ರಾಷ್ಟ್ರೀಯ ಅಂಕಿಅಂಶ ದಿನ
ರಾಷ್ಟ್ರೀಯ ಅಂಕಿಅಂಶ (ಸಂಖ್ಯಾಶಾಸ್ತ್ರ) ದಿನ | |
---|---|
ಮಹತ್ವ | ಪ್ರೊ. ಪ್ರಸಂತ ಚಂದ್ರ ಮಹಾಲನೋಬಿಸ್ ಹುಟ್ಟಿದ ದಿನ |
ಆರಂಭ | ೨೦೦೭ |
ಆವರ್ತನ | ವಾರ್ಷಿಕ |
First time | ೨೦೦೭ |
Last time | ೨೦೨೪ |
Started by | ಭಾರತ ಸರ್ಕಾರ |
ಸಂಬಂಧಪಟ್ಟ ಹಬ್ಬಗಳು | ಸಂಖ್ಯಾಶಾಸ್ತ್ರ |
ರಾಷ್ಟ್ರೀಯ ಅಂಕಿಅಂಶ (ಸಂಖ್ಯಾಶಾಸ್ತ್ರ) ದಿನ
[ಬದಲಾಯಿಸಿ]ಭಾರತದಲ್ಲಿ ಪ್ರತಿವರ್ಷ ಜೂನ್ ತಿಂಗಳ ೨೯ ನೇ ತಾರೀಖನ್ನು "ರಾಷ್ಟ್ರೀಯ ಅಂಕಿಅಂಶ ದಿನ"ವನ್ನಾಗಿ ಆಚರಿಸಲಾಗುತ್ತದೆ.
ಭಾರತದ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞ ಮತ್ತು ಆರ್ಥಿಕ ಯೋಜಕ ಪ್ರೊ. (ದಿವಂಗತ) ಪ್ರಸಂತ ಚಂದ್ರ ಮಹಾಲನೋಬಿಸ್ ಅವರ ಜನ್ಮದಿನದ ಅಂಗವಾಗಿ ಈ ಆಚರಣೆ ನಡೆಯುತ್ತದೆ. ೨೦೦೭ರಲ್ಲಿ ಭಾರತ ಸರ್ಕಾರವು ಈ ದಿನವನ್ನು ರಾಷ್ಟ್ರಮಟ್ಟದಲ್ಲಿ ವಿಶೇಷ ದಿನವೆಂದು ಘೋಷಿಸಿ ಜೂನ ೦೫, ೨೦೦೭ರ ಗೆಜೆಟ್ ನಲ್ಲಿ ಪ್ರಕಟಿಸಿದೆ[೧]. ಮಹಾಲನೋಬಿಸ್ ಅವರು ಭಾರತದಲ್ಲಿ ಸಂಖ್ಯಾಶಾಸ್ತ್ರವನ್ನು ಆಧುನಿಕ ವಿಜ್ಞಾನವಾಗಿ ರೂಪಿಸುವಲ್ಲಿ ಹಾಗೂ ಆರ್ಥಿಕ ಯೋಜನೆಗೆ ಅಂಕಿಅಂಶಗಳ ಬಳಕೆಯನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಉದ್ದೇಶ
[ಬದಲಾಯಿಸಿ]ಈ ದಿನವನ್ನು ಆಚರಿಸುವ ಉದ್ದೇಶವೆಂದರೆ, ದೇಶದ ಅಭಿವೃದ್ಧಿಗಾಗಿ ಸಾಮಾಜಿಕ ಮತ್ತು ಆರ್ಥಿಕ ನೀತಿ ನಿರೂಪಣೆಯಲ್ಲಿ ಅಂಕಿಅಂಶಗಳ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ತಿಳಿಸುವುದು. ಪ್ರತಿ ವರ್ಷ ಈ ದಿನವನ್ನು ಸಮಕಾಲೀನ ರಾಷ್ಟ್ರೀಯ ಪ್ರಾಮುಖ್ಯತೆಯ ವಿಷಯಗಳ ಶೀರ್ಷಿಕೆಯ ಅಡಿಯಲ್ಲಿ ಆಚರಿಸಲಾಗುತ್ತದೆ.
ಅಂಕಿಅಂಶಗಳ ದಿನವು ದೇಶದ ಆರ್ಥಿಕ-ಸಾಮಾಜಿಕ ಅಭಿವೃದ್ಧಿಗೆ ಡೇಟಾ ಮತ್ತು ಸಂಖ್ಯಾಶಾಸ್ತ್ರದ ಮಹತ್ವವನ್ನು ಮನವರಿಕೆ ಮಾಡಿಸಲು ಹಾಗೂ ಪ್ರೊ. ಮಹಾಲನೋಬಿಸ್ ಅವರ ಸಂಶೋಧನೆ ಹಾಗೂ ಕೊಡುಗೆಗಳಿಗೆ ಗೌರವ ಸಲ್ಲಿಸಲು ಒಂದು ವೇದಿಕೆಯಾಗಿದೆ.
ವಾರ್ಷಿಕ ಆಚರಣೆಗಳು
[ಬದಲಾಯಿಸಿ]೨೦೨೪
[ಬದಲಾಯಿಸಿ]೨೦೨೪ ರ ಅಂಕಿಅಂಶಗಳ ದಿನದ ಶೀರ್ಷಿಕೆ "ನಿರ್ಧಾರ ತೆಗೆದುಕೊಳ್ಳುವಲ್ಲಿ ಡೇಟಾದ ಬಳಕೆ" ಆಗಿತ್ತು.[೨] ಮಾಹಿತಿ ಆಧಾರಿತ ನಿರ್ಧಾರ ತೆಗೆದುಕೊಳ್ಳುವ ಕ್ರಮವು ಎಲ್ಲಾ ಕ್ಷೇತ್ರಗಳಲ್ಲಿ ನಿರ್ಧಾರಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಅಂಶವಾಗಿದೆ. ಅಧಿಕೃತ ಅಂಕಿಅಂಶಗಳ ಮೂಲಕ ಪುರಾವೆ ಆಧಾರಿತ ನೀತಿಗಳನ್ನು ರೂಪಿಸುವತ್ತ ಗಮನ ಹರಿಸಲಾಗಿದೆ.
ವಿಶ್ವ ಬ್ಯಾಂಕ್‌ನ ಜಾಗತಿಕ ನಿರ್ದೇಶಕ ಶ್ರೀ ಲೂಯಿಸ್ ಫೆಲಿಪೆ ಲೋಪೆಜ್-ಕಾಲ್ವಾ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.[೨]
ಅಂಕಿಅಂಶಗಳ ಲಭ್ಯತೆಯನ್ನು ಸುಲಭಗೊಳಿಸಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MOSPI) ಇ-ಸಾಂಖ್ಯಿಕಿ ಎಂಬ ಹೊಸ ದತ್ತಾಂಶ ಜಾಲತಾಣ (ಡೇಟಾ ಪೋರ್ಟಲ್) ವನ್ನು ಪ್ರಾರಂಭಿಸಿದೆ. [೨]
ಈ ಪೋರ್ಟಲ್ ಎರಡು ವಿಭಾಗಗಳನ್ನು ಒಳಗೊಂಡಿದೆ:
- ಡೇಟಾ ಕ್ಯಾಟಲಾಗ್ – ವಿವಿಧ ಅಂಕಿಅಂಶ ಮೂಲಗಳನ್ನು ಒಂದು ಸ್ಥಳದಲ್ಲಿ ಲಭ್ಯವಿರುವಂತೆ ಮಾಡುತ್ತದೆ.
- ಮ್ಯಾಕ್ರೋ ಸೂಚಕಗಳು – ಸಮಯ ಸರಣಿಯ ಅಂಕಿಅಂಶಗಳನ್ನು ಫಿಲ್ಟರ್, ದೃಶ್ಯೀಕರಣ ಮತ್ತು API ಮೂಲಕ ಡೌನ್ಲೋಡ್ ಮಾಡುವ ಸೌಲಭ್ಯ ಒದಗಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Statistics day". Ministry of Statistics & Programme Implementation. Retrieved 03/06/2025.
{{cite web}}
: Check date values in:|access-date=
(help)CS1 maint: url-status (link) - ↑ ೨.೦ ೨.೧ ೨.೨ "18 ನೇ "ದತ್ತಾಂಶ ದಿನ" ವನ್ನು ಇಂದು "ನಿರ್ಧಾರ ತೆಗೆದುಕೊಳ್ಳುವಲ್ಲಿ ದತ್ತಾಂಶ (ಡೇಟಾ) ದ ಬಳಕೆ" ಎಂಬ ವಿಷಯದೊಂದಿಗೆ ಆಚರಿಸಲಾಯಿತು". Press Information Bureau (PIB), GOI. 29 JUN 2024. Retrieved 03/06/2025.
{{cite news}}
: Check date values in:|access-date=
and|date=
(help)CS1 maint: url-status (link)