಿಷ್). 26 July 2024. Archived from the original on 30 July 2024. Retrieved 30 July 2024.
- ↑ ೬.೦ ೬.೧ Suresh, Sunayana (25 July 2024). "Roopanthara review: This Raj B Shetty-presented anthology of metamorphosis lingers on". The South First (in ಇಂಗ್ಲಿಷ್). Retrieved 30 July 2024. ಉಲ್ಲೇಖ ದೋಷ: Invalid
<ref>tag; name ":0" defined multiple times with different content - ↑ ೭.೦ ೭.೧ Reddy, Y. Maheswara (27 July 2024). "Kannada Movie Review-Roopanthara: Superb anthology of self-transformation". Bangalore Mirror. Retrieved 30 July 2024. ಉಲ್ಲೇಖ ದೋಷ: Invalid
<ref>tag; name ":2" defined multiple times with different content - ↑ "Raj B Shetty Was The Main Reason We Could Make Roopanthara: Director Mithilesh Edavalath". Times Now (in ಇಂಗ್ಲಿಷ್). 29 July 2024. Archived from the original on 30 July 2024. Retrieved 30 July 2024.
- ↑ Sharadhaa, A. (24 July 2024). "Mithilesh Edavalath's debut film 'Roopanthara' set for July release". The New Indian Express (in ಇಂಗ್ಲಿಷ್). Archived from the original on 30 July 2024. Retrieved 30 July 2024.
- ↑ "'Roopanthara' trailer: Multiple worlds collide in Raj B Shetty's dark thriller". The Hindu (in Indian English). 16 July 2024. Archived from the original on 20 July 2024. Retrieved 30 July 2024.
- ↑ S, Pranati A. "'Roopanthara' movie review: Gripping screenplay with well-crafted characters". Deccan Herald (in ಇಂಗ್ಲಿಷ್). Archived from the original on 30 July 2024. Retrieved 30 July 2024.
- ↑ "Roopanthara Movie Review: Brilliant Depiction of 'Profound' Life In Four Scenarios". Times Now (in ಇಂಗ್ಲಿಷ್). 24 July 2024. Retrieved 30 July 2024.
- ↑ Sharadhaa, A. (25 July 2024). "Roopanthara Movie Review: Celebrating the enduring spirit of human stories". Cinema Express (in ಇಂಗ್ಲಿಷ್). Archived from the original on 30 July 2024. Retrieved 30 July 2024.
- ↑ Kodur, Swaroop (25 July 2024). "Roopanthara review: Raj B Shetty stars in an inventive but uneven exploration of life". The News Minute (in ಇಂಗ್ಲಿಷ್). Archived from the original on 25 July 2024. Retrieved 30 July 2024.
- ↑ D., Shilpa (27 July 2024). "'ರೂಪಾಂತರ' ಸಿನಿಮಾ ವಿಮರ್ಶೆ: ನಾಲ್ಕು ಕಥೆಗಳ ಸಮ್ಮಿಲನ; ಮನೋಜ್ಞ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದ ಮಿಥಿಲೇಶ್" ['Rupantara' Movie Review: A Synthesis of Four Stories; Mithilesh won the hearts of the audience with his charming narration]. Kannada Prabha. Retrieved 30 July 2024.