ರಾಮೇಶ್ವರಿ ವರ್ಮಾ
ಪ್ರೊ. ರಾಮೇಶ್ವರಿ ವರ್ಮ | |
|---|---|
| ಜನನ | October 21, 1936 ಮೈಸೂರು, ಕರ್ನಾಟಕ, ಭಾರತ |
| ವಿದ್ಯಾಭ್ಯಾಸ | ಬಿಎ (ಅರ್ಥಶಾಸ್ತ್ರ), ಎಂಎ (ಅರ್ಥಶಾಸ್ತ್ರ), ಬಿಎಡ್ |
| ಶಿಕ್ಷಣ | ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾಲಯ |
| ವೃತ್ತಿ | ರಂಗಭೂಮಿ ಕಲಾವಿದೆ, ಚಲನಚಿತ್ರ ನಟಿ, ಶಿಕ್ಷಕಿ, ನಿರ್ದೇಶಕಿ |
| ಸಕ್ರಿಯರಾಗಿದ್ದ ವರ್ಷಗಳು | 1950–ಇಂದಿಗೂ |
| ಉದ್ಯೋಗದಾತ(ರು) | ಸಮತಂತೋ |
| ಹೆಸರುವಾಸಿ | ರಂಗಭೂಮಿ, ಮಹಿಳಾ ಅಭಿವೃದ್ಧಿ ಅಧ್ಯಯನ, ಸಂವೇದನಾತ್ಮಕ ಅಭಿನಯ |
| ಸಂಗಾತಿ | ಪ್ರೊ. ಬಾಲಗೋಪಾಲ ವರ್ಮ (1968-1999) |
| ಮಕ್ಕಳು | ಸೌಮ್ಯ ವರ್ಮ (ಪುತ್ರಿ) |
| ಪೋಷಕರು |
|
| ಕುಟುಂಬ | ಪಿ.ಆರ್. ಬ್ರಹ್ಮಾನಂದ (ಅಣ್ಣ), ಪಾಲಹಳ್ಳಿ ವಿಶ್ವನಾಥ್ (ತಮ್ಮ) |
ರಾಮೇಶ್ವರಿ ವರ್ಮ ("ರಾಮಿ") ಕನ್ನಡ ರಂಗಭೂಮಿ ಹಾಗೂ ಸಿನಿಮಾರಂಗದ ಪ್ರಮುಖ ಹಿರಿಯ ಕಲಾವಿದೆ. ಚಿಗುರಿದ ಕನಸು, ನಾಯಿ ನೆರಳು, ಬೆಟ್ಟದ ಜೀವ ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಮಾಡಿದ ಪಾತ್ರಗಳು ಪ್ರೇಕ್ಷಕರ ಮನಸೆಳೆದಿವೆ. ಶಿಕ್ಷಣ, ಸಾಹಿತ್ಯ, ಮಹಿಳಾ ಅಭಿವೃದ್ಧಿ, ಹಾಗೂ ಸಮಾಜದ ಕುರಿತಂತೆ ತಮ್ಮ ಕ್ರಾಂತಿಕಾರಕ ಚಿಂತನೆ ಮತ್ತು ಅಭಿವ್ಯಕ್ತಿಗಳಿಗೆ ಹೆಸರಾದವರು.[೧][೨]
ಕೌಟುಂಬಿಕ ಹಿನ್ನಲೆ
[ಬದಲಾಯಿಸಿ]ರಾಮೇಶ್ವರಿ ವರ್ಮ ಅವರ ಕುಟುಂಬ ಕನ್ನಡ ಪತ್ರಿಕೋದ್ಯಮ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪ್ರಮುಖವಾದ ಸ್ಥಾನ ಹೊಂದಿದೆ.[೩] ಅವರ ತಂದೆ ಪಿ.ಆರ್.ರಾಮಯ್ಯ, 1928ರಲ್ಲಿ ಸ್ಥಾಪಿತವಾದ ತಾಯಿನಾಡು ಪತ್ರಿಕೆಯ ಸ್ಥಾಪಕ-ಸಂಪಾದಕರು ಮತ್ತು ಮಾಜಿ ವಿಧಾನಸಭಾ ಸದಸ್ಯರು. ಅವರ ತಾಯಿ ಸಮಾಜಸೇವಕಿ ಮತ್ತು ಬೆಂಗಳೂರಿನ ಉಪ-ಮಹಾಪೌರೂ ಆಗಿದ್ದ ಪಿ.ಆರ್.ಜಯಲಕ್ಷಮ್ಮ.[೪][೫]
ರಾಮೇಶ್ವರಿಯವರಿಗೆ ಮೂವರು ಸಹೋದರರು: ಅಣ್ಣ ಪಿ.ಆರ್.ಬ್ರಹ್ಮಾನಂದ (ಅರ್ಥಶಾಸ್ತ್ರಜ್ಞ), ತಮ್ಮ ಪಾಳಹಳ್ಳಿ ವಿಶ್ವನಾಥ[೬] (ವಿಜ್ಞಾನ ಸಂವಹನಕಾರ ಮತ್ತು ಅಂಕಣಕಾರ) ಮತ್ತು ರಾಮಸ್ವಾಮಿ.
ಶಿಕ್ಷಣ
[ಬದಲಾಯಿಸಿ]ರಾಮೇಶ್ವರಿ ಅವರು ಬೆಂಗಳೂರಿನ ಚಾಮರಾಜಪೇಟೆಯ ಸೈಂಟ್ ಥೆರೇಸಾ ಹೆಣ್ಣುಮಕ್ಕಳ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಎಲ್ಫಿನ್ ಸ್ಟನ್ ಕಾಲೇಜ್, ಮುಂಬಯಿಯಲ್ಲಿ ಬಿಎ. ೧೯೫೭ರಲ್ಲಿ ಬಿಎಡ್ ಪದವಿಯನ್ನೂ ಪೂರ್ಣಗೊಳಿಸಿದರು. ೧೯೬೩ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಎಂಎ (ಅರ್ಥಶಾಸ್ತ್ರ) ಪದವಿಯನ್ನು ಪಡೆದರು.
ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ, ಅರ್ಥಶಾಸ್ತ್ರವನ್ನು ಮುಖ್ಯ ವಿಷಯವಾಗಿ ಆಯ್ಕೆ ಮಾಡಿಕೊಂಡು ಉನ್ನತ ಶಿಕ್ಷಣ ಮುಂದುವರಿಸಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]೧೯೪೭ರಲ್ಲಿ ಹದಿಮೂರು ವರ್ಷಕ್ಕೆ, ಮೆಟ್ರಿಕ್ ಪಾಸಾಗುತ್ತಿದ್ದಂತೆಯೇ ಮೊದಲನೇ ವಿವಾಹವಾಗಿ, ೧೯೬೬ರಲ್ಲಿ ಬೇರೆಯಾದರು[೩] ೧೯೬೮ರಲ್ಲಿ ಪ್ರೊ. ಬಾಲಗೋಪಾಲವರ್ಮರನ್ನು ವಿವಾಹವಾದರು.[೭]
ಇವರ ಮಗಳು, ಸೌಮ್ಯ ವರ್ಮ, ಸಿಂಗಾಪೂರ್‍ನ ಲಸಾಲ್(LASALLE) ಕಲಾಕಾಲೇಜಿನಲ್ಲಿ ರಂಗಭೂಮಿ ಶಿಕ್ಷಕಿಯಾಗಿದ್ದಾರೆ.[೮]
ವೃತ್ತಿ ಜೀವನ
[ಬದಲಾಯಿಸಿ]ಶಿಕ್ಷಕಿ ಮತ್ತು ನಿರ್ದೇಶಕಿ
[ಬದಲಾಯಿಸಿ]ಬಿಎಡ್ ಪೂರ್ಣಗೊಳಿಸಿದ ನಂತರ ಶಿಕ್ಷಕಿಯಾಗಿ (ಮೊಡೆಲ್ ಹೈಸ್ಕೂಲ್, ಚಾಮರಾಜಪೇಟೆ). ನಂತರ ಮುಖ್ಯೋಪಾಧ್ಯಾಯನಿಯಾಗಿ ಹಲವಾರು ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ‘‘ಮಹಿಳಾ ಅಧ್ಯಯನ ಕೇಂದ್ರ’’ದ ನಿರ್ದೇಶಕಿಯಾಗಿದ್ದರು. [೯]
ರಂಗಭೂಮಿ
[ಬದಲಾಯಿಸಿ]- ಆಕಾಶವಾಣಿ ಕಲಾವಿದರು (೧೯೬೪)
- ನಗರದ ಟೌನ್ ಹಾಲ್‌ನಲ್ಲಿ ಅವರು ಅಭಿನಯಿಸಿದ ಪ್ರಥಮ ನಾಟಕ ೧೯೬೦ರಲ್ಲಿ ಪ್ರದರ್ಶನಗೊಂಡಿತು. ಅಂದಿನಿಂದ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ.
- ಸಮತೆಂತೋ (ಸರಸ್ವತಿಪುರದ ಮಧ್ಯದ ತೆಂಗಿನ ತೋಟ) ರಂಗಸಂಸ್ಥೆಯ ಸ್ಥಾಪಕ ಸದಸ್ಯೆ - ೧೯೬೭[೧೦][೧೧]
- ಬಿ. ವಿ. ಕಾರಂತ್, ಪ್ರಸನ್ನ, ಸತ್ಯು, ಪರ್ವತವಾಣಿ, ನ. ರತ್ನ (ನಟೇಶ್ ರತ್ನ), ಸಿಂಧುವಳ್ಳಿ ಅನಂತಮೂರ್ತಿ, ಉಮೇಶ್ ಮುಂತಾದವರೊಂದಿಗೆ ರಂಗಭೂಮಿ ಕೆಲಸ[೧೨]
- ರುಡಾಲಿ[೧೩], ಮೂಕಜ್ಜಿಯ ಕನಸುಗಳು, ಸೊನಾಟ, ಮೀಡಿಯಾ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಚಲನಚಿತ್ರ
[ಬದಲಾಯಿಸಿ]ಅವರು ಅಭಿನಯಿಸಿರುವ ಪ್ರಮುಖ ಚಿತ್ರಗಳು:
- ಚಿಗುರಿದ ಕನಸು
- ಬೆಟ್ಟದ ಜೀವ[೧೪]
- ಮೂಕಜ್ಜಿಯ ಕನಸುಗಳು
- ನಾಯಿ ನೆರಳು
ಗೌರವಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೨೦೧೬ [೧೨]
- ನಾಟಕ ಅಕಾಡೆಮಿಯ ಪ್ರಶಸ್ತಿ - ೧೯೯೭
- ದಸರಾ ರಂಗ ಪ್ರಶಸ್ತಿ - ೨೦೨೧[೧೫]
- ನಾಟಕ ಅಕಾಡೆಮಿಯ ಪುಸ್ತಕ ಪ್ರಶಸ್ತಿ - ೨೦೨೩ (ಬಿಟ್ಟೇನೆಂದರು ಬಿಡದು - ಈ ಮಾಯೆ)
- ಗಾನಭಾರತಿ ಗೌರವ
- ರಂಗಾಯಣ ದಸರಾ ರಂಗ ಗೌರವ
ಪ್ರಕಟಣೆಗಳು ಮತ್ತು ಸಾಕ್ಷ್ಯಚಿತ್ರ
[ಬದಲಾಯಿಸಿ]- ಅಂತರಂಗ ಅನುಸಂಧಾನ - ಡಾ. ಹೇಮಲತಾ ಎಚ್.ಎಂ. ಮತ್ತು ಡಾ. ಚಂದ್ರಮತಿ ಸೋಂದಾ[೧೬]
- ಪರಿವರ್ತನ ರಂಗಸಮಾಜ ನಿರ್ಮಿಸಿದ ಸಾಕ್ಷ್ಯಚಿತ್ರ
- ಬಿಟ್ಟೇನೆಂದರು ಬಿಡದು - ಈ ಮಾಯೆ ರಂಗಭೂಮಿಯ ನನ್ನ ಅಂಟು-ನಂಟು - ರಾಮೇಶ್ವರಿ ವರ್ಮ (ಸಂಪಾದಕರು: ದೀಪಾ ಮೈಸೂರು) [೧೭][೧೮]
- ಗುಜರಾತ್ ಹಿಂಸಾಕಾಂಡದ ವಿರುದ್ಧ ಮಹಿಳೆಯರು - ಪ್ರತಿಭಟನೆ[೧೯]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ತಾಂತ್ರಿಕವಾಗಿ ಹೊಸ ಪ್ರಯತ್ನವಿಲ್ಲದ ರಂಗಭೂಮಿ". Vijay Karnataka. Retrieved 2025-11-28.
- ↑ ವಾರ್ತಾಭಾರತಿ (2020-03-01). "ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಬದಲಾವಣೆ ಸಾಧ್ಯ: ಹಿರಿಯ ನಟಿ ರಾಮೇಶ್ವರಿ ವರ್ಮ". www.varthabharati.in. Retrieved 2025-11-28.
- ↑ ೩.೦ ೩.೧ ವರದಿ, ಕನ್ನಡಪ್ರೆಸ್ ಕಾಮ್ (2021-08-21). "ತಾಯಿನಾಡು ರಾಮಯ್ಯನವರ ಒಂದು ಕುಟುಂಬದ ಕಥೆ". Kannada Press (in ಅಮೆರಿಕನ್ ಇಂಗ್ಲಿಷ್). Retrieved 2025-11-28.
- ↑ ನಮ್ಮ ಮಾನಸ ಬಳಗ (2008). ನಮ್ಮ ಮಾನಸ ಸಂಪುಟ ೨ ಸಂಚಿಕೆ ೫. ರಾಜೇಶ್ವರಿ ಎಚ್ ಎಸ್.
- ↑ "ಪಿ. ಆರ್. ಜಯಲಕ್ಷಮ್ಮ". www.sallapa.com. Retrieved 2025-11-28.
- ↑ "ಹೀಗೊಂದು ಕುಟುಂಬದ ಕಥೆ". www.bookbrahma.com (in ಇಂಗ್ಲಿಷ್). Retrieved 2025-11-28.
- ↑ "HOME TOUR-ಬಾಲ್ಯದಲ್ಲೇ ಮದುವೆ ಆದ ಚಿಗುರಿದ ಕನಸು "ಅಜ್ಜಿ" ರಾಮೇಶ್ವರಿ ವರ್ಮಾ ಅವರ ಮನೆ-ಲೈಫ್-Rameshwari Varma". ಕಲಾಮಾಧ್ಯಮ (ಯುಟ್ಯೂಬ್).
- ↑ Varma, Soumya. "Soumya Varma". ArtsEquator (in ಅಮೆರಿಕನ್ ಇಂಗ್ಲಿಷ್). Retrieved 2025-11-28.
- ↑ "About UOM | UNIVERSITY OF MYSORE | ಮೈಸೂರು ವಿಶ್ವವಿದ್ಯಾನಿಲಯ". uni-mysore.ac.in (in ಇಂಗ್ಲಿಷ್). Retrieved 2025-11-28.
- ↑ ವಾರ್ತಾಭಾರತಿ (2023-07-14). "ರಂಗ ಪರಂಪರೆ ಬೆಳೆಸಿದ 'ಸಮತೆಂತೋ'". www.varthabharati.in. Retrieved 2025-11-28.
- ↑ "ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕನ್ನಡ ರಂಗಭೂಮಿ - ವಿಕಿಸೋರ್ಸ್". kn.wikisource.org. Retrieved 2025-11-28.
- ↑ ೧೨.೦ ೧೨.೧ "ರಂಗಭೂಮಿ ಪ್ರವೃತ್ತಿಯಾದರೂ, ವೃತ್ತಿ ಪರತೆ ಇರಲಿ". Vijay Karnataka. Retrieved 2025-11-28.
- ↑ ವೈ.ಕೆ.ಸಂಧ್ಯಾಶರ್ಮ. "ದಿಟ್ಟ ಹೆಣ್ಣಿನ ಗಟ್ಟಿ ಕಥೆ 'ರುಡಾಲಿ'". Prajavani. Retrieved 2025-11-28.
- ↑ Prashanth (2011-08-05). "Prashanth JC : ಪ್ರಶಾಂತ್ ಜಚಿ: ಬೆಟ್ಟದ ಜೀವ". Prashanth JC. Retrieved 2025-11-28.
- ↑ M, Lavakumar B. (2021-10-06). "ಮೈಸೂರು ದಸರಾಕ್ಕೆ ರಂಗೋತ್ಸವದ ಮೆರಗು". https://kannada.oneindia.com. Retrieved 2025-11-28.
{{cite web}}: External link in(help)CS1 maint: url-status (link)|website= - ↑ "ರಾಮೇಶ್ವರಿ ವರ್ಮ". www.sallapa.com. Retrieved 2025-11-28.
- ↑ ವಾರ್ತೆ, ಪ್ರಜಾವಾಣಿ. "ಮೊದಲ ಓದು: ರಂಗಭೂಮಿಯ ಅಪ್ರತಿಮ ಸಾಧಕಿ 'ರಾಮಿ'". ಪ್ರಜಾವಾಣಿ. Retrieved 2025-11-28.
- ↑ ಅಮೀನಗಡ, ಗಣೇಶ (2024-05-17). "ರಾಮಿ ರಂಗ ಪಯಣದ ದಾಖಲೆ". www.varthabharati.in. Retrieved 2025-11-28.
- ↑ ಎನ್ ಗಾಯತ್ರಿ; ನೇಮಿಚಂದ್ರ; ದೇವಿ; ಬಿ. ಎನ್. ಸುಮಿತ್ರಾಬಾಯಿ (2002). ಅಚಲ ತಿಂಗಳ ಪತ್ರಿಕೆ - ಮೇ - 2002. ಜಾಗೃತಿ ಮಹಿಳಾ ಅಧ್ಯಯನ ಕೇಂದ್ರ.