ವಿಷಯಕ್ಕೆ ಹೋಗು

ರುಡಾಲ್ಫ್‌ ಜೀಲಿಯಸ್ ಈಮ್ಯಾನ್ಯುಎಲ್ ಕ್ಲಾಷಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುಡಾಲ್ಫ್‌ ಜೀಲಿಯಸ್ ಈಮ್ಯಾನ್ಯುಎಲ್ ಕ್ಲಾಷಿಯಸ್
ಜನನRudolf Julius Emanuel Clausius
(೧೮೨೨-ಜನವರಿ-ಫೆಬ್ರವರಿ)ಫೆಬ್ರವರಿ ಜನವರಿ ೧೮೨೨
Köslin, Province of Pomerania, Prussia
ಮರಣ24 August 1888(1888-08-24) (aged 66)
Bonn, Rhine Province, Prussia, German Empire
ಕಾರ್ಯಕ್ಷೇತ್ರಭೌತಶಾಸ್ತ್ರ
ಪ್ರಸಿದ್ಧಿಗೆ ಕಾರಣ
ಗಮನಾರ್ಹ ಪ್ರಶಸ್ತಿಗಳು
ಹಸ್ತಾಕ್ಷರ

ರುಡಾಲ್ಫ್‌ ಜೀಲಿಯಸ್ ಈಮ್ಯಾನ್ಯುಎಲ್ ಕ್ಲಾಷಿಯಸ್ 1822-1888. ಜರ್ಮನಿ ದೇಶದ ಭೌತವಿಜ್ಞಾನಿ

ಬಾಲ್ಯ ಮತ್ತು ವ್ಯಾಸಂಗ

[ಬದಲಾಯಿಸಿ]

ಜನನ 1822ನೆಯ ಇಸವಿ ಜನವರಿ 2 ರಂದು. ಭೌತವಿಜ್ಞಾನದಲ್ಲಿ ಉನ್ನತ ಪದವೀಧರನಾದ ಈತನಿಗೆ ಬರ್ಲಿನ್ ನಗರದ ರಾಯಲ್ ಆರ್ಟಿಲರಿ ಮತ್ತು ಎಂಜಿನಿಯರಿಂಗ್ ಸ್ಕೂಲಿನಲ್ಲಿ ಪ್ರಾಧ್ಯಾಪಕತ್ವ ಲಭಿಸಿತು (1850). ಮುಂದೆ 1855ರಲ್ಲಿ ಜ್ಯೂರಿಕ್ ಪಾಲಿಟೆಕ್ನಿಕ್ ಮತ್ತು ಜ್ಯೂರಿಕ್ ವಿಶ್ವವಿದ್ಯಾಲಯಗಳಲ್ಲೂ 1867ರಲ್ಲಿ ವುಜ್ರ್ûಬರ್ಗಿನಲ್ಲಿಯೂ ಪ್ರಾಧ್ಯಾಪಕನಾಗಿ ಕೆಲಸಮಾಡಿ 1869ರಲ್ಲಿ ಬಾನಿನಲ್ಲಿ ಪ್ರಾಧ್ಯಾಪಕನಾಗಿ ಸೇರಿ ತನ್ನ ಮರಣದವರೆಗೂ ಅಲ್ಲಿಯೇ ಇದ್ದ.

ವೃತ್ತಿ ಬದುಕು

[ಬದಲಾಯಿಸಿ]

ಕ್ಲಾಷಿಯಸ್ ಹೆಸರು ಪಡೆದದ್ದು ತಾತ್ತ್ವಿಕ ಭೌತವಿಜ್ಞಾನಿಯಾಗಿ. ಅಣುಭೌತಶಾಸ್ತ್ರದಲ್ಲಿ ಈತ ಹೆಚ್ಚಿನ ಅಧ್ಯಯನ ನಡೆಸಿದ್ದಾನೆ. ಕಾರ್ನೋ ತತ್ತ್ವವನ್ನು ಬೇರೊಂದು ರೀತಿಯಲ್ಲಿ ನಿರೂಪಿಸಿ ಉಷ್ಣಗತಿಶಾಸ್ತ್ರವನ್ನು ಒಂದು ನಿಷ್ಕೃಷ್ಟ ವಿಜ್ಞಾನವನ್ನಾಗಿ ಬೆಳೆಸಿದವ ಈತನೆ. ಕ್ಲಾಷಿಯಸನ ಹೆಸರುವಾಸಿಯಾದ ಉಷ್ಣಗತಿಶಾಸ್ತ್ರದ ಎರಡನೆಯ ನಿಯಮದ ನಿರೂಪಣೆ ಹೀಗಿದೆ : ತಣ್ಣಗಿರುವ ಕಾಯದಿಂದ ಬಿಸಿಯಾಗಿರುವ ಕಾಯದ ಕಡೆಗೆ ಉಷ್ಣ ತನ್ನಷ್ಟಕ್ಕೇ ಹರಿಯಲಾರದು. ಇದರ ಫಲಿತಾಂಶಗಳನ್ನು ಹಬೆಯಂತ್ರದ ಸಿದ್ಧಾಂತದ ಬೆಳೆವಣಿಗೆಯಲ್ಲಿ ಉಪಯೋಗಿಸಲಾಗಿದೆ. ಎಂಟ್ರೊಪಿಯ ಪರಿಕಲ್ಪನೆಯನ್ನು ಬಹುವಾಗಿ ಒತ್ತಿ ಹೇಳುವುದರ ಮೂಲಕ ಹಬೆಯಂತ್ರದ ಸಿದ್ಧಾಂತವನ್ನು ಬೆಳೆಸಿದ್ದಾನೆ.

ಗತಿಸಿದ್ಧಾಂತವನ್ನು ಆಧರಿಸಿ ಅನಿಲಗಳ ಅಣುಚಲನ ಸಿದ್ಧಾಂತವನ್ನು ಈತ ಬೆಳೆಸಿದ. ಈ ಸಿದ್ಧಾಂತದಲ್ಲಿ ಅಣುವಿನ ಸರಾಸರಿ ಮುಕ್ತಪಥವನ್ನು (ಮೀನ್ ಫ್ರೀ ಪಾತ್) ಲೆಕ್ಕಾಚಾರ ಹಾಕಿದ. ವಿದ್ಯುಕ್ಷೇತ್ರ ಪ್ರಭಾವಕ್ಕೆ ಒಳಗಾದ ವಿದ್ಯುದ್ವಿಭಜನೀಯಗಳಲ್ಲಿ ಅಣುಗಳಿಂದ ಅಣುಗಳಿಗೆ ಪರಮಾಣುಗಳು ವಿನಿಮಯಗೊಳ್ಳುವುದೆಂಬ ಅಂಶವನ್ನು ತಿಳಿಸಿದವನೂ ಈತನೆ. ಈ ಅಂಶದ ಆಧಾರದ ಮೇಲೆ ಅರ್ಹೀನಿಯಸ್ ಎಂಬ ವಿಜ್ಞಾನಿ ವಿದ್ಯುದ್ವಿಭಜನೀಯ ವಿಯೋಜನಾ ಸಿದ್ದಾಂತವನ್ನು ಬೆಳೆಸಿದ (ಥಿಯೊರಿ ಆಫ್ ಎಲೆಕ್ಟ್ರೋಲೈಟಿಕ್ ಅಸೋಸಿಯೇಷನ್). ಕ್ಲೇಪ್‍ಯಾರ್ನ್ ಎಂಬ ವಿಜ್ಞಾನಿ 1834ರಲ್ಲಿ ತಿಳಿಸಿದ್ದ ಬಾಷ್ಪಗುಪ್ತೋಷ್ಣ ಮತ್ತು ಒತ್ತಡಕ್ಕಿರುವ ಸಂಬಂಧದ ಸಮೀಕರಣವನ್ನು ಕ್ಲಾಷಿಯಸ್ 1850ರಲ್ಲಿ ಸೈದ್ಧಾಂತಿಕವಾಗಿ ಕಂಡುಹಿಡಿದ. ಈ ಸಮೀಕರಣವನ್ನು ಕ್ಲಾಷಿಯಸ್-ಕ್ಲೇಪಿರಾನ್ ಸಮೀಕರಣವೆಂದು ಕರೆಯುವರು.

ಕ್ಲಾಷಿಯಸ್ 1888 ನೆಯ ಇಸವಿ ಆಗಸ್ಟ್ 24ರಂದು ಬಾನ್ ನಗರದಲ್ಲಿ ಗತಿಸಿದ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Revival of Kinetic Theory by Clausius
  • O'Connor, John J.; Robertson, Edmund F., "ರುಡಾಲ್ಫ್‌ ಜೀಲಿಯಸ್ ಈಮ್ಯಾನ್ಯುಎಲ್ ಕ್ಲಾಷಿಯಸ್", MacTutor History of Mathematics archive, University of St Andrews
  •  Chisholm, Hugh, ed. (1911). "Clausius, Rudolf Julius Emmanuel" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)
  • EBSCO
  • Works by Rudolf Clausius at Project Gutenberg
  • Works by or about ರುಡಾಲ್ಫ್‌ ಜೀಲಿಯಸ್ ಈಮ್ಯಾನ್ಯುಎಲ್ ಕ್ಲಾಷಿಯಸ್ at Internet Archive

ಉಲ್ಲೇಖಗಳು

[ಬದಲಾಯಿಸಿ]