ವಿಷಯಕ್ಕೆ ಹೋಗು

ರಿಚರ್ಡ್ ಕ್ರೇಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಿಚರ್ಡ್ ಕ್ರೇಷಾ
ಜನನc. 1612–1613
London, England
ನಿಧನ(1649-08-21)21 ಆಗಸ್ಟ್ 1649ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨". (aged 36)
Loreto, March of Ancona, Papal States
ಉದ್ಯೋಗpoet, teacher
ಶಿಕ್ಷಣPembroke College, Cambridge
ಸಾಹಿತ್ಯ ಚಳವಳಿMetaphysical poets
ಪ್ರಮುಖ ಕೃತಿಗಳುEpigrammaticum Sacrorum Liber (1634)
Steps to the Temple (1646)
Delights of the Muses (1648)
Carmen Deo Nostro (1652)

ರಿಚರ್ಡ್ ಕ್ರೇಷಾ 1613-1649. ಆಂಗ್ಲಕವಿ. ಪಾದ್ರಿಯ ಮಗ.

ಬಾಲ್ಯ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

ಹುಟ್ಟಿದ್ದು ಲಂಡನಿನಲ್ಲಿ. ಚಾರ್‍ಟರ್ ಹೌಸ್ ಮತ್ತು ಕೇಂಬ್ರಿಜ್‍ನಲ್ಲಿ ವ್ಯಾಸಂಗ ನಡೆಸಿದ ಈತ ಪೀಟರ್ ಹೌಸ್‍ನಲ್ಲಿ ಫೆಲೋ ಆದ.

ಅಲ್ಲಿಯ ಧಾರ್ಮಿಕ ಆಚರಣೆ ಮತ್ತು ಕರಾರುಗಳನ್ನು ಒಪ್ಪದೇ ಇದ್ದುದರಿಂದ ಅಲ್ಲಿಂದ ಉಚ್ಛಾಟನೆಗೊಂಡ ಅನಂತರ ಫ್ರಾನ್ಸಿಗೆ ಹೋಗಿ ರೋಮನ್ ಕೆಥೊಲಿಕ್ ಪಂಗಡಕ್ಕೆ ಸೇರಿದ. ಅಲ್ಲಿ ಅನೇಕ ಕಷ್ಟನಷ್ಟಗಳಿಗೆ ಸಿಲುಕಿ ಹೊಟ್ಟೆಗೆ ಅನ್ನವಿಲ್ಲದೆ ಉಪವಾಸ ಮಾಡಿದ. ಆದರೆ ತನ್ನ ಸ್ನೇಹಿತ ಏಬ್ರಹಾಂ ಕೌಲಿಯ ಸಹಾಯದಿಂದ ರಾಣಿ ಹೆನ್ರಿಯಟ ಮರಿಯಳ ಪರಿಚಯ ಮಾಡಿಕೊಂಡು ಅವಳಿಂದ ಸಕಾಲಿಕ ಸಹಾಯ ಪಡೆದು ಚೇತರಿಸಿಕೊಂಡ. ಈತ ಮೊದಮೊದಲು ಬರೆದ ಲ್ಯಾಟಿನ್ ಮತ್ತು ಗ್ರೀಕ್ ಕವನಗಳು 1634ರಲ್ಲಿ ಪ್ರಕಟಗೊಂಡವು. ಈತನ ಅತ್ಯುತ್ತಮ ಗ್ರಂಥವಾದ ಸ್ಟೆಪ್ಸ್ ಟು ದಿ ಟೆಂಪಲ್ (1646) ಎಂಬ ಕವನ ಸಂಕಲನದಲ್ಲಿ ಧಾರ್ಮಿಕ ಗೀತೆಗಳಿವೆ. ಕವಿ ಇಲ್ಲಿ ಹರ್ಬರ್ಟನ ಶೈಲಿಯನ್ನು ಅನುಕರಿಸಿದ್ದಾನೆ. ಈತ ಶ್ರೇಷ್ಠವಾದ ಧರ್ಮ ಬೋಧಕ ಕವಿ ಮತ್ತು ವಿದ್ವಾಂಸನಾಗಿದ್ದ. ಈತನ ಜ್ಞಾಪಕಾರ್ಥವಾಗಿ ಗೆಳೆಯ ಕೌಲಿ ಒಂದು ಭಾವಗೀತೆಯನ್ನು ಬರೆದಿದ್ದಾನೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: