ರೀಟಾ ಫರಿಯಾ ಪೊವೆಲ್
Beauty pageant titleholder | |
![]() ೧೯೬೬ ರಲ್ಲಿ, ಫರಿಯಾರವರು | |
Born | ರೀಟಾ ಫರಿಯಾ 23 August 1943 ಮಾಟುಂಗಾ, ಬಾಂಬೆ, ಬ್ರಿಟಿಷ್ ಭಾರತ |
---|---|
Alma mater | |
Occupation |
|
Height | 1.73 m (5 ft 8 in) |
Title(s) |
|
Major competition(s) |
|
Spouse |
ಡೇವಿಡ್ ಪೊವೆಲ್ (ವಿವಾಹ:1971) |
Children | ೨ |
ರೀಟಾ ಫರಿಯಾ ಪೊವೆಲ್ (ಜನನ ೨೩ ಆಗಸ್ಟ್ ೧೯೪೩)[೧] ಇವರು ಭಾರತೀಯ ವೈದ್ಯೆ, ಮಾಜಿ ರೂಪದರ್ಶಿ ಮತ್ತು ಮಿಸ್ ವರ್ಲ್ಡ್ ೧೯೬೬ ಸ್ಪರ್ಧೆಯ ವಿಜೇತೆಯಾಗಿದ್ದು,[೨] ಅವರು ವೈದ್ಯಕೀಯ ವೈದ್ಯರಾಗಿ ಅರ್ಹತೆ ಪಡೆದ ಮೊದಲ ವಿಶ್ವ ಸುಂದರಿ ವಿಜೇತರಾಗಿದ್ದಾರೆ.[೩]
ಆರಂಭಿಕ ಜೀವನ
[ಬದಲಾಯಿಸಿ]ರೀಟಾ ಫರಿಯಾರವರು ೨೩ ಆಗಸ್ಟ್ ೧೯೪೩ ರಂದು ಮುಂಬೈನ (ಆಗಿನ ಬ್ರಿಟಿಷ್ ಭಾರತದ ಬಾಂಬೆ) ಮಾಟುಂಗಾ ಪ್ರದೇಶದಲ್ಲಿ ಜನಿಸಿದರು. ಅವರ ಪೋಷಕರು ಗೋವಾದ ಕ್ಯಾಥೊಲಿಕರು.[೪] ಅವರ ತಂದೆ ಜಾನ್ ಟಿವಿಮ್ ಗ್ರಾಮದವರು ಮತ್ತು ಅವರ ಪತ್ನಿ ಆಂಟೊನೆಟ್ ಗೋವಾದ ಸಾಂತಾ ಕ್ರೂಜ್ ಮೂಲದವರು. ಇಬ್ಬರೂ ಆಗ ಪೋರ್ಚುಗೀಸ್ ಗೋವಾದ ಭಾಗವಾಗಿದ್ದರು. ಫರಿಯಾರವರು ದಂಪತಿಗಳ ಹಿರಿಯ ಮಗಳು ಫಿಲೋಮಿನಾ ಎರಡನೇ ಮಗಳು. ಕುಟುಂಬವು ಮಧ್ಯಮ ವರ್ಗದವರಾಗಿದ್ದು, ಅವರ ತಂದೆ ಮಿನರಲ್ ವಾಟರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಬ್ಯೂಟಿ ಸಲೂನ್ ನಡೆಸುತ್ತಿದ್ದರು.[೫]
ಫರಿಯಾರವರು ೫ ಅಡಿ ೮ ಇಂಚು ಎತ್ತರವಾಗಿದ್ದು, ಭಾರತೀಯ ಹುಡುಗಿಗಿಂತ ಅಸಾಮಾನ್ಯವಾಗಿ ಎತ್ತರವಾಗಿದ್ದರು ಮತ್ತು ಶಾಲಾ ಮಕ್ಕಳು ಅವರನ್ನು 'ಅಮ್ಮ ಉದ್ದ ಕಾಲುಗಳು' ಎಂದು ಅಡ್ಡಹೆಸರಿಟ್ಟು ಅಪಹಾಸ್ಯ ಮಾಡುತ್ತಿದ್ದರು. ಆದಾಗ್ಯೂ, ಫರಿಯಾರವರು ಎತ್ತರದ ಮತ್ತು ತೆಳ್ಳಗಿನ ಮೈಕಟ್ಟು ಕ್ರೀಡೆಗಳಲ್ಲಿ ತಮ್ಮ ಅನುಕೂಲಕ್ಕೆ ಬಳಸಿಕೊಂಡರು. ತ್ರೋಬಾಲ್, ನೆಟ್ಬಾಲ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿದ್ದರು. ಹಾಕಿಯಲ್ಲಿ ಹ್ಯಾಟ್ರಿಕ್ ಗಳಿಸಿದ ಮುಖ್ಯಾಂಶವು ಮೊದಲ ವೃತ್ತಪತ್ರಿಕೆಯಲ್ಲಿ ಪ್ರಕಟವಾಗಿತ್ತು.[೪]
ವೃತ್ತಿಜೀವನ
[ಬದಲಾಯಿಸಿ]ಸ್ಪರ್ಧೆಗಳು
[ಬದಲಾಯಿಸಿ]ಬಾಂಬೆಯಲ್ಲಿ ಜನಿಸಿದ ಫರಿಯಾರವರು ಆ ಮೂಲಕ ಮಿಸ್ ಬಾಂಬೆ ಸ್ಪರ್ಧೆಯಲ್ಲಿ ಭಾಗವಹಿಸಿದರು ಹಾಗೂ ಅದರಲ್ಲಿ ಅವರು ಗೆದ್ದರು. ತರುವಾಯ ಅವರು ೧೯೬೬ ರಲ್ಲಿ, ಈವ್ಸ್ ವೀಕ್ಲಿ ಮಿಸ್ ಇಂಡಿಯಾ ಸ್ಪರ್ಧೆಯನ್ನು ಗೆದ್ದರು (೧೯೬೬ ರಲ್ಲಿ, ಯಾಸ್ಮಿನ್ ದಾಜಿ ಗೆದ್ದ ಫೆಮಿನಾ ಮಿಸ್ ಇಂಡಿಯಾದೊಂದಿಗೆ ಗೊಂದಲಕ್ಕೊಳಗಾಗಬಾರದು). ಇದು ೧೯೬೬ ರ ಮಿಸ್ ವರ್ಲ್ಡ್‌ನಲ್ಲಿ, ಭಾರತವನ್ನು ಪ್ರತಿನಿಧಿಸಲು ಅರ್ಹವಾಯಿತು.
೧೯೬೬ ರ ಮಿಸ್ ವರ್ಲ್ಡ್ ಸ್ಪರ್ಧೆಯ ಸಮಯದಲ್ಲಿ, ಸೀರೆ ಉಟ್ಟಿದ್ದಕ್ಕಾಗಿ ಅವರು 'ಬೆಸ್ಟ್ ಇನ್ ಸ್ವಿಮ್ ಸೂಟ್' ಮತ್ತು 'ಬೆಸ್ಟ್ ಇನ್ ಈವಿನಿಂಗ್ ವೇರ್' ಎಂಬ ಉಪ ಶೀರ್ಷಿಕೆಗಳನ್ನು ಗೆದ್ದರು. ಅವರು ಅಂತಿಮವಾಗಿ ಕಾರ್ಯಕ್ರಮದ ಕ್ಲೈಮ್ಯಾಕ್ಸ್‌ನಲ್ಲಿ ಇತರ ದೇಶಗಳ ೫೧ ಪ್ರತಿಸ್ಪರ್ಧಿ ಪ್ರತಿನಿಧಿಗಳನ್ನು ಸೋಲಿಸಿ ಮಿಸ್ ವರ್ಲ್ಡ್ ೧೯೬೬ ಕಿರೀಟವನ್ನು ಗೆದ್ದರು.[೬]
ಫರಿಯಾರವರು ೧೯೯೮ ರಲ್ಲಿ, ಫೆಮಿನಾ ಮಿಸ್ ಇಂಡಿಯಾದಲ್ಲಿ ತೀರ್ಪುಗಾರರಾಗಿದ್ದರು ಮತ್ತು ಕೆಲವು ಸಂದರ್ಭಗಳಲ್ಲಿ ಮಿಸ್ ವರ್ಲ್ಡ್ ಸ್ಪರ್ಧೆಯ ತೀರ್ಪುಗಾರರಾಗಿ ಮರಳಿದ್ದಾರೆ. ಲಂಡನ್‌ನಲ್ಲಿ ನಡೆದ ೧೯೭೬ ರ ಮಿಸ್ ವರ್ಲ್ಡ್ ಫೈನಲ್‌ನಲ್ಲಿ ಡೆಮಿಸ್ ರೂಸೋಸ್ ಅವರೊಂದಿಗೆ ಅವರು ತೀರ್ಪುಗಾರರಾಗಿದ್ದರು. ಅಲ್ಲಿ ಸಿಂಡಿ ಬ್ರೇಕ್ಸ್ಪಿಯರ್ ವಿಶ್ವ ಸುಂದರಿ ಕಿರೀಟವನ್ನು ಪಡೆದರು.
ವೈದ್ಯಕೀಯ ವೃತ್ತಿಜೀವನ
[ಬದಲಾಯಿಸಿ]ವಿಶ್ವ ಸುಂದರಿಯಾಗಿ ಒಂದು ವರ್ಷದ ಅಧಿಕಾರಾವಧಿಯ ನಂತರ, ಅವರು ಚಲನಚಿತ್ರಗಳಲ್ಲಿ ನಟಿಸಲು ವಿವಿಧ ಅವಕಾಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ಫರಿಯಾ ಲಾಭದಾಯಕ ಮಾಡೆಲಿಂಗ್ ಮತ್ತು ನಟನಾ ಒಪ್ಪಂದಗಳನ್ನು ನಿರಾಕರಿಸಿದರು ಮತ್ತು ಬದಲಿಗೆ ವೈದ್ಯಕೀಯ ಅಧ್ಯಯನದ ಮೇಲೆ ಕೇಂದ್ರೀಕರಿಸಿದರು. ಅವರು ಗ್ರಾಂಟ್ ಮೆಡಿಕಲ್ ಕಾಲೇಜು ಮತ್ತು ಸರ್ ಜೆಜೆ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನಲ್ಲಿ ವಿದ್ಯಾರ್ಥಿಯಾಗಿದ್ದರು. ಅಲ್ಲಿ, ಅವರು ಎಂ.ಬಿ.ಬಿ.ಎಸ್. ಪದವಿಯನ್ನು ಪೂರ್ಣಗೊಳಿಸಿದರು. ನಂತರ, ಅವರು ಲಂಡನ್‌ನ ಕಿಂಗ್ಸ್ ಕಾಲೇಜು ಆಸ್ಪತ್ರೆಯಲ್ಲಿ ಅಧ್ಯಯನ ಮಾಡಿದರು. ಅವರು ೧೯೭೧ ರಲ್ಲಿ, ತಮ್ಮ ಮಾರ್ಗದರ್ಶಕ ಡೇವಿಡ್ ಪೊವೆಲ್ ಅವರನ್ನು ವಿವಾಹವಾದರು ಮತ್ತು ೧೯೭೩ ರಲ್ಲಿ, ದಂಪತಿಗಳು ಐರ್ಲೆಂಡ್‌ನ ಡಬ್ಲಿನ್‌ಗೆ ಸ್ಥಳಾಂತರಗೊಂಡರು. ಅಲ್ಲಿ, ಅವರು ತಮ್ಮ ವೈದ್ಯಕೀಯ ಅಭ್ಯಾಸವನ್ನು ಪ್ರಾರಂಭಿಸಿದರು.[೭]
ವೈಯಕ್ತಿಕ ಜೀವನ
[ಬದಲಾಯಿಸಿ]ಫರಿಯಾರವರು ತಮ್ಮ ಪತಿ, ಅಂತಃಸ್ರಾವಶಾಸ್ತ್ರಜ್ಞ ಡೇವಿಡ್ ಪೊವೆಲ್ ಅವರೊಂದಿಗೆ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ವಾಸಿಸುತ್ತಿದ್ದಾರೆ. ದಂಪತಿಗಳು ೧೯೭೧ ರಲ್ಲಿ ವಿವಾಹವಾದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.[೮]
ಉಲ್ಲೇಖಗಳು
[ಬದಲಾಯಿಸಿ]- ↑ "Makers of India - Women of Fame". Indian Mirror. Retrieved 6 May 2018.
- ↑ Goa Miscellania
- ↑ "Not Just a Pretty Face: Reita Faria, the first Asian to win Miss World and even qualified as a physician". Indian Express. 18 November 2018.
- ↑ ೪.೦ ೪.೧ Monteiro, Lisa (2016-12-04). "Reita Faria walks down memory lane in Goa". The Times of India. ISSN 0971-8257. Retrieved 2023-07-31.
- ↑ Bose, Shohini; Sanpui, Rahul (2021-11-17). "She The First | Reita Faria: Won Miss World, Rejected Film Offers To Be a Doctor". TheQuint (in ಇಂಗ್ಲಿಷ್). Retrieved 2023-07-31.
- ↑ "51 Years Before Manushi, Reita Faria Was India's First Miss World". The Quint. 18 November 2018.
- ↑ "Lost and found: Thirty newsmakers from the pages of Indian history and where they are now: Cover Story". India Today. 3 July 2006. Retrieved 2013-12-16.
- ↑ "The first Indian to win the Miss World title". Rediff News. 12 December 2006. Retrieved 26 June 2010.