ರಿಚರ್ಡ್ ಚರ್ಚ್

ರಿಚರ್ಡ್ ಚರ್ಚ್ (1893-1972) ಒಬ್ಬ ಇಂಗ್ಲಿಷ್ ಕವಿ ಮತ್ತು ಕಾದಂಬರಿಕಾರ. ವಿಮರ್ಶಕ, ಪ್ರವಾಸ ಲೇಖಕ ಹಾಗೂ ಮಕ್ಕಳ ಕಥೆಗಾರ ಎಂದೂ ಹೆಸರಾಗಿದ್ದಾನೆ.
ಜೀವನ
[ಬದಲಾಯಿಸಿ]ಲಂಡನಿನಲ್ಲಿ ಹುಟ್ಟಿದ ಈತ ಡಲ್ವಿಚ್ ಹ್ಯಾಮಲೆಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ.[೧] ಈತನು ಥಾಮಸ್ ಜಾನ್ ಚರ್ಚ್ ಮತ್ತು ಲ್ಯಾವಿನಾ ಆನಿ ಆರ್ಟನ್ ಚರ್ಚ್‌ರ ಎರಡನೆಯ ಮಗನಾಗಿದ್ದನು.[೨] ತನ್ನ 16ನೆಯ ವಯಸ್ಸಿನಲ್ಲಿ ಲೋಕಸೇವಾ ಇಲಾಖೆಗೆ ಸೇರಿ 40ನೆಯ ವಯಸ್ಸಿನವರೆಗೂ ಸೇವೆ ಸಲ್ಲಿಸಿದ.
ಕೃತಿಗಳು
[ಬದಲಾಯಿಸಿ]ದ ಫ್ಲಡ್ ಆಫ್ ಲೈಫ್ (1917) ಈತನ ಮೊದಲ ಕವನ ಸಂಗ್ರಹ. ಅನಂತರ ಈತನ ಹತ್ತು ಕವನ ಸಂಗ್ರಹಗಳು ಹೊರಬಂದವು. ಅವುಗಳಲ್ಲಿ ದ ಗ್ಲಾನ್ಸ್ ಬ್ಯಾಕ್‌ವರ್ಡ್ (1930), ನ್ಯೂಸ್ ಫ್ರಂ ದ ಮೌಂಟನ್ (1934), ದ ಸಾಲಿಟರಿ ಮ್ಯಾನ್ (1941) ಪ್ರಮುಖವಾದವು. 1948ರಲ್ಲಿ ಈತನ ಸಮಗ್ರ ಕವನಗಳ ಸಂಗ್ರಹ ಪ್ರಕಟಗೊಂಡಿತು. ಅನಂತರ ದ ಪ್ರಾಡಿಗಲ್ (1953), ದಿ ಇನ್‌ಹೆರಿಟರ್ಸ್ (1957) ಪ್ರಕಟಗೊಂಡವು.
ಆಲಿವರ್ಸ್ ಡಾಟರ್ (1930), ಹೈ ಸಮರ್ (1931), ದ ಪ್ರಾಡಿಗಲ್ ಫಾದರ್ (1933), ದಿ ಆ್ಯಪಲ್ ಆಫ್ ಕನ್‌ಕಾರ್ಡ್ (1935), ದ ಪೋರ್ಚ್ (1937), ದ ಸ್ಟ್ರಾಂಗ್‍ಹೋಲ್ಡ್ (1939), ದ ರೂಮ್ ವಿದಿನ್ (1940), ದ ಸ್ಯಾಂಪ್ಲರ್ (1942), ಗ್ರೀನ್ ಟೈಡ್ (1944),[೩] ದ ಡೇಂಜರಸ್ ಇಯರ್ಸ್ (1956)-ಇವು ಈತನ ಪ್ರಮುಖ ಕಾದಂಬರಿಗಳು.
ಮೇರಿ ಷೆಲ್ಲಿ (1928), ಎಯ್ಟ್ ಫಾರ್ ಇಮ್ಮೊರ್ಟಾಲಿಟಿ (1941), ಬ್ರಿಟಿಷ್ ಆಥರ್ಸ್ (1943), ದ ಗ್ರೋತ್ ಆಫ್ ದಿ ಇಂಗ್ಲಿಷ್ ನಾವೆಲ್ (1950)-ಇವು ಈತನ ವಿಮರ್ಶಾತ್ಮಕ ಗ್ರಂಥಗಳು. 1945ರಲ್ಲಿ ಎಂ.ಎಂ. ಬೊಜ್‌ಮನ್ನನ ಜೊತೆಗೂಡಿ ಪೋಯೆಮ್ಸ್ ಆಫ್ ಅವರ್ ಟೈಮ್ ಎಂಬ ಗ್ರಂಥವನ್ನು ಸಂಪಾದಿಸಿದ. 1955ರಲ್ಲಿ ಓವರ್ ದ ಬ್ರಿಜ್ ಎಂಬ ಜೀವನಚರಿತ್ರೆಯನ್ನು ಬರೆದು ಪ್ರಕಟಿಸಿದ. ಇದು ಸಂಡೆ ಟೈಮ್ಸ್‌ನ ಸಾಹಿತ್ಯಿಕ ಬಹುಮಾನ ಗಳಿಸಿತು. ಇದರ ಉತ್ತರಾರ್ಧ ದ ಗೋಲ್ಡನ್ ಸಾವರಿನ್ 1957ರಲ್ಲಿ ಪ್ರಕಟಗೊಂಡಿತು. ಈತನ ಗದ್ಯ ಮತ್ತು ಪದ್ಯಗಳಲ್ಲಿ ಜನಸಾಮಾನ್ಯರ ಜೀವನಾನುಭವಗಳ ಯಥಾಚಿತ್ರವನ್ನು ಕಾಣಬಹುದಾಗಿದೆ. 1957ರಲ್ಲಿ ಈತನಿಗೆ ಸಿ.ಬಿ.ಇ. ಪ್ರಶಸ್ತಿ ಬಂತು.
ಉಲ್ಲೇಖಗಳು
[ಬದಲಾಯಿಸಿ]- ↑ "Richard Church CBE (1893-1972) – Author and Poet". Goudhurst & Kilndown Local History Society.
- ↑ "Richard Church biography". Bookrags.
- ↑ Illustrated by C. F. Tunnicliffe
ಹೊರಗಿನ ಕೊಂಡಿಗಳು
[ಬದಲಾಯಿಸಿ]- Richard Church Papers at the John Rylands Library
- Richard Church Collection at the Harry Ransom Center
- Richard Church bibliography
